ಚಾತಕ ಮತ್ತು

ot

6

- 8

.TM

9

24ColorCard CameraTrax . com

הההההההה הרי

£

?

]

0

ויויויויויויויויויויו

0

1

2

3

4

5

8 נ 6

9

10

VE

ಜಾತಕ ಮತ್ತು ಭವಿಷ್ಯ

ಜಿ . ಟಿ. ನಾರಾಯಣರಾವ್

ಜಾತಕ ಮತ್ತು ಭವಿಷ್ಯ

ಜಿ . ಟಿ. ನಾರಾಯಣರಾವ್

(HE WISD

CENTRE FOR

SDOM OF

ASERVICE

೨೦೦೦ ಅತ್ರಿ ಬುಕ್ ಸೆಂಟರ್ ೪ ಶರಾವತಿ ಕಟ್ಟಡ ಬಲ್ಮಠ ಮಂಗಳೂರು ೫೬೫ ೦೦೧

ದೂರವಾಣಿ ೦೮೨೪ ೪೨೫೧೬೧, ೪೯೨೩೯೭

JATAKA MATTU BHAVISHYA a booklet in Kannada writtern by G . T. Narayana Rao , 8 Athree KamakshiHospital Road , Saraswatipura , Mysore 570 009 (phone 0821 543759 ). First edition 1991 published by Kavyakala Prakashana Bangalore. Second revised and the present ( third ) enlarged editions, 1992 and 2000 respectively , both published by G . N . Ashoka vardhana , for Athree Book Centre ( established 1975 ), 4 Sharavathi Build ing , Balmatta, Mangalore 575001 (phones 0824 425161, 492397 ). The book explains logically and cogently how astrology is a hoax and how every person should keep away from this mental disease. Pages 88

Price Rs 15

© Author 2000

Illustration and cover page design by N . S . Ram Goutham

Logo artwork by R . S . Mohan Murthy

ನಕ್ಷತ್ರಂ ಅತಿವೃಚ್ಛಂತಂ ಬಾಲಂ ಅರ್ಥುತಿವರ್ತತೇ ಅರ್ಥ ಹೈರ್ಥಸ್ಯ ನಕ್ಷತ್ರಂ ಕಿಂ ಕರಿಷ್ಯಂತಿ ತಾರಕಾಃ

- ಕೌಟಿಲೀಯ ಅರ್ಥಶಾಸ್ತ್ರ ಅನುವಾದ : ನಕ್ಷತ್ರಗಳನ್ನು ಅತಿಯಾಗಿ ಕೇಳುವ ಬಾಲಿಶನ ಕೈಯಿಂದ ಅರ್ಥ ನುಣುಚಿ ಹೋಗುತ್ತದೆ. ಅರ್ಥವು ನಕ್ಷತ್ರದ ಅರ್ಥವಾಗಿರಬೇಕು. ತಾರೆಗಳೇನು ಮಾಡಿಯಾವು ? - ಕ್ರಿ ಪೂ ೫೦೦ರಿಂದ ೧೦೦ರ ವರೆಗಿನ ಅವಧಿಯಲ್ಲಿ ಜ್ಯೋತಿಃಶಾಸ್ತ್ರ ಮತ್ತು ಜ್ಯೋತಿರಾರಾಧನೆಗಳ ಕುರಿತು ಪ್ರಯೋಜನಾಪೇಕ್ಷಿಯಾದ ರಾಜಕಾರಿಣಿಗಳಿಗಿದ್ದ ಅಭಿಪ್ರಾಯವನ್ನು ಇದು ಪ್ರತಿನಿಧಿಸುತ್ತದೆಂದು ಹೇಳಬಹುದು . . . [ ಚಂದ್ರಗುಪ್ತ , ಚಾಣಕ್ಯರಿಗೆ] ಜ್ಯೋತಿಃಶಾಸ್ತ್ರದಲ್ಲಿ ನಂಬಿಕೆಯಿರಲಿಲ್ಲವೆಂಬುದಷ್ಟೇ ಅಲ್ಲ , ಅದರ ಸೋಗು ನಟನೆಗಳನ್ನು ಬಹಿರಂಗವಾಗಿಯೂ ನಿಸ್ಸಂಕೋಚವಾಗಿಯೂ ಗೇಲಿ ಮಾಡಿದರು.

ಪಂಚಾಂಗ ಪರಿಷ್ಕರಣ ಸಮಿತಿಯ ವರದಿ

(ನೋಡಿ ಪುಟ : ೪೨- ೪೩ )

Typeset and printed at Sri Shakti Electric Press Jayangar Mysore 570014 (phone 0821 567775 )

ಅರಿಕೆ

ಪ್ರಸ್ತುತ ಪುಸ್ತಕದ ಪೂರ್ವಾರ್ಧ ೧೯೯೨ರಲ್ಲಿ ಪ್ರಕಟವಾಗಿತ್ತು . ಉತ್ತರಾರ್ಧ ವನ್ನು ( ಅನುಬಂಧಗಳು ೧ - ೭) ಸ್ವತಂತ್ರ ಮತ್ತು ಸ್ವಯಂಪೂರ್ಣ ಲೇಖನಗಳ ಸಂಕಲನವಾಗಿ ಈ ಪುನಸ್ಸಂಸ್ಕರಿತ ಆವೃತ್ತಿಗೆ ಸೇರಿಸಲಾಗಿದೆ. ಆಧಾರಶ್ರುತಿ ಒಂದೇ : ವ್ಯಕ್ತಿಯ ಭವಿಷ್ಯ ಆತನ ವರ್ತಮಾನದಲ್ಲಿದೆ - ನೀತಿಶುದ್ಧನೂ ವಿಚಾರಪರನೂ ಜನೋಪಕಾರಿಯೂ ಆಗಿ ಇಂದು ಬಾಳುವವನ ಮುಂದು ತಂತಾನೇ ಸುಂದರವಾಗಿರು ತದೆ. ಹೀಗಾಗದಿದ್ದರೆ ? ಕಾರಣವನ್ನು ವರ್ತಮಾನ ಜೀವನಶೈಲಿಯಲ್ಲಿಯೂ ಆತ್ಮ ಪರೀಕ್ಷಣೆಯಲ್ಲಿಯೂ ಶೋಧಿಸಬೇಕೇ ವಿನಾ ಜಾತಕ, ಗಗನ ಕಾಯಗಳು , ಇತರರು ಮುಂತಾದ ಅನ್ಯಕಾರಕಗಳಲ್ಲಿ ಅಲ್ಲ . ಈ ಅದಟು ಇಲ್ಲದಾತ ತೀರ ಸಹಜವಾಗಿ ಫಲ ಜ್ಯೋತಿಷಿ, ವಾಸ್ತುಶಿಲ್ಪಿ , ದೇವಮಾನವ, ಹಸ್ತಸಾಮುದ್ರಿಕ, ಸಂಖ್ಯಾಭವಿಷ್ಯವಾಚಕ ಮೊದಲಾದ ಸಮಾಜ ಶೋಷಕರ ಸುಲಭ ಆಮಿಷಗಳಿಗೆ ಎರೆಯಾಗುವುದು ಖಾತ್ರಿ .

ಆಕಾಶಕಾಯಗಳ ಬಗ್ಗೆ ಅಜ್ಞಾನ, ಅತಿಶಯ ಭೋಗಲಾಲಸೆ, ವೈಚಾರಿಕ ಚಿಂತನೆಯ ಅಭಾವ, ಹಣಸುರಿದು ಏನನ್ನೂ ಪಡೆಯಬಹುದು ಅಥವಾ ಸರಿಪಡಿಸ ಬಹುದು ಎಂಬ ಭ್ರಮೆ, ವಿಜ್ಞಾನ ಸರ್ವಸಾಮರ್ಥ್ಯಯುತವಾಗಿದ್ದರೂ , ಭವಿಷ್ಯ ವಾಚನ, ಕರ್ಮಫಲ, ಆಧ್ಯಾತ್ಮಿಕತೆ, ದೈವಿಕ ಅನುಭವ ( ಇವೆಲ್ಲವೂ ನಿಗೂಢ ಅಸ್ಪಷ್ಟಗಳು - ಗಿರಾಕಿಯನ್ನು ವಶೀಕರಿಸಿಕೊಳ್ಳಲು ಬಳಕೆಯಾಗುವ ಮಂತ್ರ ತಂತ್ರ ಗಳು) ಮುಂತಾದವನ್ನು ಕುರಿತಂತೆ ಪೂರ್ಣ ಅಸಹಾಯಕ ಇವೇ ಮುಂತಾದ ಸ್ವಯಂ ಕೃತಾಪರಾಧಗಳ ಸಂಚಿತ ದುಷ್ಪಲ ಇಂದಿನ ' ಸುಶಿಕ್ಷಿತ' ನ ಬಾಳಸಂಗಾತಿ ಆಗಿರುವುದು ದುರ್ದೈವ : ಸುಜ್ಞಾನವಂಕುರಿಸದನ್ನಕ್ಕರ ಭಕ್ತಿಯೆಲ್ಲಿಯದೋ ? ! ಜಾತಕ ಮತ್ತು ಭವಿಷ್ಯ ಈ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ.

ಅನುಬಂಧ ೭ನ್ನು ( ಪುಟ ೮೦) ನನ್ನ ಕೋರಿಕೆ ಮೇರೆಗೆ ಬರೆದು ಉಪಕರಿಸಿರು ವವರು ಪ್ರೊ ಎಸ್ . ಆರ್ . ಮಾಧುರಾಯರು ( ೩೩೪ ಟಿಕೆ ವಿಸ್ತರಣೆ, ಬಿಎಡ್ ಕಾಲೇಜ್ ಹಿಂಭಾಗ, ಮೈಸೂರು ೫೭೦೦೦೯ , ದೂರವಾಣಿ ೫೪೫೪೭೦); ಒಳಗಿನ ರೇಖಾಚಿತ್ರಗಳನ್ನೂ ಹೊದಿಕೆ ಪುಟದ ಆಲೇಖ್ಯವನ್ನೂ ಕುಂಚಿಸಿದ ಶ್ರೀ ಎನ್ . ಎಸ್ . ರಾಮ್ ಗೌತಮ್ , ಕರಡು ತಿದ್ದಿದ ಸೌ ಜಿ. ಎ . ರುಕ್ಷ್ಮಿಣಿಮಾಲಾ, ಬೆರಳಚ್ಚಿಸಿದ ಕು ಸಿ. ಕೆ. ದೇವಿಕ, ಪುಸ್ತಿಕೆಯ ಒಟ್ಟಂದಕ್ಕೂ ಮುದ್ರಣಕ್ಕೂ ಕಾರಣರಾಗಿರುವ ಶ್ರೀ ರಾ . ವೆಂ . ಶ್ರೀ ., ಮೋಹನ ಮೂರ್ತಿ, ಮತ್ತು ಮುದ್ರಿಸಿದ ಶ್ರೀ ಶಕ್ತಿ ಎಲೆಕ್ನಿಕ್ ಪ್ರೆಸ್‌ನ ಕಾರ್ಮಿಕ ಬಂಧುಗಳು ಈ ಎಲ್ಲ ಸಹೃದಯ ಚೇತನಗಳಿಗೂ ಹಾರ್ದಿಕ ನಮನಗಳು.

೯ ಮೇ ೨೦೦೦

ಜಿ . ಟಿ. ನಾರಾಯಣರಾವ್

ಹೂರಣ

ನಂಬಿಕೆಯ ಕೂಸು ಜಾತಕ ಎಂದರೇನು ? ಜಾತಕದ ಮೂಲ ನಕ್ಷತ್ರಗ್ರಂಥಕ್ಕೆ ವ್ಯಾಖ್ಯಾನ ಆ ನಿಯಮಗಳೇನು ? ರಾಹು, ಕೇತು ಜಾತಕಲೇಖನ ಜಾತಕದ ದೈವಿಕ ಅಂತಸ್ತು ಭವಿಷ್ಯವಾಚನ ಸ್ವಾಮಿ ವಿವೇಕಾನಂದವಾಣಿ ಆಕಾಶ, ಜಾತಕ, ವ್ಯಕ್ತಿ ಫಲಜ್ಯೋತಿಷ್ಯ ನಿಜವೇ ? ಫಲಜ್ಯೋತಿಷ್ಯ ಮತ್ತು ಜನ ಕೆಲವು ಸಂದೇಹಗಳು

ಅನುಬಂಧಗಳು ೧. ಆಧುನಿಕ ದೃಪ್ಪಿದ್ದಾಂತ ೨. ಹ್ಯಾಲೀ ಧೂಮಕೇತು ೩ . ಗ್ರಹ- ವಾರ ಸಂಬಂಧ ೪. ಕುಂಭಮೇಳ ಡಂಭದಾಳ ೫. ನಮ್ಮ ಎರಡು ಪ್ರಮುಖ ಹಬ್ಬಗಳು ೬ . ರಾಷ್ಟ್ರೀಯ ಪಂಚಾಂಗ ೭. ಇರುಳು ಹಗಲುಗಳು ಸಮವಾಗುವುದು ಎಂದಂದು ? ೮. ಪಾರಿಭಾಷಿಕ ಪದಕೋಶ

ಜಾತಕ ಮತ್ತು ಭವಿಷ್ಯ ನಂಬಿಕೆಯ ಕೂಸು - ಜಾತಕ ಕುರಿತಂತೆ ಜನರಲ್ಲಿ ವ್ಯಾಪಕವಾಗಿ ಹಬ್ಬಿರುವ ನಂಬಿಕೆಯ ಪ್ರಕಾರ ಅದು ವ್ಯಕ್ತಿಯ ಜೀವನಚರಿತ್ರೆಯನ್ನು ಸೂತ್ರರೂಪದಲ್ಲಿ ಸಂಕ್ಷೇಪವಾಗಿ ನಿರೂಪಿ ಸುವ ದಾಖಲೆ. ಹುಟ್ಟಿನಿಂದ ಸಾವಿನ ತನಕ ಆತನ ಬದುಕಿನಲ್ಲಿ ಎದುರಾಗುವ ಸಮಸ್ತ ಘಟನೆಗಳೂ ಅದರಲ್ಲಿ ನಿರೂಪಿಸಲ್ಪಟ್ಟಿರುತ್ತವೆ ಬೀಜದಲ್ಲಿ ವೃಕ್ಷದ ಭವಿಷ್ಯ ಗರ್ಭಿತವಾಗಿರುವಂತೆ

ಜನನಕ್ಷಣ ನಿಖರವಾಗಿ ತಿಳಿದಿದ್ದರೆ ಜಾತಕವನ್ನು ನಿಷ್ಕೃಷ್ಟವಾಗಿ ರಚಿಸಲು ವಿಧಿವಿಧಾನಗಳುಂಟು. ಇವುಗಳ ಹಿನ್ನೆಲೆಯಲ್ಲಿ ಜ್ಯೋತಿಶ್ಯಾಸ್ತ್ರ ( ಖಗೋಳವಿಜ್ಞಾನ) ಇದೆ. ಆದ್ದರಿಂದ ಜಾತಕರಚನೆ ಒಂದು ವೈಜ್ಞಾನಿಕ ವಿಧಿ - ಜೀವವಿಮೆಯಲ್ಲಿ ವ್ಯಕ್ತಿ ಗಳ ಆಯುರ್ನಿರೀಕ್ಷೆಗಳನ್ನು ತಯಾರಿಸುವಂತೆ,

ಜಾತಕವನ್ನು ಓದಿ' ಆ ವ್ಯಕ್ತಿಯ ಭವಿಷ್ಯವನ್ನು ಹೇಳುವಾತ ಫಲಜ್ಯೋತಿಷಿ ( astrologer) : " ಇಂಥ ಗ್ರಹ ಇಂಥ ಮನೆಯಲ್ಲಿದ್ದರೆ ಆ ಜಾತಕನ ( ವ್ಯಕ್ತಿಯ) ಭವಿಷ್ಯ ಹೀಗಿರುತ್ತದೆ'' ಎಂದು ಕಣಿನುಡಿವಾತನೀತ.

ಈ ಭವಿಷ್ಯವಾಚನಕ್ಕೆ ಆಧಾರವೇನು ? ಪ್ರಾಚೀನ ಫಲಜ್ಯೋತಿಷ್ಯ ಗ್ರಂಥಗಳು, ಋಷಿವಾಕ್ಕುಗಳು, ಅಪೌರುಷೇಯಗಳು ಮತ್ತು ತುತ್ತತುದಿಯಲ್ಲಿ ಸಾಕ್ಷಾತ್ ಭಗ ವಂತ. ಇದು ಫಲಜ್ಯೋತಿಷಿಗಳು ನೀಡುವ ವಿವರಣೆ , ಫಲಜ್ಯೋತಿಷ್ಯದ ಏಕೈಕ ಉದ್ದೇಶ ಮಾನವ ಹಿತಸಾಧನೆ.

ಅಂದ ಮೇಲೆ ವ್ಯಕ್ತಿಯ ಶೈಕ್ಷಣಿಕ ಅಥವಾ ವೈದ್ಯಕೀಯ ದಾಖಲೆಗಳಷ್ಟೇ ಅಥವಾ ಅಧಿಕ ಪ್ರಾಮುಖ್ಯ ಜಾತಕಕ್ಕೆ ಕೊಡುವುದು ಅಗತ್ಯ . ಬದುಕಿನಲ್ಲಿ ಆತ ಯಾವ ಪ್ರಮುಖ ನಿರ್ಣಯ ಕೈಗೊಳ್ಳಬೇಕಾದರೂ ಜಾತಕ ಪರಿಶೀಲನೆ ಮಾಡಿ ಮುಂದುವರಿಯುವುದು ಶ್ರೇಯಸ್ಕರ. ಏಕೆಂದರೆ ಪ್ರತಿಯೊಬ್ಬನ ಜೀವನವೂ ಪೂರ್ವಭಾವಿಯಾಗಿಯೇ ವಿಧಿಲಿಖಿತ. ಇದನ್ನು ಯಾರಿಂದಲೂ ಎದುರಿಸಲಾಗದು. ಜಾತಕದಲ್ಲಿ ಸ್ಪಷ್ಟವಾಗಿ ಪ್ರಕಟವಾಗುವ ಪ್ರವೃತ್ತಿ ಅಥವಾ ಒಲವುಗಳನ್ನು ಗುರು ತಿಸಿ ತದನುಸಾರ ಮುಂದಿನ ಹಾದಿ ನಿರ್ಣಯಿಸುವುದು ವಿವೇಕ. - ಸಾಮಾನ್ಯವಾಗಿ ನಾವು ಯಾರನ್ನು ಅವಿದ್ಯಾವಂತರು ಅಥವಾ ವಿಜ್ಞಾನಶಿಕ್ಷಣ ರಹಿತರು ಎಂದು ಭಾವಿಸುವೆವೋ ಅವರು ಹಾಗಿರಲಿ, ಖುದ್ದು ವಿಜ್ಞಾನಿಗಳೂ ಸಂಶೋಧಕರೂ ಫಲಜ್ಯೋತಿಷ್ಯದ ಈ ಬಿಗಿ ಅಪ್ಪುಗೆಯಿಂದ ಹೊರಗಾದವರಲ್ಲ .

ಜಾತಕ ಮತ್ತು ಭವಿಷ್ಯ

ಮದುವೆಯ ಮೊದಲ ಹೆಜ್ಜೆ ಏನು ? ಜಾತಕಗಳ ಮೇಳನ, ಹೊಸ ಮನೆ ಕಟ ಸುವ, ಅಥವಾ ಒಕ್ಕಲಾಗುವ ಮೊದಲು ನಾವು ಮಾಡುವುದೇನು ? ಫಲ! ಜ್ಯೋತಿಷಿಯ ಜೊತೆ ಗುಪ್ತ ಸಮಾಲೋಚನೆ. ಸೃಷ್ಟಿಕರ್ತನ ಪಾವನ ಏಕಾಂತ ಯನ್ನು ಕರ್ತಾರನಿಗೆ ತಿಳಿಯದಂತೆ ಗುಟ್ಟಾಗಿ ಅವಲೋಕಿಸುವ ಪ್ರಯತ್ನ, ಎಂದೆ. ಫಲಜ್ಯೋತಿಷ್ಯ ರಾಷ್ಟ್ರನಾಯಕರಿಗೊಂದು ಸುರಭಿ, ರಾಜಕಾರಣಿಗಳಿಗೊಂದು ಕಲ್ಪದ್ರುಮ, ಆಸ್ತಿಕ ಶಿರೋಮಣಿಗಳ ಸ್ಫೂರ್ತಿಮೂಲ, ಪಲಾಯನವಾದಿಗಳ ಮೊದಲ ನೆಲೆ ! ಸಾಧುಸಂತರು, ದೇವಮಾನವರು, ಪವಾಡ ಪುರುಷರು, ಅನು ಭಾವೀ ಚಿಂತನಶೀಲರು ಮೊದಲಾದವರು ಫಲಜ್ಯೋತಿಷ್ಯದ ಭದ್ರ ಭಂಡಾರಿಗಳು, ಕೋಟೆಗಳು. - ಜಾತಕ ಓದಿ' ಭವಿಷ್ಯ ನುಡಿಯಬಹುದೆಂಬ ನಂಬಿಕೆ ತೀರ ಪ್ರಾಚೀನ ಕಾಲ ದಿಂದಲೂ ಬೆಳೆದುಬಂದಿದೆ. ಇಂದು ( ೨೦೦೦) ಇದು ಪ್ರಪಂಚವ್ಯಾಪಿಯಾಗಿ ಬಹುರೂಪ ಬಹುಮುಖ ಬಹುವಿನ್ಯಾಸ ತಳೆದು ಖಾಸಗಿ ಬದುಕನ್ನು ಮಾತ್ರವಲ್ಲ ಸಾರ್ವಜನಿಕ ಜೀವನವನ್ನೂ ಅತಿಶಯವಾಗಿ ಪ್ರಭಾವಿಸುತ್ತಿದೆ.

ಅಂದ ಮೇಲೆ ಇದರಲ್ಲೇನಾದರೂ ಹುರುಳಿರಲೇಬೇಕಲ್ಲವೇ ? ಯಾವ ಹುರುಳೂ ಇಲ್ಲ , ಇದೊಂದು ಕುರುಡು ನಂಬಿಕೆ, ವಂಚನೆ ಎಂದು ಮುಂತಾಗಿ ವಿಜ್ಞಾನಿಗಳು ಇದನ್ನು ತೀವ್ರವಾಗಿ ಖಂಡಿಸುತ್ತಾರೆ. ಫಲಜ್ಯೋತಿಷಿಗಳು ಇನ್ನಷ್ಟು ಕಠಿಣವಾಗಿ ಈ 'ವೈಜ್ಞಾನಿಕ ವಾದ' ವನ್ನು ತಿರಸ್ಕರಿಸಿ ಹೇಗೆ ಫಲಜ್ಯೋತಿಷ್ಯವೊಂದು ಪರಿಪೂರ್ಣ ವಿಜ್ಞಾನ, ವಿಜ್ಞಾನಗಳ ಮಾತೃ ಎಂಬ ಅಂಶಗಳನ್ನು ಸಾಬೀತುಮಾಡಲು ಆರ್ಭಟಿಸುತ್ತಾರೆ. ತರ್ಕವಿರುವಲ್ಲಿ ಆರ್ಭಟೆಗೆ ನೆಲೆಯಿಲ್ಲ !

ಯಾರು ಸರಿ ? ಏಕೆ ? ಮುಂದಿನ ಪರಿಚ್ಛೇದಗಳಲ್ಲಿ ಈ ಪ್ರಶ್ನೆಗಳಿಗೆ ಜೇಯ ನಿಷ್ಕ ( objective ) ಉತ್ತರಗಳನ್ನು ನೀಡಲು ಪ್ರಯತ್ನಿಸಿದೆ.

ಜಾತಕ ಎಂದರೇನು ?

ಕೂಸು ಹುಟ್ಟಿದ ಗಳಿಗೆಯಲ್ಲಿ ನವಗ್ರಹಗಳ ಸ್ಥಾನಗಳನ್ನು ವ್ಯವಸ್ಥಿತವಾಗಿ ಪ್ರದರ್ಶಿಸುವ ದಾಖಲೆಯೇ ಜಾತಕ, ಗ್ರಹಕುಂಡಲಿ ಎಂದರೂ ಇದೇ . ಇಲ್ಲಿ ಪ್ರಸ್ತಾವಿಸಿರುವ ನವಗ್ರಹಗಳು : ಸೂರ್ಯ, ಚಂದ್ರ , ಕುಜ, ಬುಧ, ಗುರು, ಶುಕ್ರ , ಶನಿ, ರಾಹು, ಕೇತು. ಜಾತಕದ ರೂಪವಿನ್ಯಾಸಗಳಿಗೆ ಒಂದು ಉದಾಹರಣೆಯನ್ನು ಚಿತ್ರ ೧ರಲ್ಲಿ ಕಾಣಿಸಿದೆ. ಇದರ ಅರ್ಥವಿದು : ೨ ಜೂನ್ ೨೦೦ಂದಂದು ಅಮಾವಾಸ್ಯೆ ಘಟಿಸುವ

ಜಾತಕ ಮತ್ತು ಭವಿಷ್ಯ

ಗುರು

ರವಿ, ಚಂದ್ರ ಕುಜ, ಶುಕ್ರ

ಬುಧ

ಶನಿ .

ರಾಹು

೨- ೬- ೨೦೦೦ ಅಮಾವಾಸ್ಯೆ

ಕೇತು

ಚಿತ್ರ ೧ ಮುಹೂರ್ತದಲ್ಲಿ ನವಗ್ರಹಗಳು ಈ ಚಿತ್ರದಲ್ಲಿರುವಂತೆ ಆಕಾಶದಲ್ಲಿ ವಿತರಣೆ ಗೊಂಡಿರುವುವು.

ನೋಟಕನನ್ನು (ಭೂಮಿ) ಕುರಿತಂತೆ ಸೂರ್ಯ- ಚಂದ್ರ ಎದುರು ಬದಿರು ( ಜಾತಕದಲ್ಲಿ ಎದುರು ಮನೆಗಳು) ಇರುವಾಗ ಹುಣ್ಣಿಮೆಯೂ ಒಂದೇ ದಿಶೆಯಲ್ಲಿ ಇರುವಾಗ ( ಜಾತಕದಲ್ಲಿ ಒಂದೇ ಮನೆ) ಅಮಾವಾಸ್ಯೆಯೂ ಪ್ರಕಟವಾಗುತ್ತವೆ. ಇಲ್ಲಿಯ ಚಿತ್ರದಲ್ಲಿ ಸೂರ್ಯ- ಚಂದ್ರ ಒಂದೇ ಮನೆಯಲ್ಲಿರುವುದರಿಂದ ಈ ದಿನಾಂಕದಂದು ಅಮಾವಾಸ್ಯೆ ಸಂಭವಿಸುವುದು . ವ್ಯಾಪಕವಾಗಿ ಜಾತಕವೆಂದರೆ ನಿರಂತರ ಚಲನೆಯಲ್ಲಿರುವ ನವಗ್ರಹಗಳ ಆಯಾ ಕ್ಷಣದ ಸ್ತಬ್ದ ಚಿತ್ರ . ಎಂದೇ ಗಳಿಗೆಯಿಂದ ಗಳಿಗೆಗೆ ಜಾತಕ ಬದಲಾಗುತ್ತದೆ. ಈ ಕಾರಣದಿಂದಲೇ ಯಾವ ಎರಡು ವ್ಯಕ್ತಿಗಳ ಜಾತಕಗಳೂ , ತಮ್ಮ ಸೂಕ್ಷ್ಮ ವಿವರಗಳಲ್ಲಿ , ತದ್ವತ್ತಾ ಗಿರುವುದಿಲ್ಲ .

ನಾಗರಿಕತೆಯ ಆರಂಭದಿನಗಳಲ್ಲಿ , ಗಗನ ವಿದ್ಯಮಾನಗಳ ಬಗೆಗಿನ ಜ್ಞಾನ ಇನ್ನೂ ಮಸಕಾಗಿದ್ದ ಅಂಧಕಾರ ಯುಗದಲ್ಲಿ , ವೀಕ್ಷಣೆ ಚಿಂತನೆ ತರ್ಕ ಪ್ರಯೋಗ ಮುಂತಾದ ಋಜು ವಿಧಾನಗಳ ಬದಲಾಗಿ ಬೆರಗು ಊಹೆ ಭಯ ದೈವಿಕತೆ ಮುಂತಾದ ಭಾವೋದ್ರೇಕಗಳೇ ಮುಂಚೂಣಿಯಲ್ಲಿದ್ದ ಕುರುಡು ನಂಬಿಕೆಗಳ

ಜಾತಕ ಮತ್ತು ಭವಿಷ್ಯ

ಕಾಲದಲ್ಲಿ , ಜಾತಕರಚನೆಯೊಂದು ಅದ್ಭುತ ಪವಾಡವೆಂದು ಜನ ಭಾವಿಸಿದ್ದರು ಅದು ಕೆಲವೇ ಮಂದಿ ದೇವಪುರುಷರಿಗೆ ಇಲ್ಲವೇ ಬ್ರಹ್ಮಜ್ಞಾನಿಗಳಿಗೆ ಸಿದ್ಧಿಸಿರ ದೈವಿಕ ವಿದ್ಯೆ . ಪರಂಪರಾಗತವಾಗಿ ಈ ನಂಬಿಕೆ ಬೆಳೆದು ಬಂದು ಇಂದಿಗು ಜಾತಕವೆಂದರೆ ಬೆರಗು ಭಯಗಳ ತಾಣವಾಗಿದೆ. ಜಾತಕದ ಮೂಲ

ಪ್ರಾಚೀನ ಮಾನವನಿಗೆ ಎದುರಾದ ಸನ್ನಿವೇಶಗಳು ಎರಡು : ಭೂಮಿ, ಆಕಾಶ ಇದು (ಭೂಮಿ) ಹೇಗೂ ಇದ್ದದ್ದೇ . ಅವನ ಅಳವಿಗೆ ಮೀರಿದ್ದಲ್ಲ . ಅದು ( ಆಕಾಶ) ? ಆಕರ್ಷಕವಾಗಿದೆ, ಭಯಾನಕವೂ ಹೌದು, ಅಗಮ್ಯ , ಅತೀತ, ಅನಂತ ಇರುವುದನ್ನು ಬಿಟ್ಟು ಇರದುದನ್ನು ಪಡೆಯಲು ತುಡಿಯುವುದು ಮತ್ತು ಅದಕ್ಕಾ ದುಡಿಯುವುದು ಮಾನವನ ಸಹಜ ಅದಮ್ಯ ಪ್ರವೃತ್ತಿ , ಅನ್ವೇಷಣೆಯ ಪ್ರೇರಣೆ ಇದು. ಗಗನವನ್ನು ಗಳಿಸುವುದು ಹೇಗೆ ? ಅದು ಶಾಶ್ವತವಾಗಿ ಅಲಭ್ಯ , ಇಂಥ ವೀಕ್ಷಣೆ, ಊಹೆ, ಸ್ಫೂರ್ತಿ, ಕಲ್ಪನೆ, ತರ್ಕ, ಚಿಂತನೆ ಮೊದಲಾದ ಅಮೂತ! ಗುಣಗಳು ಕಾರ್ಯೋನ್ಮುಖವಾಗುತ್ತವೆ.

ಹೀಗೆ ಅದನ್ನು ( ಗಗನ) ಕುರಿತು ಮಾಡಿದ ಚಿಂತನೆಗಳು, ಅದಕ್ಕೆ ಬರೆ ವ್ಯಾಖ್ಯಾನಗಳು, ಅದರ ರಹಸ್ಯ ಭೇದಿಸಲು ಹೂಡಿದ ಹೂಟೆಗಳು ಮುಂತಾದವು ನಾಗರಿಕತೆಯ ಅವಿಭಾಜ್ಯ ಘಟಕಗಳಾಗಿ ಸಹಸ್ರಾರು ವರ್ಷ ಪರ್ಯಂತ ಪ್ರವಹಿಸಿ ದುವು. ಆಗ ಕ್ರಮೇಣ ಪುರಾಣ , ಕತೆ, ಪವಾಡ, ತರ್ಕ, ಸೂತ್ರ, ನಿಯಮ ಇತ್ಯಾರಿ ಗಳು ಮೈದಳೆದು ಪರಸ್ಪರ ನಿಕಟವಾಗಿ ಬೆಸೆದುಕೊಂಡು ಕೆಲವು ಮುಖ್ಯ ಭಾವನ ಗಳು ಹದಿಗಟ್ಟಿದುವು : * ಸರ್ವಾಂತರ್ಯಾಮಿ ಸರ್ವಶಕ್ತ ಆದರೆ ಅಗೋಚರ ಅತೀತ ಪರಮಾತ್ಮ ಈ

ವಿಶ್ವವನ್ನು ತನ್ನ ಲೀಲಾವಿಹಾರಾರ್ಥ ಸೃಷ್ಟಿಸಿದ್ದಾನೆ. ಇದರ ಕೇಂದ್ರ ಸ್ಥಾನದಲ್ಲಿ ಭೂಮಿ ನಿಂತಿದೆ. ಭಗವಂತ ತನ್ನ ಪಡಿಯಚ್ಚಾಗಿ ಮಾನವನನ್ನು ಎರಕ ಹೊಯ್ತು ಭೂಮಿಯಲ್ಲಿ ನೆಲೆಗೊಳಿಸಿದ್ದಾನೆ. ಸೂರ್ಯ ಮತ್ತು ಚಂದ್ರ ಆ ದೇವರ ಎರಡು ಕಣ್ಣುಗಳು. ಸಮಸ್ತ ವಿಶ್ವವೇ ಆತನ ದೇಹ. ಆಕಾಶದಲ್ಲಿ ಕಾಲದಿಂದ ಕಾಲಕ್ಕೆ ಪ್ರಕಟವಾಗುವ ವಿವಿಧ ಬೆಳಕಿನ ಬೊಟ್ಟುಗಳ ಮತ್ತು ಅಸಂಖ್ಯ ವಿಚಿತ್ರ ವಿದ್ಯಮಾನಗಳ ಮೂಲಕ ಆತ ತನ್ನ

ಚಿಂತನಲಹರಿಗಳನ್ನು ಮಾನವನಿಗೆ ಪ್ರತೀಕ ಭಾಷೆಯಲ್ಲಿ ಶ್ರುತಪಡಿಸುತ್ತಾನೆ. * ಇಲ್ಲಿಯ (ಭೂಮಿ) ಎಲ್ಲ ಚಟುವಟಿಕೆಗಳನ್ನೂ ಭಗವಂತ ಅಲ್ಲಿಯ ( ಆಕಾಶ ಮೂಲಕ ಸದಾ ನಿಯಂತ್ರಿಸಿ ನಿರ್ದೇಶಿಸುತ್ತಿದ್ದಾನೆ. ಆತನ ಇಚ್ಛಾನುಸಾರವೇ

lo

ಜಾತಕ ಮತ್ತು ಭವಿಷ್ಯ

ಪ್ರತಿ ವ್ಯಕ್ತಿಯೂ ಹುಟ್ಟಿನಿಂದ ಸಾವಿನ ತನಕ ವರ್ತಿಸತಕ್ಕದ್ದು . ದೇವರ ಕೈಗೊಂಬೆ ಮಾನವ, “ ಗೊಂಬೆಯಾಟವಯ್ಯಾ !?” ಹಾಗಾದರೆ ವ್ಯಕ್ತಿ ಮಾಡಬೇಕಾದದ್ದೇನು ? ಜಗನ್ನಿಯಾಮಕನ ಇಂಗಿತ ಆದೇಶ ಗಳನ್ನು ಗಗನಕಾಯಗಳ ಮೂಲಕ ಅರಿತು ತದನುಗುಣವಾಗಿ ಜೀವನ ನಡೆಸು ವುದು ಮಾತ್ರ . ಬಾನಕುರುಹಿಗೂ ಹುಲುಮನುಜನ ಹಣೆಬರಹಕ್ಕೂ ನಿಕಟ ಸಂಬಂಧವಿದೆ. ಜಾತಕ ಒಳಗೊಂಡಿರುವುದು ಈ ಸಂಬಂಧವನ್ನೇ . ನಂಬಿಕೆಯ ಮಹತ್ವ ಮತ್ತು ಹಿಡಿತ ಹೀಗೆ ಬೆಳೆದುವು : “ನಂಬಿ ಕೆಟ್ಟವ ರಿಲ್ಲವೋ ! ”

ನಕ್ಷತ್ರಗ್ರಂಥಕ್ಕೆ ವ್ಯಾಖ್ಯಾನ

ಸಾವಿರ ಸಾವಿರ ವರ್ಷ ಪರ್ಯಂತ ಆಕಾಶಸಂಗೀತವನ್ನು ಮೂಕಾಶ್ಚರ್ಯ, ಭಯ ವಿಸ್ಮಯ, ತರ್ಕ ವಿಮರ್ಶೆ ಮೊದಲಾದ ವಿವಿಧ ಭಾವಲಹರಿಗಳ ಸಹಿತ “ ಆಲಿಸುತ್ತ ಬಂದಂತೆ ಅದರ ಕೆಲವು ಮುಖ್ಯ ಸೂತ್ರಗಳು ಮಾನವನಿಗೆ ವೇದ್ಯ ವಾದುವು : * ಮಹಾವ್ಯಾಪ್ತಿಯ ಮತ್ತು ಅನಂತ ಗಾತ್ರದ ನೀಲಗೊಳ ಭೂಮಿಯನ್ನು

ಸುತ್ತಲೂ ಆವರಿಸಿದೆ. ಇದು ಆಕಾಶ ಅಥವಾ ಖಗೋಳ ಇದರ ಕೇಂದ್ರದಲ್ಲಿ ಭೂಮಿ ದೃಢವಾಗಿಯೂ ನಿಶ್ಚಲವಾಗಿಯೂ ನಿಂತಿದೆ. ಆಕಾಶಕಾಯಗಳೆಲ್ಲವೂ

ಖಗೋಳದ ನಯ ಒಳಮೈಗೆ( ಚತ್ತು ) ಅಂಟಿಕೊಂಡಿವೆ. * ಖಗೋಳ ಸದಾ ಭೂಮಿಯ ಸುತ್ತ ಏಕವೇಗದಿಂದ ಪೂರ್ವ- ಪಶ್ಚಿಮ ದಿಶೆ

ಯಲ್ಲಿ ಆವರ್ತಿಸುತ್ತಿದೆ. ಎಲ್ಲ ಗಗನಕಾಯಗಳೂ ಪೂರ್ವದಲ್ಲಿ ಮೂಡಿ ಮೇಲೇರಿ ನೆತ್ತಿಗೆರೆ ದಾಟಿ ಕೆಳಗಿಳಿದು ಪಶ್ಚಿಮದಲ್ಲಿ ಕಂತುವುದು ಈ ಕಾರಣ ದಿಂದ. ಮೇಲುನೋಟಕ್ಕೆ ಅಲ್ಲಿ ಮೂರು ಸ್ಪಷ್ಟ ವರ್ಗಗಳು ಎದ್ದು ಕಾಣುತ್ತವೆ : ಸೂರ್ಯ , ಚಂದ್ರ - ಇವು ಬೆಳಕಿನ ಎರಡು ಬಿಲ್ಲೆಗಳು ; ಮತ್ತು ಬೆಳಕಿನ ಚುಕ್ಕಿ ಗಳು. ಬೆಳಕಿನ ಚುಕ್ಕಿಗಳಲ್ಲಿ ನಾಲ್ಕು ಪ್ರಭೇದಗಳಿವೆ ; ಸ್ಥಾನಪಲ್ಲಟ ಮಾಡುವಂಥವು, ಮಾಡದಂಥವು, ಬೆಂಕಿಗೆರೆಗಳು , ಬಾಲಚುಕ್ಕಿಗಳು . ಇವು ಅನುಕ್ರಮವಾಗಿ ಗ್ರಹ, ನಕ್ಷತ್ರ , ಉಿ , ಧೂಮಕೇತು ಎಂಬ ಹೆಸರು ಪಡೆದುವು. * ಚುಕ್ಕಿ ಗ್ರಹಗಳು ಐದು : ಕುಜ, ಬುಧ, ಗುರು, ಶುಕ್ರ , ಶನಿ.

ಜಾತಕ ಮತ್ತು ಭವಿಷ್ಯ

ಚಂದ್ರ ಮತ್ತು ಸೂರ್ಯಕೂಡ ಸ್ಥಾನಪಲ್ಲಟ ಮಾಡುತ್ತವೆ. ಚಂದ್ರನ ಸರಿತ ವನ್ನು ಇರುಳಿನಿಂದ ಇರುಳಿಗೆ ನೇರ ನೋಡಿ ತಿಳಿಯಬಹುದು. ಸೂರ್ಯನ ದನ್ನು ಪರೋಕ್ಷ ವಿಧಾನಗಳಿಂದ ತರ್ಕಿಸಬೇಕಷ್ಟೆ . ಹೀಗೆ ಸೂರ್ಯ ಮತ್ತು ಚಂದ್ರ ಕೂಡ ಸ್ಥಾನಪಲ್ಲಟ ಪ್ರದರ್ಶಿಸುವುದರಿಂದ ಇವನ್ನೂ ಗ್ರಹಗಳೆಂದೇ ಪರಿಗಣಿಸಬೇಕು. ನಕ್ಷತ್ರಗಳ ಎರಚಿಕೆ ಯದ್ವಾ ತದ್ವಾ , ಅವುಗಳ ನಡುವೆ ಮಾನವನ ಕಲ್ಪನೆ ಕಸೂತಿಕೆಲಸಗೈದು ಚಿತ್ರಗಳನ್ನು ನೇಯುತ್ತದೆ. ಆಸುಪಾಸಿನ ಹಲವಾರು ತಾರೆ ಗಳು ನಮ್ಮ ಮನಃಪಟಲದಲ್ಲಿ ಬಿಂಬಿಸುವ ಚಿತ್ರಗಳಿಗೆ ನಕ್ಷತ್ರಪುಂಜಗಳೆಂದು ಹೆಸರು. ಇವುಗಳ ಆಕಾರಗಳಾಗಲಿ ಸಾಪೇಕ್ಷ ಸ್ಥಾನಗಳಾಗಲಿ ಎಂದೂ ವ್ಯತ್ಯಾಸ ವಾಗುವುದಿಲ್ಲ . ಹೀಗೆ ಆಕಾಶವೆಂದರೆ ಗೋಳಾಕಾರದ ಮಹಾವ್ಯಾಪ್ತಿಯ ನೀಲ ಪರದೆ. ಇದರ ಮೇಲಿನ ಕುಸುರಿ ಕೆಲಸಗಳೇ ಪುಂಜಗಳು. ಪರದೆಯ ಮುನ್ನೆಲೆಯಲ್ಲಿ ಏಳು ಗ್ರಹಗಳೂ ಉಿಗಳೂ ಧೂಮಕೇತುಗಳೂ ತಮ್ಮ ಭಾವ ಭಂಗಿಗಳನ್ನು

ಅವ್ಯಕ್ತ ಪರಮಾತ್ಮನ ಆದೇಶಾನುಸಾರ ಮಾನವನಿಗೆ ವ್ಯಕ್ತಗೊಳಿಸುತ್ತಿರುತ್ತವೆ. * ಅಗೋಚರ ಭಗವಂತನ ಗೋಚರ ಪ್ರತಿನಿಧಿಗಳಾದ ಗ್ರಹಗಳನ್ನು ಮಾನವ

ಭಕ್ತಿಸಹಿತ ಅರ್ಚಿಸಿದರೆ ಇವನ ಸಂಕಷ್ಟಗಳು ( ಗ್ರಹಚಾರಗಳು ) ನಿವಾರಣೆ ಆಗುವುದು ಶತಸ್ಸಿದ್ದ.

ಆ ನಿಯಮಗಳೇನು ? * ಗ್ರಹಗಳನ್ನು ಅರ್ಚಿಸಿ ಒಲಿಸಿಕೊಳ್ಳುವ ಮುನ್ನ ಅವು ಪಾಲಿಸುವ ನಿಯಮ ಗಳೇನಾದರೂ ಇದ್ದರೆ ಅವನ್ನು ತಿಳಿಯುವುದು ಒಳ್ಳೆಯದಲ್ಲವೆ ? ನಕ್ಷತ್ರಪುಂಜ ಗಳು ರಚಿಸುವ ಶಾಶ್ವತಪರದೆ ಮೇಲೆ ಸೂರ್ಯನ ಚಲನೆಯನ್ನು ಪರೋಕ್ಷ ವಾಗಿಯೂ ಉಳಿದ ಆರು ಗ್ರಹಗಳ ( ಚಂದ್ರ , ಕುಜ, ಬುಧ, ಗುರು, ಶುಕ್ರ , ಶನಿ) ಚಲನೆಗಳನ್ನು ಪ್ರತ್ಯಕ್ಷವಾಗಿಯೂ ಪರಿಶೀಲಿಸಿದಾಗ ತಿಳಿದು ಬಂದ ಸಂಗತಿಗಳಿವು: * ಏಳು ಗ್ರಹಗಳ ಕಕ್ಷೆಗಳೂ ಖಗೋಳದ ಒಂದು ನಿರ್ದಿಷ್ಟ ಇಕ್ಕಟ್ಟು ಪಟ್ಟಿಗೆ ( ಚಿತ್ರ ೯ , ಪುಟ ೨೬ ನೋಡಿ) ಸೀಮಿತವಾಗಿವೆ. ಇದರಿಂದ ಹೊರಕ್ಕೆ ಯಾವ ಗ್ರಹವೂ ಸರಿಯದು. ಎಂದೇ ಈ ಪಟ್ಟಿಯ ನೇರ ಹರಡಿರುವ ನಕ್ಷತ್ರಗಳಿಗೂ ಪುಂಜಗಳಿಗೂ ಅತಿಶಯ ಪ್ರಾಮುಖ್ಯ ಬಂದಿತು. ಹಗಲು ಮತ್ತು ಇರುಳು ಸೇರಿದ ಅವಧಿಗೆ ದಿವಸವೆಂದು ಹೆಸರು. ಕಾಲದ

ಜಾತಕ ಮತ್ತು ಭವಿಷ್ಯ

( O )

ಕನಿಷ್ಠ ನೈಸರ್ಗಿಕ ಘಟಕವಿದು. ನಾಕ್ಷಿಕ ಪಟ್ಟಿಯ ಮೇಲೆಸೂರ್ಯ ಪಶ್ಚಿಮ ಪೂರ್ವ ದಿಶೆಯಲ್ಲಿ ಸರಿಯುತ್ತ ಸುಮಾರು ೩೬೫ ದಿವಸಗಳಲ್ಲಿ ಒಂದು ಪರಿ ಭ್ರಮಣೆ ಮುಗಿಸುತ್ತದೆ. ಈ ಅವಧಿ ವರ್ಷ. ವರ್ಷದಲ್ಲಿ ಎರಡು ಮುಖ್ಯ ವಿದ್ಯಮಾನಗಳು ಘಟಿಸುತ್ತವೆ : ಋತುಚಕ್ರದ ( ಬೇಸಗೆ- ಮಳೆ- ಚಳಿ- ವಸಂತ- ಬೇಸಗೆ) ಒಂದು ಉರುಳಾಟ ; ಆಗಸದಲ್ಲಿ ಈ ಹಿಂದೆ ಆ ಗಳಿಗೆ ಕಂಡ ಪುಂಜಗಳು ಅದೇ ವಿನ್ಯಾಸದಲ್ಲಿ ಪುನಃ ಪ್ರಕಟವಾಗುವ ಸನ್ನಿವೇಶ, ಹೀಗೆ ಸೂರ್ಯ- ಋತು- ಪುಂಜವಿನ್ಯಾಸ ಸಂಬಂಧ ತೀರ ನಿಕಟ ವಾದದ್ದು . ಚಂದ್ರನೂ ಸೂರ್ಯನಂತೆ ಪಶ್ಚಿಮ - ಪೂರ್ವ ದಿಶೆಯಲ್ಲಿ ಸರಿಯುತ್ತದೆ. ಇದು ಸೂರ್ಯನನ್ನು ಕುರಿತು ಸುಮಾರು ೩೦ ದಿವಸಗಳಲ್ಲಿಯೂ ನಕ್ಷತ್ರಗಳನ್ನು ಕುರಿತು ಸುಮಾರು ೨೭ ದಿವಸಗಳಲ್ಲಿಯೂ ಒಂದು ಪರಿಭ್ರಮಣೆ ಮುಗಿಸು ತದೆ. ಮೊದಲನೆಯ ಅವಧಿಗೆ ತಿಂಗಳು ಅಥವಾ ( ಚಾಂದ್ರಮಾಸವೆಂದೂ ಎರಡನೆಯದಕ್ಕೆ ನಾಕ್ಷಿಕ ಮಾಸವೆಂದೂ ಹೆಸರು. ಅಮಾವಾಸ್ಯೆಯಿಂದ ಮುಂದಿನ ಹುಣ್ಣಿಮೆ ತನಕ ಶುಕ್ಲಪಕ್ಷ ( ಸುಮಾರು ೧೪- ೧೫ ದಿವಸಗಳು), ಮುಂದಿನ ಅಮಾವಾಸ್ಯೆ ತನಕ ಕೃಷ್ಣಪಕ್ಷ ಸುಮಾರು ( ೧೪- ೧೫ ದಿವಸಗಳು). ಇವೆರಡು ಪಕ್ಷಗಳ ಮೊತ್ತವೇ ತಿಂಗಳು ಅಥವಾ ಚಾಂದ್ರಮಾಸ... ಚಾಂದ್ರಕಕ್ಷೆಯ ನೇರ ೨೭ ನಕ್ಷತ್ರಗಳನ್ನು ಇಲ್ಲವೇ ನಕ್ಷತ್ರಸಮೂಹಗಳನ್ನು ಗುರುತಿಸಿ ಅವುಗಳಿಗೆ ಪಶ್ಚಿಮ - ಪೂರ್ವ ದಿಶೆಯಲ್ಲಿ ಅಶ್ವಿನಿಯಿಂದ ರೇವತಿ ವರೆಗೆ ಅಷ್ಟು ಹೆಸರುಗಳನ್ನು ಕೊಡಲಾಗಿದೆ. ಇವು ( ಚಂದ್ರನ) ನಿತ್ಯನಕ್ಷತ್ರಗಳು

ಚಂದ್ರನ ದೈನಿಕ ವಾಸಗೃಹಗಳೆಂದರ್ಥ. ವರ್ಷದಲ್ಲಿ ಸುಮಾರು ೧೨ ತಿಂಗಳುಗಳಿವೆ. ಎಂದೇ ಇಕ್ಕಟ್ಟು ಪಟ್ಟಿಯನ್ನು ಅಷ್ಟು ಸಮಭಾಗಗಳಾಗಿ ವಿಭಾಗಿಸಿ ಆಯಾ ಭಾಗದ ಪ್ರಮುಖ ಪುಂಜದ ಹೆಸರಿನಿಂದ ಅದನ್ನು ನಿಗದಿಸಿದೆ. ಮೇಷದಿಂದ ಮೀನದವರೆಗಿನ ದ್ವಾದಶ ( ನಕ್ಷತ್ರ ) ರಾಶಿಗಳಿವು. ನಾಕ್ಷತ್ರಿಕ ಪಟ್ಟಿಯ ನೇರ ಹರಡಿರುವ ಪುಂಜಗಳನ್ನು ರಾಶಿಗಳೆಂದು ಕರೆಯುವುದು ವಾಡಿಕೆ. ಹೀಗಾಗಿ ಪಟ್ಟಿಗೆ ರಾಶಿಚಕ್ರವೆಂದು ಹೆಸರು. ರಾಶಿಚಕ್ರದಲ್ಲಿಯ ದ್ವಾದಶ - ರಾಶಿ - ೨೭- ನಿತ್ಯನಕ್ಷತ್ರ ವಿತರಣೆಯ ಮಾದರಿಯನ್ನು ಚಿತ್ರ ೨ರಲ್ಲಿ ಕಾಣಿಸಿದೆ ( ಪುಟ ೧೨ ) ಕುಜ, ಬುಧ, ಗುರು, ಶುಕ್ರ , ಶನಿ ಕೂಡ ರಾಶಿಚಕ್ರ ಸಂಚಾರಿಗಳೇ . ಆದರೆ ಇವುಗಳ ವರ್ತನೆಗಳು ತುಸು ವಿಚಿತ್ರವಾಗಿವೆ. ಈಗ,ಸೂರ್ಯ ಮತ್ತು ಚಂದ್ರ

ಜಾತಕ ಮತ್ತು ಭವಿಷ್ಯ

ಮೀನ |

ಮೇಷ

| ವೃಷಭ

ಮಿಥುನ ಕೃತ್ತಿಕೆ ರೋಹಿಣಿ | ಮೃಗಶಿರಾ | ಆದ್ರ್ರಾ

ರೇವತಿ | ಅಶ್ವಿನಿ | ಭರಣಿ

- ೩೦°

೬೦೦

ಚಿತ್ರ ೨. ನಕ್ಷತ್ರ - ರಾಶಿ ವಿತರಣೆ ಸದಾ ಪಶ್ಚಿಮ - ಪೂರ್ವ ದಿಶೆಯಲ್ಲಿ ಮಾತ್ರ ಚಲಿಸುತ್ತವೆ. ಈ ಚಲನೆಗೆ ಮಾರ್ಗ ಚಲನೆ ( ಪಶ್ಚಿಮ -ಪೂರ್ವ ದಿಶಾಚಲನೆ) ಎಂದೂ ಇದರ ವಿರುದ್ದ ದಿಶೆಯದಕ್ಕೆ (ಪೂರ್ವ- ಪಶ್ಚಿಮ ದಿಶಾಚಲನೆ) ವಕ್ರಚಲನೆ ಎಂದೂ ಹೆಸರು. ಗ್ರಹಗಳು ನಾಲ್ಕು ವಿಭಿನ್ನ ರೀತಿಗಳಲ್ಲಿ ವರ್ತಿಸುತ್ತವೆ : ಮಾರ್ಗ ಚಲನೆ, ವಕ್ರಚಲನೆ, ಸ್ತಬ್ದತೆ ( ಚಲನರಾಹಿತ್ಯ ), ಮೌಡ್ಯ ( ಕಾಣದಾಗುವುದು). ರಾಹು, ಕೇತು

ಪ್ರಾಚೀನ ಚಿಂತನಶೀಲ ಮಾನವ ಕಂಡ ಗಗನ ತಥ್ಯಗಳನ್ನು ಸ್ಕೂಲವಾಗಿ ತಿಳಿದದ್ದಾಯಿತು. ಆತ ಗುರುತಿಸಿದ ನವಗ್ರಹಗಳ ಪೈಕಿ ಏಳು ಯಾವುವೆಂದು ತಿಳಿದದ್ದೂ ಆಯಿತು. ಉಳಿದವು ರಾಹು ಮತ್ತು ಕೇತು.

ಆದಿಮಾನವ ಗ್ರಹಣಗಳನ್ನು ನೋಡಿದ. ಹೆದರಿದ, ಅವು ಮಾನವರಿ ದಾನವರ ಕುಕೃತ್ಯಗಳೆಂದು ಭಾವಿಸಿದ, ಬಲಿಕೊಟ್ಟ, ಬೆಂಕಿ ಹಾಕಿದ, ಡೋಲು ಡಮರು ಬಜಾಯಿಸಿದ. ಗ್ರಹಣ ಮೋಕ್ಷವಾದಾಗ ತನ್ನ ಪ್ರಯತ್ನಗಳು ಫಲಿಸಿದು ವೆಂದು ಸಂತೃಪ್ತನಾದ. ಮಾನವನ ರಕ್ಷಣೆಗೆ ದೇವದೂತ ಗ್ರಹಗಳು ಬರುವುದು ನಿಯಮ ; ಗ್ರಹಗಳ ರಕ್ಷಣೆಗೆ ಮಾನವ ಹೋಗುವುದು ಅಪವಾದ, ಭಗವಂತನ ಲೀಲಾವಿನೋದಗಳು ಅಪಾರ ! * ಹಾಡಹಗಲಲ್ಲೇ ಸೂರ್ಯಬಿಂಬಕ್ಕೆ ಕಗ್ಗತ್ತಲೆ ಲೇಪನ. ಇದು ಸೂರ್ಯ ಗ್ರಹಣ, ಹುಣ್ಣಿಮೆಯ ಪೂರ್ಣಚಂದ್ರ ಬಿಂಬ ಕಂದಿ ಮಂಕಾಗಿ ಮಸಕಾಗುತ್ತದೆ. ಇದು ಚಂದ್ರಗ್ರಹಣ. ಸಾಕಷ್ಟು ಕಾಲ ಈ ಅನಿಯತಕಾಲಿಕ ಆಕಸ್ಮಿಕಗಳ ಜೊತೆ ಒಡನಾಡಿ ಇವುಗಳ ಗೆಳೆತನ ಗಳಿಸಿಕೊಂಡಂತೆ ಇಲ್ಲಿಯೂ ಕೆಲವು ನಿಯಮಗಳು ಹುದುಗಿದ್ದುದು ಬೆಳಕಿಗೆ ಬಂದುವು :

ಜಾತಕ ಮತ್ತು ಭವಿಷ್ಯ

ಚಿತ್ರ ೩ . ಸೂರ್ಯ ( S) ಭೂಮಿಯ (E ) ಅಂದರೆ ನಮ್ಮ ಸುತ್ತ ಗಗನಮಂಡಲದಲ್ಲಿ ನಕ್ಷತ್ರ ಪರದೆಯ ಮೇಲೆ ವಾರ್ಷಿಕವಾಗಿ ಚಲಿಸಿದಂತೆ ಭಾಸವಾಗುವುದು ; ಚಲನದಿಶ ಪಶ್ಚಿಮದಿಂದ ಪೂರ್ವಕ್ಕೆ ಚಿತ್ರದಲ್ಲಿ ಇದನ್ನು ಬಾಣ ಗುರುತಿನಿಂದ ಕಾಣಿಸಿದೆ. ಸೌರಕಕ್ಷೆ CNLN' Cಗೆ ಕ್ರಾಂತಿ ವೃತ್ತವೆಂದು ಹೆಸರು. ಚಾಂದ್ರಕಕ್ಷೆ aNbN'a ಚಂದ್ರ M . ಚಂದ್ರನ ಮಾಸಿಕ ಚಲನದಿಶೆಯೂ ಪಶ್ಚಿಮದಿಂದ ಪೂರ್ವಕ್ಕೆ . ಕ್ರಾಂತಿವೃತ್ತ ಮತ್ತು ಚಾಂದ್ರಕಕ್ಷೆ ಸಂಧಿಸಿದಂತೆ ಭಾಸವಾಗುವ ಬಿಂದುಗಳು N ಮತ್ತು N' - ಇವು ಪಾತಬಿಂದುಗಳು. ಇವೇ ರಾಹು ಮತ್ತು ಕೇತು. * ಸೂರ್ಯಗ್ರಹಣ ಅಮಾವಾಸ್ಯೆಯಂದು ಮಾತ್ರ , ಚಂದ್ರಗ್ರಹಣ ಹುಣ್ಣಿಮೆ

ಯಂದು ಮಾತ್ರ ಸಂಭವಿಸಬಲ್ಲವು. ಬೇರೆ ಯಾವ ತಿಥಿಯಂದೂ ಅಲ್ಲ . * ಅಂದಮಾತ್ರಕ್ಕೆ ಪ್ರತಿ ಅಮಾವಾಸ್ಯೆಯಂದು ಸೂರ್ಯಗ್ರಹಣವೂ ಪ್ರತಿ

ಹುಣ್ಣಿಮೆಯಂದು ಚಂದ್ರಗ್ರಹಣವೂ ಘಟಿಸಲೇಬೇಕೆಂದೇನೂ ಇಲ್ಲ . ರಾಶಿಚಕ್ರದ ಎರಡು ಸ್ಪಷ್ಟ ನೆಲೆಗಳಲ್ಲಿ ಸೂರ್ಯ ಮತ್ತು ಚಂದ್ರ ಸಂಗಮಿ ಸಿದಾಗ ಮಾತ್ರ ಗ್ರಹಣ ಸಂಭವಿಸುತ್ತದೆ. ಇವು ವೀಕ್ಷಕನನ್ನು ಕುರಿತಂತೆ

ಒಂದು ಜೊತೆ ಎದುರುಬದಿರು ನೆಲೆಗಳು . ಇವೇ ರಾಹು ಮತ್ತು ಕೇತು. * ರಾಹು ಮತ್ತು ಕೇತು ನೆಲೆಗಳ ಪೈಕಿ ಯಾವುದೇ ಒಂದರ ಸನಿಹದಲ್ಲಿ ಸೂರ್ಯ

ಮತ್ತು ಚಂದ್ರ ಸಮಾಗಮಿಸಿದಾಗ ಸೂರ್ಯಗ್ರಹಣವೂ ಇವು ಒಂದೊಂದು ನೆಲೆಯ ಸನಿಹದಲ್ಲಿರುವಾಗ ( ಅಂದರೆ ಎದುರುಬದಿರಾಗಿರುವಾಗ) ಚಂದ್ರ ಗ್ರಹಣವೂ ಖಾತ್ರಿ ಸಂಭವಿಸುತ್ತವೆ. ಹೀಗೆ ರಾಹು ಮತ್ತು ಕೇತು ಎಂಬ ಎರಡು ನಿರ್ದಿಷ್ಟ ನೆಲೆಗಳಿಗೆ ಅಲ್ಲಿ

೧೪

ಜಾತಕ ಮತ್ತು ಭವಿಷ್ಯ

ಬೊಟ್ಟು ಮಾಡಿ ತೋರಿಸಲು ಯಾವುದೇ ಭೌತ ಕಾಯ ಇಲ್ಲದಿದ್ದರೂ ಇತಃ ಗ್ರಹಗಳಷ್ಟೆ ಪ್ರಾಮುಖ್ಯ ಒದಗಿತು. ( ತುಸು ಹೆಚ್ಚಾಗಿ ಕೂಡ: ದುಷ್ಟರಿಗೆ ಮೊದಲಿ ಮಣೆ!) ಇವು ಸೂರ್ಯ ಅಥವಾ ಚಂದ್ರನಿಗೆ ಛಾಯೆ ಬಳಿಯುವುದರಿಂದಲೂ ಸ್ವತಃ ಇವುಗಳಿಗೆ ಘನ ಅಸ್ತಿತ್ವವಿಲ್ಲದಿರುವುದರಿಂದಲೂ ಛಾಯಾ ಗ್ರಹಗಳೆಂದು ( ಕು - ಪ್ರಸಿದ್ಧವಾದುವು.

ಆದ್ದರಿಂದ ಅಂದಿನ ವಿಜ್ಞಾನಿಗಳು ಕಂಡು ವಿವರಿಸಿದ ಜಗತ್ತು ಇದು : ಸ್ಥಿರಭೂಮಿಯೇ ವಿಶ್ವಕೇಂದ್ರ . ಇದರ ಸುತ್ತ ನಕ್ಷತ್ರಚಿತ್ರಾಂಕಿತ ಆಕಾಶ ಗೋಳ ವ್ಯಾಪಿಸಿದೆ - ಇದೇ ವಿಶ್ವ , ಇದಕ್ಕೆ ತೊಡಿಸಿದ ಒಡ್ಯಾಣದಂತಿದೆ ರಾಶಿಚಕ್ರ ಇದರ ಮೇಲೆ ನವಗ್ರಹಗಳು ನಿತ್ಯ ಸಂಚಾರಿಗಳಾಗಿವೆ. ಇವುಗಳ ಕಕ್ಷಾವೇಗಗಳು ಹಾಗೂ ಚಲನದಿಶೆಗಳು ವಿವಿಧ. * ಈ ಮುಂದಿನ ಎರಡು ಗ್ರಹಕುಂಡಲಿಗಳನ್ನು ಸಾವಧಾನವಾಗಿ ಪರಾಂಬರಿಸ ಬೇಕು ಚಿತ್ರಗಳು ೪ ಮತ್ತು ೫ :

ಇವೆರಡು ದಿನಾಂಕಗಳ ನಡುವೆ ಸಂದ ಐದು ವರ್ಷಗಳ ಅವಧಿಯಲ್ಲಿ ಗುರು ಸುಮಾರು, ಐದು ಮನೆ( ರಾಶಿ) ಗಳನ್ನೂ ಶನಿ ಸುಮಾರು ಎರಡು ಮನೆ( ರಾಶಿ) ಗಳನ್ನೂ ಪ್ರದಕ್ಷಿಣ ದಿಶೆಯಲ್ಲಿ ( ಮಾರ್ಗಚಲನೆ) ಗಮಿಸಿವೆ. ಆದರೆ ರಾಹು ಮತ್ತು ಕೇತು ಮಾತ್ರ ಪ್ರತಿಯೊಂದೂ ಸುಮಾರು ನಾಲ್ಕು ಮನೆ( ರಾಶಿ) ಗಳನ್ನು ಅಪ್ರದಕ್ಷಿಣ ದಿಶೆಯಲ್ಲಿ ( ವಕ್ರಚಲನೆ) ಇದೇ ಅವಧಿಯಲ್ಲಿ ಗಮಿಸಿವೆ. ( ಭಾರತೀಯ ಸಂಪ್ರ ದಾಯದ ಗ್ರಹಕುಂಡಲಿಯಲ್ಲಿ ಪ್ರದಕ್ಷಿಣ ದಿಶ ಮಾರ್ಗಚಲನೆಯನ್ನೂ ಅಪ್ರದಕ್ಷಿಣ ದಿಶೆ ವಕ್ರಚಲನೆಯನ್ನೂ ಪ್ರತೀಕಿಸುತ್ತವೆ.)

ಬುಧ | ರವಿ , ರಾಹು

ಶುಕ್ರ

ಗುರು

೨೪ - ೪ - ೧೯೮೬

ಕುಜ |

ಶನಿ

ಚಂದ್ರ, ಕೇತು

ಚಿತ್ರ ೪

ಜಾತಕ ಮತ್ತು ಭವಿಷ್ಯ

ಬುಧ |

ರವಿ

ಶುಕ್ರ

ಕುಜ, ಕೇತು

ಗುರು

೨೪ - ೪ - ೧೯೯೧

ಶನಿ

ಚಂದ್ರ

ರಾಹು

ಚಿತ್ರ ೫ ಗ್ರಹಗಳ ಸ್ಥಾನಗಳು ಸ್ಥಿರವಲ್ಲ ಎಂದು ತಿಳಿಯುವುದು ಮುಖ್ಯ . ಜಾತಕಲೇಖನ - ಯಾವುದೇ ಕ್ಷಣದಲ್ಲಿ ರಾಶಿಚಕ್ರದ ಸಂಕ್ಷಿಪ್ತ ರೂಪವೇ ಆ ಕ್ಷಣದ ಜಾತಕ ಅಥವಾ ಗ್ರಹಕುಂಡಲಿ, ಅಲ್ಲಿ ಆಕಾಶದಲ್ಲಿ ೧೨ ಸ್ಥಿರ ರಾಶಿಗಳಿವೆ. ಇಲ್ಲಿ ಕಾಗದ ದಲ್ಲಿ ಅಷ್ಟೇ ಸ್ಥಿರ ಮನೆ(ಗೃಹ) ಗಳಿವೆ. ಅಲ್ಲಿ ಪಶ್ಚಿಮ- ಪೂರ್ವ ದಿಶಾಗಮನ ಮಾರ್ಗಚಲನೆ , ಪೂರ್ವ- ಪಶ್ಚಿಮ ದಿಶಾಗಮನ ವಕ್ರಚಲನೆ. ಇಲ್ಲಿ ಸಂವಾದೀ

ಮೀನ

ಮೇಷ

ವೃಷಭ

ಮಿಥುನ

ಕುಂಭ

ಕರ್ಕಟಕ

ಮಕರ

ಸಿಂಹ

ಧನು

ತುಲಾ

ಚಿತ್ರ ೬

೧೬

ಜಾತಕ ಮತ್ತು ಭವಿಷ್ಯ

ದಿಶೆಗಳು ಪ್ರದಕ್ಷಿಣ ಮತ್ತು ಅಪ್ರದಕ್ಷಿಣ.

ಮೇಲುಸಾಲಿನ ಎರಡನೆಯ ಮನೆಯನ್ನು ಮೇಷವೆಂದು ಆಯ್ತು ಮಿಕ್ಕ ೧ ರಾಶಿಗಳನ್ನು , ಪ್ರದಕ್ಷಿಣ ದಿಶೆಯಲ್ಲಿ ಮುಂದುವರಿಯುತ್ತ , ಉಳಿದ ೧೧ ಮನೆಗಳಿಗೆ ವಿತರಿಸುವುದು ಸಂಪ್ರದಾಯ . ಇದು ಈ ಬಗ್ಗೆ ಆಸಕ್ತರಾದವರೆಲ್ಲರಿಗೂ ಗೊತ್ತಿರು ವುದರಿಂದ ಜಾತಕದಲ್ಲಿ ಗೃಹಸಂಖ್ಯೆಯನ್ನಾಗಲೀ ರಾಶಿನಾಮವನ್ನಾಗಲೀ ಪ್ರತ್ಯೇ ? ವಾಗಿ ನಮೂದಿಸಿರುವುದಿಲ್ಲ . ಪಂಚಮ ಗೃಹವೆಂದರೆ ಸಿಂಹರಾಶಿಯೆಂದೂ ವೃಶ್ಚಿಕ ರಾಶಿಯೆಂದರೆ ಅಷ್ಟಮ ಗೃಹವೆಂದೂ , ಇತ್ಯಾದಿ, ಅವರಿಗೆ ತಿಳಿದೆ! ಇರುತ್ತದೆ.

ಆದ್ದರಿಂದ ಜಾತಕ ತಯಾರಿಕೆಯ ಸ್ಕೂಲ ಹಂತಗಳಿವು : * ಖಾಲಿಮನೆಗಳ ವೇದಿಕೆಯನ್ನು ಮೊದಲು ತಯಾರಿಸಬೇಕು. * ಆಧುನಿಕ ದೃಷ್ಟಿದ್ದಾಂತದ ( ಅನುಬಂಧ ೧ ನೋಡಿ) ಪ್ರಕಾರ ತಯಾರಿಸಿರುವ

ಯಾವುದೇ ಶಿಷ್ಟ ಪಂಚಾಂಗದಿಂದ ಆ ಮುಹೂರ್ತ ಕುರಿತಂತೆ ನವಗ್ರಹಗಳ ವಿತರಣೆ ಮಾಡಬೇಕು.

ದಿನಾಂಕ ೨- ೬ - ೨೦೦೦ದ ಅಮಾವಾಸ್ಯೆಯಂದು ಗುರು ಮೇಷ ರಾಶಿಯಲ್ಲಿರು ವುದು ನಿಜ ( ಪುಟ ೭). ಆದರೆ ಒಂದೊಂದು ರಾಶಿಯ ವ್ಯಾಪ್ತಿಯೂ ೩೦° ಎಂದು ಗೊತ್ತಿದೆ. ಆಕಾಶದ ಮಹಾವಿಸ್ತಾರದಲ್ಲಿ ರಾಶಿಚಕ್ರದ ೦ - ೩೦° ವ್ಯಾಪ್ತಿಯೊಳಗೆ ಗುರುಗ್ರಹವು ಕರಾರುವಾಕ್ಕಾಗಿ ಎಲ್ಲಿದೆ ಎಂದು ಬೊಟ್ಟಿಟ್ಟು ತೋರಿಸುವುದು ಹೇಗೆ? ಈ ಸೂಕ್ಷ್ಮ ಗಣನೆಗಳನ್ನು ಮಾಡಲು ಬೇಕಾಗುವ ಮಾಹಿತಿಗಳು ಪಂಚಾಂಗ ದಲ್ಲಿ ದೊರೆಯುತ್ತವೆ. ಅಲ್ಲದೇ ಇಂದಿನ ಗಣಕಯುಗದಲ್ಲಿ ಯುಕ್ತ ತಂತ್ರಾಂಶ (software ) ಬಳಸಿ ಯಾವುದೇ ಕ್ಷಣಕ್ಕೆ ಹೊಂದುವ ಖಚಿತ ಹಾಗೂ ವೈಜ್ಞಾನಿಕ ಜಾತಕವನ್ನು ಗಣಕದಿಂದ ತೀರ ಸುಲಭವಾಗಿ ( ಆಕಾಶವನ್ನು ಒಮ್ಮೆಯೂ ನೋಡದೆ, ಅಲ್ಲಿಯ ಚಲನೆಗಳ ಬಗ್ಗೆ ಏನೂ ತಿಳಿಯದೆ) ಪಡೆಯಬಹುದು! ಜಾತಕ ತಯಾರಕನಿಗೆ ಖಗೋಳವಿಜ್ಞಾನವಾಗಲೀ ನಕ್ಷತ್ರಜ್ಞಾನವಾಗಲೀ ತಳದಲ್ಲಿರುವ ಗಣಿತವಾಗಲೀ ತಿಳಿದಿರಬೇಕಾಗಿಲ್ಲ ! ಗಾಣದ ಎತ್ತು ಆತ - ಕಬ್ಬಾದರೇನು, ಕಾಸರ್ಕವಾದರೇನು !

ಜಾತಕದ ದೈವಿಕ ಅಂತಸ್ತು

ಜಾತಕರಚನೆಯು ತಾರ್ಕಿಕ ವಿಧಿ ವಿಧಾನಗಳನ್ನು ಅವಲಂಬಿಸಿದೆಯೆಂದು ತಿಳಿದ ದ್ವಾಯಿತು. ಸಾರಾಂಶವನ್ನು ಮುಂದೆ ಬರೆದಿದೆ :

ಜಾತಕ ಮತ್ತು ಭವಿಷ್ಯ

* ಗಗನ ವಿದ್ಯಮಾನಗಳು ಸ್ವಂತ ಭೌತ ನಿಯಮಾನುಸಾರ ಸಂಭವಿಸುತ್ತವೆ. * ಶಿಶುಜನನ ಮುಂತಾದ ವ್ಯಕ್ತಿ ಸಂಬಂಧಿತ ಘಟನೆಗಳು ಸ್ವತಂತ್ರವಾಗಿ

ಬೇರೆಯದೇ ಕ್ರಮದಲ್ಲಿ ಜರಗುತ್ತವೆ. ಉಭಯ ಕ್ರಿಯೆಗಳೂ ಕಾಲದ ನಿರಂತರ ಏಕವೇಗ ಏಕದಿಶಾ ಪ್ರವಾಹದಲ್ಲಿ ಘಟಿಸುತ್ತವೆ. ಎಲ್ಲಿ ಕ್ರಮವಿದೆಯೋ ಅಲ್ಲಿ ಪ್ರರೂಪವನ್ನು (pattern ) ಅನ್ವೇಷಿಸುವುದು ಮಾನವಮತಿಯ ಸಹಜ ಲಕ್ಷಣ. ಪ್ರರೂಪವೆಂದರೆ ಆ ಕ್ರಿಯೆಯ ತಳದಲ್ಲಿರುವ ಅಚ್ಚು , ಈ ಅಚ್ಚಿನ ಎರಕ ಅಥವಾ ನಕಲಾಗಿ ಆ ಕ್ರಿಯೆ ವ್ಯಕ್ತವಾಗುತ್ತದೆ. ಉದಾ ಹರಣೆಗೆ ಹಗಲು - ಇರುಳು- ಹಗಲು ಮುನ್ನಡೆ. ಈ ಕ್ರಮದಲ್ಲಿಯ ಪ್ರರೂಪವೇನು? ಸೂರ್ಯನ ಮೂಡು-ಕಂತು -ಮೂಡು ಸರಿತ.

ಪ್ರರೂಪಾನ್ವೇಷಣೆಯಲ್ಲಿ ಒಮ್ಮೆ ಯಶಸ್ವಿಯಾದ ಬಳಿಕ, ಕ್ರಮರಹಿತ ಕ್ರಿಯೆ ಗಳಲ್ಲಿಯೂ ಹುದುಗಿರಬಹುದಾದ, ಆದರೆ ಸದ್ಯ ತನಗೆ ಗೋಚರವಾಗದ ಸಂಕೀರ್ಣ ಅಚ್ಚನ್ನು ಅರಸುವುದು ಮುಂದಿನ ಸವಾಲು. ಉದಾಹರಣೆಗೆ ಗ್ರಹಣ ಗಳ ಅನಿರೀಕ್ಷಿತ ಹಾಗೂ ಅನಿಯತಕಾಲಿಕ ದೃಶ್ಯಗಳ ತಳದಲ್ಲಿರುವ ಪ್ರರೂಪದ ಅನ್ವೇಷಣೆ ? ಇದು ಸಫಲವಾಗಿದೆ, ಮತ್ತು ಈ ಕಾರಣದಿಂದ ಗ್ರಹಣಗಳನ್ನು ಕರಾರುವಾಕ್ಕಾಗಿ ಮುನ್ನುಡಿಯುವುದು ಕೈಗೂಡಿದೆ.

ಮುಂದೇನು ? ಲಭ್ಯಪ್ರರೂಪವನ್ನು ಆಧರಿಸಿ ಭವಿಷ್ಯದಲ್ಲೇನಾದೀತೆಂಬ ಊಹೆ ಬರಲಿರುವ ದಿನಗಳತ್ತ ನೋಟ. ಉದಾಹರಣೆಗೆ ಹ್ಯಾಲೀ ಧೂಮಕೇತು ನಮ್ಮ ಆಕಾಶದಲ್ಲಿ ನಿಯತಕಾಲಿಕವಾಗಿ ಪ್ರಕಟವಾಗುವ ವಿಚಿತ್ರ ದೃಶ್ಯ . ಈ ಅಜ್ಞಾತ ಧೂಮಕೇತುವಿನ ದೀರ್ಘಕಾಲಿಕ ಪರ್ಯಟನೆಯ ತಳದಲ್ಲಿ ಅಡಗಿದ್ದ ಪ್ರರೂಪ ವನ್ನು ಆಧರಿಸಿ ಕಣಿನುಡಿದ ಭವಿಷ್ಯವಾಣಿಯ ಕಾರಣವಾಗಿ ಇದಕ್ಕೆ ಹ್ಯಾಲೀ ಧೂಮ ಕೇತುವೆಂಬ ಹೆಸರು ಬಂದಿದೆ. ( ಅನುಬಂಧ ೨ ನೋಡಿ.) ಈ ಹಾದಿಯಲ್ಲಿ ನಡೆಯು ವಾಗ ಅನುಸರಿಸುವುದು , ಮುಖ್ಯವಾಗಿ, ಪೂರ್ವನಿದರ್ಶನಗಳು, ಸಂಚಿತ ಅನು ಭವ, ತರ್ಕ, ಪ್ರತಿಭೆ, ಮತ್ತು ಪ್ರಯೋಗ, ಉದಾಹರಣೆಗೆ * ಅಲ್ಲಿ ಸೂರ್ಯ ಮೃಗಶಿರಾ ಅಥವಾ ಆದ್ರ್ರಾ ನಕ್ಷತ್ರವನ್ನು ಪ್ರವೇಶಿಸುವಾಗ ಇಲ್ಲಿ ಮಳೆ ಭರದಿಂದ ಸುರಿಯುತ್ತದೆ. ಪೂರ್ವನಿದರ್ಶನಗಳ ಫಲವಾದ ಸಂಚಿತಾನುಭವವಿದು. ಆದ್ದರಿಂದ ವೀಕ್ಷಕ ' ಮೃಗಶಿರಾ ಮತ್ತು ಆದ್ರ್ರಾ ನಕ್ಷತ್ರಗಳು ಮಳೆಯನ್ನು ನಿಯಂತ್ರಿಸುತ್ತವೆ'' ಎಂಬ ತೀರ್ಮಾನಕ್ಕೆ ಬರು ತಾನೆ. ಮುಂದಿನ ಹಲವು ವರ್ಷ ಇದು ನಿಜವೆಂದು ಕಂಡುಬರುತ್ತದೆ.

೧೮

ಜಾತಕ ಮತ್ತು ಭವಿಷ್ಯ

ಯಾವುದೋ ಒಂದು ವರ್ಷ ಹೀಗೆ ಆಗದಾಗ ಸೂರ್ಯ ಈ ನಕ್ಷತ್ರಗಳನು ಪ್ರವೇಶಿಸಿದಾಗ ಮಳೆ ಸುರಿಯದಿದ್ದರೆ ತಾನು ನೀಡಿದತೀರ್ಮಾನಕ್ಕೆ ಯು ತಿದ್ದುಪಡಿ ಜೋಡಿಸುವತ್ತ ಆತನ ಮನಸ್ಸು ಹರಿಯುವುದೇ ಹೊರತು ಅದನ ಸಾಧುತ್ವವನ್ನು ಪ್ರಶ್ನಿಸುವತ್ತ ಅಲ್ಲ . ಏಕೆಂದರೆ ಇದು ನನ್ನ ಮುದ್ದು ಕೂಸು ಇದನ್ನು ನಾನು ತೊರೆಯಲಾರೆ ! ” ಎಂಬ ಆತ್ಮರತ ಭಾವ, ಮತ್ತು ಭಗವಂತನ ನಿಯಮಗಳ ಬಗ್ಗೆ ಪರಿಪೂರ್ಣ ಭರವಸೆ. ಅಲ್ಲಿ ಧೂಮಕೇತು ಹಠಾತ್ತನೆ ಗೋಚರಿಸುತ್ತದೆ. ಇಲ್ಲಿ ರಾಜ ಅಕಸ್ಮಾತ್ತಾ ಮಡಿಯುತ್ತಾನೆ. ಇವೆರಡನ್ನೂ ಕೊಂಡಿಸಿದ ಮಾನವಮತಿ ತೀರ್ಮಾನಿಸುತ್ತದೆ 'ಧೂಮಕೇತುವೆಂಬ ಕರಾಳ ಬಾನಬರಹದ ಮೂಲಕ ಭಗವಂತ ಜನರಿಗೆ ಇವರ ನಾಯಕನ ದುರ್ಮರಣದ ಮುನ್ಸೂಚನೆ ನೀಡಿದ್ದಾನೆ. ” ಮುಂದಿನ ಹಲವಾರು ಇಂಥ ಸನ್ನಿವೇಶಗಳಲ್ಲಿ ಧೂಮಕೇತುದರ್ಶನ- ರಾಜ ( ಅಥವಾ ನಾಯಕ) ಮರಣ ಹೊಂದಾಣಿಕೆ ಕಂಡುಬಂದಾಗ ಇದೊಂದು ವಿಧಿನಿಯಮ ವೆಂದೇ ಪಂಡಿತಪಾಮರರು ನಂಬುತ್ತಾರೆ. ರಾಜ ಸತ್ತಾಗ ಧೂಮಕೇತು ಪ್ರಕಟ ವಾಗದಿದ್ದರೆ ? “ ಅದು ಅಲ್ಲಿ ಖಂಡಿತ ಇದ್ದೇ ಇದೆ. ಭಗವಂತ ಎಂದಾದರೂ ತನ್ನ ನಿಯಮಗಳನ್ನು ತಾನೇ ಮುರಿಯುವನೇ ? ನಮ್ಮ ಮರ್ತ್ಯ ನೇತ್ರಗಳಿಗೆ ಅದು ಗೋಚರಿಸುತ್ತಿಲ್ಲವಷ್ಟೆ ” ಎಂಬ 'ಪ್ರಾಮಾಣಿಕ' ಸಮರ್ಥನೆನೀಡಲಾಗು ಇದೆ. ಇದೂ ಸರಿ. ಧೂಮಕೇತು ಕಾಣಿಸಿಕೊಂಡಾಗ ರಾಜ ಸಾಯದಿದ್ದರೆ “ ಆ ಮೊದಲು ಮತ್ತು ಆಗ ಸಲ್ಲಿಸಿದ ಪ್ರಾರ್ಥನೆ ಬಲಿಗಳಿಂದ ಪರಮಾತ್ಮ ಸುಪ್ರೀತನಾಗಿ ತನ್ನ ಕ್ರೂರ ದೃಷ್ಟಿಯನ್ನು ಉಪಶಮನಗೊಳಿಸಿದ. ” ನಿಗ್ರಹಾನು ಗ್ರಹ ಸಾಮರ್ಥ್ಯವಿರುವ ಸರ್ವಶಕ್ತನಿಗೆ ಯಾವುದು ತಾನೇ ಅಸಾಧ್ಯ ? ತರ್ಕ ಚಮತ್ಕಾರ ಮತ್ತು ಅಧಿಕಾರ ಪ್ರಹಾರಗಳಿಗೆ ಆ ಗಳಿಗೆ ಸೋಲದ ವಾಸ್ತವತೆ ಇದೆಯೇ !

ಜಾತಕ ರಚನೆ ಮತ್ತು ವಾಚನ (ಸಮಗ್ರವಾಗಿ ಫಲಜ್ಯೋತಿಷ್ಯ ಅಂದರೆ ಜಾತಕ ಓದಿ ಭವಿಷ್ಯ ನುಡಿಯುವುದು ) ಈ ಕ್ರಿಯೆಗಳ ತಳದಲ್ಲಿರುವ ಪ್ರರೂಪದ ಮುಖ್ಯ ಲಕ್ಷಣಗಳಿವು : * ಭಗವಂತನಿರ್ಮಿತ ವಿಶ್ವದಲ್ಲಿ ಭೂಮಿ ಸರ್ವೋತ್ಕೃಷ್ಟ ಪ್ರದೇಶ. ಇಲ್ಲಿ

ದೇವರು ತನ್ನ ಪಡಿಯಚ್ಚಾದ ಮಾನವನನ್ನು ಸ್ಥಾಪಿಸಿದ್ದಾನೆ. * ಸೃಷ್ಟಿಶ ತನ್ನ ನಿರ್ಮಿತಿಯಾದ ಮಾನವನಿಗೆ ಬುದ್ದಿ ನೀಡಿದ್ದರೂ ಅದನ್ನು

ಮಾಯೆಯ ಮುಸುಕಿನಿಂದ ಮಸಕುಗೊಳಿಸಿದ್ದಾನೆ. ಆದರೆ ಅದೇ ವೇಳೆ ಆತ

ಜಾತಕ ಮತ್ತು ಭವಿಷ್ಯ

೧೯

( ದೇವರು ) ತನ್ನ ಇಂಗಿತಗಳನ್ನು ಗಗನಕಾಯಗಳ ಮೂಲಕ ಮಾನವನಿಗೆ

ತಿಳಿಯಪಡಿಸುತ್ತಾನೆ. * ಅಗೋಚರ ಪರಮಾತ್ಮನಗೋಚರ ಪ್ರತೀಕಗಳೇ ನವಗ್ರಹಗಳು. ಇವು ವ್ಯಕ್ತಿ ಜೀವನವನ್ನು ನೇರವಾಗಿ ಪ್ರಭಾವಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಇದು ಹೇಗೆ ಎಂಬುದನ್ನು ಜಾತಕ ಓದಿ ತಿಳಿಯಬಹುದು. ವ್ಯಕ್ತಿಗೆ ಭವಿಷ್ಯದಲ್ಲಿ ಒದಗಲಿರುವ ಸಂಕಷ್ಟಗಳನ್ನು ಜಾತಕದಿಂದ ಮೊದಲೇ ತಿಳಿದು ಯುಕ್ತಕ್ರಮಗಳಿಂದ ( ದಾನ, ಪ್ರಾರ್ಥನೆ, ಶಾಂತಿ ಇತ್ಯಾದಿ) ನಿವಾರಿಸಬಹುದು, ಕನಿಷ್ಠ ಪಕ್ಷ ಅವುಗಳ ಆಘಾತತೀವ್ರತೆಯನ್ನಾದರೂ ಕಡಿಮೆಮಾಡಬಹುದು. ತನ್ನ ಜೀವನವು ಸುಖ ಸಮೃದ್ಧಿ ಶಾಂತಿಮಯವಾಗಿರಬೇಕೆಂಬ ಸಹಜ ಅಭಿ ಲಾಷೆ, ಅಜ್ಞಾತ ಅವ್ಯಕ್ತಬಲವೊಂದು ತನ್ನ ಬದುಕನ್ನು ನಿರ್ದೇಶಿಸುತ್ತಿದೆಯೆಂಬ ನಂಬಿಕೆ, ಗಗನ ಘಟನೆಗಳಿಗೂ ಜೀವನ ಪ್ರಕ್ರಿಯೆಗಳಿಗೂ ನಿಕಟ ಸಂಬಂಧ ಇದೆಯೆಂಬ ದೃಢ ಭರವಸೆ ಮತ್ತು ಆಧುನಿಕ ವಿಜ್ಞಾನವು ಬದುಕಿನ ಸಕಲ ಸಮಸ್ಯೆ ಗಳಿಗೆ ಎಂದೂ ಪರಿಹಾರ ಒದಗಿಸದು ಎಂಬ ಭಾವನೆ ನಾಲ್ಕುರಿಗೊಂಡು ಜಾತಕಕ್ಕೆ ದೈವಿಕ ಅಂತಸ್ತು ಒದಗಿಸಿವೆ.

ಪರಂಪರೆ, ಧಾರ್ಮಿಕ ವಿಧಿ ನಿಷೇಧಗಳು, ಪ್ರಾಚೀನವಾದವೆಲ್ಲವೂ ಆ ಕಾರಣ ದಿಂದಲೇ ಪ್ರಶ್ನಾತೀತವಾದವೆಂಬ ನಂಬಿಕೆ , ನಿಗೂಢ ಅಸ್ಪಷ್ಟ ಪಾರಿಭಾಷಿಕ ಪದಗಳ ಮೂಲಕ ( ಸಾಡೇಸಾತ್ ಶನಿ, ಸಪ್ತಮದಲ್ಲಿ ಕೂರಗ್ರಹ ಅಂಗಾರಕ , ಕುಜ-ರಾಹು ಸಂಧಿ, ಕೇತು ದಶೆ ಇತ್ಯಾದಿ) ಫಲಜ್ಯೋತಿಷಿ ಘಟನೆಗಳನ್ನು ಕೂರ ಮತ್ತು ದೈವೀಕರಿಸುವಾಗ ವ್ಯಕ್ತಿಯಲ್ಲಿ ಮೂಡುವ ಆರಾಧನಾ ಮನೋಭಾವ ಮುಂತಾದವು ಬೆಸುಗೆಗೊಂಡು ಫಲಜ್ಯೋತಿಷ್ಯವನ್ನು ಜೀವನದ ಅವಿಭಾಜ್ಯ ಅಂಗವಾಗಿ ಮಾಡಿವೆ, ಅದ್ಭುತ ಪವಾಡ ವಿಷಯವಾಗಿ ಉತ್ತರಿಸಿವೆ!' ಇದು ಅಲ್ಲೊ ಬರಿದೇ ಲೆಕ್ಕಾ , ನಿನ್ನಳವಿಗೆ ಎಂದೂ ಸಿಕ್ಕಾ , ಪ್ರಶ್ನಾ ಹಾಕದೆ ನಂಬೋ ಮುಕ್ಕಾ !

ಭವಿಷ್ಯವಾಚನ - ಜಾತಕವನ್ನು ಫಲಜ್ಯೋತಿಷಿ ಓದಿ ಆ ವ್ಯಕ್ತಿಯ ಭವಿಷ್ಯವನ್ನು ಮುನ್ನುಡಿಯ ಬಲ್ಲ ಎಂಬ ನಂಬಿಕೆ ಮನುಕುಲದ ಒಡನಾಡಿಯಾಗಿ ಬೆಳೆದು ಬಂದಿದೆ. ಈ ಭವಿಷ್ಯ ವಾಚನದಲ್ಲಿ ನಿಖರತೆಯ ಮಟ್ಟ ಮುಖ್ಯವಾಗಿ ಎರಡು ಅಂಶಗಳನ್ನು ಆಧರಿಸಿದೆ

೨೦

ಜಾತಕ ಮತ್ತು ಭವಿಷ್ಯ

ಎಂದು ಸಂಬಂಧಿಸಿದವರು ನಂಬಿದ್ದಾರೆ :

ಜಾತಕದ ನಿಖರತೆ. ಇದು ಜನನಮುಹೂರ್ತದ ನಿಷ್ಕಷ್ಟ ನಿರೂಪಣೆಯನ್ನು ಆಶ್ರಯಿಸಿದೆ.

ಫಲಜ್ಯೋತಿಷಿಯ ದೈವಿಕತೆ. ಇದು ಈತನ ಜ್ಞಾನ, ನಿಃಸ್ವಾರ್ಥ ಮನೋಭಾವ ದೈವಸಾಮೀಪ್ಯ ಮುಂತಾದ ನಿಗೂಢ ಗುಣಗಳನ್ನು ಅವಲಂಬಿಸಿದೆ. - ಇಂಥ ಒಂದು ಭಾವನೆ ಅರಳಲು ಕಾರಣಗಳೇನು ? ಮಾನವನ ಮನಸ್ಸಿನಾಳ ದಲ್ಲಿ ಹುದುಗಿರುವ ಅದಮ್ಯ ಲಾಲಸೆ : “ ನನ್ನ ನಾಳೆಗಳನ್ನು ಇಂದೇ ನಾನು ತಿಳಿಯ ಬಲ್ಲೆನಾದರೆ ಎಷ್ಟು ಚೆನ್ನ ! ” ಇದಕ್ಕೆ ಪೋಷಕವಾಗಿಯೋ ಎಂಬಂತೆ, ಈ ಹಿಂದೆ ವಿವರಿಸಿದಂತೆ, ಗಗನ ಘಟನೆಗಳಿಗೂ ವ್ಯಕ್ತಿ ಚಟುವಟಿಕೆಗಳಿಗೂ ನಡುವೆ ಏರ್ಪ

ಶುಕ್ರ , ರಾಹು | ಗುರು

೬ - ೨ - ೧೯೮೮

ರವಿ , ಬುಧ

ಶನಿ

ಕುಜ

ಕೇತು, ಚಂದ್ರ

ಚಿತ್ರ ೭

ಕುಜ

ಗುರು

ರಾಹು

- ೨ - ೧೯೮೯

ರವಿ, ಚಂದ್ರ ಬುಧ, ಶುಕ್ರ

ಕೇತು

ಶನಿ

ಚಿತ್ರ ೮

ಜಾತಕ ಮತ್ತು ಭವಿಷ್ಯ

ಡುವ ( ಅಥವಾ ಏರ್ಪಡುವಂತೆ ಭಾಸವಾಗುವ) ವಿಶೇಷ ಸಂಬಂಧ, ಫಲವಾಗಿ ಜಾತಕರಚನೆ ಒಂದು ಯಾಂತ್ರಿಕ ವಿಧಿಯಾಗಿ ಶಿಷ್ಟ್ರೀಕರಣಗೊಂಡಿತು.

ವರ್ಷದಲ್ಲಿ ಎಷ್ಟು ಕ್ಷಣಗಳಿವೆ ? ಅಷ್ಟು ಜಾತಕಗಳಿವೆ. ಆದರೆ ಈ ವರ್ಷದ ಒಂದು ನಿರ್ದಿಷ್ಟ ಜಾತಕ ಹಿಂದಿನ ವರ್ಷದ ಅದೇ ನಿರ್ದಿಷ್ಟ ಕ್ಷಣದ ಜಾತಕದ ತದ್ವತ್ತು ಪ್ರತಿ ಅಲ್ಲ . ಉದಾಹರಣೆಗೆ ಚಿತ್ರಗಳು (೭ ಮತ್ತು ೮)

ಇವೆರಡು ರಾತ್ರಿಗಳಲ್ಲಿಯೂ ಪ್ರಕಟವಾದ ನಕ್ಷತ್ರ ಪರದೆ ಒಂದೇ ಆಗಿದ್ದರೂ ಮುನ್ನೆಲೆಯಲ್ಲಿ ನಟರು ( ನವಗ್ರಹಗಳು ) ತಳೆದ ವಿನ್ಯಾಸಗಳು ಮಾತ್ರ ತೀರ ವಿಭಿನ್ನ ! ಎಂದೇ “ ವ್ಯಕ್ತಿಗಳು ಎಷ್ಟೊ ಜಾತಕಗಳು ಅಷ್ಟು !?”

ಈ ದೈವಿಕ ಗೊಂದಲದಲ್ಲಿಯೂ ಪ್ರರೂಪವನ್ನು ಅರಸುವುದು ಸಾಧ್ಯವಿದೆ. ಆ ದಿಶೆಯಲ್ಲಿ ಪ್ರಯತ್ನಿಸಿದ ಪ್ರಾಚೀನ ಚಿಂತನಶೀಲರು ಜಾತಕಗಳ ಪ್ರರೂಪೀಕರಣ , ಆಯಾ ಜಾತಕರ ( ವ್ಯಕ್ತಿಗಳ) ಜೀವನ ಘಟನೆಗಳ ವರ್ಗಿಕರಣ, ಇವೆರಡರ ನಡುವೆ ತಾಳೆ ನೋಡುವುದು ಮುಂತಾದ ತಾರ್ಕಿಕ ವಿಧಾನಗಳನ್ನು ಅನುಸರಿಸಿ ಹಲವಾರು ಪ್ರರೂಪಗಳನ್ನು ಗುರುತಿಸಿದರು : “ ಈ ಜಾತಕದ ಲಕ್ಷಣಗಳಿವು ; ಆದ್ದರಿಂದ ಯಾವ ವ್ಯಕ್ತಿಯ ಜಾತಕ ಇದರೊಂದಿಗೆ ತಾಳೆ ಆಗುವುದೂ ಆತ ಈ ಲಕ್ಷಣ ಗಳಿಂದ ಕೂಡಿದ್ದು ಆತನ ಭವಿಷ್ಯ ಹೀಗಿರುತ್ತದೆ. ” ಇದು ನಿಜವೇ ? ಇದರ ವಿಕಾಸ ಹೇಗೆ ?

ಸ್ವಾಮಿ ವಿವೇಕಾನಂದವಾಣಿ - ಸ್ವಾಮಿ ವಿವೇಕಾನಂದರ ಭಾಷಣ Man the Maker of Destiny ( ಅದೃಷ್ಟ ನಿರ್ಮಾಪಕ ಮಾನವು ಎಂಬುದರ ಸಂಗ್ರಹಾನುವಾದ :

ದಕ್ಷಿಣ ಭಾರತದಲ್ಲಿ ಅತಿ ಪ್ರಬಲವಾದ ಒಂದು ವಂಶವಿತ್ತು . ಬೇರೆ ಬೇರೆ ಕಾಲಗಳಲ್ಲಿ ಬಾಳಿದ ಗಣ್ಯ ವ್ಯಕ್ತಿಗಳ ಜನನಮುಹೂರ್ತಗಳನ್ನು ಆಧರಿಸಿ ಅವರ ಜಾತಕಗಳನ್ನು ತಯಾರಿಸು ವುದು ಈ ವಂಶಜರ ವೃತ್ತಿ. ಇವನ್ನು ಓದಿ' ಇವರು ಜಾತಕನ ಬಗೆಗಿನ ಪ್ರಮುಖ ಸಂಗತಿ ಗಳನ್ನು ಮುನ್ನುಡಿದರು, ಮತ್ತು ಇವುಗಳ ದಾಖಲೆ ರಚಿಸಿದರು. ಕಾಲಾಂತರದಲ್ಲಿ , ಘಟನೆ ಗಳು ಸಂಭವಿಸಿದಂತೆ, ಇವನ್ನು ದಾಖಲೆಗಳಲ್ಲಿಯ ವಿವರಗಳೊಂದಿಗೆ ಹೋಲಿಸಿ ನೋಡಿ ದರು. ಸಾವಿರ ವರ್ಷ ಪರ್ಯಂತ ಈ ತುಲನೆ ಮುಂದುವರಿದಾಗ ಅಲ್ಲಿ ಹಲವಾರು ಹೊಂದಾಣಿಕೆಗಳು ಕಂಡುಬಂದುವು. ಇವನ್ನು ಸಾರ್ವತ್ರೀಕರಿಸಿ ಬೃಹತ್ಸಂಪುಟವೊಂದರಲ್ಲಿ ಕಲೆ ಹಾಕಿದರು. ಮುಂದೆ ಈ ವಂಶ ನಶಿಸಿಹೋಯಿತು. ಆದರೆ ಫಲಜ್ಯೋತಿಷಿಗಳ ದಂಡು ಮಾತ್ರ ಉಳಿಯಿತು. ಆ ಬೃಹತ್ಸಂಪುಟ ಇವರ ಸ್ವತ್ತು . ಫಲಜ್ಯೋತಿಷ್ಯ ಈ ತರನಾಗಿ ಅಸ್ತಿತ್ವಕ್ಕೆ ಬಂದಿರುವುದು ಸಾಧ್ಯ . ಹಿಂದೂಗಳನ್ನು ತೀವ್ರವಾಗಿ ಗಾಸಿಗೊಳಿಸಿರುವ ಕುರುಡು ನಂಬಿಕೆಗಳ

೨೨

ಜಾತಕ ಮತ್ತು ಭವಿಷ್ಯ

ಪೈಕಿ ಅವರು ಫಲಜ್ಯೋತಿಷ್ಯದ ಸೂಕ್ಷ್ಮಾತಿಸೂಕ್ಷ್ಮ ವಿವರಗಳಿಗೆ ಅತ್ಯಧಿಕ ಲಕ್ಷ ಹರಿಸಿದುದ ಒಂದಾಗಿದೆ.

ನಮ್ಮ ಚಿಂತನೆ ಪ್ರಕಾರ ಭಾರತಕ್ಕೆ ಫಲಜ್ಯೋತಿಷ್ಯ ತಂದವರು ಗ್ರೀಕರು. ಇವರು ಹಿಂದೆ ಗಳಿಂದ ಖಗೋಳವಿಜ್ಞಾನ ಪಡೆದು ಇದನ್ನು ತಮ್ಮ ಜೊತೆ ಒಯ್ತು ಯೂರೋಪಿಗೆ ತಲಪಿ ದರು. ಈ ಪರಸ್ಪರ ಪ್ರಭಾವವನ್ನು ಭಾರತದ ಪ್ರಾಚೀನ ಪವಿತ್ರ ಮಂದಿರಗಳಲ್ಲಿ ಸ್ಪಷ್ಟವಾ ಕಾಣಬಹುದು. ಇವು ನಿರ್ದಿಷ್ಟ ಜ್ಯಾಮಿತೀಯ ಆಲೇಖ್ಯಾನುಸಾರ ರಚಿತವಾಗಿವೆ, ಮತ ನಕ್ಷತ್ರಗಳು ನಿರ್ದಿಷ್ಟ ಸ್ಥಾನಗಳಿಗೆ ಬಂದಾಗ ನಿರ್ದಿಷ್ಟ ವಿಧಿಗಳನ್ನು ಆಚರಿಸಲು ಬದ್ಧವಾಗಿ

ಭವಿಷ್ಯವನ್ನು ಅತ್ಯದ್ಭುತವಾಗಿ ನುಡಿದಿರುವ ಹಲವಾರು ಫಲಜ್ಯೋತಿಷಿಗಳನ್ನು ನೋ ದ್ದೇನೆ. ಆದರೆ ಅವರು ನಕ್ಷತ್ರಗಳನ್ನು ಆಧರಿಸಿ ಅಥವಾ ತತ್ಸದೃಶ ಕ್ರಿಯೆ ಎಸಗಿ ಈ ಯಶಸ್ ಗಳಿಸಿರಬಹುದೆಂಬ ಪೊಳ್ಳನ್ನು ನಾನಂತೂ ನುಂಗಲಾರೆ. ಹಲವಾರು ಸಂದರ್ಭಗಳಲ್ಲಿ ತೀ ಸ್ಪಷ್ಟವಾಗಿಯೇ ಅದು ಮನೋವಾಚನವಾಗಿತ್ತು . ಮುಂದೆ ಘಟಿಸಲಿರುವುದನ್ನು ಕೆಲವೊವೆ ಪರಮಾಶ್ಚರ್ಯಕರವಾಗಿ ಕಳೆನುಡಿದಿರುವುದೂ ಉಂಟು. ಆದರೆ ಹೆಚ್ಚಿನ ಸಂದರ್ಭಗಳ ಅದು ಬರಿದೆ ಒಣಗುಲ್ಲು. - ಲಂಡನ್ನಿನಲ್ಲಿ ಒಬ್ಬ ತರುಣ ನನ್ನಲ್ಲಿಗೆ ಬಂದು, “ ಮುಂದಿನ ವರ್ಷ ನನ್ನ ಗತಿ ಏನಿ ದೀತು ? ” ಎಂದು ಕೇಳುತ್ತಿದ್ದ.

“ ಹಾಗೆಂದರೇನರ್ಥ ? ” ಎಂದು ಅವನನ್ನು ಪ್ರಶ್ನಿಸಿದಾಗ ಅವನೆಂದ, “ ನಾನು ಪೂತಿ ಹಣ ಕಳೆದುಕೊಂಡು ದಟ್ಟದರಿದ್ರನಾಗಿದ್ದೇನೆ. ”

ಅನೇಕ ಮಂದಿಗೆ ದೇವರೆಂದರೆ ಹಣವೊಂದೇ , ದುರ್ಬಲ ವ್ಯಕ್ತಿಗಳು ತಮ್ಮ ಸರ್ವ ವನ್ನೂ ಕಳೆದುಕೊಂಡು ತಾವು ನಿರ್ಗತಿಕರಾಗಿರುವವೆಂದು ತಿಳಿದಾಗ ಸಂಶಯಾಸ್ಪದ ವಿಧ ಗಳಿಂದಾದರೂ ಹಣ ಮಾಡಲು ಹಿಂಜರಿಯುವುದಿಲ್ಲ . ಇಂಥವರು ಫಲಜ್ಯೋತಿಷ್ಯ ಹಾಗೆ ಇದೇ ತೆರನಾದ ನಯವಂಚಕ ವಿಧಾನಗಳಿಗೆ ಶರಣಾಗುತ್ತಾರೆ. ಸಂಸ್ಕೃತದಲ್ಲಿ ಒಂದು ಗೆ ಇದೆ : ಹೇಡಿ ಮತ್ತು ಮುಠಾಳ ಮಾತ್ರ ಇದು ನನ್ನ ವಿಧಿ ” ಎಂದು ಕೊರಗುತ್ತಾರೆ ; ದ ಮನಸ್ಕರಾದರೋ “ ನನ್ನ ವಿಧಿಯನ್ನು ನಾನೇ ಬರೆಯುತ್ತೇನೆ” ಎಂದು ಪಣ ತೊಡುತ್ತಾ

ಮುದುಕತನಕ್ಕೆ ಕಾಲಿಡುತ್ತಿರುವ ಬಲಹೀನರು ಮಾತ್ರ ಅದೃಷ್ಟದ ಬಗ್ಗೆ ಮಾತಾಡುತ್ತಾ ಸಾಧಾರಣವಾಗಿ ಯುವಜನರೆಂದೂ ಫಲಜ್ಯೋತಿಷ್ಯದ ಹತ್ತಿರ ಕೂಡ ಸುಳಿಯುವುದಿ ನಾವು ಯಾವುದೋ ಗ್ರಹದ ಪ್ರಭಾವಕ್ಕೆ ಒಳಗಾಗಿರುವುದು ನಿಜವೇ ಇರಬಹುದು. ಆd ಈ ಸಂಗತಿ ನಮ್ಮನ್ನೇನೂ ಬಾಧಿಸಬೇಕಾಗಿಲ್ಲ .

ಬುದ್ದ ವಿಧಿಸಿದ್ದಾನೆ, “ ವಂಚಕ ವಿಧಾನಗಳಿಂದ ಮತ್ತು ಮಿಥ್ಯಾಚಮತ್ಕಾರಗಳಿಂದ ನಕ್ತ ಗಳನ್ನು ಕುರಿತ ಗಣನೆಮಾಡಿ ಉದರಂಭರಣಗೈಯ್ಯುವವರನ್ನು ಹತ್ತಿರ ಸೇರಿಸತಕ್ಕದ್ದು? ಬುದ್ಧನಿಗೆ ತಾನೇನು ಹೇಳುತ್ತಿದ್ದೇನೆಂಬುದು ತಿಳಿದಿರಲೇಬೇಕು. ಏಕೆಂದರೆ ಹಿಂದೂಗಳಲ್ಲೆ ಆತ ಪರಮಶ್ರೇಷ್ಠ.

ಜಾತಕ ಮತ್ತು ಭವಿಷ್ಯ

58.

ನಕ್ಷತ್ರಗಳು ಬರಲಿ, ನಮಗೇಕೆ ಆ ಚಿಂತೆ ? ನಕ್ಷತ್ರವೊಂದು ನನ್ನ ಬದುಕನ್ನು ಕಲಕುವು ದಾದರೆ ನಾನದಕ್ಕೆ ದುಗ್ಗಾಣಿ ಕಿಮ್ಮತ್ತೂ ಕೊಡಲಾರೆ . ಫಲಜ್ಯೋತಿಷ್ಯ ಮತ್ತು ಇಂಥ ಎಲ್ಲ ನಿಗೂಢ ಅಮೂರ್ತ ವಿಷಯಗಳು ಸಾಧಾರಣವಾಗಿ ದುರ್ಬಲ ಮನಸ್ಸಿನ ವ್ಯಾಧಿಚಿಹ್ನೆ ಗಳೆಂಬುದು ನಿಮ್ಮ ಗಮನಕ್ಕೆ ಬರದಿರದು. ಆದ್ದರಿಂದ ನಮ್ಮ ಮನಸ್ಸುಗಳಲ್ಲಿ ಇವು ಉತ್ಕರ್ಷಿಸುತ್ತಿವೆಯೆಂಬ ಅರಿವುಮೂಡಿದಾಗ ನಾವು ವೈದ್ಯರನ್ನು ನೋಡಬೇಕು. ಯೋಗ್ಯ ಆಹಾರ ಮತ್ತು ವಿಶ್ರಾಂತಿ ಪಡೆಯಬೇಕು.

ಯಾವುದೇ ವಿದ್ಯಮಾನ ಕುರಿತು ವಿವರಣೆ ಅದರ ಸ್ವಭಾವದ ಒಳಗಡೆಯೇ ಒದಗುವು ದಾದರೆ ಬಾಹ್ಯ ಮೂಲಗಳಲ್ಲಿ ಅದನ್ನು ಅರಸುವುದು ಅವಿವೇಕ, ಜಗತ್ತು ತನ್ನನ್ನು ತಾನ ವಿವರಿಸುವುದಾದರೆ ಈ ವಿವರಣೆಯನ್ನು ಹೊರಗೆಲ್ಲೋ ಹುಡುಕುವುದು ಪರಮ ಮೂರ್ಖತ. ವ್ಯಕ್ತಿಯ ಜೀವನದಲ್ಲಿ ಘಟಿಸುವ ಯಾವುದೇ ವಿದ್ಯಮಾನವನ್ನು ಮಾನವಸಾಮರ್ಥ್ಯದ ನೆರವಿ ನಿಂದ ವಿವರಿಸಲಾಗದಂಥ ದೃಷ್ಟಾಂತ ಎಲ್ಲಿಯಾದರೂ ಇದೆಯೇ ? ಅಂದ ಮೇಲೆ ಇಲ್ಲಿಯ ವಿದ್ಯಮಾನ ಕುರಿತಂತೆ ನಕ್ಷತ್ರಗಳಲ್ಲಿಗೋ ಇನ್ನೆಲ್ಲಿಗೋ ಬುದ್ದಿ ಹರಿಸುವುದರ ಔಚಿತ್ಯ ವಾದರೂ ಏನು ?

ಇದೊಂದು ಹಳೆಯ ಕತೆ. ನಾಡಿನ ದೊರೆಯಲ್ಲಿಗೆ ಒಬ್ಬ ಫಲಜ್ಯೋತಿಷಿ ಹೋಗಿ, “ ಇನ್ನು ಆರು ತಿಂಗಳ ಒಳಗೆ ನೀನು ಸಾಯಲಿರುವೆ ” ಎಂದ. ಸಹಜವಾಗಿಯೇ ಅರಸ ಭಯವಿಹ್ವಲ ನಾದ ಆ ಗಳಿಗೆಯೇ ಸತ್ತು ಹೋಗುವನೋ ಎಂಬಂಥ ಸ್ಥಿತಿ. ಈತನ ಬುದ್ಧಿವಂತ ಮಂತ್ರಿ , “ ಫಲಜ್ಯೋತಿಷಿಗಳೆಲ್ಲರೂ ಮುಠಾಳರು ” ಎಂದು ಘೋಷಿಸಿದರೂ ರಾಜನಲ್ಲಿ ನೆಮ್ಮದಿ ಮೂಡಲಿಲ್ಲ . ಇನ್ನೇನು ಹಾದಿ ಎಂದು ಯೋಚಿಸಿದ ಮಂತ್ರಿ ಆ ಫಲಜ್ಯೋತಿಷಿಯನ್ನು ಅರಮನೆಗೆ ಮರುಕರೆಸಿ ಪ್ರಶ್ನಿಸಿದ, “ ನಿನ್ನ ಗಣನೆಗಳೆಲ್ಲವೂ ನಿಷ್ಕೃಷ್ಟವಾಗಿವೆಯೇ ???

ಫಲಜ್ಯೋತಿಷಿ, “ಹೌದು. ಇಲ್ಲಿ ಯಾವ ದೋಷವೂ ನುಸುಳಿರಲು ಸಾಧ್ಯವಿಲ್ಲ . ”

ಆದರೂ ಮಂತ್ರಿಯ ಸಮಾಧಾನಾರ್ಥ ಆ ಗಣನೆಗಳನ್ನು ಮಗುದೊಮ್ಮೆ ಮಾಡಿ, “ ಗಣನೆಗಳು ಸರಿಯಾಗಿವೆ. ಭವಿಷ್ಯವಾಚನ ಕರಾರುವಾಕ್ಕಾಗಿದೆ ” ಎಂದು ದೃಢೀಕರಿಸಿದ.

ಅರಸನ ಮುಖ ಬಿಳಿಚಿಕೊಂಡಿತು. ಫಲಜ್ಯೋತಿಷಿಗೆ ಮಂತ್ರಿ ಸವಾಲೆಸೆದ, “ ನಿನ್ನ ಮರಣ ಎಂದು ಸಂಭವಿಸಲಿದೆ ಎಂಬುದನ್ನು ಗಣಿಸಿರುವೆಯಾ ? ” “ ಹೌದು. ಇನ್ನು ಹನ್ನೆರಡು ವರ್ಷಗಳಲ್ಲಿ . ”

ಆ ಕ್ಷಣ ಮಂತ್ರಿ ತನ್ನ ಕರವಾಲ ಹಿರಿದು ಜ್ಯೋತಿಷಿಯ ತಲೆ ತರಿದು ದೊರೆಗೆ ಉಸುರಿದ, " ಈ ಸುಳ್ಳನನ್ನು ನೋಡಿದೆಯಾ ? ಈ ಗಳಿಗೆಯೇ ಈತ ಮಡಿದಿದ್ದಾನೆ. ”

ನಮ್ಮ ರಾಷ್ಟ್ರ ನಳನಳಿಸಬೇಕಾದರೆ ಈ ಎಲ್ಲ ಮೌಡ್ಯಗಳಿಂದ ನಾವು ದೂರವಾಗಿರಬೇಕು. ನಮ್ಮನ್ನು ಬಲಿಷ್ಟರಾಗಿ ಮಾಡುವಂಥವು ಮಾತ್ರ ಒಳ್ಳೆಯ ವಿಷಯಗಳು. ಇವು ನಮ್ಮ ಬಲ ವನ್ನು ಸಂವರ್ಧಿಸುವುವೇ ಎಂಬುದು ಮಾತ್ರ ಇವನ್ನು ಕುರಿತ ಏಕೈಕ ಪರೀಕ್ಷೆ , ವಾಸ್ತವವಾಗಿ , ಒಳಿತೇ ಬದುಕು, ಕೆಡುಕೇ ಸಾವು.

೨೪

ಜಾತಕ ಮತ್ತು ಭವಿಷ್ಯ

ಆಕಾಶ, ಜಾತಕ , ವ್ಯಕ್ತಿ

ಆದಿ ಮಾನವನಿಗೆ ಎದುರಾದ ಪ್ರಮುಖ ಸಮಸ್ಯೆಗಳು ಎರಡು : ಆಹಾರ ಸ್ವರಕ್ಷಣೆ, - ನಿಸರ್ಗ ಸಮೃದ್ಧವಾಗಿತ್ತು , ಆದರೆ ಅಪಾಯಕಾರಿಯೂ ಆಗಿತ್ತು . ಎಂದೆ ಹೊಟ್ಟೆಗೆ ಹಿಟ್ಟು ಗಿಟ್ಟಿಸಿಕೊಳ್ಳುವ ಪ್ರತಿಯೊಂದು ಸನ್ನಿವೇಶದಲ್ಲಿಯೂ ಶತ್ರು ನಿಂದ ತಲೆಮರೆಸಿಕೊಂಡಿರಲು ಪ್ರಯತ್ನಿಸುವುದು ಕೂಡ ಅನಿವಾರ್ಯವಾಗಿತ್ತು ಹೀಗೆ ಹಸಿವು- ಹೆದರಿಕೆ ಆತನ ಬದುಕನ್ನು ನಿಯಂತ್ರಿಸುವ ಪ್ರಬಲಪ್ರೇರಕಗಳಾಗಿ ದ್ದುವು. - ಹಸಿವನ್ನು ಹಿಂಗಿಸುವುದೆಂದರೆ ನೆಲದಿಂದ ಉಣಿಸನ್ನು ಗಳಿಸುವುದೆಂದರ್ಥ. ಸಾಹಸ ಆತನನ್ನು ನೈಸರ್ಗಿಕ ಬಲಗಳ ಜೊತೆ ವ್ಯವಹರಿಸಲು ಮುಂದೂಡಿತು ಬೇಸಾಯ , ಜಾನುವಾರು ಸಾಕಣೆ, ತಾಂಡೆ ಕಟ್ಟಿ ಅಲ್ಲಿ ನೆಲಸುವುದು ಮುಂತಾದ ಚಟುವಟಿಕೆಗಳು ಇದರ ಫಲ . - ನೈಸರ್ಗಿಕ ಬಲಗಳ ಜೊತೆಗಿನ ಈ ನಿಕಟ ವ್ಯವಹಾರಗಳು 'ವಿಜ್ಞಾನ'ಕ್ಕೆ ನಾಂರಿ ಹಾಕಿದುವು. ನಿಸರ್ಗದ ನಿಯಮಗಳನ್ನು ಅರಿತು ಅನುಕರಿಸುವುದರಿಂದ ಮತ್ತು ಅವುಗಳಿಗೆ ಅನುವರ್ತಿಯಾಗಿ ಬಾಳುವುದರಿಂದ ತನಗೆ ಲಾಭವಾಗುವುದು ಎಂಬ ಸಂಗತಿ ಸ್ಪಷ್ಟವಾಯಿತು.

ವಿಜ್ಞಾನವು ಮಾನವಸೃಷ್ಟಿ, ನಿಸರ್ಗವನ್ನು ಅರ್ಥವಿಸಿ ವ್ಯಾಖ್ಯಾನಿಸುವಾಗ ಬೆ ಗುವ ಅರಿವು ಇದು. ಆದರೆ ವಿಜ್ಞಾನವು ತನ್ನ ಕರ್ತನ ಇಷ್ಟಾನಿಷ್ಟ ಪ್ರಕಾರ ವರ್ತಿಸ ವುದಿಲ್ಲ . ಏಕೆಂದರೆ ನಿಸರ್ಗದ ನಿಯಮಗಳನ್ನು ವ್ಯಕ್ತಿ ಬದಲಾಯಿಸಲಾರ , ಬಗಿ ಸಲೂ ಆರ . ಅವು ಜ್ಞಾತೃನಿಷ್ಕ ( ವ್ಯಕ್ತಿನಿಷ್ಠ subjective) ಅಲ್ಲ , ಬದಲು, ಜೇಯ ನಿಷ್ಕ ( ವಸ್ತುನಿಷ್ಠ objective ) ಹೌದು.

ವ್ಯಕ್ತಿಜೀವನದ ಇನ್ನೊಂದು ಮಗ್ಗಲು ಹೆದರಿಕೆ. ಆಕಾಶದ ಗಹನಗಹ್ವರತೆ ಪ್ರಕೃತಿ ಬಲಗಳ ರುದ್ರ ಭೀಕರತೆ, ಸೃಷ್ಟಿಯಲ್ಲಿಯ ಕ್ರಮಬದ್ಧ ರಮಣೀಯ ಮುಂತಾದ ಮಹೋನ್ನತ ವ್ಯಾಪಾರಗಳನ್ನು ಬೆರಗು ಭಯ ಮೂಕ ವಿಸ್ಮಯ ಗಳಿಂದ ಗಮನಿಸಿದ ಮಾನವ ಅವುಗಳ ಹಿಂದೆ ತನಗಿಂತ ಅತಿಶಯ ಬುದ್ದಿವಂತ ದೈತ್ಯ ತ್ರಾಣಿ ಇರಬೇಕೆಂದು ತರ್ಕಿಸಿ ಅದನ್ನು ದೇವರೆಂದು ಕರೆದ. - ಹೀಗೆ ಸರ್ವಶಕ್ತ , ಪರಾತ್ಪರ ವಸ್ತು , ಸರ್ವಾಂತರ್ಯಾಮಿ ಮುಂತಾದ ನಾವು ಧೇಯಗಳು ಮಾನವನ ಎಲ್ಲ ಬಗೆಯ ಅತಿಗಳ , ಅಜ್ಞಾತಗಳ, ಅಮೂರ್ತಗಳ ಆದರ್ಶಗಳ ಮತ್ತು ಅನಂತಗಳ ಆಕರವಾದುವು.

ಜಾತಕ ಮತ್ತು ಭವಿಷ್ಯ

୭୫୫

ದೇವರ ಪ್ರತ್ಯಕ್ಷ ರೂಪ ಆಕಾಶ, ಇನ್ನೊಂದು ರೂಪ ಮಾನವ, ಆ ದೇವರ ಇಚ್ಛಾನುಸಾರ ಗಗನಕ್ರಿಯೆಗಳು ನಡೆದು ಮಾನವವ್ಯಾಪಾರಗಳನ್ನು ನಿಯಂತ್ರಿಸು ತವೆ. ಹೀಗೆ ಹರಿದ ಚಿಂತನೆಯ ಫಲವೇ ಇಲ್ಲಿಯ ಸಮಸ್ಯೆಗಳಿಗೆ ಅಲ್ಲಿ ಪರಿಹಾರ ಹುಡುಕುವ ಮನೋಭಾವ. ”

ಜಾತಕ ಪ್ರಸ್ತುತವಾದದ್ದು ಹೀಗೆ : ಒಂದು ಮನೋವೈಜ್ಞಾನಿಕ ಆವಶ್ಯಕತೆ ಯಾಗಿ, ಆಸೆ ಆಕಾಂಕ್ಷೆಗಳಿಗೆ ನೆಲೆಯಾಗಿ, ಮತ್ತು ಭವಿಷ್ಯ ಭರವಸೆಗಳ ಆಕರವಾಗಿ, ಪ್ರಾಯಶಃ ಪಲಾಯನವಾದದ ಫಲವೂ ಆಗಿ ! ಮಾನವನಷ್ಟೇ ಪ್ರಾಚೀನವಾದದ್ದು ಫಲಜ್ಯೋತಿಷ್ಯ .

ಫಲಜ್ಯೋತಿಷ್ಯ ನಿಜವೇ ? - ಮಾನವ ಮನಸ್ಸಿನ ತುಡಿತಗಳ ಒಂದು ಉಪೋತ್ಪನ್ನವಾಗಿ ಫಲಜ್ಯೋತಿಷ್ಯ ಮೈದಳೆದದ್ದರಲ್ಲಿ ಆಶ್ಚರ್ಯವೇನೂ ಇಲ್ಲ . ಆದರೆ ಮೂರನೆಯ ಸಹಸ್ರಮಾನ ಮತ್ತು ಇಪ್ಪತ್ತೊಂದನೆಯ ಶತಮಾನದ ಆದಿಯಲ್ಲಿರುವ ನಾವು ಅದನ್ನು ವಿಮ ರ್ಶಿಸದೇ ಸ್ವೀಕರಿಸುವುದು, ಅದು ಪ್ರಾಚೀನವಾದದ್ದು ಮತ್ತು ನಿಗೂಢವಾದದ್ದು ಮುಂತಾದ ಕಾರಣಗಳಿಂದಾಗಿ ವೈಜ್ಞಾನಿಕವಾದದ್ದೂ ಹೌದು ಎಂದು ಅದನ್ನು ಪ್ರಶ್ನೆಗಳಿಗೊಳಪಡಿಸದೇ ಅಂಗೀಕರಿಸುವುದು ಮತ್ತು ಆಧುನಿಕ ವಿಜ್ಞಾನ ಮತ್ತು ತಂತ್ರವಿದ್ಯೆ ಮಾನವನ ಧಾರ್ಮಿಕ ದಾಹವನ್ನು ಶಮನಗೊಳಿಸವು, ಫಲಜ್ಯೋತಿಷ್ಯ ಮಾತ್ರ ಶಮನಗೊಳಿಸಬಲ್ಲದು ಎಂಬ ಕಾರಣದಿಂದ ಅದರ ದಾಸಾನುದಾಸ ರಾಗುವುದು ಸ್ಪಷ್ಟವಾಗಿ ಬೌದ್ಧಿಕ ದಿವಾಳಿಖೋರತನದ ಲಕ್ಷಣ : ಹೊಟ್ಟೆಪಾಡಿಗೆ ಬದುಕಿನ ಸುಖಸೌಕರ್ಯಗಳಿಗೆ ಮಾತ್ರ ವಿಜ್ಞಾನ, ಉಳಿದ ವಿಚಾರಗಳಿಗೆ ಅಜ್ಞಾನವೇ ಶರಣು ಎಂಬ ದ್ವಿಮುಖ ಅಥವಾ ಇಬ್ಬಂದಿ ಜೀವನದ ನಿದರ್ಶನ. ಇಲ್ಲಿಯ ಸಮಸ್ಯೆಗಳನ್ನು ಇಲ್ಲಿಯೇ ಎದುರಿಸಬೇಕು. ಅಲ್ಲಿಗೆ ಶರಣಾಗುವುದು ಹೇಡಿಗಳ ಲಕ್ಷಣ . ಇಂಥವರ ಬದುಕು ಉತ್ತರಕುಮಾರತ್ವಕ್ಕೆ ನಿದರ್ಶನ. ಹಾಗಾದರೆ ನಾವೇನು ಮಾಡಬೇಕು ? ಮೊದಲು ಜಾತಕದ ವೈಜ್ಞಾನಿಕ ವಿವರಗಳನ್ನು ವಿಮರ್ಶಿಸೋಣ. * ಭೂಮಿಯನ್ನು ನಿಶ್ಚಲವೆಂದೂ ವಿಶ್ವಕೇಂದ್ರವೆಂದೂ ಅಂಗೀಕರಿಸಿ ಜಾತಕ

ವನ್ನು ತಯಾರಿಸಿದೆ. ಭೂಮಿ ನಿಶ್ಚಲವಲ್ಲ , ವಿಶ್ವಕೇಂದ್ರವಂತೂ ಅಲ್ಲವೇ ಅಲ್ಲ ! ಸೌರವ್ಯೂಹದ ನವಗ್ರಹಗಳ ಪೈಕಿ ಇದೂ ಒಂದು. ಈ ಭೌತನವಗ್ರಹಗಳು : ಸೂರ್ಯನಿಂದ

ಜಾತಕ ಮತ್ತು ಭವಿಷ್ಯ

ಆರೋಹೀ ದೂರಗಳಲ್ಲಿ ಬುಧ, ಶುಕ್ರ , ಭೂಮಿ, ಕುಜ, ಗುರು, ಶನಿ, ಯುರೇನಸ ನೆಪ್ಯೂನ್, ಫೂಟೋ . ಸದಾ ತನ್ನ ಸುತ್ತ ಆವರ್ತಿಸುತ್ತ ಸೂರ್ಯನ ಸು ಪರಿಭ್ರಮಿಸುತ್ತ ಇರಬೇಕಾದದ್ದು ಪ್ರತಿಯೊಂದು ಗ್ರಹದ ವಿಧಿ !” ಸೂರ್ಯನ ಹತ್ತು ಲಕ್ಷಗಳಗಿಂತಲೂ ಹೆಚ್ಚು ಭೂಮಿಗಳನ್ನು ತುಂಬಬಹುದು ಅಂಥ ಮa ಗಾತ್ರ ಮತ್ತು ಮಹಾಭಾರ ಸೂರ್ಯ. * ಬುಧ, ಶುಕ್ರ , ಕುಜ, ಗುರು, ಶನಿಗಳ ಜೊತೆಗೆ ಸೂರ್ಯ , ಚಂದ್ರ , ರಾಯ ಮತ್ತು ಕೇತು ಕೂಡಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಗ್ರಹಗಳೆಂದ

ಕುಂಭ

ಮಕರ

ಧನು

.

ವೃಶ್ಚಿಕ

ಮೇಷ !

ಭೂಮಿ

wಣಸೂರ್ಯ

ಕನ್ಯಾ

ವೃಷಭ |

? ಕಹy ಸಿಂಹ

ಮಿಥುನ

ಚಿತ್ರ ೯. ರಾಶಿಚಕ್ರದ ವಿನ್ಯಾಸ, ನಡುವಿನ ಶ್ವೇತ ವಜ್ರಕಾಂತಿಯು ಸೂರ್ಯನನ್ನು ಪ್ರತೀಕಿಸಿ ತದೆ. ಇದರ ಸುತ್ತ ಭೂಮಿ ಸಾಗುವ ವಾಸ್ತವ ಕಕ್ಷೆಯನ್ನೂ ದಿಶೆಯನ್ನೂ ಕಾಣಿಸಿದೆ. ಭೂವಾ ಗಳಾಗಿರುವ ನಮಗೆ ಮಾತ್ರ ಈ ಚಲನೆಯ ಅರಿವಾಗುವುದಿಲ್ಲ . ಇದೊಂದು ಸಾಮೂಹಿಕ ಮತ ಸಾರ್ವಕಾಲಿಕ ವಿಭ್ರಮ. ಬದಲು, ಸೂರ್ಯನೇ ನಮ್ಮ ಸುತ್ತ ಪರಿಭ್ರಮಿಸುತ್ತಿರುವಂತೆ ಭಾಸವಾಗಿ ತದೆ. ಚಿತ್ರದಲ್ಲಿ ಸೂರ್ಯನ ನೆಲೆ ಕನ್ಯಾ ತುಲಾ ವಲಯ. ಅಂದರೆ ಸೂರ್ಯನ ಪಶ್ಚಿಮ ಸಿಂಹವೂ ಪೂರ್ವಕ್ಕೆ ವೃಶ್ಚಿಕವೂ ಇರುವುವು. ಮುಂಜಾನೆ ಸೂರ್ಯ ಮೂಡುವ ಮೊದ ಪೂರ್ವಾಕಾಶದಲ್ಲಿ ಸಿಂಹವನ್ನೂ ಸಂಜೆ ಸೂರ್ಯ ಕಂತಿದ ಬಳಿಕ ಪಶ್ಚಿಮಾಕಾಶದಲ್ಲಿ ವೃದ್ಧಿ ವನ್ನೂ ಗುರುತಿಸಬಹುದು. ರಾಶಿಗಳಿಗೆ ಭೌತ ಅಸ್ತಿತ್ವವಿಲ್ಲ - ಬಾನಪಟದಲ್ಲಿ ವಾಸ್ತವವಾ ಕುಂಚಿಸಲಾಗಿರುವ ಚಿತ್ರಗಳು ಅವು ಅಲ್ಲ ! ಮತ್ತೆ ಸಾಮೂಹಿಕ ಸಾರ್ವಕಾಲಿಕ ವಿಭ್ರಮೆಯ ಈ ಈ ಎಲ್ಲ ಸೂಕ್ಷಾಂಶಗಳೂ ಖಗೋಳವಿಜ್ಞಾನಿಗೆ ಇಂದು ತಿಳಿದಿವ ; ಆದರ ಫಲಜ್ಯೋತಿಷಿ ಅಂದೂ ತಿಳಿದಿರಲಿಲ್ಲ , ಇಂದೂ ತಿಳಿದಿಲ್ಲ , ಎಂದೆಂದೂ ತಿಳಿಯಲಾರದು. ತಿಳಿಯುವ ದದೂ ಇಲ್ಲ . ಏಕೆಂದರೆ ಈ ಅರಿವಿನ ಬೆಳಕು ಮೂಡಿದಾಗ ಫಲಜ್ಯೋತಿಷ್ಯವೆಂಬ ಮೌಢದ ಕತ್ರ ಕಳೆದು ಹೋಗುತ್ತದೆ, ಧಂಧೆ ಇಲ್ಲವಾಗುತ್ತದೆ ! ಗಿರಾಕಿಗಳ ಮಾನಸಿಕ ಕತ್ತಲೆಯೇ ಫಲಜ್ಯೋತಿ ಗಳ ನಿಜ ಬಂಡವಾಳ !

ಜಾತಕ ಮತ್ತು ಭವಿಷ್ಯ

ಅಂಗೀಕರಿಸಿ ಜಾತಕವನ್ನು ತಯಾರಿಸಿದೆ. ಸೂರ್ಯಗ್ರಹವಲ್ಲ , ನಕ್ಷತ್ರ : ಸೌರವ್ಯೂಹದ ಕೇಂದ್ರ ತಾರೆ. ಬುಧ, ಶುಕ್ರ , ಕುಜ, ಗುರು ಮತ್ತು ಶನಿಗ್ರಹಗಳು ಭೂಮಿಯ ಸುತ್ತ ಪರಿಭ್ರಮಿಸುತ್ತಿಲ್ಲ. ಚಂದ್ರ ಗ್ರಹವಲ್ಲ , ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಉಪಗ್ರಹ. ರಾಹು ಮತ್ತು ಕೇತು : ಭೂಮಿಯಿಂದ ನೋಡುವಾಗ ಸೂರ್ಯ ಕೂಡ ಚಂದ್ರನಂತೆ ನಮ್ಮ ಸುತ್ತ ಪರಿಭ್ರಮಿಸುತ್ತಿರುವಂತೆ ಕಾಣುತ್ತದೆ ; ಸೂರ್ಯನ ಈ ತೋರ್ಕೆ ಕಕ್ಷೆಗೆ ಕ್ರಾಂತಿವೃತ್ತವೆಂದೂ ಚಂದ್ರನದಕ್ಕೆ ಚಾಂದ್ರಕಕ್ಷೆಯೆಂದೂ ಹೆಸರು ; ಇವೆರಡರ ಕೇಂದ್ರದಲ್ಲಿ ಭೂಮಿ ಇದೆ ; ಇವು ಪರಸ್ಪರ ಸಂಧಿಸುವ ಎರಡು ಬಿಂದುಗಳೇ ರಾಹು ಮತ್ತು ಕೇತು. ಇದೊಂದು ಬಗೆಯ ಕಣ್ಣಿಟ್ಟು , ಈ ನೆಲೆಗಳಿಗೆ ಸೂರ್ಯ ಮತ್ತು ಚಂದ್ರ ಬಂದಾಗ ಗ್ರಹಣ ಸಂಭವಿಸುವುದು : ಸೂರ್ಯ- ಚಂದ್ರ -ಭೂಮಿ ಒಂದೇ ರೇಖೆಯ ಮೇಲೆ ಬಂದಾಗ ಸೂರ್ಯಗ್ರಹಣ , ಅಥವಾ ಸೂರ್ಯ ಭೂಮಿ- ಚಂದ್ರ ಒಂದೇ ರೇಖೆಯ ಮೇಲೆ ಬಂದಾಗ ಚಂದ್ರಗ್ರಹಣ . ಭೌತ ಅಸ್ತಿತ್ವವಿರದ ಕಾಲ್ಪನಿಕ ಬಿಂದುಗಳು ರಾಹು ಮತ್ತು ಕೇತು ( ಚಿತ್ರ ೩, ಪುಟ ೯ ).

ಇನ್ನು ಪರಿಭ್ರಮಣೆ : ವಾಸ್ತವವಾಗಿಸೂರ್ಯನು ಭೂಮಿಯ ಸುತ್ತ ಪರಿಭ್ರಮಿ ಸುತ್ತಿಲ್ಲ . ಭೂಮಿಯೇ ಸೂರ್ಯನ ಸುತ್ತ ಪರಿಭ್ರಮಿಸುತ್ತಿದೆ. * ನಕ್ಷತ್ರ ಪುಂಜಗಳ ಪೈಕಿ ದ್ವಾದಶ ರಾಶಿಗಳು ( ಚಿತ್ರ ೯ , ಪುಟ ೨೨ ) ರಾಶಿಚಕ್ರ ಮತ್ತು ಅಶ್ವಿನಿಯಿಂದ ರೇವತಿ ವರೆಗಿನ ೨೭ ನಿತ್ಯ ನಕ್ಷತ್ರಗಳು ( ಚಿತ್ರ ೨, ಪುಟ ೮) ಮಹತ್ವ ಪೂರ್ಣವಾದವು, ಮಾನವನ ಹಿತಾಹಿತಗಳಿಗೆ ಕಾರಣಗಳು ಎಂದು ಮುಂತಾಗಿ ಅಂಗೀಕರಿಸಿ ಜಾತಕವನ್ನು ತಯಾರಿಸಿದೆ. ಚಂದ್ರನಲ್ಲಿ ಬೆಟ್ಟ ಗುಡ್ಡಗಳೂ ಕಣಿವೆ ಕೊರಕಲುಗಳೂ , ಭೂಮಿಯಲ್ಲಿ ಯಂತೆಯೇ ಇವೆಯೆಂದು ಇಂದು ( ೨೦೦೦ ) ಗೊತ್ತಿದೆ.ಸೂರ್ಯನಿಂದ ಜ್ವಾಲಾ ಜಿಹ್ನೆಗಳು ಹಲವು ಸಾವಿರ ಕಿಲೋಮೀಟರ್‌ ಎತ್ತರಕ್ಕೆ ಅಲೆಗಳಂತೆ ನೆಗೆದು ಹಿಂದಕ್ಕೆ ಬೀಳುತ್ತವೆ ಎಂದೂ ತಿಳಿದಿದೆ. ಆದರೆ ಸೂರ್ಯ ಮತ್ತು ಚಂದ್ರ ಬಿಂಬಗಳು ನಮಗೆ ಹೇಗೆ ಭಾಸವಾಗುತ್ತವೆ ? ನಯ ನುಣುಪು ಬಿಲ್ಲೆಗಳಂತಲ್ಲವೇ ? ದೂರದ ಬೆಟ್ಟ ನುಣ್ಣಗೆ ಎಂದರೆ ಇದೇ ಅರ್ಥ, ನಮ್ಮಿಂದ ವಸ್ತುಗಳ ದೂರಗಳು ಅಧಿಕಾಧಿಕ ವಾದಂತೆ ಅವುಗಳ ನಡುವಿನ ಅಂತರ ಮತ್ತು ಆಳಗಳನ್ನು ಗುರುತಿಸಲಾರೆವು. ನಮ್ಮ ಇಂದ್ರಿಯಗಳ ಮಿತಿ ಇದು. ನಿಸರ್ಗದ ಉದ್ದೇಶವೂ ಇದೇ . ಈ ಕಾರಣ ದಿಂದಲೇ ನಮಗೆ ಸಮಸ್ತ ಆಕಾಶಕಾಯಗಳೂ ಬಾನಿನ ನುಣುಪುತಲಕ್ಕೆ ಅಂಟಿ ಕೊಂಡಿರುವಂತೆ ಕಾಣುವುದಾಗಿದೆ. ವಾಸ್ತವವಾಗಿ ನಮಗೆ ಕಾಣುವ ಒಂದು ನಕ್ಷತ್ರ

೨೮

ಜಾತಕ ಮತ್ತು ಭವಿಷ್ಯ

ರಾಶಿಗೂ ಅದನ್ನು ರಚಿಸಿರುವ ಬಿಡಿ ನಕ್ಷತ್ರಗಳಿಗೂ ಯಾವುದೇ ಬಗೆಯ ಸ ಯವ ಭೌತ ಸಂಬಂಧ ಇಲ್ಲ ! ಉದಾಹರಣೆಗೆ ವೃಶ್ಚಿಕರಾಶಿಯ ಸ್ಪಷ್ಟ ಚೇ ಆಕಾರ ಇದನ್ನು ರೂಪಿಸುವ ೧೨ - ೧೩ ನಕ್ಷತ್ರಗಳು ವಿಶ್ವದ ಮಹಾಗರ್ತದ ಪರಸ್ಪರ ಸಂಬಂಧವಿರದೇ ಎಲ್ಲೆಲ್ಲಿಯೋ ಹರಡಿ ಹೋಗಿರುವ ಸ್ವತಂತ್ರ ತಾ ? ಗಳು ! ವಾಸ್ತವ ಜಗತ್ತಿನಲ್ಲಿ ರಾಶಿಗಳಿಗಾಗಲೀ ಪುಂಜಗಳಿಗಾಗಲೀ ಅಸ್ತಿತ್ವವೀ ನಮ್ಮ ಸೀಮಿತ ಜಗತ್ತಿನ ಕಾಲ್ಪನಿಕ ಸೃಷ್ಟಿಗಳಿವು. ಇವುಗಳಲ್ಲಿ ಮಾನವ ತಃ ಹಿತಾಹಿತಗಳನ್ನು ಅರಸುವುದು ಶುದ್ಧ ಬೌದ್ದಿಕ ಮೌಡ್ಯದ ಲಕ್ಷಣ. * ನವಗ್ರಹಗಳು ಮತ್ತು ಇತರ ಆಕಾಶಕಾಯಗಳು ಭಗವಂತನ ಪ್ರತಿನಿಧಿಗಳ

ಇವು ಭೂಮಿಯ ಮೇಲೆ ಸಾಮೂಹಿಕವಾಗಿಯೂ ಬಿಡಿ ವ್ಯಕ್ತಿಗಳ ಮೇ ! ವೈಯಕ್ತಿಕವಾಗಿಯೂ ದೈವಿಕ ಬಲ ಬೀರುತ್ತವೆ, ಈ ಬಲಗಳು ವ್ಯಕ್ತಿಯ ಶುಭಾ ಶುಭಗಳಿಗೆ ಕಾರಣ, ಆದ್ದರಿಂದ ಈತ ಅವುಗಳಿಗೆ ಶರಣಾಗುವುದೊಂದು ಸರಿಯಾದ ಹಾದಿ ಎಂದು ಅಂಗೀಕರಿಸಿ ಜಾತಕವನ್ನು ತಯಾರಿಸಿದೆ.

ಪ್ರಾಚೀನ ಜಾತಕಕಾರರ ಪ್ರಕಾರ ಆಕಾಶಕಾಯಗಳು ಭೂಮಿಗೆ ಬೀಳದಿರುವುದು ಅವುಗಳ ಸ್ವಭಾವ ಅಥವಾ ಸ್ವಧರ್ಮ, ದೈವಿಕ ಸಂಕಲ್ಪ ಇದರ ಕಾರಣ. ನ್ಯೂಟನ ತರುವಾಯ ( ೧೭- ೧೮ ಶತಮಾನ) ಈ ' ದೈವಿಕ ಸಂಕಲ್ಪ ' ದ ಪೊಳ್ಳುತನ ಬಯಲಿ ಗಿದೆ. ಇದು ನಮ್ಮ ಅಳತೆಗೆ ಸಿಕ್ಕುವ ಗುರುತ್ವಾಕರ್ಷಣಬಲ, ಸೂರ್ಯನ ಪ್ರಬ ಗುರುತ್ವಾಕರ್ಷಣೆಯ ಫಲವಾಗಿ ಸೌರವ್ಯೂಹ ನಿಂತಿದೆ : ಭೂಮಿ ನಿಯತ ಕಕ ಯಲ್ಲಿ ನಿಯತ ವೇಗದಿಂದ ಸೂರ್ಯನ ಸುತ್ತ ಪರಿಭ್ರಮಿಸುತ್ತಿದೆ. ಅದೇ ರೀ ಭೂಮಿಯ ಪ್ರಬಲ ಗುರುತ್ವಾಕರ್ಷಣೆಯ ಕಾರಣವಾಗಿ ಚಂದ್ರ ಭೂಮಿಯ ಸುತ ಪರಿಭ್ರಮಿಸುವ ಉಪಗ್ರಹವಾಗಿದೆ. ವಾಸ್ತವವಾಗಿ ಇಡೀ ಭೂಮಿಯ ಮೇಣ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಬಾಹ್ಯ ಬಲಗಳು ಕೇವಲ ಎರಡು| ಸೂರ್ಯನ ಗುರುತ್ವಾಕರ್ಷಣ ಬಲ, ಚಂದ್ರನ ಗುರುತ್ವಾಕರ್ಷಣ ಬಲ, ಬಿಜ ವ್ಯಕ್ತಿಯ ಮೇಲೆ ಇವುಗಳ ಬಿಡಿ ಪ್ರಭಾವ ಏನೂ ಇಲ್ಲ . * ರಾಶಿಗಳು ಸ್ಥಿರ ಚಿಹ್ನೆಗಳು. ಇವುಗಳ ಮುನ್ನೆಲೆಯಲ್ಲಿ ' ನವಗ್ರಹಗಳು' ಮಾನ ನಿಗೆ ಶುಭಾಶುಭಗಳನ್ನು ಪ್ರದರ್ಶಿಸುತ್ತ ಚಲಿಸುತ್ತಿವೆಯೆಂದು ಅಂಗೀಕರಿಸಿ ಜಾತಕವನ್ನು ತಯಾರಿಸಿದೆ. ಅವು ಸ್ಥಿರ ಚಿಹ್ನೆಗಳಾಗಿ ಕಾಣುವುದೂ ಅವುಗಳ ಎದುರು ' ನವಗ್ರಹಗಳು ನಿರ್ದಿಷ್ಟ ನಿಯಮಾನುಸಾರ ಪಥಕ್ರಮಿಸುತ್ತಿರುವಂತೆ ಭಾಸವಾಗುವುದೂ ನಿಜ ಆದರೆ ಸಾವಿರ, ದಶಸಾವಿರ ವರ್ಷಗಳಲ್ಲಿ ಇವೆಲ್ಲ ಬದಲಾಗಿ ಹೋಗುತ್ತವೆ

ಜಾತಕ ಮತ್ತು ಭವಿಷ್ಯ

ವಿಶ್ವದಲ್ಲಿ ಸ್ಥಿರ ಅಥವಾ ಶಾಶ್ವತವೆಂಬುದೇ ಇಲ್ಲ . ಕಣ್ಣಿಗೆ ಕಾಣುತ್ತಿರುವುದು ವಾಸ್ತವವಲ್ಲ .

ಹೀಗೆ ಜಾತಕದ ಬುಡವೇ ಡೊಗರು, ಅಸ್ತಿಭಾರವೇ ಶೂನ್ಯ, ಆಧಾರವೇ ಮಿಥ್ಯ , ಅಂದಮೇಲೆ ಜಾತಕ ಏನು ? ಹಸಿಸುಳ್ಳಿನ ಮೇಲೆಕಟ್ಟಿದ ಹೊಸ ಟೊಳ್ಳು ! ಇನ್ನು ಈ ಜಾತಕವನ್ನು ಆಧರಿಸಿ ನುಡಿಯುವ ಭವಿಷ್ಯ ! ಸದಾ ಹಸಿ ಹುಸಿ ಹೊಸಪೊಳ್ಳು ಗಫಾಗಳ ಸರಮಾಲೆ ! ಕೇಳುಗನ ಮೌಡ್ಯದ ಮೇಲೆ ಹೇಳುಗನ ಕುತಂತ್ರ ಮಾಡುವ ಸವಾರಿ !

ಫಲಜ್ಯೋತಿಷ್ಯ ಮತ್ತು ಜನ

ಆಧುನಿಕ ಪ್ರಪಂಚದ ೧೮೭ ಮಂದಿ ಪ್ರಸಿದ್ದ ವಿಜ್ಞಾನಿಗಳು ಇವರಲ್ಲಿ ಭಾರತ ಸಂಜಾತ ಖಭೌತವಿಜ್ಞಾನಿ ಎಸ್. ಚಂದ್ರಶೇಖರ್ ( ೧೯೧೦-೯೫) ಇವರನ್ನೂ ಒಳಗೊಂಡಂತೆ ೧೯ ಮಂದಿ ನೊಬೆಲ್ ಪಾರಿತೋಷಿಕವಿಜೇತರೂ ಇದ್ದಾರೆ ಅಮೆರಿಕದ The Humanist ಪತ್ರಿಕೆಯ ೧೯೭೫ ಸೆಪ್ಟೆಂಬರ್ - ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟಿಸಿರುವ ಟಿಪ್ಪಣಿಯ ಅನುವಾದ :

ಫಲಜ್ಯೋತಿಷ್ಯಕ್ಕೆ ಇಂದು ಪ್ರಪಂಚದ ಹೆಚ್ಚಿನ ಕಡೆಗಳಲ್ಲಿ ತೀರ ಹೆಚ್ಚಿನ ಪುರಸ್ಕಾರ ಲಭಿಸುತ್ತಿರುವುದು ಕಂಡು ವಿವಿಧ ಕ್ಷೇತ್ರಗಳಲ್ಲಿರುವ ವಿಜ್ಞಾನಿಗಳು ಆತಂಕಗೊಂಡಿದ್ದಾರೆ. ಫಲಜ್ಯೋತಿಷಿಗಳು ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ನುಡಿಯುವ ಭವಿಷ್ಯವನ್ನೂ ನೀಡುವ ಸಲಹೆಯನ್ನೂ ಜನ ಪ್ರಶ್ನೆಗೆ ಒಳಪಡಿಸದೆ ಅಂಗೀಕರಿಸುವುದರ ವಿರುದ್ಧ ನಾವು ಈ ಕೆಳಗೆ ರುಜು ಹಾಕಿರುವ ಖಗೋಳವಿಜ್ಞಾನಿಗಳು, ಖಭೌತವಿಜ್ಞಾನಿಗಳು ಹಾಗೂ ಇತರ ಕ್ಷೇತ್ರ ಗಳಲ್ಲಿಯ ವಿಜ್ಞಾನಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಬಯಸುತ್ತೇವೆ. ಫಲಜ್ಯೋತಿಷ್ಯ ವನ್ನು ನಂಬಬೇಕೆಂದಿರುವವರು ಅದರ ಸಿದ್ಧಾಂತಗಳಿಗೆ ಯಾವುದೇ ವೈಜ್ಞಾನಿಕ ಅಡಿಪಾಯ ಇಲ್ಲ ಎಂಬುದನ್ನು ಮನಗಾಣಬೇಕು.

ಪ್ರಾಚೀನ ಕಾಲದಲ್ಲಿ ಜನ ಜಗತ್ತಿನ ಬಗ್ಗೆ ತಳೆದಿದ್ದ ನಿಗೂಢ ಐಂದ್ರಜಾಲಿಕ ಕಲ್ಪನೆಯ ಅವಿಭಾಜ್ಯ ಘಟಕವಾಗಿ ಫಲಜ್ಯೋತಿಷ್ಯವೂ ಇತ್ತು . ಎಂದೇ ಅಂದಿನವರು ಫಲಜ್ಯೋತಿಷಿ ಗಳು ನುಡಿದ ಭವಿಷ್ಯವನ್ನೂ ನೀಡಿದ ಸಲಹೆಯನ್ನೂ ನಂಬಿದರು . ಆಕಾಶಕಾಯಗಳು ದೇವತೆಗಳ ನೆಲೆವನೆಗಳು ಅಥವಾ ಅವುದೇವತೆಗಳಿಂದ ಪ್ರಸರಿಸಲ್ಪಡುವ ಶಕುನಗಳು, ಮತ್ತು ಈ ಕಾರಣದಿಂದ ಅವು ಭೂಮಿಯಲ್ಲಿಯ ಘಟನೆಗಳೊಡನೆ ನಿಕಟವಾಗಿ ಬೆಸುಗೆಗೊಂಡಿವೆ ಎಂದು ಭಾವಿಸಿದರು. ಭೂಮಿಯಿಂದ ಗ್ರಹಗಳಿಗೆ ಇರುವ ಹಿರಿದೂರಗಳ ಅಂದಾಜೇ ಅವರಿಗಿರಲಿಲ್ಲ . ಈಗ ಆ ದೂರಗಳನ್ನು ಗಣಿಸಬಹುದು, ಗಣಿಸಲಾಗಿದೆ ಕೂಡ. ಆದ್ದರಿಂದ ದೂರದ ಗ್ರಹಗಳೂ ಇವುಗಳಿಂದ ಅವೆಷ್ಟೋ ಅಧಿಕ ದೂರಗಳಲ್ಲಿ ಹರಡಿಹೋಗಿರುವ

೩೦

ಜಾತಕ ಮತ್ತು ಭವಿಷ್ಯ

ನಕ್ಷತ್ರಗಳೂ ಭೂಮಿಯಲ್ಲಿ ಉತ್ಪಾದಿಸುವ ಗುರುತ್ವಾಕರ್ಷಣೀಯ ಮತ್ತು ಇತರ ಪರಿಣಾ ಗಳು ಎಷ್ಟು ಅನಂತಾಲ್ಪ ಎಂಬುದನ್ನು ಈಗ ಅರಿಯಬಲ್ಲೆವು. ಜನನಕ್ಷಣದಲ್ಲಿ ನಕ್ಷತ್ರಗಳ ಮತ್ತು ಗ್ರಹಗಳು ನಮ್ಮ ಮೇಲೆ ಬೀರುವ ಬಲಗಳು ಯಾವುದೇ ರೀತಿಯಲ್ಲಿ ನಮ್ಮ ಭವಿಷ ವನ್ನು ರೂಪಿಸಬಲ್ಲವೆಂದು ಊಹಿಸುವುದು ಕೂಡ ಶುದ್ಧಾಂಗ ಅವಿವೇಕ, ದೂರದ ಆಕಾತಿ ಕಾಯಗಳ ಸ್ಥಾನಗಳು ಕೆಲವು ದಿವಸಗಳನ್ನು ಇಲ್ಲವೇ ಅವಧಿಗಳನ್ನು ವಿಶಿಷ್ಟ ಕೆಲಸಗಳ ಅಧಿಕ ಪ್ರಶಸ್ತವಾಗಿ ಮಾಡುವುವೆಂಬುದಾಗಲೀ ಒಬ್ಬ ವ್ಯಕ್ತಿಯ ಜನನತಾರೆ ಆತ ಇತ! ರೊಂದಿಗೆ ಸರಿಹೊಂದುವುದನ್ನು ಅಥವಾ ಹೊಂದದಿರುವುದನ್ನು ನಿರ್ಧರಿಸುವುದೆಂಬ ದಾಗಲೀ ಖಂಡಿತ ನಿಜವಲ್ಲ .

ಫಲಜ್ಯೋತಿಷ್ಯವನ್ನು ಜನ ಏಕೆ ನಂಬುತ್ತಾರೆ ? ಇಂದಿನ ಅನಿಶ್ಚಿತ ಸನ್ನಿವೇಶಗಳಲ್ಲಿ ಯುಕ್ತ ನಿರ್ಧಾರ ತಳೆಯಲು ಯೋಗ್ಯ ಮಾರ್ಗದರ್ಶನಲಾಭ ತಮಗೆ ಅಗತ್ಯವೆಂಬುರ ಬಹುಮಂದಿಯ ಆಶಯ . ತಮ್ಮ ನಿಯಂತ್ರಣಕ್ಕೆ ಅಧೀನವಾಗಿ ಇರುವ ನಾಕ್ಷತ್ರಿಕ ಬ ಗಳಿಂದ ಪೂರ್ವನಿರ್ಧರಿತವಾಗಿರುವ ಅದೃಷ್ಟದಲ್ಲಿ ಭರವಸೆ ಇಡುವುದು ಅವರ ಅಪೇ ಪ್ರತಿವ್ಯಕ್ತಿಯೂ ಪ್ರಪಂಚವನ್ನು ಎದುರಿಸಲೇಬೇಕು ; ಪ್ರತಿಯೊಬ್ಬನ ಭವಿಷ್ಯವೂ ಅವು ಕೈಯಲ್ಲಿದೆ ಈ ಸಂಗತಿಗಳನ್ನು ಎಲ್ಲರೂ ತಿಳಿದಿರುವುದು ಅತ್ಯಗತ್ಯ .

ವರ್ತಮಾನ ದಿನಗಳಲ್ಲಿ ಜ್ಞಾನ ಮತ್ತು ವಿದ್ಯೆ ವ್ಯಾಪಕವಾಗಿ ಪಸರಿಸಿವೆ. ಅಂದ ಮೇ ಇಂದ್ರಜಾಲ ಮತ್ತು ಮೂಢಭಾವನೆಗಳ ಮೇಲೆ ನಿಂತಿರುವ ನಂಬಿಕೆಗಳ ಖೋಟ್ಟಿತನ ಎಲ್ಲ ತೋರಿಸುವ ಅಗತ್ಯವೇನಿದೆ ಎಂದು ಒಬ್ಬ ಕೇಳಬಹುದು. ಆದರೆ ನಿಜಸ್ಥಿತಿ ಹೀಗಿಲ್ಲ . ಫಲಜ್ಯೋತಿಷ್ಯ ಆಧುನಿಕ ಸಮಾಜದಲ್ಲಿ ವ್ಯಾಪಕ ಪ್ರಸಾರ ಪಡೆದಿದೆ. ಫಲಜ್ಯೋತಿಷಿಗಳ ಒದಗಿಸುವ ಯಾದಿ, ಭವಿಷ್ಯವಾಣಿ ಮತ್ತು ಜಾತಕಗಳನ್ನು ಸಮೂಹ ಮಾಧ್ಯಮಗಳು , ಮತ್ತು ಅನ್ಯತ್ರ ವಿಶ್ವಾಸಾರ್ಹ ದೈನಿಕಗಳು, ಸಾಪ್ತಾಹಿಕಗಳು ಹಾಗೂ ಪುಸ್ತಕ ಪ್ರಕಾಶನಗಳು ಯಾವುರ ತೆರನಾದ ವಿಮರ್ಶೆಗೆ ಒಳಪಡಿಸದೆ ಸಂತತವಾಗಿ ಪ್ರಕಟಿಸುತ್ತಿರುವುದು ಕಂಡು ನಮಗೆ ವಿಶೇ । ಚಿಂತೆ ಆಗಿದೆ. ಇದರ ದುಷ್ಟ ಉಪೋತ್ಪನ್ನವಾಗಿ ವಿಚಾರಹೀನತೆ ಮತ್ತು ಅಂಧಶ್ರ , ಪ್ರಬಲಿಸುವುದು ಖಾತ್ರಿ . ಫಲಜ್ಯೋತಿಷಿಗಳೆಂಬ ಡೋಂಗಿಮಂದಿಯ ಡೌಲು, ಅಬ್ಬ. ಬೊಬ್ಬೆಗಳನ್ನು ನೇರವಾಗಿಯೂ ಶಕ್ತಿಯುತವಾಗಿಯೂ ವಿರೋಧಿಸಲು ಕಾಲ ಮಾಗಿದೆ ಎಂದ ಭಾವಿಸಿದ್ದೇವೆ.

ಫಲಜ್ಯೋತಿಷ್ಯದಲ್ಲಿ ವಿಶ್ವಾಸವಿರುವ ಜನರಿಗೆ ಒಂದು ಸಂಗತಿ ಮನವರಿಕೆ ಮಾಡಿಕೊ ಬೇಕು. ಅವರ ನಂಬಿಕೆಗಳಿಗೆ ಆಧಾರವಾಗಿ ತಪಾಸಣೆಗೆ ಒಳಪಡಿಸಿದ ಯಾವುದೇ ವೈಜ್ಞಾನಿ ಸಾಕ್ಷ್ಯವಿಲ್ಲ ; ನಿಜಕ್ಕೂ ಪ್ರಬಲ ವ್ಯತಿರಿಕ್ತ ಪುರಾವ ಉಂಟು.

ಈ ಸಂದೇಶ ಪ್ರಕಟವಾಗಿ ಕಾಲು ಶತಮಾನವೇ ಸಂದಿದೆ ( ೨೦೦೦), ವತ ಮಾನ ಪರಿಸ್ಥಿತಿ ಏನು ? ಅಧಿಕ ಶೋಚನೀಯ. ವ್ಯಕ್ತಿಗಳು ಕುರಿಗಳಾದಾಗ ಫ ಜೋತಿಷಿ - ಹುಲಿಗಳು ವಿಜೃಂಭಿಸುತ್ತವೆ !

ಜಾತಕ ಮತ್ತು ಭವಿಷ್ಯ

೩೧

ಕೆಲವುಸಂದೇಹಗಳು * ಫಲಜ್ಯೋತಿಷ್ಯವೆಂಬ ದೇವಾಂಶ ಸಂಭೂತ ಆಧ್ಯಾತ್ಮಿಕ ಜ್ಞಾನಪ್ರಕಾರವನ್ನು

ವಿಜ್ಞಾನವೆಂಬ ಕೇವಲ ಭೌತ ಲೌಕಿಕ ಚಿಂತನಪ್ರಕಾರದಿಂದ ಅಳೆಯುವುದು ತಪ್ಪು. 'ದೇವಾಂಶಸಂಭೂತ ಆಧ್ಯಾತ್ಮಿಕ ಜ್ಞಾನಪ್ರಕಾರ' ಎಂಬ ಪದಪುಂಜ ಉತ್ಪಾದಿ ಸುವ ನಿಗೂಢ ಅಸ್ಪಷ್ಟತೆಗೆ ಬೆರಗಾಗಿ ಮೋಸಹೋಗಬೇಕಾಗಿಲ್ಲ . ವಿಶ್ವಾದ್ಯಂತ ವರ್ತಿಸುತ್ತಿರುವುದು ಒಂದೇ : ಭೌತಘಟಕಗಳ ಸಂಕೀರ್ಣ ಸಂಯುಕ್ತ ಬಲಗಳು. ಇವನ್ನು ಯಾರು ಬೇಕಾದರೂ ಪರೀಕ್ಷಿಸಿ ಪ್ರಯೋಗಿಸಿ ತಿಳಿಯಬಹುದು. ಇಲ್ಲಿ ' ದೇವಾಂಶ ಸಂಭೂತ' ಗಳಿಗೆ ಅಸ್ತಿತ್ವವೇ ಇಲ್ಲ . * ವಿಶ್ವದಲ್ಲಿ ಎದುರಾಗುವ ಸಮಸ್ತ ಸಮಸ್ಯೆಗಳಿಗೆ ವಿಜ್ಞಾನ ಎಂದೂ ಪರಿಹಾರ

ಗಳನ್ನು ಒದಗಿಸದು ಇಂಥ ಸೀಮಿತ ಜ್ಞಾನಪ್ರಕಾರದಿಂದ ಫಲಜ್ಯೋತಿಷ್ಯ ದಂಥ ಅಸೀಮಿತ ಜ್ಞಾನಪ್ರಕಾಶವನ್ನು ತುಲನೆ ಮಾಡುವುದು ಅವೈಜ್ಞಾನಿಕ, ವಿಶ್ವದಲ್ಲಿ ಕಾಲದಿಂದ ಕಾಲಕ್ಕೆ ಎದುರಾಗುವ ಸಮಸ್ಯೆಗಳನ್ನು ವಿಜ್ಞಾನವಾಗಲೀ ಇತರ ಯಾವುದೇ ಜ್ಞಾನಪ್ರಕಾರವಾಗಲೀ ಶಾಶ್ವತವಾಗಿ ಎಂದೂ ಪರಿಹರಿಸ ಲಾರವು. ಈ ಸರಳ ಸತ್ಯ ಇತರ ಎಲ್ಲರಿಗಿಂತ ಚೆನ್ನಾಗಿ ವಿಜ್ಞಾನಿಗೆ ತಿಳಿದಿದೆ. ಇಲ್ಲಿಯ ಮುಖ್ಯ ವ್ಯತ್ಯಾಸವಿದು : ಯಾವುದೇ ಸಮಸ್ಯೆಯನ್ನು ವಿಜ್ಞಾನಿ ವೈಜ್ಞಾನಿಕ ವಿಧಾನ ದಿಂದ ಬಗೆಹರಿಸಲು ಪ್ರಯತ್ನಿಸುತ್ತಾನೆ : ಮಾಹಿತಿ ಸಂಗ್ರಹಣೆ, ಇದನ್ನು ವ್ಯವಸ್ಥಿತ ವಾಗಿ ಅಳವಡಿಸಿ ಇದರಿಂದ ಒಂದು ಪ್ರರೂಪದ ಉದ್ದರಣೆ, ಈ ಪ್ರರೂಪವನ್ನು ಮೂಲ ಸಮಸ್ಯೆಗೆ ಅನ್ವಯಿಸಿ ಇದರ ಸಮಂಜಸತೆ ಅಥವಾ ಅಸಮಂಜಸತೆಯ ನಿರ್ಧರಣೆ ಇತ್ಯಾದಿ. ಇಲ್ಲಿ ಅಂತಿಮ ನಿರ್ಣಾಯಕ ಸಾಕ್ಷಾತ್ ನಿಸರ್ಗವೇ . ಇದೊಂದು ಪೂರ್ತಿ ಜೇಯನಿಷ್ಟ ವಿಧಾನ. ಫಲಜ್ಯೋತಿಷ್ಯ ಹೀಗಲ್ಲ : ಹಳೆಯ ಕಡತಗಳು, ಋಷಿವಾಣಿಗಳು, ಫಲಜ್ಯೋತಿಷಿಯ ದೈವಿಕ ಸ್ಫೂರ್ತಿ ಮುಂತಾದ ಜ್ಞಾತೃನಿಷ್ಠ ಸಂಗತಿಗಳನ್ನು ಯಥೋಚಿತವಾಗಿ ಓಬೀರಾಯನ ಕಾಲದ ವೈಜ್ಞಾನಿಕ ಅಂಶಗಳಿಗೆ ನಿಗೂಢವಾಗಿ ಬೆಸೆದು ತಯಾರಿಸಿದ ಮಾದಕ ಮೋಹಕ ಮಿಥ್ಯಾ ಪೇಯ ! ಇದರ ತ್ರಾಣ ಇರುವುದು ಜಾತಕನ ( ವ್ಯಕ್ತಿಯ ಅಥವಾ ಗಿರಾಕಿಯ ಅಥವಾ ಕೊಳ್ಳೆಯ ) ಮಾನಸಿಕ ದೌರ್ಬಲ್ಯದಲ್ಲಿ ಮತ್ತು ಫಲಜ್ಯೋತಿಷಿಯ ಪವಾಡ ಸದೃಶ ಕಲ್ಪನಾವಿಹಾರದಲ್ಲಿ ! ಸರಳವಾಗಿ ಹೇಳುವುದಾದರೆ ಧವಳ ಮುಗ್ಧತೆ ಯನ್ನು ವಂಚಿಸುವ ಕರಾಳ ಕಾಪಟ್ಯವಿದು. * ನನ್ನ ಜಾತಕದ ಪ್ರಕಾರ ಭವಿಷ್ಯ ನುಡಿದುದು ನೂರಕ್ಕೆ ನೂರು ಸತ್ಯವಾಗಿದೆ.

೩೨

ಜಾತಕ ಮತ್ತು ಭವಿಷ್ಯ

ಫಲಜ್ಯೋತಿಷ್ಯ ಸುಳ್ಳಾದರೆ ಇದು ಹೇಗೆ ಸಾಧ್ಯವಾಯಿತು ? ಇಂಥ ಸಂದೇಹವನ್ನು ಮೂರು ದೃಷ್ಟಿಗಳಿಂದ ಪರಿಶೀಲಿಸಬೇಕಾಗುತ್ತ ಒಂದು, ಫಲಜ್ಯೋತಿಷಿ ತನ್ನ ನಯವಿನಯದಿಂದ ಹಾಗೂ ಮಾತಿನ ಮೊ ಯಿಂದ ಜಾತಕನಿಗೆ ಮಂಕುಬೂದಿ ಎರಚಿ ಅವನ ಬಾಯಿಯಿಂದ ಗತಜೀವನ ಬಗೆಗಿನ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿ, ಹಲವಾರು ಅರ್ಥಗಳು ಸೂ ವಂಥ ಸಂದಿಗ್ಧ ಪದಗಳಲ್ಲಿ ಅಥವಾ ವಾಕ್ಯಗಳಲ್ಲಿ ಭವಿಷ್ಯವನ್ನು ತುಂಬ ಎಚ್ಚ ಯಿಂದ ನುಡಿದಿರುತ್ತಾನೆ. ಅಂಥ ಜಾಣನುಡಿಗಳಿಗೆ ಸಂದರ್ಭೋಚಿತವಾಗಿ ಯ ವ್ಯಾಖ್ಯಾನವನ್ನು ಬೇಕಾದರೂ ನೀಡಬಹುದು. ಎರಡು, ಜಾತಕನ ಮನೋಭೆ. ತುಂಬ ಮಾರ್ದವವಾಗಿದ್ದು ತನಗೆ ಬೇಕಾದ ಅರ್ಥವನ್ನೇ ಫಲಜ್ಯೋತಿಷಿಯ ನು ಮುತ್ತುಗಳಲ್ಲಿ ಕಾಣುತ್ತಾನೆ ! ಮನಸ್ಸು ಬಯಸಿದ್ದನ್ನು ಇಂದ್ರಿಯಗಳು ಅನುಭ ಸುತ್ತವೆ. ಮೂರು, ಹಲವಾರು ವಿಷಯಗಳನ್ನು ಫಲಜ್ಯೋತಿಷಿ ಮುನ್ನುಡಿದಿ ತಾನೆ. ಆ ಪೈಕಿ ಕೇವಲ ಕೆಲವು ಕಾಕತಾಲೀಯತೆಯ ಕಾರಣವಾಗಿ ನಿಜವಾಗ ಸಾಧ್ಯತೆಯಿದೆ. ಜಾತಕನ ವಿಧೇಯ ಮನಸ್ಸು ಈ ನಿಜ ಸಂಗತಿಗಳನ್ನು ಗಟ್ಟಿ ಹಿಡಿ ಕೊಂಡು ಉಳಿದವನ್ನು ಮರೆತುಬಿಡುತ್ತದೆ ಯಶಸ್ಸು ದಾಖಲಾಗುತ್ತದೆ, ಈ ಯಶಸ್ಸು ವಿನಾಯಿತಿ ಪಡೆಯುತ್ತದೆ. ಮತ್ತೂ ವಾದಕ್ಕೆ ಇಳಿದರೆ ಪೂರ್ವಜನ್ಮಥ ಕರ್ಮಸಿದ್ಧಾಂತ, ಜನನಕ್ಷಣ ನಿಖರವಾಗಿ ದಾಖಲಾಗದಿದ್ದುದು, ಇತರ ದೈ ಕಾರಕಗಳ ಸಂಯುಕ್ತಫಲ ಮುಂತಾದ ಅಮೂರ್ತ ಅಸ್ಪಷ್ಟತೆಗಳಲ್ಲಿ ಜ್ಯೋತಿಷಿಯೂ ಜಾತಕನೂ ಆಸರೆ ಪಡೆಯುವುದು ಸುಲಭ. “ ಕಡೆಗೆ ಕರುಣಾ ರಾಘವನಲಿ ತಪ್ಪಿಲ್ಲ !' ಫಲಜ್ಯೋತಿಷ್ಯವೆಂದೂ ಹುಸಿಯಾಗದು ! * ಪ್ರಾಚೀನ ಯುಗಗಳಿಂದ ವರ್ತಮಾನ ದಿನಗಳ ತನಕವೂ ಫಲಜ್ಯೋತಿ

ಮಾನವನ ಒಡನಾಡಿಯಾಗಿಯೂ ಹಿತೈಷಿಯಾಗಿಯೂ ಬೆಳೆದು ವಿಕಸಿಸಿ ಸ್ವಂತ ಅಂತಸ್ಸತ್ ಇದ್ದ ಹೊರತು ಇದು ಸಾಧ್ಯವಾಗುತ್ತಿತ್ತೇ ? ವಿಜ್ಞ ಹೀಗಲ್ಲ . ಉದಾಹರಣೆಗೆ ಭೂಕೇಂದ್ರವಾದವೇ ವಿಶ್ವ ಸತ್ಯವೆಂದು ಒಂದು ಕೆ ದಲ್ಲಿ ಘೋಷಿಸಿದ ಖಗೋಳವಿಜ್ಞಾನಿಗಳು ಕೊಪರ್ನಿಕಸನ ಅನಂತರ ( ೧೫ ಶತಮಾನ) ಅದು ಸುಳ್ಳು ,ಸೂರ್ಯಕೇಂದ್ರವಾದ ಯಥಾಸ್ಥಿತಿ ಎನ್ನುತ್ತಿದ್ದಾ ಇವರನ್ನು ನಂಬಬಹುದೇ ? ಇವರ ವಾದವನ್ನು ಅಂಗೀಕರಿಸಬಹುದೇ ? ಒಂದು ವಸ್ತು ಅಥವಾ ವಿಷಯ ಎಷ್ಟು ಹಳೆಯದು ಎಷ್ಟು ಕಾಲ ಉಳಿರಿ ಅಥವಾ ಎಷ್ಟು ಜನ ಒಪ್ಪಿದ್ದಾರೆ ಎನ್ನುವ ಜ್ಞಾತೃನಿಷ್ಠ (subjective ) ಮಾ ಗಳಿಂದ ಅದು ಸತ್ಯವೇ ಅಸತ್ಯವೇ ಎಂದು ನಿರ್ಣಯವಾಗದು. ಅದು ಕಾಯ

ಜಾತಕ ಮತ್ತು ಭವಿಷ್ಯ

ಕಾರಣ ನಿಕಷದಲ್ಲಿ , ಅಂದರೆ ಪ್ರಯೋಗದ ಋಜು ತಲದಲ್ಲಿ , ಉತ್ತೀರ್ಣ ವಾಗುವುದೇ ಎಂಬ ಪ್ರಶ್ನೆಯೊಂದೇ ಇಲ್ಲಿ ಪ್ರಸ್ತುತವಾದದ್ದು . ಫಲಜ್ಯೋತಿಷ್ಯ ಅಂದಾಗಲೀ ಇಂದಾಗಲೀ ಪ್ರಯೋಗದ ಋಜು ತಲವನ್ನು ಆಧರಿಸಿ ನಿಂತಿಲ್ಲ . ಕಾರ್ಯ- ಕಾರಣ ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣವಾಗಿಲ್ಲ . ಅಂತೆಕಂತೆಗಳು, ಹುಸಿ ನಂಬಿಕೆಗಳು, ಅಂಧಭಾವನೆಗಳು, ಜನರ ಅಗಾಧ ಅಜ್ಞಾನ ಮುಂತಾದವೇ ಇದರ ಬಂಡವಾಳ. ಅಂದಹಾಗೆ ಮನುಕುಲದ ಶಾಶ್ವತ ಸಂಗಾತಿಗಳು ಎರಡು : ವ್ಯಭಿಚಾರ ಇದು ಒಡಲಿಗೆ ಹತ್ತಿದ ಜಂಗು ; ಫಲಜ್ಯೋತಿಷ್ಯ ಇದು ಮನಕ್ಕೆ ಅಂಟಿದ ಗೆದ್ದಲೆ. ಇವನ್ನು ಅತ್ಯಂತ ಪ್ರಾಚೀನ ದಂಧೆಗಳೆಂದು ಅಂಗೀಕರಿಸುವುದು ಸಾಧುವೇ ? ಅಪೇಕ್ಷಣೀಯವೇ ? ಇವು ವಿಜ್ಞಾನ ವಸ್ತುಗಳಾಗುವುವೇ ?

ಇನ್ನು ವಿಜ್ಞಾನದ ' ದೊಂಬರಲಾಗಗಳು.' ಕ್ರಿಸ್ತಶಕ ಒಂದನೆಯ ಶತಮಾನದಲ್ಲಿ ಬಾಳಿದರೋಮನ್ ರಾಜಕಾರಣಿ ಮತ್ತು ತತ್ತ್ವಶಾಸ್ತ್ರವಿದ ಸೆನೆಕಾ ಎಂಬಾತ ಇದಕ್ಕೆ ಸಮರ್ಪಕ ಉತ್ತರನೀಡಿದ್ದಾನೆ :“ ಈಗ ನಮ್ಮಿಂದ ಮರೆಯಾಗಿರುವ ಸಂಗತಿಗಳು, ಸಾಕಷ್ಟು ದೀರ್ಘಕಾಲ ಮಾಡುವ ಸಂಶೋಧನೆಗಳ ಫಲವಾಗಿ, ಬೆಳಕು ಕಾಣುವ ದಿನ ಬಂದೇ ಬರುತ್ತದೆ. ಆಕಾಶದಂಥ ಅತ್ಯಗಾಧ ವ್ಯಾಪ್ತಿಯನ್ನು ಅನ್ವೇಷಿಸಲು ಒಂದು ತಲೆಮಾರಿನ ಆಯುಷ್ಯವನ್ನು ಪೂರ್ತಿ ಮೀಸಲಿಟ್ಟರೂ ಸಾಲದು . . . . ಇಂತಿದ್ದರೂ ಆಕಾಶದ ಬಗೆಗಿನ ಜ್ಞಾನ ಉತ್ತರೋತ್ತರ ಯುಗಗಳ ದೀರ್ಘಾವಧಿ ಗಳಲ್ಲಿ ಕ್ರಮೇಣ ಅನಾವರಣಗೊಳ್ಳಲಿದೆ. ನಮ್ಮ ಕುಲಸಂಜಾತರಾಗಿ ಬರಲಿರುವ ಮುಂದಿನ ಯಾವುದೋ ಪೀಳಿಗೆಯ ಜನರು, ತಮಗೆ ಅಷ್ಟು ಸುಲಭವಾಗಿಯೂ ಸುಂದರವಾಗಿಯೂ ಮನವರಿಕೆಯಾಗಿರುವ ವಿಷಯಗಳು, ತಮ್ಮ ಪೂರ್ವಜರಾದ ನಮಗೆ ತಿಳಿದೇ ಇರಲಿಲ್ಲವಲ್ಲ ಎಂದು ಅಚ್ಚರಿಪಡುವ ಕಾಲ ಬಂದೇಬರುತ್ತದೆ. ಅನೇಕ ಆವಿಷ್ಕಾರಗಳು ಭವಿಷ್ಯದ ಯುಗಗಳಿಗಾಗಿ ಕಾಯ್ದಿರಿಸಲ್ಪಟ್ಟಿವೆ. ಆದರೆ ಆ ವೇಳೆಗೆ ನಮ್ಮ ಬಗೆಗಿನ ನೆನಪು ಮಾಸಿಹೋಗಿರುತ್ತದೆ. ಪ್ರತಿಯೊಂದು ಯುಗ ದಲ್ಲಿಯೂ ಅನ್ವೇಷಣೆಗೆ ನೂತನ ವಿಷಯ ಒದಗಿರದಿದ್ದರೆ ಈ ವಿಶ್ವವೊಂದು ಅಲ್ಪ ಮತ್ತು ರಿಕ್ತ ಯಂತ್ರವಾಗಿರುತ್ತಿತ್ತು . ನಿಸರ್ಗವೆಂದೂ ತನ್ನ ನಿಗೂಢ ರಹಸ್ಯ ಗಳನ್ನು ಒಮ್ಮೆಗೇ ಆಗಲಿ ಎಲ್ಲರಿಗೂ ಆಗಲಿ ಬಿಟ್ಟುಕೊಡುವುದಿಲ್ಲ . ”

ಗತಕಾಲದ ಜಡ್ಡುಗಳನ್ನು ತೊರೆದು ಸತ್ಯವನ್ನು ಉಳಿಸಿಕೊಂಡು ವರ್ತ ಮಾನಕ್ಕೆ ತೀವ್ರವಾಗಿ ಸ್ಪಂದಿಸುತ್ತ ಭವಿಷ್ಯದೆಡೆಗೆ ಟಿಸಿಲೊಡೆಯುತ್ತಿರುವ ನಿರಂತರ ಜೀವಂತ ವೃಕ್ಷವೇ ವಿಜ್ಞಾನ, ಫಲಜ್ಯೋತಿಷ್ಯವಾದರೋ ಗತಕಾಲದ ಮೌಡ್ಯಗಳಿಗೆ ಆಧ್ಯಾತ್ಮಿಕತೆಯ ನಿಗೂಢ ಪರಿವೇಷ ತೊಡಿಸಿ ವರ್ತಮಾನದಲ್ಲಿ ಬಂದಿಳಿಕೆಯಾಗಿ

೩೪

ಜಾತಕ ಮತ್ತು ಭವಿಷ್ಯ

ಸಮಾಜದ ರಕ್ತ ಹೀರುತ್ಯ ಭವಿಷ್ಯದೆಡೆಗೆ ವ್ಯಾಪಕವಾಗಿ ಚಾಚುತ್ತಿರುವ ರ ಬೀಜಾಸುರಗೋತ್ರಜ. * ನೀವು ಹೇಳುತ್ತಿರುವುದು ನಮ್ಮ ಬುದ್ದಿಗೆ ನಾಟುತ್ತದೆ, ಹೃದಯಕ್ಕೆ ಮಾಡಿ ಹಿತವಾಗುವುದಿಲ್ಲ . ಸಂಕಟ ಬಂದಾಗ ಮೊದಲ ಹೆಜ್ಜೆಯಾಗಿ ಇಲ್ಲಿಯೇ ತು ಹಾರ ಅರಸಲು ಹೆಣಗುತ್ತೇವೆ. ಆದರೆ ನಮ್ಮ ಪ್ರಯತ್ನಕ್ಕೆ ಮೀರಿದಾಗ ಮ ಸಿಗೆ ನೆಮ್ಮದಿ ಗಳಿಸಲು ಜಾತಕ ನೋಡಿಸುವುದು, ಹರಕೆ ಒಪ್ಪಿಸುವುದು, ಪೂ ದಾನ ಮಾಡುವುದು ಮುಂತಾದ ವಿಜ್ಞಾನೇತರ ಕ್ರಿಯೆಗಳಿಗೆ ಶರಣಾಗುವು ಅನಿವಾರ್ಯವೆನ್ನಿಸುತ್ತದೆ. ಅಂದರೆ ದೇವರ ಮೇಲೆ ಭಾರ ಹಾಕಿ ಹಗುರಾಗು ದೆಂದರ್ಥ. ಇದು ತಪ್ಪೇ ? ವ್ಯಕ್ತಿಗೆ ತಾನೇನು ಮಾಡಬೇಕೆಂಬ ಸ್ವಾತಂದ ಇದೆಯಷ್ಟೆ . ಇದನ್ನು ಹತ್ತಿಕ್ಕಿದಾಗ ಏನಾಗುವುದೆಂಬುದಕ್ಕೆ ಇತಿಹಾಸ ಉದ್ದಕ್ಕೂ ಪುರಾವೆಗಳು ದೊರೆಯುತ್ತವೆ.

ಪರಂಪರೆಯ ಶಿಶುವಾದ ಮಾನವ, ಅದನ್ನು ಪ್ರಶ್ನಿಸದೇ , ಪ್ರಾಚೀನವಾ ದ್ದೆಲ್ಲವೂ ಆ ಕಾರಣದಿಂದಲೇ ಪವಿತ್ರವೂ ಹೌದು ಎಂದು ಪ್ರಶ್ನಾರಹಿತವ . ಅಂಗೀಕರಿಸಿ ಅದಕ್ಕೆ ತನ್ನನ್ನು ಅಂಧ ವಿನೀತತೆಯಿಂದ ಒಪ್ಪಿಸಿಕೊಂಡಿರುವುದು “ ದಿವ್ಯ ' ನಿದರ್ಶನವಿದು. ಬಹು ಸಂಖ್ಯಾತರು - ಅನ್ಯತ್ರ ಮೇಧಾವಿಗಳು , ಸ ಕ್ಷಿತರು ಮತ್ತು ಲೌಕಿಕ ಜೀವನದಲ್ಲಿ ಯಶಸ್ಸು ಕಂಡವರು ಬದುಕುತ್ತಿರುವು ಹೀಗೆಯೇ . ಈ ಹಗಲಿಡೀ ವಿಜ್ಞಾನದ ಜೊತೆ ಕೆಲಸವೆಸಗಿ, ಕಾರಣರಹಿತ ಕಾರ್ಯವಿಲ್ಲ ಎಂ ಅರಿತಿರುವ, ಯಾವುದೇ ಕಾರ್ಯದ ಕಾರಣ ತಿಳಿಯದಾಗ, ಅದನ್ನು ( ಕಾರಣ ಇನ್ನಷ್ಟು ಶ್ರದ್ಧಾಪೂರ್ವಕ ಸಾಹಸದಿಂದ ಅನ್ವೇಷಿಸಿ ತಿಳಿಯಬೇಕೇ ಹೊರ ಅಜ್ಞಾತ ಪರಮಾತ್ಮನಿಗೂ ಅತಿದೂರದ ಗ್ರಹನಕ್ಷತ್ರಗಳಿಗೆ ವರ್ಗಾಯಿಸಿ ಮರೆ ಬಿಡುವುದು ಸಲ್ಲ ಎಂದು ಆಚರಿಸುತ್ತಿರುವ ಮತ್ತು ಸಫಲ ಸುದೀರ್ಘ ವೈಜ್ಞಾ ಪ್ರಯತ್ನಕ್ಕೆ ಮಣಿಯದ ಸಮಸ್ಯೆ ಯಾವುದೂ ಇಲ್ಲವೆಂಬ ಭರವಸೆಯಿಂದ ಸರ ಕಾರ್ಯನಿರತರಾಗಿರುವ ಮೇಧಾವಿಗಳು ಕೂಡ ಫಲಜ್ಯೋತಿಷಿಗಳ ಎದುರೊ ಪುರಾಣದ ಪೊಳ್ಳು ಬುರುಡೆಗಳನ್ನು ಅತಿರಂಜನೀಯವಾಗಿ ಹೊಸೆಯು ಪ್ರವಚನಕಾರರ ಮುಂದೆಯೋ , ತಲೆಬಾಗಿ ಕೈಮುಗಿದು ಕುಳಿತಿರುವುದು, ಅವ ಗಳಹಿದ್ದನ್ನೆಲ್ಲ ಮೂಕವಿಧೇಯತೆಯಿಂದ ಸ್ವೀಕರಿಸುತ್ತಿರುವುದು, ಮತ್ತು ತಾ ಶಿಕ್ಷಣದಲ್ಲಿ ಹಾಗೂ ವೃತ್ತಿಜೀವನದಲ್ಲಿ ಕಲಿತದ್ದಕ್ಕೂ ಈ ಮಂಪರುಕಾ ಮಧುರ ಪದಸಮುಚ್ಚಯಗಳಿಗೂ ನಡುವೆ ಸಂಬಂಧ ಕಲ್ಪಿಸತಕ್ಕದ್ದಲ್ಲ, ಇ

0

.

ಜಾತಕ ಮತ್ತು ಭವಿಷ್ಯ

೩೫

ಬೇರೆ ಬೇರೆ ಖಾತೆಗಳು ಎಂದು ಪ್ರಾಮಾಣಿಕವಾಗಿ ಭಾವಿಸಿ ತದನುಗುಣವಾಗಿ ವರ್ತಿಸುತ್ತಿರುವುದು ಸ್ವತಃ ಆ ವ್ಯಕ್ತಿಗಳ ಸರ್ವಾಂಗೀಣ ಶ್ರೇಯಸ್ಸಿಗೆ ಹಾನಿಕಾರಿ . ಜೀವನ ಅಖಂಡವಾದದ್ದು . ವ್ಯಕ್ತಿ ಇದರಲ್ಲಿ ಸ್ವಾಸ್ಥ್ಯ ಗಳಿಸಬೇಕಾದದ್ದು ವೃತ್ತಿ ಜೀವನದ ಬಗ್ಗೆ ಮೌಲ್ಯನಿಷ್ಟ ನಿಲವು ತಳೆಯುವುದರಿಂದ, ಸಹಚರರ ಬಗ್ಗೆ ಕಳಕಳಿಯ ವರ್ತನೆಯಿಂದ, ನೈತಿಕ ಪ್ರಜ್ಞೆಯನ್ನು ಸದಾ ಕಾಪಾಡಿಕೊಂಡು ಬರುವುದ ರಿಂದ, ಹಾಗೂ ನಿಃಸ್ವಾರ್ಥ ಕರ್ಮದಿಂದ, ತನ್ನ ವೃತ್ತಿಜೀವನದ ಹೊರಗೆ ಶಾಂತಿ ಅನ್ವೇಷಿಸುವಾತ ಇಲ್ಲಿ ( ವೃತ್ತಿ ) ಅದನ್ನು ಕಳೆದುಕೊಳ್ಳುತ್ತಾನೆ, ಅಲ್ಲಿ (ಹೊರಗೆ) ಅದನ್ನು ಗಳಿಸುವುದಿಲ್ಲ. ಇಲ್ಲಿ ಸಲ್ಲದ್ದು ಅಲ್ಲಿಯೂ ಸಲ್ಲುವುದಿಲ್ಲ ! * ಹಾಗಾದರೆ ಮುಂದೇನು ಹಾದಿ ? | - ನಾವು ಕುರಿಗಳಾಗತಕ್ಕದ್ದಲ್ಲ ಆಗ ಮಾತ್ರ ಹುಲಿಗಳು ಪ್ರವರ್ಧಿಸುವುದಿಲ್ಲ . ಮನುಷ್ಯರನ್ನು ಪ್ರೀತಿಸಬೇಕು. ಮೃಗಪಕ್ಷಿಗಳನ್ನು , ವನರಾಜಿಗಳನ್ನು , ನಿಸರ್ಗ ವೈಭವವನ್ನು ಓಲೈಸಬೇಕು. ನೀತಿವಂತರಾಗಿರಬೇಕು, ಕಾರ್ಯನಿಷ್ಠರಾಗಿರಬೇಕು, ಸಾಮಾಜಿಕ ಹಿತಾಸಕ್ತಿಗಳಲ್ಲಿ ಪ್ರಾಮಾಣಿಕ ಕಳಕಳಿ ತಳೆದು ಆ ಪ್ರಕಾರ ವರ್ತಿಸ ಬೇಕು. ಪವಾಡಗಳು ಸಂಭವಿಸದಿರುವುದೇ ಈ ವಿಶ್ವದ ದೊಡ್ಡ ಪವಾಡ ಎಂದು ಅರಿತಿರಬೇಕು. ವಿಶ್ವದಲ್ಲಿ ಭೌತನಿಯಮಗಳು ಮಾತ್ರ ಸಾಧು. ಬೇರಾವುದೂ ಅಲ್ಲ . ಇಲ್ಲಿ ದೇವಮಾನವರಿಗಾಗಲೀ ಪವಾಡ ಪುರುಷೋತ್ತಮರಿಗಾಗಲೀ ನೆಲೆ ಇಲ್ಲ ಎಂದು ತಿಳಿದಿರಬೇಕು. ಮಾನವ ಪ್ರಪಂಚದಲ್ಲಿ ನೀತಿನಿಯಮಗಳು ಮಾತ್ರ ಸಿಂಧು, ಬೇರಾವುದೂ ಅಲ್ಲ . ಇಲ್ಲಿ ಯಾರಿಗೂ ಎಂದಿಗೂ ವಿನಾಯಿತಿ ಇಲ್ಲ ಎಂದು ಅರಿತಿರಬೇಕು. ಈ ನೀತಿ ನಿಯಮಗಳು ಸಮಾಜದ ಒಳಿತಿಗಾಗಿ ಸ್ವತಃ ಸಮಾಜವೇ ರೂಪಿಸಿ ಚಲಾವಣೆಗೆ ತಂದಂಥವು. ಇವುಗಳ ಹಿನ್ನೆಲೆಯಲ್ಲಿ ಯಾವ ಆಕಾಶಕಾಯಗಳೂ ಇಲ್ಲ . ದೇವರೆಂಬ ಅಜ್ಞಾತ ಶಕ್ತಿಯೂ ಇಲ್ಲ , ದೈವಿಕ ಬಲ ಗಳಂತೂ ಇಲ್ಲವೇ ಇಲ್ಲ .

ಯಾವುದೇ ಮಾನವ ಪ್ರಯತ್ನ, ಯೋಜನೆ ಅಥವಾ ಸಾಹಸ ಯಶಸ್ವಿ ಆಗ ಬೇಕಾದರೆ ಈ ಮುಂದಿನ ಪಂಚಶೀಲಗಳು ಅದರಲ್ಲಿ ಸದಾ ಪೂರಕ ಪೋಷಕವಾಗಿ ಅನುನಾದಿಸುತ್ತಿರಬೇಕು : ನೈತಿಕತೆ, ಮಗ್ನತೆ, ಪಾರದರ್ಶಕತೆ, ಉತ್ಕೃಷ್ಟತೆ ಮತ್ತು ಉತ್ತರದಾಯಿತ್ವ . ಎಲ್ಲಿ ಯಾವುದರಲ್ಲಿ ಹೇಗೆ ಎಷ್ಟು ಕೊರೆ ಬಂದರೂ ಆ ಪ್ರಯತ್ನ ನೆಲಸಮವಾಗುತ್ತದೆ.

ನಿಶ್ಚಿಂತನಾಗಬೇಕೆಂತಿ ದುಶ್ಚಿಂತಿಯೊಳಗನೀಕುಂತಿ

ಜಾತಕ ಮತ್ತು ಭವಿಷ್ಯ

ಯಾಕೋ ಎಲೋ ನಿನಗ ಭ್ರಾಂತಿ ನಾಳಿಗಾಗುವದೀಗಂತಿ ಆಶಪಾಶಗಳ ಬ್ಯಾಡಂತಿ ವಳೆ ಮೀಸಲ ನುಡಿ ಮಾತಾಡಂತಿ ಭಾಷೆ ಕೊಟ್ಟು ತಪ್ಪಬ್ಯಾಡಂತಿ ಹರಿದಾಸರೊಳಗೆ ಮನ ನೀಡಂತಿ

- ಶಿಶುನಾಳ ಶರೀಫರು

ಇಲ್ಲ ' ಹರಿದಾಸರು ಜೀವನವನ್ನೂ ನಿಸರ್ಗವನ್ನೂ ಪ್ರತಿಮಿಸುತ್ತದೆಂಬ ತಿಳಿಯಬೇಕು.

ನಾವೆಲ್ಲ ಚಿಕ್ಕವರಾಗಿದ್ದಾಗ, ೧೯೩೧- ೪೦ , ನಮ್ಮ ನಾಲಗೆ ಮೇಲೆ ನಲಿಯ ತಿದ್ದ ಸುಭಾಷಿತದ ಕೆಲವು ಸಾಲುಗಳು ನೆನಪಿಗೆ ಬರುತ್ತವೆ :

ಜಾತಕವ ನಂಬುತ್ತ ಪಾತಕವನೆಸಗಿದೊಡೆ ಸೂತಕವು ತಪ್ಪಿತೆ ಎಲೆ ಕೃತವೀ ! ಸೂಕರನ ರೊಪ್ಪದಲಿ ಶ್ರೀಕರನು ತಂಗಿದೊಡೆ ನಾಕವಾದೀತೆ ಅದು ಹೇ ಪಾತಕೀ ! ಹಗಲು ವಂಚನೆ ಮೋಸ ಇರುಳು ದೇವಾವೇಶ ನಗಧರನು ಮೆಚ್ಚುವನೆ ಋಣಶೋಷಕೀ ! ಪ್ರೀತಿಸುತ ಜೀವನವ ನೀತಿಪಥದಲಿ ಗಮಿಸಿ ಆತ್ಮತೃಪ್ತಿಯ ಗಳಿಸೊ ಹುಲು ಮಾನವಾ !

ಅನುಬಂಧ ೧. ಆಧುನಿಕ ದೃಕ್ಸಿದ್ದಾಂತ

ನಮ್ಮ ಜನರು ಧಾರ್ಮಿಕ ಮತ್ತು ಲೌಕಿಕ ಕಾರ್ಯಕಲಾಪಗಳಿಗೆ ಪಂಚಾಂಗ ವನ್ನು ಆಶ್ರಯಿಸುವುದೂ ಅನುಸರಿಸುವುದೂ ಅನೂಚಾನವಾಗಿ ನಡೆದು ಬಂದಿ ರುವ ಪದ್ಧತಿ. ಇದರ ಪಂಚ ಅಂಗಗಳು ತಿಥಿ, ವಾರ, ನಕ್ಷತ್ರ , ಯೋಗ ಮತ್ತು ಕರಣ.

ತಿಥಿ : ನಾವು ಪರಿಶೀಲಿಸುತ್ತಿರುವ ದಿವಸ, ಹಿಂದಿನ ಅಮಾವಾಸ್ಯೆ ಅಥವಾ ಹುಣ್ಣಿಮೆಯ ಅನಂತರ , ಎಷ್ಟನೆಯದು ಎನ್ನುವುದರ ಸೂಚಕ, ಅಮಾವಾಸ್ಯೆ ಯಿಂದ ಮುಂದಿನ ಹುಣ್ಣಿಮೆ ತನಕ ಸಲ್ಲುವ ಅವಧಿ ಶುಕ್ಲಪಕ್ಷ , ಚಂದ್ರನ ಕಲೆ ರಿಯಿಂದ ೧ಕ್ಕೆ ಏರುವ ದಿನಗಳಿವು. ಹುಣ್ಣಿಮೆಯಿಂದ ಮುಂದಿನ ಅಮಾವಾಸ್ಯೆ ತನಕ ಕೃಷ್ಣಪಕ್ಷ , ಆಗ ಚಂದ್ರನ ಕಲೆ ೧ರಿಂದ 0ಗೆ ಇಳಿಯುತ್ತದೆ. ( ಚಂದ್ರನ ಉಜ್ಜಲಭಾಗದ ವಿಸ್ತೀರ್ಣ ಪೂರ್ಣಬಿಂಬದ ಎಷ್ಟು ಅಂಶವಿದೆ ಎನ್ನುವುದರ ಮಾನಕವೇ ಕಲೆ. ಉದಾಹರಣೆಗೆ, ದಿನಾಂಕ ೧೨- ೬- ೨೦೦೦ದ ತಿಥಿ ಶುಕ್ಲ - ಶುಕ್ಲ ಪಕ್ಷದ ಏಕಾದಶಿ ಎಂದರ್ಥ ; ದಿನಾಂಕ ೧೭-೩ -೨೦೦೧ರ ತಿಥಿ ಕೃಷ್ಣ ೮ ಕೃಷ್ಣಪಕ್ಷದ ಅಷ್ಟಮಿ ಎಂದರ್ಥ. ಆಯಾ ತಿಥಿಗೆ ಹೊಂದುವಂತೆ ಚಾಂದ್ರಕಲೆ ಯನ್ನು ಗಣಿಸಬಹುದು, ಮತ್ತು ಗಗನವೀಕ್ಷಣೆಗೈದು ಈ ಗಣನೆಯನ್ನು ಸ್ಥಿರೀಕರಿಸ ಬಹುದು, ಗಣನೆ- ಘಟನೆ ಸಾಂಗತ್ಯಕ್ಕೆ ಒಂದು ನಿದರ್ಶನವಿದು.

ವಾರ : ಆದಿತ್ಯವಾರದಿಂದ ಮುಂದಿನ ಶನಿವಾರದ ವರೆಗಿನ ಸಪ್ತಾಹದಲ್ಲಿ , ಪ್ರಸ್ತುತ ಪರಿಶೀಲನೆಯಲ್ಲಿರುವ ದಿವಸದ ಹೆಸರು. ಉದಾಹರಣೆಗೆ, ದಿನಾಂಕ ೧೮ - ೭- ೨೦೦೦ ಕೃಷ್ಣ ಬಿದಿಗೆಗೆ ಹೊಂದುವ ವಾರ ಮಂಗಳವಾರ, ಅಂತೆಯೇ ದಿನಾಂಕ ೭- ೩- ೨೦೦೧ ಶುಕ್ಲ ದ್ವಾದಶಿಗೆ ಹೊಂದುವ ವಾರ ಬುಧವಾರ, ಗಗನ ವೀಕ್ಷಣೆ ಮಾಡಿ ದಿವಸನಾಮವನ್ನು ನಿರ್ಧರಿಸಲಾರೆವು. ಏಕೆಂದರೆ ಸಪ್ತಾಹದಲ್ಲಿ ಇರುವ ದಿವಸಗಳ ಸಂಖ್ಯೆ , ಹೆಸರುಗಳು ಹಾಗೂ ಇವುಗಳ ಅನುಕ್ರಮ ಪೂರ್ತಿ ಮಾನವನಿರ್ಮಿತ ಸೌಕರ್ಯ, ನಿಸರ್ಗದತ್ತ ಮಾನಕ ಅಲ್ಲ ತಿಥಿ ಮತ್ತು ನಕ್ಷತ್ರ ನಿಸರ್ಗದತ್ತ ಮಾನಕಗಳು. (ನೋಡಿ ಅನುಬಂಧ ೩ )

ನಕ್ಷತ್ರ : ನಕ್ಷತ್ರರಾಜ್ಯದಲ್ಲಿ ನಿರ್ದಿಷ್ಟ ದಿನಾಂಕದಂದು ಚಂದ್ರನ ನೆಲೆ ಎಲ್ಲಿ ಎನ್ನುವುದರ ಸೂಚಕ. ಇದಕ್ಕೆ ನಿತ್ಯ ನಕ್ಷತ್ರವೆಂದು ಹೆಸರು. ಉದಾಹರಣೆಗೆ, ದಿನಾಂಕ ೧೬- ೫- ೨೦೦೦ ಶುಕ್ಲ ತ್ರಯೋದಶೀ ಮಂಗಳವಾರದ ನಿತ್ಯ ನಕ್ಷತ್ರ

೩೮

ಜಾತಕ ಮತ್ತು ಭವಿಷ್ಯ

( ಚಂದ್ರನ ನೆಲೆ) ಚಿತ್ತಾ , ಅಂತೆಯೇ ದಿನಾಂಕ ೧೬ -೩ - ೨೦೦೧ ಕೃಷ್ಣ ಸಪ್ತಮಿ ಶುಕ್ರವಾರದ ನಿತ್ಯ ನಕ್ಷತ್ರ ಜೇಷ್ಯಾ, ಆಯಾ ದಿನಾಂಕದಂದು ಚಂದ್ರನನ್ನು ಈಯಿ ನಕ್ಷತ್ರಗಳ ಸನಿಹದಲ್ಲಿ ಗುರುತಿಸಬಹುದು - ಗಣನೆ- ಘಟನೆ ಸಾಂಗತ್ಯಕ್ಕೆ ಇನೂ ಒಂದು ನಿದರ್ಶನ. * ಯೋಗ ಮತ್ತು ಕರಣ : ಸೂರ್ಯ ಚಂದ್ರರ ನಡುವಿನ ಕೋನಾಂತ ಮುಂತಾದ ಖಗೋಳೀಯ ಧಾತುಗಳನ್ನು ಆಧರಿಸಿರುವ ಪರಿಕಲ್ಪನೆಗಳು. ತಿರಿ ಮತ್ತು ನಕ್ಷತ್ರ ತಿಳಿಸುವುದಕ್ಕಿಂತ ಹೆಚ್ಚಿನ ಖಗೋಳೀಯಾಂಶವೇನನ್ನೂ ಇಷ ತಿಳಿಸುವುದಿಲ್ಲ . ಫಲಜ್ಯೋತಿಷ್ಯದಲ್ಲಿ ವ್ಯಾಪಕ ಬಳಕೆ , ಇದರ ಬೊಗಳೆ ನುಡಿಗಳಿಗೆ ಯೋಗ ಮತ್ತು ಕರಣ ಸೈದ್ಧಾಂತಿಕ ಬುನಾದಿ ಒದಗಿಸುತ್ತವೆಂಬುದು ಈ ಜ್ಯೋತಿಷಿಗಳ ವಿವರಣೆ ! ಮೋಸಕ್ಕೆ ನೂರೆಂಟು ಹೊಸ ಹಾದಿಗಳು ! - ಅಂದ ಮೇಲೆ ಒಂದು ಸಂಗತಿ ಸ್ಪಷ್ಟ : ನಿರಂತರ ಏಕವೇಗದಿಂದ ಏಕದಿಶ ಗಾಮಿಯಾಗಿ ಸಾಗುತ್ತಿರುವಂತೆ ಭಾಸವಾಗುವ ಕಾಲವಾಹಿನಿಯಲ್ಲಿ ನಾವು ನಮ್ಮ ಸೌಕರ್ಯಾರ್ಥ ಮಾಡಿರುವ ಗುರುತುಗಳು ಪಂಚಾಂಗದ ಈ ಪಂಚ ಅಂಗಗಳು ಕಾಲ ಪ್ರವಾಹಕ್ಕೆ ಕಟ್ಟಿರುವ ಒಡ್ಡುಗಳಿವು. ಈ ಮಾನವನಿರ್ಮಿತಿಗಳಿಗೆ ಜೀವವಿಲ್ಲ ಭಾವವಿಲ್ಲ , ನೈಸರ್ಗಿಕ ಅಸ್ತಿತ್ವವೇ ಇಲ್ಲ . ಇವು ನಮ್ಮ ಮೇಲೆ ಕೆಡುಕು ಅಥವ ಒಳಿತು ಬೀರಲಾರವು. ವಾಸ್ತವವಾಗಿ ಋಜುಜೀವನಕ್ಕೆ ಹೃದಯಾಂತರ್ಗ ಭಾವವೇ ಆಧಾರಶ್ರುತಿ, ಗಗನಾಂತರ್ಗತ ಅಭಾವವಲ್ಲ !

ಸಂತಪ್ತ ಜೀವನದಿ ನವೆವಾತ ನರಶತ್ರು ಸಂತೃಪ್ತ ಬದುಕು ಬಾಳ್ವವ ನಿಜಕು ಜನಮಿತ್ರ ಮಂಥರೆಯೊ ಸೀತೆಯೋ ಹೊರಗಿಲ್ಲವೆಂದು ತಿಳಿ

ಅಂತಃಕರಣದ ಪ್ರತಿಬಿಂಬಗಳು ಅಸೂನು ಮಂಥರೆ ಗೋತ್ರಜರ ಬುದ್ಧಿಮಾಂದ್ಯ ಕಂಡು ಬಸವಣ್ಣನವರು ಮರು ದ್ದಾರೆ :

ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ ರಾಶಿ ಕೂಡ ಋಣಸಂಬಂಧವುಂಟೆಂದು ಹೇಳಿರಯ್ಯಾ ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯಾ ನಾಳಿನದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ

ಕೂಡಲ ಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ ! ಪ್ರಾಮಾಣಿಕ ನಿಃಸ್ವಾರ್ಥ ಜೀವನದಲ್ಲಿ ಪ್ರಕಟವಾಗುವ ಮೌಲ್ಯಗಳ ಮೊತ್ತವ

ಅನುಬಂಧ ೧

ಕೂಡಲ ಸಂಗಮ ದೇವ ಎಂಬುದು ಇಂಗಿತ. ಆದ್ದರಿಂದ ಪಂಚಾಂಗದಲ್ಲಿ ದೈವಿಕ, ನಿಗೂಢ, ಪಾರಲೌಕಿಕ ಮುಂತಾದ ಅಸ್ಪಷ್ಟ ಮತ್ತು ಭಯಕಾರಕ ಸಂಗತಿಗಳೇನೂ ನಿಹಿತವಾಗಿರುವುದಿಲ್ಲ ಎಂದು ಧೈರ್ಯವಾಗಿರಬಹುದು. ಅಂತೆಯೇ ಇದರ ಪಠನ ಕಾರ ಅಥವಾ ವ್ಯಾಖ್ಯಾನಕಾರ ಯಾವುದೇ ಬಗೆಯ ಅತಿಮಾನುಷ ಶಕ್ತಿ ಅಥವಾ ಸಿದ್ದಿಗಳ ಧಾರಕನೂ ಆಗಿರುವುದಿಲ್ಲ . ವಾಸ್ತವವಾಗಿ ಇಂಥ ಎಲ್ಲ ಚಿಂತನೆ ನಂಬಿಕೆ ಗಳೂ ನಮ್ಮ ಫಲವಂತ ಕಲ್ಪನೆಯ ಶಿಶುಗಳೇ ವಿನಾ ನಿಸರ್ಗದತ್ತ ಗುಣಗಳಲ್ಲ . ಆಕಾಶದ ಸ್ಥಿರ ನಕ್ಷತ್ರಚಿತ್ರಾಂಕಿತ ಯವನಿಕೆಯ ಮೇಲೆಸೂರ್ಯ, ಚಂದ್ರ ಮತ್ತು ಐದು ಗ್ರಹಗಳ ಚಲನೆಯನ್ನು ದೀರ್ಘಕಾಲ ಚಿಕಿತ್ಸಕವಾಗಿ ವೀಕ್ಷಿಸಿದ ಮಾನವಮತಿ ` ತರ್ಕ ಮಾರ್ಗದಿಂದ ಕಂಡುಕೊಂಡ ಗಣಿತಸೂತ್ರಗಳೇ ಪಂಚಾಂಗದ ಪಂಚಾಂಗ ( ಅಸ್ತಿವಾರ). - ಖಗೋಳದಲ್ಲಿ ಮೂರು ಸ್ಥಿರವೃತ್ತಗಳು ಇರುವುದು ಆತನ ಲಕ್ಷ್ಯಕ್ಕೆ ಬಂದಿತು -ಸೂರ್ಯ, ಚಂದ್ರ ಮತ್ತು ಗ್ರಹಗಳ ನಿರಂತರ ಚಲನೆಗಳ ಫಲವಾದ ಕಾಲ್ಪನಿಕ ವೃತ್ತಗಳಿವು : ಇವುಗಳಿಗೆ ಭೌತ ಅಸ್ತಿತ್ವವಿಲ್ಲ : ವಿಷುವದೂತ್ರ, ಕ್ರಾಂತಿವೃತ್ತ ಮತ್ತು ಚಾಂದ್ರಕಕ್ಷೆ , (ನೋಡಿ ಚಿತ್ರ ೩ ಪುಟ೭೭: ಕ್ರಾಂತಿವೃತ್ತ ಮತ್ತು ಚಾಂದ್ರ ಕಕ್ಷೆ ; ಚಿತ್ರ ೧೯ ಪುಟ ೧೩ : ವಿಷುವದೂತ, ಕ್ರಾಂತಿವೃತ್ತ ) ಇವುಗಳ ಕೇಂದ್ರದಲ್ಲಿ ನಾವಿದ್ದೇವೆ. ವೃತ್ತತಲಗಳು ಪರಸ್ಪರ ಮಾಲಿಕೊಂಡಿವೆಯಾಗಿ ಇವು, ಜೊತೆಯಲ್ಲಿ ಪರಿಗಣಿಸಿ ದಾಗ, ಒಂದು ಜೊತೆ ವ್ಯಾಸೀಯ ವಿರುದ್ದ ಬಿಂದುಗಳಲ್ಲಿ , ಪರಸ್ಪರ ಛೇದಿಸುತ್ತವೆ. ಅಂದರೆ, ಈ ಛೇದನಬಿಂದುಗಳನ್ನು ಜೋಡಿಸುವ ಸರಳರೇಖೆಯ ಮಧ್ಯ ಬಿಂದುವೇ ನಮ್ಮ ನೆಲೆ ಎಂದರ್ಥ.

ವಿಷುವದ್ಯತ- ಕ್ರಾಂತಿವೃತ್ತಗಳ ಛೇದನಬಿಂದುಗಳಿಗೆ ವಿಷುವಗಳೆಂದು ಹೆಸರು. ಕ್ರಾಂತಿವೃತ್ತದ (ಇದು ಸೂರ್ಯನ ವಾರ್ಷಿಕ ಕಕ್ಷೆ ಎಂದು ನೆನಪಿರಲಿ) ನೇರ ಪಶ್ಚಿಮ - ಪೂರ್ವ ( ಚಿತ್ರದಲ್ಲಿ ಅಪ್ರದಕ್ಷಿಣ) ದಿಶೆಯಲ್ಲಿ ಸರಿಯುವಾಗ ವಿಷುವದ್ಭತ್ತವನ್ನು ಒಂದು ವಿಷುವದಲ್ಲಿ ದಕ್ಷಿಣದಿಂದ ಉತ್ತರಕ್ಕೂ ಇನ್ನೊಂದ ರಲ್ಲಿ ಉತ್ತರದಿಂದ ದಕ್ಷಿಣಕ್ಕೂ ಅಡ್ಡಹಾಯುತ್ತೇವೆ. ಮೊದಲನೆಯದು ವಸಂತ ವಿಷುವ, ಎರಡನೆಯದು ಶರದ್ವಿಷವ. - ಸೂರ್ಯನ ವಾರ್ಷಿಕ ಚಲನೆಯ ವೇಳೆ ದಿಶಾವ್ಯತ್ಯಯವಾಗುವುದು ಗೋಚರಕ್ಕೆ ಬರುತ್ತದೆ : ಉತ್ತರಾಭಿಮುಖಚಲನೆ ವಿಪರ್ಯಯಿಸಿ ದಕ್ಷಿಣಾಭಿಮುಖ ಚಲನೆ ಆರಂಭವಾಗುವುದೊಮ್ಮೆ , ತದ್ಯತಿರಿಕ್ತವಾಗುವುದಿನ್ನೊಮ್ಮೆ , ಈ ಚಲನ- ದಿಶಾ ವಿಪರ್ಯಯ ಸ್ಥಾನಗಳಿಗೆ ಅನುಕ್ರಮವಾಗಿ ಕರ್ಕಾಯನ ಮತ್ತು ಮಕರಾಯಣ

೪೦

ಜಾತಕ ಮತ್ತು ಭವಿಷ್ಯ

ಬಿಂದುಗಳೆಂದು ಹೆಸರು. - ಹೀಗೆ ಕ್ರಾಂತಿವೃತ್ತದ ಮೇಲೆ ೪ ಸ್ಥಿರಸ್ಥಾನಗಳು ನಿಗದಿ ಆಗುತ್ತವೆ : ಮಕ ಯಣ, ವಸಂತ ವಿಷುವ, ಕರ್ಕಾಯನ ಮತ್ತು ಶರದ್ವಿಷುವ, ನಮ್ಮ ಬೆಳಕಿ ಅಷ್ಟೇಕೆ ಸಾಕ್ಷಾತ್ ಅಸ್ತಿತ್ವದ, ಕುಂಭವಾದ ಸೂರ್ಯ ಮಕರಾಯಣದಿಂದ ಕಕ ! ಯನದವರೆಗೆ ಉತ್ತರಾಭಿಮುಖಿಯಾಗಿಯೂ ಕರ್ಕಾಯನದಿಂದ ಮುಂದಿ ಮಕರಾಯಣದವರೆಗೆ ದಕ್ಷಿಣಾಭಿಮುಖಿಯಾಗಿಯೂ ಚಲಿಸುತ್ತಿರುವುದು . ( ಚ ದಿಶ ಪಶ್ಚಿಮ -ಪೂರ್ವ, ಅಥವಾ ಚಿತ್ರದಲ್ಲಿ ಅಪ್ರದಕ್ಷಿಣ ಎಂದು ನೆನಪಿರಲಿ.) ಪ್ರಚ್ಛನ್ನ, ಸೂಕ್ಷ್ಮ ಆದರೆ ಖಚಿತ ಸರಿತಗಳ ಪ್ರಕಟಿತ ಪ್ರಭಾವಗಳನ್ನು ಮಾನ ತನ್ನ ಪರಿಸರದಲ್ಲಿ ಗುರುತಿಸಿದ : * ಮಕರಾಯಣದಂದು ಸೂರ್ಯನ ಉದಯಾಸ್ತ ಬಿಂದುಗಳು ಹಾರಿಜ

ದಕ್ಷಿಣತಮ ಬಿಂದುಗಳಲ್ಲಿರುವುವು. ಅಂದು ಹಗಲಿನ ಅವಧಿ ಕನಿಷ್ಟ , ಇರು ನದು ಗರಿಷ್ಟ , ಕಡು ಚಳಿಯ ಕೂರಿರಿತ ಬೇರೆ. ಎಲ್ಲ ರೀತಿಗಳಲ್ಲಿಯೂ ಹಿಂ * ತರುವಾಯದ ದಿನಗಳಲ್ಲಿ ಉದಯಾಸ್ತ ಬಿಂದುಗಳು ಉತ್ತರಾಭಿಮುಖಿಗಳ ಸರಿಯುವುವು. ಒಂದಿಗೇ ಹಗಲಿನ ಅವಧಿ ಏರುವುದು. ಆದರೆ ಇನ್ನೂ ಇರು ನದಕ್ಕೆ ಸಮವಾಗಿಲ್ಲ , ಮೀರುವುದಂತೂ ಸದ್ಯಕ್ಕಿಲ್ಲ . ಅಂತೂ ತಮಸೋವ ಜ್ಯೋತಿರ್ಗಮಯಾ ! ವಸಂತ ವಿಷುವದಲ್ಲೀಗ ಸೂರ್ಯನ ವಾಸ್ತವ್ಯ . ಹಗಲೂ ಇರುಳೂ ಸl ಅವಧಿಯವು. ಉದಯಾಸ್ತಗಳು ಕರಾರುವಾಕ್ಕಾಗಿ ಪೂರ್ವ ಮತ್ತು ಪಶ್ಚಿ ; ಬಿಂದುಗಳಲ್ಲಿ ಸಂಭವಿಸುತ್ತವೆ. ಇಂದು ಸೂರ್ಯನ ದೈನಂದಿನ ಪಥ ಸಾಕ್ಷಾ ವಿಷುವದ್ವತ್ತವೇ : ಚಲನದಿಶೆ ಪೂರ್ವ- ಪಶ್ಚಿಮ ( ಚಿತ್ರದಲ್ಲಿ ಪ್ರದಕ್ಷಿಣ ದಿ ನೋಡಿ ಚಿತ್ರ ೧೦ ಪುಟ ೪೧) ಸೂರ್ಯನ ಉತ್ತರಾಭಿಮುಖ ಪರಿವ್ರಜನ ಮುಂದುವರಿಯುತ್ತ ಉದಯಾಸ್ತಬಿಂದುಗಳು ಪೂರ್ವ ಪಶ್ಚಿಮ ಬಿಂದುಗಳ ಗಡಿದಾಟಿ ಉತ್ತರ ಸರಿಯುತ್ತವೆ. ಹಗಲು ಇರುಳನ್ನು ಸೋಲಿಸಿ ' ವಿಜೃಂಭಿಸಿದೆ. ವಸಂತ ಋ . ಸಂಭ್ರಮಿಸಿದೆ. ಸ್ವರ್ಗದೊಳುಂಟೇ ಈ ಸುಖ ಸಖ್ಯ , ನಿತ್ಯ ಸೌಭಾಗ್ಯ ! ಮುಂದೆ ಬರುವುದೇ ಕರ್ಕಾಯನ. ಅಂದು ಉದಯಾಸ್ತ ಬಿಂದುಗ ಹಾರಿಜದ ಉತ್ತರತಮಗಡಿಯಲ್ಲಿರುವುವು. ಹಗಲಿನ ಅವಧಿ ಗರಿಷ್ಟ , ಇರು ನದು ಕನಿಷ್ಠ , ಕಡುಬೇಸಗೆ. * ಅನಂತರದ ದಿವಸಗಳಲ್ಲಿ ಸೂರ್ಯ ದಕ್ಷಿಣಾಭಿಮುಖಿಯಾಗಿ ಸರಿಯುತ್ತ

ಅನುಬಂಧ ೧

>

ಚಿತ್ರ ೧ . Eಯಲ್ಲಿ ವೀಕ್ಷಕ, QR - ವಿಷುವದೂತ , ವಸಂತ ಮತ್ತು ಶರದ್ವಿಷುವಗಳಂದು QR ಸೂರ್ಯನ ( ೧ ) ದೈನಂದಿನ ಪಥ ( ಪ್ರದಕ್ಷಿಣ ದಿಶೆ), ಪೂ , ಪ, ಉ , ದ - ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಂಬ ನಾಲ್ಕು ಪ್ರಮುಖ ದಿಗ್ವಿಂದುಗಳು. P - ಧ್ರುವಬಿಂದು ( ಧ್ರುವನಕ್ಷತ್ರ ಇದರ ತೀರ ಸನಿಹದಲ್ಲಿದೆ). Z - ವೀಕ್ಷಕನ ಖಮಧ್ಯ ( ನೆತ್ತಿಬಿಂದು), ವಸಂತ ವಿಷುವದ ( ಮಾರ್ಚ್ ೨೧/ ೨೨ ) ಅನಂತರ ಸೂರ್ಯನ ದೈನಂದಿನ ಪಥ ಉತ್ತರಾಭಿಮುಖವಾಗಿ ಸರಿಯುತ್ತ ಜೂನ್ ೨೧ / ೨೨ರಂದು ಗರಿಷ್ಠ ದೂರ ತಲಪಿ ( ಕರ್ಕಾಯನ) ತರುವಾಯ ದಕ್ಷಿಣಾಭಿಮುಖವಾಗಿ ತೆವಳುತ್ತ ಮತ್ತೆ ಸೆಪ್ಟೆಂಬರ್ ೨೨ / ೨೩ರಂದು ( ಶರದ್ವಿಮವ) ವಿಮವದೂತ್ವದೊಂದಿಗೆ ಐಕ್ಯವಾಗು ತದೆ. ದಕ್ಷಿಣಾಭಿಮುಖ ಜಾರಿಕೆ ಮತ್ತೂ ಮುಂದುವರಿದು ಡಿಸೆಂಬರ್ ೨೧ / ೨೨ರಂದು ಗರಿಷ್ಠ ದೂರ ತಲಪಿ ( ಮಕರಾಯಣ) ಬಳಿಕ ಉತ್ತರಾಭಿಮುಖವಾಗಿ ಪಯಣಿಸುತ್ತ ಪುನಃ ಮಾರ್ಚ್ ೨೧/ ೨೨ರಂದು ವಿಷುವದೂತದೊಂದಿಗೆ ಐಕ್ಯವಾಗುತ್ತದೆ ( ವಸಂತವಿಷುವ). ಜೊತೆಯಲ್ಲೇ ಹಗಲಿನ ಅವಧಿ ಕುಗ್ಗುತ್ತ ಇರುಳಿನದು ಹಿಗ್ಗುತ್ತ ಈ ಪೈಪೋಟಿ ಮುಂದುವರಿದಿರುವುದು. ಅವು ಇನ್ನೂ ಸಮವಾಗಿಲ್ಲ -ಜ್ಯೋತಿರ್ಮಾ ತಮಸೋಗಮಯಾ ! ಶರದ್ವಿಷುವಕ್ಕೆ ಸೂರ್ಯ ತಲಪಿದಾಗ ಹಗಲು ಮತ್ತು ಇರುಳು ಸಮ ಅವಧಿ ಯವಾಗುತ್ತವೆ. ಉದಯಾಸ್ತ ಬಿಂದುಗಳು ಕರಾರುವಾಕ್ಕಾಗಿ ಪೂರ್ವ ಮತ್ತು ಪಶ್ಚಿಮ. ಇಂದು ಕೂಡಸೂರ್ಯನ ದೈನಂದಿನ ಪಥ ವಿಷುವದ್ಯವೇ. ಕೊನೆಯ ಅಂಕದಲ್ಲಿ ಕತ್ತಲೆಯ ಸಾಮ್ರಾಜ್ಯ ದಟ್ಟವಾಗುತ್ತ ಹೋಗುತ್ತದೆ. ಉದಯಾಸ್ತ ಬಿಂದುಗಳು ದಕ್ಷಿಣದ ಗಡಿಯತ್ತ ಸರಿಯುವುವು. ಮಕರಾಯಣ ಬಿಂದುವನ್ನು ಸೂರ್ಯ ಐದಿದಾಗ - ಪುನರಾಯಾನ್ ಮಹಾಕಪಿ ಒಂದು

೪೨

ಜಾತಕ ಮತ್ತು ಭವಿಷ್ಯ

ಪರಿಭ್ರಮಣೆ ಅಥವಾ ವರ್ಷ ಮುಗಿಯುತ್ತದೆ.

ಕ್ರಾಂತಿವೃತ್ತ , ಚಾಂದ್ರಕಕ್ಷೆ ಮತ್ತು ೫ ಗ್ರಹ- ಕಕ್ಷೆಗಳೆಲ್ಲವೂ ರಾಶಿಚಕ್ರ , ಸೀಮಿತವಾಗಿವೆ ಎಂದಿರುವುದು ಸರಿಯಷ್ಟೆ . ಭೂಮಿ ( E) ಇದರ ಕೇಂದ್ರದಲ್ಲಿದೆ ರಾಶಿಚಕ್ರವುವಿಷುವದ್ಭತ್ತದ ತಲಕ್ಕೆ ೨೩ .೫° ಮಾಲಿಕೊಂಡಿದೆ. ಇದರ ಅಗಲ ಒಂದು ಅಂಚಿನಿಂದ ಎದುರು ಅಂಚಿಗಿರುವ ಅಂತರ - ೧೮° . ಈ ' ಅಗಲ' ತ ನಮ್ಮಲ್ಲಿ ( E) ೧೮° ರಚಿಸುವುದು ಎಂದರ್ಥ. (ನೋಡಿ ಚಿತ್ರ ೯ ಪುಟ ೨೬ ಮತ ಚಿತ್ರ ೨೦, ಪುಟ ೨೬ .) * ಈಗ, ಚಂದ್ರನ ನಾಕ್ಷತ್ರಿಕ ಮಾಸದಲ್ಲಿ ೨೭.೩ ದಿವಸಗಳೂ ಚಾಂದ್ರವರ್ಷದಲ್ಲಿ ೧೨ ಚಾಂದ್ರಮಾಸಗಳೂ ಇವೆಯಾಗಿ ರಾಶಿಚಕ್ರವನ್ನು ೨೭ ನಾಕ್ಷತ್ರಿಕ ಖಂಡಗಳ ಗಿಯೂ ೧೨ ನಕ್ಷತ್ರರಾಶಿಗಳಾಗಿಯೂ ವಿಭಾಗಿಸಲು ಸಹಜ ಪ್ರೇರಣೆ ಒದಗುತ್ತದೆ ಇವು ಅಶ್ವಿನಿಯಿಂದ ರೇವತಿವರೆಗಿನ ೨೭ ನಿತ್ಯನಕ್ಷತ್ರಗಳು ಮತ್ತು ಮೇಷದಿಂi ಮೀನದವರೆಗಿನ ೧೨ ( ದ್ವಾದಶ) ನಕ್ಷತ್ರ ರಾಶಿಗಳು. ತತ್ಪಲವಾದ ಗಣಿತ ಗಣ ಗಳು ತೀರ ಸರಳ : ರಾಶಿ ವ್ಯಾಪ್ತಿ = ೩೬೦° + ೧೨ = ೩೦° ನಕ್ಷತ್ರವ್ಯಾಪ್ತಿ = ೩೬೦° + ೨೭ = ೧೩° ೨೦' ಗಣನ ಸೌಲಭ್ಯದ ಸಲುವಾಗಿ ಪ್ರತಿಯೊಂದು ನಕ್ಷತ್ರ ವ್ಯಾಪ್ತಿಯನ್ನೂ ೪ ಸ .

S

A

/

Ooo

ಚಿತ್ರ ೧೧, Eಯಲ್ಲಿ ವೀಕ್ಷಕ. ರಾಶಿಚಕ್ರದ ಒಂದು ಅಂಚಿನಲ್ಲಿ Aಯೂ ಇದರ ಎದುರ ಅಂಚಿನಲ್ಲಿ Bಯೂ ಇವೆ. ಕ್ರಾಂತಿವೃತ್ತವು ರಾಶಿ ಚಕ್ರವನ್ನು ಸಮದ್ವಿಭಾಗಿಸುತ್ತದೆ. ಚಿತ್ರದಲ್ಲಿ ಈ ಸಂಧಿಬಿಂದು.

ಅನುಬಂಧ ೧

೪೩

ಚಿತ್ರ ೧೨

ಭಾಗಗಳಾಗಿ ವಿಭಾಗಿಸಿದೆ. ಇವು ನಕ್ಷತ್ರ ಪಾದಗಳು. ಒಂದೊಂದು ಪಾದದ ವ್ಯಾಪ್ತಿ ೧೩° ೨೦' + ೪ = ೩° ೨೦'. ಆದ್ದರಿಂದ ಯಾವುದೇ ರಾಶಿಯಲ್ಲಿ ೯ ಪಾದಗಳಿರು ಇವೆ. ಈ ವಿವರಗಳನ್ನು ಪುಟ ೮ರಲ್ಲಿರುವ ಚಿತ್ರ ೨ರಲ್ಲಿ ಕಾಣಬಹುದು. - ಮುಂದಿನ ಪ್ರಶ್ನೆ : ರಾಶಿಚಕ್ರವನ್ನು ( ಅಥವಾ ಇದರಲ್ಲಿ ನೆಲಸಿರುವ ಯಾವುದೇ ವೃತ್ತವನ್ನು ) ಎಲ್ಲಿಂದ ತೊಡಗೋಣ?

ಮಟ್ಟಸ ಬಯಲು. ಸುತ್ತೋಟ ಓಡುವ ಸಲುವಾಗಿ ಹಲವಾರು ಏಕಕೇಂದ್ರೀಯ ವರ್ತುಲೀಯ ಜಾಡುಗಳನ್ನು ಗುರುತಿಸಿದೆ. ಆರಂಭಸ್ಥಾನವನ್ನು ಅನುಕೂಲಕ್ಕೆ ತಕ್ಕಂತೆ ಬೇಕಾದಲ್ಲಿ ನಿಗದಿಸಿದೆ : ಒಳ ಜಾಡಿನಲ್ಲಿ C ನಡು ಜಾಡಿನಲ್ಲಿ B ಮತ್ತು ಹೊರ ಜಾಡಿನಲ್ಲಿ A ಇಂಥ ಆರಂಭಸ್ಥಾನಗಳು. ಯಾವುದೇ ಸ್ಥಾನದಿಂದ ಹೊರಟು ಆ ಜಾಡಿನಲ್ಲಿ ಓಡಿ ಮತ್ತೆ ಅದೇ ಸ್ಥಾನಕ್ಕೆ ಮರಳಿದಾಗ ಒಂದು ಸುತ್ತು ಮುಗಿದಿರುವುದು .

ಪರಿಪೂರ್ಣ ವೃತ್ತದಲಿ ನಿಂದಡೆಯ ಆರಂಭ ತೆರಳಿದರೆ ಕೊನೆಯರಸಿ ಮುಂದುಮುಂದಕೆ ಮತ್ತೆ ಮರಳುವುದು ಖರೆ ಹೊರಟ ನೆಲೆಗೆ, ಮುಗಿಯದು ಗಾಣ

ದುರುಳು, ನಡೆವುದೆ ನಿನ್ನ ಹವಣು ಕಾಣ್ ಅತ್ರಿಸೂನು ಸೂರ್ಯ ಮತ್ತು ಚಂದ್ರ ಹೀಗೆ ಬಾನಂಗಣದ ಬಿತ್ತರದಲ್ಲಿ ಪರಸ್ಪರ ಛೇದಿ ಸುವ ಜಾಡುಗಳಲ್ಲಿ ( ಕ್ರಾಂತಿವೃತ್ತ ಮತ್ತು ಚಾಂದ್ರಕಕ್ಷೆ ) ನಿರ್ದಿಷ್ಟ ವೇಗದಿಂದ ಪಶ್ಚಿಮ-ಪೂರ್ವ ದಿಶೆಯಲ್ಲಿ ಓಡುತ್ತಿರುವ ಆಟಗಾರರು, ಓಟಗಾರರು ಕೂಡ

ಜಾತಕ ಮತ್ತು ಭವಿಷ್ಯ

ನೋಟಗಾರರು ನಾವು !

ನಾಟಕವ ನೋಡುಬ್ರಹ್ಮಾಂಡ ರಂಗಸ್ಥಲದಿ ಕೋಟಿನಟರಾಂತಿಹರು ಚಿತ್ರಪಾತ್ರಗಳ ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ

ನೋಟಕರು ಮಾಟಕರೆ ಮಂಕುತಿಮ್ಮ ಪ್ರಾಚೀನ ಖಗೋಳವಿಜ್ಞಾನಿಗಳು ಗಗನವೀಕ್ಷಣೆ- ಪರಿಸರವ್ಯತ್ಯಯ ಎರಡನೂ ತಳಕು ಹಾಕಿ ಆರಂಭಸ್ಥಾನದ ನಿರ್ಣಯ ಮಾಡಿದರು. ಈ ಗೌರವ ಅಂದು ಕೃತಿಕ ನಕ್ಷತ್ರಕ್ಕೆ ಸಂದಿತು. ಸ್ವತಃ ಶ್ರೇಷ್ಠ ಖಗೋಳ- ಭೌತವಿಜ್ಞಾನಿಗಳೂ ಆಧುನಿ ಕನ್ನಡದಲ್ಲಿ ವಿಜ್ಞಾನವಾಹ್ಮಯನಿರ್ಮಾಪಕರೂ ಆಗಿದ್ದ ಪ್ರೊ . ಆರ್ . ಎಲ್ ನರಸಿಂಹಯ್ಯನವರು ( ೧೯೦೦-೬೯ ) ನಕ್ಷತ್ರದರ್ಶನದಲ್ಲಿ ( ದ್ವಿತೀಯ ಮುದ್ರಣ ಕನ್ನಡ ಪುಸ್ತಕ ಪ್ರಾಧಿಕಾರ, ೧೯೯೬ ) ಬರೆದಿದ್ದಾರೆ ( ಪುಟಗಳು೧೨, ೧೩):' ಬಹ ಪುರಾತನ ಕಾಲದಿಂದಲೂ , ಎಲ್ಲ ಜನಾಂಗಗಳಲ್ಲಿಯೂ ಕೃತ್ತಿಕೆಯು ಹೆಸರು ಪಡೆದ ರಾಶಿಯಾಗಿದೆ. ವೇದಾಂಗ ಜ್ಯೋತಿಷದ ಕಾಲದಲ್ಲಿ , ಅಂದರೆ ಕ್ರಿ ಪೂ ೧೪- ೧ ನೆಯ ಶತಮಾನಗಳಲ್ಲಿ , ನಕ್ಷತ್ರಗಳನ್ನು ಕೃತ್ತಿಕೆಯಿಂದ ಮೊದಲು ಮಾಡಿ ಎಣಿಸ ತಿದ್ದರು, ಮತ್ತು ಆಗಿನ ದೇವತೆಗಳಲ್ಲೆಲ್ಲ ಪ್ರಧಾನವಾಗಿದ್ದ ಅಗ್ನಿದೇವನ ಕೃತ್ತಿಕೆಯ ಅಭಿಮಾನಿದೇವತೆ. ಸೂರ್ಯನು ಕೃತ್ತಿಕಾ ನಕ್ಷತ್ರದಲ್ಲಿದ್ದಾಗ ವಸಂ ಕಾಲ ಆರಂಭವಾಗುತ್ತಿದ್ದುದರಿಂದ ಕೃತ್ತಿಕಾ ನಕ್ಷತ್ರಕ್ಕೆ ಅಷ್ಟೊಂದು ಪ್ರಾಶಸ್ತ ಬಂದಿತ್ತು . ” * ಸೂರ್ಯನ ನೆಲೆ, ವಸಂತಕಾಲಾರಂಭ, ಕೃತ್ತಿಕಾನಕ್ಷತ್ರಪ್ರಾಶಸ್ಯ - ಈ ಪ ಕಲ್ಪನಾತ್ಮಕ ಸಂಬಂಧ ಅತಿ ಗಮನಾರ್ಹ. ವಸಂತಕಾಲಾರಂಭ ಮಾನವನಿ ಸಂತೋಷದಾಯಕ ಋತುವಿನ ಆಗಮನಸೂಚಕ. ಸೂರ್ಯನ ನೆಲೆ - ಇದ ನಿರಂತರವಾಗಿ ವ್ಯತ್ಯಯಿಸುತ್ತಿದ್ದರೂ - ವಸಂತ ಕಾಲಾರಂಭದಲ್ಲಿ ಈ ನೆ! ವಿಶೇಷ ಪ್ರಾಶಸ್ಯ ( ಮಾನವನ ದೃಷ್ಟಿಯಿಂದ) ಪಡೆಯುತ್ತದೆ. ಕೃತ್ತಿಕಾ ನಕ್ಷತ್ರ ವಸಂತ ಕಾಲಾರಂಭದಂದು ಸೂರ್ಯ ಈ ನಕ್ಷತ್ರದಲ್ಲಿ ನೆಲಸಿದ್ದುದು ಕೇವ ಯೋಗಾಯೋಗ, ನಿರಂತರ ಗತಿಶೀಲವಾದ ಗಗನದಲ್ಲಿ ಈ ಯೋಗ ( ಅಂದ ಸೂರ್ಯನ ನೆಲೆಯೂ ವಸಂತಕಾಲಾರಂಭವೂ ಒಂದಾಗುವ ಸನ್ನಿವೇಶ) ಬೇ । ಯಾವುದೇ ನಕ್ಷತ್ರಕ್ಕೆ ಒದಗುವುದು ಅಸಾಧ್ಯವಲ್ಲ . ಉದಾಹರಣೆಗೆ, ಧ್ರುವನಕ್ಷತ್ರ ಅಚಲ ಎಂಬ ಅಂತಸ್ತು ಪ್ರಾಪ್ತವಾಗಿರುವುದು ಖುದ್ದು ಆ ನಕ್ಷತ್ರದ ಯಾವುದ ಯೋಗ್ಯತೆಯಿಂದಲ್ಲ , ಭೂಮಿಯ ಆವರ್ತನಾಕ್ಷ ಆ ನಕ್ಷತ್ರಾಭಿಮುಖಿಯಾಗಿ

ಅನುಬಂಧ ೧

೪೫

ಎಂಬ ಕಾರಣದಿಂದ, ಆವರ್ತನಾಕ್ಷದ ದಿಶೆ ಬದಲಾದಾಗ ಆಗುತ್ತಿದೆ ಎಂಬುದು ಸಾಬೀತಾಗಿದೆ ಧ್ರುವನಕ್ಷತ್ರ ತನ್ನ ಅಚಲ ಅಂತಸ್ತನ್ನು ಕಳೆದುಕೊಳ್ಳುತ್ತದೆ ! ಎಲ್ಲ ಸುಚಂಚಲ !

ವಾಲ್ಮೀಕಿ ರಾಮಾಯಣದಲ್ಲಿ ದಶರಥ ತನಗೆ ವೃದ್ದಾಪ್ಯವಡರಿರುವುದರಿಂದ ಒಡನೆ ಶ್ರೀರಾಮನಿಗೆ ಯೌವರಾಜ್ಯಪಟ್ಟಾಭಿಷೇಕ ನೆರವೇರಿಸಬೇಕೆಂದು ಸಂಕಲ್ಪಿಸಿ ವಸಿಷ್ಠ ವಾಮದೇವಾದಿ ಋಷಿಪುಂಗವಶೋಭಿತಸಭೆಗೆ ಹೇಳುತ್ತಾನೆ :

ಚೈತ್ರ: ಶ್ರೀಮಾನಯಂ ಮಾಸಃ ಪುಣ್ಯಃ ಪುಷ್ಟಿತಕಾನನಃ | ಯೌವರಾಜ್ಯಾಯ ರಾಮಸ್ಯ ಸರ್ವಮೇವೋಪಕಲ್ಪತಾಮ್

- ಅಯೋಧ್ಯಾಕಾಂಡ, ಸರ್ಗಃ , ಶ್ಲೋಕ೪ ಕನ್ನಡ ವಾಲ್ಮೀಕಿ ರಾಮಾಯಣದಲ್ಲಿ ( ಡಿ ವಿ ಕೆ ಮೂರ್ತಿ, ೧೯೭೧) ಡಾ ಸಿ.ಎನ್. ಶ್ರೀನಿವಾಸ ಅಯ್ಯಂಗಾರ್ಯರು ( ೧೯೦೧- ೭೨) ಬರೆದಿರುವ ಸಾರಾಂಶ : “ಸಂಪತ್ಕರವಾದ ಈ ಚೈತ್ರಮಾಸವು ಪುಣ್ಯಪ್ರದವಾದುದು. ರಾಮನಿಗೆ ಯೌವ ರಾಜ್ಯಪಟ್ಟಾಭಿಷೇಕವನ್ನೆಸಗಲೋಸ್ಕರ ಎಲ್ಲವೂ ಸಿದ್ಧವಾಗಲಿ ” ಎಂದನು ದಶರಥ.

ಇದರ ಅರ್ಥ : ರಾಮಾಯಣಕಾಲದಲ್ಲಿ ಸೂರ್ಯ ಕೃತ್ತಿಕೆಯನ್ನು ಪ್ರವೇಶಿಸಿ ದಾಗ ನೂತನ ವರ್ಷ ಆರಂಭವಾಗುತ್ತಿತ್ತು . ಅಂದು ಹಗಲೂ ಇರುಳೂ ಸಮ ಅವಧಿಯವು ಮತ್ತು ಅಂದಿನಿಂದ ಮುಂದಕ್ಕೆ ಹಗಲಿನ ಅವಧಿ ಇರುಳಿನದಕ್ಕಿಂತ ಹೆಚ್ಚು ಹೆಚ್ಚು ಆಗುತ್ತೆ ಮುಂದುವರಿಯುತ್ತಿತ್ತು . ಎಂದೇ ಸಕಲ ಮಂಗಳ ಸಮಾರಂಭಗಳಿಗೂ ಸೂರ್ಯ-ಕೃತ್ತಿಕಾ ಐಕ್ಯ ದಿನ ಅತ್ಯಂತ ಪ್ರಶಸ್ತವೆಂದು ಜನ ಭಾವಿಸಿದ್ದರು. ಅದು ವಸಂತ ವಿಷುವ ದಿನ, ಸೂರ್ಯ ಏಕಕಾಲದಲ್ಲಿ ಕ್ರಾಂತಿವೃತ್ತ ವಿಷುವದೂತ್ರಗಳ ಮೇಲೆ ನೆಲಸಿರುವ ದಿನ, ಆದ್ದರಿಂದ ಅಂದೇ ನೂತನ ವರ್ಷಾರಂಭ ಪುಣ್ಯಕಾಲ , * ಇದು ಕ್ರಿಸ್ತಪೂರ್ವ ೧೦೦೦ದಿಂದ ೧೫೦೦ ವರ್ಷಗಳಷ್ಟು ಪ್ರಾಚೀನ ಕಾಲ ದಲ್ಲಿಯ ಪರಿಸ್ಥಿತಿ ಎಂದು ಆಧುನಿಕ ಖಗೋಳವೈಜ್ಞಾನಿಕ ಗಣನೆಗಳಿಂದ ತಿಳಿದು ಬರುತ್ತದೆ. * ಭಾರತೀಯ ಖಗೋಳವಿಜ್ಞಾನದ ಇತಿಹಾಸದಲ್ಲಿ ವರಾಹಮಿಹಿರನ (ಕ್ರಿಸ್ತ ಶಕ ೬ನೆಯ ಶತಮಾನ) ಹೆಸರು ಬಹಳ ಪ್ರಸಿದ್ಧವಾದುದು. ಈತ ಹೆಸರಿಸಿರುವ ಹಲ ವಾರು ಪ್ರಾಚೀನ ಉದ್ಧಂಥಗಳ ಪೈಕಿ ಈಗ ಉಪಲಬ್ದವಾಗಿರುವುದು ಸೂರ್ಯ ಸಿದ್ದಾಂತವೊಂದೇ . ಇದರ ರಚನಕಾಲ ಕ್ರಿಶಸು ೨೮೦ರ ಈಚೆಗೆ ಎಂದು ಅಂದಾಜು. ಭಾರತ ಸರ್ಕಾರ ಪ್ರಕಟಿಸಿದ ಪಂಚಾಂಗ ಪರಿಷ್ಕರಣ ಸಮಿತಿಯವರದಿ

ಜಾತಕ ಮತ್ತು ಭವಿಷ್ಯ

(ಿ ಆರ್‌ . ಎಲ್. ನರಸಿಂಹಯ್ಯನವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ೧೯೭೩) ಎಂಬ ಅಮೂಲ್ಯ ದಾಖಲೆಯಿಂದ ಮುಂದಿನ ಕೆಲವು ಅಂಶಗಳನ ಉಲ್ಲೇಖಿಸಿದೆ.

ಕ್ರಿ ಶ ೫೦೦ರ ತರುವಾಯ ಭಾರತೀಯ ಖಗೋಳಜ್ಞರು ಖಗೋಳವೈಜ್ಞಾನಿಕ ಗ್ರಂಥಗ ಕರ್ತೃತ್ವವನ್ನು ದೇವತೆಗಳಿಗಾಗಲಿ ಪೌರಾಣಿಕ ಋಷಿಗಳಿಗಾಗಲಿ ಆರೋಪಿಸುವ ನಟನೆಯನ ಕೈಬಿಟ್ಟರು. ಅಂದಿನಿಂದ ಅವರು ಬರೆದ ಗ್ರಂಥಗಳ ಕರ್ತೃಗಳು ತಾವೇ ಎಂದು ಹೇಳಿಕೊ ಲಾರಂಭಿಸಿದರು . . .

ಸೂರ್ಯಸಿದ್ಧಾಂತಾನುಸಾರವಾದ ಸೌರಪಂಚಾಂಗ XII ಅಧ್ಯಾಯದ ಮೊದಲ ಕೆಲವು ಶ್ಲೋಕಗಳು ಹಿಂದೂ ಕಲ್ಪನೆಯ ಪ್ರಕಾರ, ಜಗತ್ತಿ ಸೃಷ್ಟಿಯನ್ನೂ ಮೂಲಧಾತುಗಳ ಸೃಷ್ಟಿಯನ್ನೂ , ಹಾಗೆಯೇ ಸೂರ್ಯ ಚಂದ್ರ ಗ್ರಹಗಳನ್ನು ವಿವರಿಸುತ್ತವೆ. ವಿಶ್ವವನ್ನು ಭೂಕೇಂದ್ರೀಯವೆಂದು ಪರಿಗಣಿಸಿ, ಗ್ರಹಗಳನ್ನು ಭೂಮಿಯಿಂ: ಅವಿರುವ ದೂರಗಳ ಕ್ಷೀಣ ಕ್ರಮದಲ್ಲಿ ಕೊಟ್ಟಿದೆ (ಶ್ಲೋಕ೩೧ ನೋಡಿ).

ಈ ಕ್ರಮ : ಶನಿ, ಗುರು, ಅಂಗಾರಕ, ಸೂರ್ಯ , ಶುಕ್ರ , ಬುಧ ಮತ್ತು ಚಂದ್ರ , ಸ್ಟಿ ತಾರೆಗಳ ಸ್ಥಾನ ಶನಿಗ್ರಹ ಪಥದ ಆಚೆಯೆಂದು ತಿಳಿಸಿದ . . . - ಕ್ರಾಂತಿವೃತ್ತದುದ್ದಕ್ಕೂ ಸೂರ್ಯನ ವಾರ್ಷಿಕ ಗತಿ ವಾಚಕರಿಗೆ ಚೆನ್ನಾಗಿ ಪರಿಚಿತವಾಗಿ ಯೆಂದು ಇಟ್ಟುಕೊಂಡು, ಆಮೇಲೆಸೂರ್ಯಸಿದ್ಧಾಂತವು ರಾಶಿಚಕ್ರದ ದ್ವಾದಶರಾಶಿಗಳನ ವಿವರಿಸಲು ತೊಡಗುತ್ತದೆ.

ಸೂರ್ಯಸಿದ್ದಾಂತ XII ೪೫ ಮೇಷಾದೌ ದೇವಭಾಗಷ್ಟೇ ದೇವಾನಾಂ ಯಾತಿ ದಶರ್ನಂ

ಅಸುರಾಣಾಂ ತುಲಾದೌತು ಸೂರ್ಯಸ್ತದ್ದಾಗ ಸಂಚರಃ ಅನುವಾದ : ಮೇಷಾದಿ ಬಿಂದುವಿನಿಂದ ಆರಂಭವಾಗುವ ಪ್ರದಕ್ಷಿಣಾರ್ಧದಲ್ಲಿ ಸೂರ್ಯನು ದೇವತೆಗಳ ಗೋಳಾರ್ಧದಲ್ಲಿರುವುದರಿಂದ, ಅವನು ದೇವತೆಗಳಿಗೆ ಕಾಣಿ ತಾನೆ. ಆದರೆ ತುಲಾದಿ ಬಿಂದುವಿನಿಂದ ಆರಂಭವಾಗುವ ಪ್ರದಕ್ಷಿಣಾರ್ಧದಲ್ಲಿ ಆತ ಅಸುರರ ಗೋಳಾರ್ಧದಲ್ಲಿರುವ ಅಸುರರಿಗೆ ಮಾತ್ರ ಕಾಣಿಸುತ್ತಾನೆ. - ಇದರ ಅರ್ಥ : ಸೂರ್ಯನು ಮೇಷಾದಿ ಬಿಂದುವನ್ನು ತಲಪಿದಾಗ, ಉತ್ತರ ಧ್ರುವದ ರುವರೆಂದು ನಾವು ಕಲ್ಪಿಸಿಕೊಂಡಿರುವ ದೇವತೆಗಳು ಸೂರ್ಯೋದಯವನ್ನು ನೋಡುತ್ತಾ ಅವರಿಗೆ ಆರು ತಿಂಗಳ ಕಾಲ ಸೂರ್ಯ ದಿಗಂತದ ಮೇಲಿರುತ್ತಾನೆ. ಈ ಆರು ತಿಂಗಳುಗ ದ್ದಕ್ಕೂ , ದಕ್ಷಿಣಧ್ರುವದಲ್ಲಿ ವಾಸಿಸುತ್ತಾರೆಂದು ನಾವು ಕಲ್ಪಿಸಿಕೊಂಡಿರುವ ಅಸುರ ಕತ್ತಲಲ್ಲಿ ಇರುತ್ತಾರೆ. ಇದಕ್ಕೆ ಪ್ರತಿಯಾಗಿ ಸೂರ್ಯನು ತುಲಾದಿ ಬಿಂದುವನ್ನು ಸೇರಿದೆ

ಅನುಬಂಧ ೧

೪೭

ದೇವತೆಗಳ ಶತ್ರುಗಳಾದ ಅಸುರರಿಗೆಸೂರ್ಯೋದಯವಾಗಿ ಆರು ತಿಂಗಳ ಕಾಲಸೂರ್ಯನು ದಿಗಂತದ ಮೇಲೆಯೇ ಕಾಣಿಸುತ್ತಾನೆ.

ಆದುದರಿಂದ, ಸೂರ್ಯಸಿದ್ಧಾಂತಾನುಸಾರವಾಗಿ ಮೇಷಾದಿ ಬಿಂದುವು [ ವಸಂತ ] ವಿಷು ವಬ್ಬಿಂದುವಿನೊಂದಿಗೆ ಏಕಸ್ಥವಾಗಿದೆ. ಅದೇ ರೀತಿಯಲ್ಲಿ ತುಲಾದಿಬಿಂದುವು ಶರದ್ವಿಷು ವದ್ರಿಂದುವಿನೊಂದಿಗೆ ಏಕಸ್ಥವಾಗಿದೆ.

ಸೂರ್ಯಸಿದ್ಧಾಂತ XIV , ೯ ಮತ್ತು ೧೦. ಭಾನೋರ್ಮಕರ ಸಂಕ್ರಾಂತೇ ಷಣ್ಮಾಸಾ ಉತ್ತರಾಯಣಮ್ ಕರ್ಕಾದೇಸ್ತು ತಥೈವ ಸ್ಯಾತ್ ಷಣ್ಮಾಸಾ ದಕ್ಷಿಣಾಯನಮ್ || ೯ || ದ್ವಿರಾಶಿನಾಥಾ ಋತವಸ್ತತೋsಪಿ ಶಿಶಿರಾದಯಃ

ಮೇಷಾದಯೋ ದ್ವಾದಶೈತೇ ಮಾಸಾರೇವ ವತ್ಸರಃ || ೧೦ || ಅನುವಾದ : ಸೂರ್ಯನು ಮಕರರಾಶಿಯಲ್ಲಿ ಕಾಲಿಟ್ಟ ಕ್ಷಣದಿಂದ ಆರು ತಿಂಗಳು ಅವನ ಗಮನ ಉತ್ತರಾಭಿಮುಖವಾಗಿರುತ್ತದೆ (ಉತ್ತರಾಯಣ). ಇದೇ ರೀತಿಯಲ್ಲಿ ಅವನು ಕರ್ಕಟ ರಾಶಿಯಲ್ಲಿ ಕಾಲಿಟ್ಟ ಕ್ಷಣದಿಂದ ಆರು ತಿಂಗಳ ಕಾಲ ಅವನ ಗಮನ ದಕ್ಷಿಣಾಭಿಮುಖ ವಾಗಿರುತ್ತದೆ ( ದಕ್ಷಿಣಾಯನ).

ಅಲ್ಲಿಂದಲೇ ಶಿಶಿರ ಋತುವೂ ಇತರ ಋತುಗಳೂ ಎಣಿಕೆಯಾಗುತ್ತವೆ. ಒಂದೊಂದು ಋತುವೂ ಎರಡು ರಾಶಿಗಳ ಗಮನದಷ್ಟು ಕಾಲ ನಡೆಯುತ್ತದೆ. ಮೇಷದಿಂದ ಆರಂಭವಾದ ಈ ಹನ್ನೆರಡು ತಿಂಗಳುಗಳು ; ವರ್ಷವು ಇವುಗಳಿಂದ ಕೂಡಿ ಆಗಿದೆ.

ಸೂರ್ಯಸಿದ್ಧಾಂತ ದ ಸಂಗ್ರಹಕಾರರಿಗೆ ರಾಶಿಚಕ್ರದ ಆದಿಬಿಂದುವು), ಕ್ರಾಂತಿ ವೃತ್ತ ಮತ್ತು ವಿಷವದೂತಗಳ ಸಂಧಿಬಿಂದು, ಮತ್ತು ರಾಶಿಚಕ್ರದ ಒಂದೊಂದು ರಾಶಿಯು ಕ್ರಾಂತಿವೃತ್ತದ ೩೦°ನ್ನು ವ್ಯಾಪಿಸುತ್ತದೆ, ಎಂಬ ಸಂಗತಿಗಳು ತಿಳಿದಿದ್ದು ಎಂಬುದನ್ನು ಈ ಶ್ಲೋಕಗಳು ಎಳ್ಳಷ್ಟೂ ಸಂದೇಹವಿಲ್ಲದೆ ಸಮರ್ಥಿಸುತ್ತವೆ . . . ಸೂರ್ಯಸಿದ್ಧಾಂತದ ಸಂಗ್ರಹಕಾರರು ವಿಷುವದ್ರಿಂದುಗಳ ಆಂದೋಲನವಾದವನ್ನು ತಿಳಿದಿರಲಿಲ್ಲವೆಂಬುದನ್ನು ಇಲ್ಲಿ ಸೂಚಿಸಬಹುದು . . . ಅವರ ಕಾಲದ ಖಗೋಳೀಯ ಜ್ಞಾನವನ್ನು ಅವರು ವಿವೇಚನೆ ಯಿಂದ ಅರಗಿಸಿಕೊಂಡು ಮೇಷಾದಿಬಿಂದುವೆಂದರೆ ವಿಷುವದ್ವತ್- ಕ್ರಾಂತಿವೃತ್ತಗಳ ಸಂಧಿಬಿಂದುವೆಂಬ ನಿರ್ಣಯಕ್ಕೆ ಬಂದು . . . ಒಂದು ರೀತಿಯ ಸಾಕ್ಷಾದೀಕ್ಷಣೆಗಳಿಂದ ಅದನ್ನು ಆಗಾಗ ನಿರ್ಧರಿಸಲು ಪ್ರಯತ್ನಿಸಿದರು. ಈ ವೀಕ್ಷಣೆಗಳು ಮೊದಲು ನಡೆದುದು ಕ್ರಿಶ ಸು ೨೮೦ರಲ್ಲಿ ಎಂದು ತೋರುತ್ತದೆ.

ಮೇಲಿನ ವಿವೇಚನೆಯ ಸಾರಾಂಶ : * ವಸಂತವಿಷವವೇ ನೂತನ ವರ್ಷದ ಮೊದಲ ದಿನವಾಗತಕ್ಕದ್ದು ( ಯುಗಾದಿ).

೪೮

ಜಾತಕ ಮತ್ತು ಭವಿಷ್ಯ

* ಅಂದು ಹಗಲು ಇರುಳು ಸಮ ಅವಧಿಯವು ಮತ್ತು ಸೂರ್ಯ ಪೂವ

ಬಿಂದುವಿನಲ್ಲಿ ಮೂಡಿ ಪಶ್ಚಿಮ ಬಿಂದುವಿನಲ್ಲಿ ಕಂತುತ್ತದೆ, ಮತ್ತು ತರ ವಾಯದ ದಿವಸಗಳಲ್ಲಿ ಈ ಉದಯಾಸ್ತ ಬಿಂದುಗಳು ಉತ್ತರಕ್ಕೆ ಸರಿಯ ತವೆ, ಜೊತೆಯಲ್ಲೇ ಹಗಲಿನ ಅವಧಿ ಇರುಳಿನದಕ್ಕಿಂತ ಜಾಸ್ತಿ ಆಗುತ್ತಿರುತ್ತ

ಎಂಬ ಸಂಗತಿಗಳನ್ನು ಗಗನ ವೀಕ್ಷಣೆಯಿಂದ ಅರಿಯಬಹುದು. * ವಿಷುವದ್ರಿಂದುಗಳ ವಕ್ರಚಲನೆ ( ಪ್ರತಿಗಮನ) ಅವರ ಅರಿವಿಗೆ ಬಂದಿರಲಿಲ್ಲ

ವಿಷುವದ್ರಿಂದುಗಳ ವಕ್ರಚಲನೆ ಎಂದರೇನು ? ಆಕಾಶದಲ್ಲಿಯ ೭ ಚರಕಾರ ಗಳು ನಮ್ಮ ಸುತ್ತ ಪರಿಭ್ರಮಿಸುತ್ತಿರುವಂತೆ ಭಾಸವಾಗುವುದು ಸರಿಯಷ್ಟೆ ಪರಿಭ್ರಮಣದಿಶೆ ಪಶ್ಚಿಮ - ಪೂರ್ವ. ಎರಡು ಅನುಕ್ರಮ ರಾತ್ರಿಗಳಲ್ಲಿ ಒಂದೆ ಹೊತ್ತಿಗೆ ಚಂದ್ರನ ನೆಲೆಗಳನ್ನು ಗಮನಿಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ ಎಂದೇ ಈ ಕಾಯಗಳ ಸಹಜ ಚಲನೆಗೆ ( ಪಶ್ಚಿಮ- ಪೂರ್ವ) ಮಾರ್ಗಚಲ ಎಂದೂ ವಿರುದ್ಧ ದಿಶಾಚಲನೆಗೆ ( ಪೂರ್ವ- ಪಶ್ಚಿಮ) ವಕ್ರಚಲನೆಯೆಂದು (ಅಥವಾ ಪ್ರತಿಗಮನ) ಹೆಸರು. ಸೂರ್ಯಚಂದ್ರರಿಗೆ ವಕ್ರಚಲನೆ ಇಲ್ಲ . ಗ್ರಹಗಳ ವಕ್ರಚಲನೆಯನ್ನೂ ಪ್ರದರ್ಶಿಸುವುದುಂಟು. - ಖಗೋಳದಲ್ಲಿ ವಿಷುವದೂತ ಮತ್ತು ಕ್ರಾಂತಿವೃತ್ತಗಳ ಸಾಪೇಕ್ಷ ವಿನ್ಯಾ ಗಳನ್ನು ಕಲ್ಪಿಸಿಕೊಳ್ಳಬೇಕು ( ಚಿತ್ರ ೧೯ ಪುಟ ೭೩). ಇವು ಸ್ಥಿರವೃತ್ತಗಳು, ಇವುಗ ಛೇದನಬಿಂದುಗಳು (ವಿಷುವದ್ರಿಂದುಗಳು) ಸದಾ ಅಚಲ, ಆದ್ದರಿಂದ ಇd ಖಗೋಳದ ಗಣಿತಗಣನೆಗಳಿಗೆ, ಮುಖ್ಯವಾಗಿ ೭ ಚರಕಾಯಗಳ ಚಲನೆ ಮತ್ತು ವಿನ್ಯಾಸಗಳ ಮುನ್ನೋಟ ಪಡೆಯಲು ನೆರವಾಗುವ ಲೆಕ್ಕಾಚಾರಗಳಿಗೆ, ಸ್ಥಿ ಬುನಾದಿ ಒದಗಿಸುತ್ತವೆ ಎಂದು ಪ್ರಶ್ನಾತೀತವಾಗಿ ನಂಬಿ ಪಂಚಾಂಗರಚನೆಂ ಸೂಕ್ಷ್ಮಗಣಿತ ಮೈದಳೆದು ಪ್ರವರ್ಧಿಸಿತು. . ಒಂದು ನಿದರ್ಶನ. ನೆಲದ ಮೇಲೆ ಊರುಗಳ ನೆಲೆ ಬದಲಾಗುವುದೇ ( ಏಕೆಂದರೆ ಭೂಗೋಳಹಿಗ್ಗುವುದಿಲ್ಲ , ಕುಗ್ಗುವುದೂ ಇಲ್ಲ) ಎಂಬ ಅನುಭವಜ ನಿಯಮವನ್ನು ಆಧರಿಸಿ ರಸ್ತೆ ಕಟ್ಟುತ್ತೇವೆ, ರೇಲ್ವೇ ಹಳಿ ಹಾಸುತ್ತೇವೆ, ಇತ್ಯಾ ! ಈ ಅಂಗೀಕೃತ ಆಧಾರಭಾವನೆಯೇ ಕುಸಿದರೆ ನಮ್ಮ ಲೆಕ್ಕಾಚಾರದ ಗತಿ ಏನು “ ಮುನಿದು ಪೊಡವಿಯು ನುಂಗುವೊಡೆ ಪಿಡಿದ ಕೊಡೆ ಕಾವುದೇ ?” ಕಡಲಿನ ಹಾದಿ ಕಡಿದು ನಡೆಯುವುದು ಕೈಗೂಡೀತೇ ?

ಶತಮಾನಗಳು ಉರುಳಿದುವು. ವಿಷುವದ್ರಿಂದುಗಳ ಅಚರತ್ನ ಎಂಬ ಈ ಕಲ್ಪನೆ ಅಸಾಧು ಎಂಬ ಸ್ಪಷ್ಟ ಚಿತ್ರ ಖಗೋಳವೀಕ್ಷಕರ ಅರಿವಿಗೆ ಬಂದಿತ

ಅನುಬಂಧ ೧

ಖುದ್ದು ಬುನಾದಿಯೇ ಅಲುಗಾಡಿದಂಥ ಕಂಪನಾನುಭವ. ಶಿಶುನಾಳ ಶರೀಫರು ಉದ್ಧರಿಸಿರುವಂತೆ

ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ ಈ ಅ

ಸ್ಟಿರದ ಶರೀರವ ನಂಬಲಿ ಬ್ಯಾಡಾ ಅಂದ ಮೇಲೆ ವಿಷುವದ್ಬಂದು-ಅಚರತ್ವ ಎಂಬ ಪಂಚಾಂಗದ ( ಅಸ್ತಿವಾರ) ಮೇಲೆ ಕಟ್ಟಿದ ಮನೆಯ (ಪಂಚಾಂಗ) ಅವಸ್ಥೆ ? ಮತ್ತೆ ಶಿಶುನಾಳ ಶರೀಫರ ನುಡಿಗಳಲ್ಲಿ

ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ ಮುರುಕು ಜಂತಿ ಹುಳುಕು ತೊಲೆಯು ಮುರಿದು ಕೊರಿದು ಕೀಲ ಸರಿದು ಮುರಕ ಚಪ್ಪರ ಜೇರುಗಿಂಡಿ

ಮೇಲಕೇರಿ ಮೆಟ್ಟಲಾರೆ ಅಂದರೆ ಭೌತವಿಶ್ವದಲ್ಲಿ ಯಾವುದೂ ಸ್ಥಿರವಲ್ಲ . ಮಾನವನ ಸೀಮಿತ ಮಾನಕ ಗಳ ದೃಷ್ಟಿಯಲ್ಲಿ ಶಾಶ್ವತ, ಆಚಂದ್ರಾರ್ಕ, ಅಜರಾಮರ ಮುಂತಾದ ವಿಶೇಷಣ ಗಳು ಯಾವುವೂ ವಿಶ್ವದ ಬೃಹದ್ವಿಸ್ತಾರರಂಗದಲ್ಲಿ ಸಿಂಧುವಾಗವು. - ರಾಮಾಯಣ ಕಾಲದಲ್ಲಿ ಕೃತ್ತಿಕೆಯಲ್ಲಿದ್ದ (ಇದರ ನೆಲೆ ವೃಷಭ ರಾಶಿ) ವಸಂತ ವಿಷುವವು ಸೂರ್ಯಸಿದ್ಧಾಂತ ಕಾಲದಲ್ಲಿ ಅಶ್ವಿನಿಗೆ (ಇದರ ನೆಲೆ ಮೇಷ ರಾಶಿ) ವಕ್ರಚಲಿಸಿತ್ತು ( ಹಿನ್ಸರಿದಿತ್ತು ). ಖಗೋಳೀಯ ಗಣಿತಗಣನೆಗಳಿಗೆ ಸಂಬಂಧಿಸಿ ದಂತೆ ಯುಕ್ತ ತಿದ್ದುಪಡಿಗಳನ್ನು ಆಳವಡಿಸದಿದ್ದರೆ ವಾಸ್ತವತೆ- ಗಣಿತ ಅಥವಾ ಘಟನೆ- ಗಣನೆ ಅನ್ನೋನ್ಯತೆ ತಪ್ಪಿ ಹೋಗುತ್ತದೆ. ಇಂಥಲ್ಲಿ ಪಂಚಾಂಗರಚನೆಯು ಕೇವಲ ಗಣಿತಗಣನೆಗಳ ಯಾಂತ್ರಿಕ ಚಮತ್ಕಾರವಾಗುವುದೇ ವಿನಾ ಆ ದಾಖಲೆ ವಾಸ್ತವತೆಯ ಯಥಾ ಪ್ರತಿರೂಪಣವಾಗುವುದಿಲ್ಲ .

ಮೇಲಿನ ನಿರೂಪಣೆಯಲ್ಲಿ ವಿಷುವದ್ರಿಂದುಗಳ ಆಂದೋಲನವಾದ ” ಎಂಬ ಪದಪ್ರಯೋಗವಿದೆ. ಇದು ಅವುಗಳ ವಕ್ರಚಲನೆಯನ್ನು ( ಪ್ರತಿಗಮನ ಅಥವಾ ಹಿನ್ನರಿತ ) ಕುರಿತ ಪ್ರಸ್ತಾವನೆ. ಈ ವಕ್ರಚಲನೆಯ ಮೊತ್ತಕ್ಕೆ ಅಯನಾಂಶ ಎಂದು ಹೆಸರು. ಇದರ ಬೆಲೆ ವಾರ್ಷಿಕವಾಗಿ ೫೦. ೨೭ " ಎಂದು ನಮಗೆ ಗೊತ್ತಿದೆ. ( ೧° = ೬೦' = ೩೬೦೦ )

೫೦

ಜಾತಕ ಮತ್ತು ಭವಿಷ್ಯ

ಕಾಲ

ವಸಂತವಿಷುವದ ನೆಲೆ ರಾಮಾಯಣ

ಕೃತ್ತಿಕಾ ನಕ್ಷತ್ರ , ವೃಷಭರಾಶಿ ಸೂರ್ಯಸಿದ್ಧಾಂತ

ಅಶ್ವಿನೀ ನಕ್ಷತ್ರ , ಮೇಷರಾಶಿ - ಕ್ರಿ ಶ ೨೮೦ ವರ್ತಮಾನ ದಿನಗಳು . . . ಉತ್ತರಾಭಾದ್ರಾನಕ್ಷತ್ರ , ಮೀನು ಕ್ರಿ ಶ ೨೦ / ೨೧ನೆಯ ಶತಮಾನಗಳು

ಕ್ರಿಸ್ತಶಕ ೩ನೆಯ ಶತಮಾನದಲ್ಲಿ ಸೂರ್ಯಸಿದ್ಧಾಂತಕಾರರು, ಸಕಾ ವಾಗಿಯೇ ,ಸೂರ್ಯನು ಅಶ್ವಿನೀ ನಕ್ಷತ್ರವನ್ನು ( ಆದ್ದರಿಂದ ಮೇಷರಾಶಿಯ ಪ್ರವೇಶಿಸುವ ಮುಹೂರ್ತವನ್ನು ಯುಗಾದಿ ಎಂದು ನಿರ್ಣಯಿಸಿದರು.ಸೂಯ ಮೇಷರಾಶಿ ಪ್ರವೇಶವೆಂದರೆ ಮೇಷ ಸಂಕ್ರಮಣ ಎಂದರ್ಥ. ಹೀಗೆ ಮ ಸಂಕ್ರಮಣವೂ ಯುಗಾದಿಯೂ ಒಂದೇ ಅಥವಾ ಅಭಿನ್ನ ಎಂಬ ಭಾವನೆ ಮುಗಿ ನಂಬಿಕೆಯಾಗಿ ಹದಿಗಟ್ಟಿತು.

ವರ್ತಮಾನ ದಿನಗಳಲ್ಲಿ ವಸಂತ ವಿಷುವ ಮಾರ್ಚ್ ೨೦ / ೨೧ರಂದು ಬರುಷ - ಮೇಷ ಸಂಕ್ರಮಣಕ್ಕಿಂತ ( ಏಪ್ರಿಲ್ ೧೩ / ೧೪) ಸಾಕಷ್ಟು ಮುಂಚಿತವಾಗಿ ಈ ಖಗೋಳೀಯ ಘಟನೆ ಸಂಭವಿಸುತ್ತದೆ. ಹಾಗಾದರೆ ಇಂದು ಯುಗಾದಿಯ ಎಂದು ಆಚರಿಸಬೇಕು ?

ಆಕಾಶ ಮೃದು ನುಡಿಯುತ್ತದೆ : “ ವಸಂತವಿಷುವದಂದು, ಮಾಚ್ ೨೦/ ರಂದು. ”

ಪರಂಪರೆಯ ಅಂಧಾನುಯಾಯಿಗಳು ಗರ್ಜಿಸುತ್ತಾರೆ : “ ಸಂದೇಹಾತೀತವ ಮತ್ತು ನಿಸ್ಸಂದಿಗ್ಧವಾಗಿ ಮೇಷ ಸಂಕ್ರಮಣದಂದೇ ( ಏಪ್ರಿಲ್ ೧೩ / ಸೂರ್ಯಸಿದ್ಧಾಂತ ಈ ವಿಚಾರದಲ್ಲಿ ಭರತವಾಕ್ಯ ಹೇಳಿಬಿಟ್ಟಿದೆ - ಇದು ಸಾ : ಕಾಲಿಕ ಸತ್ಯ . ”

ನೀವು ವಾಸ್ತವದೂರರಾದಷ್ಟೂ ನಿಮ್ಮ ವಾದ ದುರ್ಬಲವಾಗುತ್ತದೆ, ಮ ದುರ್ಬಲವಾದಷ್ಟೂ ನಿಮ್ಮ ಗರ್ಜನೆ ತಾರಕ್ಕೇರುತ್ತದೆ, ಗರ್ಜನೆ ತಾರಕ್ಕೇರಿದವು ಬುದ್ಧಂಧತೆ ( ಬುದ್ಧಿ ಮಾಂದ್ಯ, ಬುದ್ದಿ ಮೌಡ್ಯ) ವರ್ಧಿಸುತ್ತದೆ, ಬುದ್ಧನ ವರ್ಧಿಸಿದಷ್ಟೂ ನೀವು ಜೀವನವಿಮುಖರಾಗಿ ಪಳೆಯುಳಿಕೆಗಳಾಗುತ್ತೀರಿ ! ಇಂದಿನ ಪಂಚಾಂಗಗಳಲ್ಲಿ ಮೂರು ಬಗೆಗಳವು ಇವೆ : ಆಧು

ಅನುಬಂಧ ೧

೫೧

ದೃಕ್ಸಿದ್ದಾಂತಾಧಾರಿತ, ಸೂರ್ಯಸಿದ್ಧಾಂತಾಧಾರಿತ, ಉಭಯ ಸಿದ್ದಾಂತಾಧಾರಿತ.

ಭಾರತ ಸರ್ಕಾರ ಪ್ರತಿವರ್ಷವೂ ಪ್ರಕಟಿಸುತ್ತಿರುವ ರಾಷ್ಟ್ರೀಯ ಪಂಚಾಂಗ ಮೊದಲನೆಯ ವರ್ಗಕ್ಕೆ ಸೇರಿದೆ (ನೋಡಿ ಅನುಬಂಧ ೬ ), ಕನ್ನಡದಲ್ಲಿ ವೈಜಯಂತೀ ಪಂಚಾಂಗವು (ಸಂಪಾದಕರು ಯರ್ಮುಂಜ ಶಂಕರ ಜೋಯಿಸರ ಮಗ ಭೀಮ ಜೋಯಿಸ ಮತ್ತು ಮೊಮ್ಮಗ ಶಂಕರ ಜೋಯಿಸ, ಅಂಗರಜೆ, - ಕೆದಿಲ ೫೭೪೨೨೦, ದ. ಕ. ಜಿಲ್ಲೆ).

ಸೂರ್ಯಸಿದ್ಧಾಂತಾನುಯಾಯಿಗಳು ರಚಿಸುವ ಪಂಚಾಂಗಗಳು ವರ್ತಮಾನ ಆಕಾಶದ ದರ್ಪಣಬಿಂಬಗಳಲ್ಲ . ಆದ್ದರಿಂದ ಇವನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿಲ್ಲ . ಹಾಗಾದರೆ ಧಾರ್ಮಿಕಾಚರಣೆಗಳ ಸ್ಥಿತಿಗತಿ ಏನು ? ದೃಕ್ಸಿದ್ದಾಂತಾನು ಸಾರ ರಚಿತವಾಗಿರುವ ಪಂಚಾಂಗಗಳು ಧಾರ್ಮಿಕಾಚರಣೆಗಳ ಬಗ್ಗೆ ಎಲ್ಲ ವಿವರ ಗಳನ್ನೂ ಕೊಡುತ್ತವೆ. ಇವು ಖಗೋಳೀಯ ಘಟನೆಗಳ ಜೊತೆಗೆ ಹೊಂದಿ ಕೊಂಡಿವೆಯಾಗಿ ಇಲ್ಲಿಯ ನಂಬಿಕೆಗೂ ಆಚರಣೆಗೂ ನಿಸರ್ಗದ ದೃಢ ಅಸ್ತಿವಾರ ವಿರುವುದು. ಸೂರ್ಯಸಿದ್ಧಾಂತಾನುಸಾರ ರಚಿತವಾಗಿರುವ ಪಂಚಾಂಗಗಳು ಅಂದಿಗೆ ( ವರಾಹಮಿಹಿರನ ಕಾಲ , ಕ್ರಿ ಶ ೬ನೆಯ ಶತಮಾನ) ಸರಿ ; ಇಂದಿಗೆ ತಪ್ಪು . ಧಾರ್ಮಿಕಾಚರಣೆಗಳು ನೈಸರ್ಗಿಕ ಘಟನೆಗಳ ಪ್ರತಿಬಿಂಬಗಳಾಗಿರುವ ತನಕ ಮಾತ್ರ ಪ್ರಸ್ತುತ ಮತ್ತು ಅರ್ಥಪೂರ್ಣ. ಆಗದಾಗಕೇವಲ ಗೊಡ್ಡು ಸಂಪ್ರದಾಯ ಗಳ ಮತ್ತು ಕುರುಡು ನಂಬಿಕೆಗಳ ಪತ್ತಾಯವಾಗುತ್ತವೆ. * ವರ್ಷದಲ್ಲಿ ಸಂಭವಿಸುವ ಈ ೪ ಖಗೋಳೀಯ ಘಟನೆಗಳು ಸಾಮಾನ್ಯರಿಗೂ ವೀಕ್ಷಣಲಭ್ಯ : ಘಟನೆಗಳು

ದಿನಾಂಕಗಳು

ದೃಕ್ಸಿದ್ಧಾಂತ ಸೂರ್ಯಸಿದ್ಧಾಂತ ಉತ್ತರಾಯಣಾರಂಭ

ಡಿಸೆಂಬರ್‌೨೧/ ೨೨ ಜನವರಿ ೧೫ ವಸಂತವಿಷುವ

ಮಾರ್ಚ್ ೨೦/ ೨೧ ಉಲ್ಲೇಖವಿಲ್ಲ * ದಕ್ಷಿಣಾಯನಾರಂಭ

ಜೂನ್ ೨೧ / ೨೨ ಜುಲೈ ೧೭ ಶರದ್ವಿಷುವ

ಸೆಪ್ಟೆಂಬರ್ ೨೨ / ೨೩ ಉಲ್ಲೇಖವಿಲ್ಲ

ವಸಂತವಿಷವವೊಂದೇ ಋಜುಯುಗಾದಿ, ಧಾರ್ಮಿಕಾಚರಣೆಗೆಕೂಡ ಪ್ರಶಸ್ತಿ

* ಸೌರ ಯುಗಾದಿ ಏಪ್ರಿಲ್ ೧೫ ಎಂಬ ಉಲ್ಲೇಖವಿದೆ

೫೨

ಜಾತಕ ಮತ್ತು ಭವಿಷ್ಯ

ವಾದ ಹಬ್ಬ . ಉತ್ತರಾಯಣಾರಂಭ ಪುಣ್ಯದಿನ ಡಿಸೆಂಬರ್ ೨೧ರಂದು, ಜನವರಿ ೧೫ರಂದು ಅಲ್ಲ . ಆದ್ದರಿಂದ ಧಾರ್ಮಿಕ ಪ್ರಾಶಸ್ಯ ಕೂಡ ಡಿಸೆಂಬರ್ ೨೧ಕ್ಕೇ ಸಲ್ಲತಕ್ಕದ್ದು.

ವೈಜಯಂತೀ ಪಂಚಾಂಗವು ೨೦೦೦ - ೨೦೦೧ರಲ್ಲಿ ( ಮತ್ತು ಹಿಂದಿನವುಗಳಲ್ಲಿ ಕೂಡ) ಬರೆದಿರುವ ವಿವರಣೆ ಗಮನಾರ್ಹವಾಗಿದೆ. ಮುಖ್ಯವಾಗಿ ಧಾರ್ಮಿಕ ಆಚರಣೆಗಳಲ್ಲಿ ಶ್ರದ್ದೆ ಇರುವವರು ಇದನ್ನು ಓದಿ ಅನುಷ್ಠಾನಿಸಬೇಕು : “ಉತ್ತ ರಾಯಣಾರಂಭ ಕಾಲ : ಉತ್ತರಾಯಣಾರಂಭ ಕಾಲವು ಮಕರ ಸಂಕ್ರಮಣದ ದಿನದಿಂದಾಗುವುದೆಂದು ಈಗಲೂ ಕೆಲ ಪಂಚಾಂಗಗಳಲ್ಲಿ ಬರೆಯಲ್ಪಡುವುದ ರಿಂದ ಸಾಮಾನ್ಯ ಜನರು ಅದನ್ನೇ ನಿಜವೆಂದು ತಿಳಿಯುತ್ತಾರೆ. ಪ್ರಾಥಮಿಕ ಶಿಕ್ಷಣ ವನ್ನು ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಈಗ ಪ್ರತಿವರ್ಷ ದಶಂಬರ ತಾ , ೨೨ರ ಸಮಯ ಉತ್ತರಾಯಣಾರಂಭವಾಗುತ್ತದೆಂಬ ಸಂಗತಿಯನ್ನರಿತಿರು ವನು. ಆದರೆ ನಮ್ಮಲ್ಲಿಯ ಕೆಲವು ಪಂಚಾಂಗಗಳಲ್ಲಿ ಜನವರಿ ೧೪ರ ಸಮಯ ( ಎಂದರೆ ಮಕರ ಸಂಕ್ರಾಂತಿ ದಿನ) ಉತ್ತರಾಯಣಾರಂಭವೆಂದೇಕೆ ಬರೆಯುವರು ? ಎಂಬ ವಿಚಾರವನ್ನಾರೂ ಮಾಡುವುದಿಲ್ಲ . ಧರ್ಮ ಕಾರ್ಯಗಳಲ್ಲಿ ಇದರ ವಿಚಾರವು ಅತ್ಯಂತ ಪ್ರಾಮುಖ್ಯವಾಗಿದ್ದರೂ ಪಂಚಾಂಗವನ್ನಷ್ಟೇ ನೋಡುವ ವೈದಿಕ ಮತಾವಲಂಬಿಗಳಾದ ಧಾರ್ಮಿಕ ಜನರು ಪಂಚಾಂಗಗಳಲ್ಲಿ ಬರೆದುದೇ ಪ್ರಮಾಣವೆಂದು ತಿಳಿಯುತ್ತಾರೆ. ನಿಜ ಸಂಗತಿ ಮಾತ್ರ ಬೇರೆಯೇ ಆಗಿದೆ. ದಕ್ಷಿಣೋತ್ತರಾಯಣಗಳ ಆರಂಭಕಾಲವು ಪ್ರತಿ ಎಪ್ಪತ್ತೆರಡು ವರ್ಷಕ್ಕೊಂದು ದಿನದಂತೆ ಹಿಂದೆ ಬರುತ್ತದೆಂಬುದು ಜ್ಯೋತಿಷ ಸಿದ್ದಾಂತವೇರಿಗೆಲ್ಲಾ ಈಗ ತಿಳಿದ ಸಂಗತಿಯಾಗಿದೆ. ವೇದಾಂಗ, ಪುರಾಣ , ಸಿದ್ದಾಂತ ಗ್ರಂಥಗಳಲ್ಲಿ ಹೇಳೋಣ ವಾಗಿರುವ ವಚನಗಳ ಪರಿಶೀಲನದಿಂದ ಬೇರೆ ಬೇರೆ ಕಾಲಗಳಲ್ಲಿ ಅಯನ ರಂಭವು ಯಾವಾಗ ಆಗುತ್ತಿತ್ತೆಂಬುದು ತಿಳಿದು ಬರುವುದು ಅಲ್ಲದೆ ( ಪ್ರತ್ಯಕ್ಷ ಪರೀಕ್ಷಿಸಿ ನೋಡಿದರೆ) ಈಗ ಉತ್ತರಾಯಣಾರಂಭವು ಮಕರ ಸಂಕ್ರಮಣ ದಿನ ಕ್ಕಿಂತ ಇಪ್ಪತ್ತಮೂರು ದಿನಗಳ ಮೊದಲೇ ಆಗುವುದನ್ನು ಪ್ರತ್ಯಕ್ಷವಾಗಿ ನೋಡ ಬಹುದಾಗಿದೆ. ಸೂರ್ಯೊದಯ ಕಾಲದಲ್ಲಿ ಸೂರ್ಯಬಿಂಬವು ಯಾವುದಾದ ರೊಂದು ಮರಕ್ಕೆ ಯಾ ಗಿಡಕ್ಕೆ ಸರಿಯಾಗುವಂತೆ ಒಂದು ಸ್ಥಳದಲ್ಲಿ ನಿಂತು ನೋಡತಕ್ಕದ್ದು . ಪ್ರತಿದಿನವೂ ಅದೇ ಸ್ಥಳದಲ್ಲಿ ನಿಂತು ಸೂರ್ಯೋದಯ ಕಾಲ ದಲ್ಲಿ ಸೂರ್ಯಬಿಂಬವನ್ನು ನೋಡುತ್ತಾ ಬಂದರೆ ಸೂರ್ಯನು ದಿನದಿಂದ ದಿನಕ್ಕೆ ಉತ್ತರೋತ್ತರ ಸರಿಯುವುದು ಕಾಣಬರುತ್ತದೆ. ಇದರಂತೆ ದಕ್ಷಿಣಾಯನಾರಂಭ

ಅನುಬಂಧ ೧ .

ಕಾಲದಿಂದನೋಡುತ್ತಾ ಬಂದರೆ ಕರ್ಕಟ ಸಂಕ್ರಮಣಕ್ಕಿಂತ ಇಪ್ಪತ್ತಮೂರು ದಿನ ಗಳ ಮೊದಲೆ ( ಎಂದರೆ ಜೂನ್ ತಾ . ೨೧ರ ಸುಮಾರಿಗೆ) ದಕ್ಷಿಣಾಯನಾರಂಭಾಗು ವುದನ್ನು ಪ್ರತ್ಯಕ್ಷ ಕಾಣಬಹುದು. ಆದರೆ ನಮ್ಮ ಪ್ರಾಂತ್ಯದಲ್ಲಿ [ ವಿಶೇಷವಾಗಿ ಮಲೆನಾಡಿನ ಮತ್ತು ಕರಾವಳಿಯ ಜಿಲ್ಲೆಗಳು] ಆಗ ಮಳೆಗಾಲವಾಗುವುದರಿಂದ ಉತ್ತರಾಯಣಾರಂಭ ಕಾಲವನ್ನು ಪರೀಕ್ಷಿಸುವುದೇ ನಮಗೆ ಸುಲಭವಾಗುವುದು . ತೈತ್ತಿರೀಯ ಬ್ರಾಹ್ಮಣದಲ್ಲಿ ಧನಿಷ್ಠಾ ನಕ್ಷತ್ರಾಂತ್ಯದಲ್ಲಿ ಸೂರ್ಯನು ಬಂದಾಗ ಉತ್ತರಾಯಣಾರಂಭವೆಂದೂ , ಮೈತ್ರುಪನಿಷತ್ತಿನಲ್ಲಿ ಧನಿಷ್ಟಾರ್ಧದಲ್ಲಿ ಸೂರ್ಯನು ಬಂದಾಗ ಉತ್ತರಾಯಣವೆಂದೂ ; ವೇದಾಂಗ ಜ್ಯೋತಿಷದಲ್ಲಿ ಧನಿಷ್ಟೆಯ ಆದಿಯಲ್ಲಿ ಸೂರ್ಯನು ಬಂದಾಗ ಉತ್ತರಾಯಣಾರಂಭವೆಂದೂ ಹೇಳಲ್ಪಟ್ಟಿದೆಯಲ್ಲದೆ ; ಶ್ರೇಷ್ಠ ಜ್ಯೋತಿಷಿಗಳಲ್ಲಿ ಭೂಷಣಪ್ರಾಯರಾದ ಸುಪ್ರಸಿದ್ದ ವರಾಹಮಿಹಿರಾಚಾರ್ಯರು ' ಪಂಚ ಸಿದ್ದಾಂತಿಕೆ' ಎಂಬ ಗಣಿತ ಸ್ಕಂದ ದಲ್ಲಿ ತನ್ನ ಕಾಲದ ದಕ್ಷಿಣಾಯನಾರಂಭವು ಪುನರ್ವಸು ನಕ್ಷತ್ರದ ಅರ್ಧದಲ್ಲಿ ಸೂರ್ಯನು ಬಂದಾಗ ಆಗುತ್ತದೆಂದು ಹೇಳಿರುವರು . ವರಾಹಮಿಹಿರನ ಕಾಲದಲ್ಲಿ ಕರ್ಕಮಕರ ಸಂಕ್ರಾಂತಿಗಳಿಗಿಂತ ಮೂರುದಿನ ಮೊದಲೇ ದಕ್ಷಿಣೋತ್ತರಾಯಣ ಗಳ ಆರಂಭವಾಗುತ್ತಿತ್ತು . ಮಹಾಭಾರತದೊಳಗಿನ ಭೀಷ್ಮ ನಿರ್ಯಾಣ ಕಾಲದ ವಿಚಾರವನ್ನು ಮಾಡಿದರೆ ಭೀಷ್ಮನು ಮಾಘಮಾಸದಲ್ಲಿ ನಿರ್ಯಾಣಹೊಂದಿದ ನೆಂತಲೂ , ಆ ಕಾಲದಲ್ಲಿ ವೇದಾಂಗ ಜ್ಯೋತಿಷ ಪದ್ಧತಿಯು ಮಾನ್ಯವಾಗಿದ್ದು ಧನಿಷ್ಟಾದಿಯಲ್ಲಿ ಸೂರ್ಯನು ಬಂದಾಗ (ನಮ್ಮ ಮಕರ ಸಂಕ್ರಮಣ ಕಾಲದಿಂದ ಮುಂದೆ ೨೪ ದಿನ) ಉತ್ತರಾಯಣಾರಂಭವಾಗುತ್ತಿತ್ತೆಂದೂ ತಿಳಿದು ಬರುತ್ತದೆ. ಮಕರ ಸಂಕ್ರಾಂತಿಯು ಪೌಷ ಮಾಸದಲ್ಲಿ ಬರುವುದೇ ಹೊರತು ಮಾಘಮಾಸ ದಲ್ಲೆಂದೂ ಬರುವುದಿಲ್ಲ . ಮಕರ ಸಂಕ್ರಾಂತಿ ಇರುವ ಚಾಂದ್ರಮಾಸವು ಪೌಷ ಮಾಸವೆಂಬುದಾಗಿ ; ಕುಂಭ ಸಂಕ್ರಾಂತಿಯುಳ್ಳ ಚಾಂದ್ರಮಾಸವು ಮಾಘ ಮಾಸವೆನ್ನಲ್ಪಡುವುದು ಸರ್ವ ಪಂಚಾಂಗಕರ್ತರಿಗೂ , ಜ್ಯೋತಿಷಶಾಸ್ತ್ರಜ್ಞರಿಗೂ ಮಾನ್ಯವಾದ ವಿಷಯವೇ ಆಗಿದೆ. ವೇದ, ವೇದಾಂಗ ಜ್ಯೋತಿಷ, ಮಹಾಭಾರತ, ಮನುಸ್ಮೃತಿಗಳಲ್ಲಿ ಮೇಷಾದಿರಾಶಿಗಳ ಹೆಸರೇ ಬಂದಿಲ್ಲವೆಂದು ತಜ್ಞರ ಅಭಿಪ್ರಾಯವಿರುವಾಗ ಸೃಷ್ಟಾದಿಯಿಂದ ಈವರೆಗೆ ಕರ್ಕ , ಮಕರ ಸಂಕ್ರಮಣ ದಿನಗಳಲ್ಲಿಯೇ ಅಯನಾರಂಭವಾಗಬೇಕೆಂದು ಹೇಳುವವರ ಹೇಳಿಕೆಯು ಅವಿಚಾರಣೀಯವೂ , ಹಾಸ್ಯಾಸ್ಪದವೂ ಆಗಿರುತ್ತದೆಂಬುದನ್ನು ವಿಚಾರವಂತರಾದ ವಿದ್ವಾಂಸರು ತಿಳಿದು ಸರಿಯಾದ ಮಾರ್ಗವನ್ನು ಅನುಸರಿಸಬೇಕೆಂಬುದಿಷ್ಟೆ ನಮ್ಮ

೫೪

ಜಾತಕ ಮತ್ತು ಭವಿಷ್ಯ

ಸೂಚನೆಯಾಗಿದೆ. ದಕ್ಷಿಣಾಯನಾರಂಭವಾಗುವ ಸಮಯದಲ್ಲಿ ದಿವಾಪ್ರಮಾಣವು ಅತ್ಯಂತ ಹೆಚ್ಚಾಗಿದ್ದು ರಾತ್ರಿಮಾನವು ಅತಿ ಕಮ್ಮಿಯಾಗಿರುತ್ತದೆ. ಅದರಂತೆ ಉತ್ತರಾಯಣಾರಂಭ ಸಮಯದಲ್ಲಿ ದಿವಾಮಾನವು ಅತ್ಯಂತ ಕಮ್ಮಿಯಾಗಿದ್ದು ರಾತ್ರಿಮಾನವು ಅತ್ಯಂತ ಹೆಚ್ಚಾಗಿಯೂ ಇರುತ್ತದೆ. ಈ ವಿಷಯವು ಪುರಾಣ , ಧರ್ಮಶಾಸ್ತ್ರ , ಜ್ಯೋತಿಶ್ಯಾಸ್ತಗಳಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ಶಾಸ್ತ್ರ ಮತ್ತು ಪ್ರತ್ಯಕ್ಷಾನುಭವಗಳಿಗೆ ವಿರುದ್ಧವಾಗಿ ನಡೆಯುವುದು ಧಾರ್ಮಿಕರಿಗೆ ಭೂಷಣವಲ್ಲ , ಶ್ರೇಯಸ್ಕರವೂ ಅಲ್ಲ . ” - ಈ ಮೇಲಿನ ಉಲ್ಲೇಖದಲ್ಲಿ ಬರುವ ದಕ್ಷಿಣೋತ್ತರಾಯಣಗಳ ಆರಂಭ ಕಾಲವು ಪ್ರತಿ ಎಪ್ಪತ್ತೆರಡು ವರ್ಷಕ್ಕೊಂದು ದಿನದಂತೆ ಹಿಂದೆ ಬರುತ್ತದೆ . . . ” ವಾಕ್ಯವನ್ನು ಗಮನಿಸಬೇಕು. ಇದೇ ಅಯನಾಂಶ, ಇದರ ವಾರ್ಷಿಕದರ ೫೦ .೨೭ " ಎಂದು ಹಿಂದೆ ಹೇಳಿದೆ. ಸೂರ್ಯನು ಕ್ರಾಂತಿವೃತ್ತದಲ್ಲಿ ಒಂದು ಪರಿಭ್ರಮಣೆ ಮುಗಿಸಲು ಸುಮಾರು ೩೬೫ ದಿವಸಗಳು ಬೇಕು. ಆದ್ದರಿಂದ ಸರಾಸರಿಯಲ್ಲಿ ಸೂರ್ಯನು ದಿವಸವೊಂದರ ೩೬೦° + ೩೬೫, ಅಥವಾ ಸ್ಕೂಲವಾಗಿ ೧° ಮುಂದೆ ಸರಿಯುತ್ತದೆಂದು ಭಾವಿಸಬಹುದು. ಹಾಗಾದರೆ ಅಯನಾಂಶದ ಮೊತ್ತ ೧೦ ಆಗಲು ಎಷ್ಟು ವರ್ಷಬೇಕು ? ಉತ್ತರ : ೩೬೦೦ + ೫೦. ೨೭ = ೭೧.೬೧೩ ವರ್ಷ ಗಳು ಅಥವಾ ಸ್ಕೂಲವಾಗಿ ೭೨ ವರ್ಷಗಳು . - ಖಗೋಳೀಯ ಗಣಿತಗಣನೆಯ ಅಗ್ನಿಪರೀಕ್ಷೆ ಎದುರಾಗುವುದು ಗ್ರಹಣ ಕಾಲ ದಲ್ಲಿ . ಇಲ್ಲಿ ದೃಕ್ಸಿದ್ಧಾಂತವೊಂದೇ ಸಿಂಧು. ಸೂರ್ಯಸಿದ್ಧಾಂತವನ್ನು ಅನುಸರಿಸಿ ದರೆ ಪಂಚಾಂಗದ ಮುನ್ಸೂಚನೆಯಂತೆ ಗ್ರಹಣ ಸಂಭವಿಸುವುದಿಲ್ಲ , ಗ್ರಹಣ ಸಂಭವಿಸಲಿರುವುದನ್ನು ಪಂಚಾಂಗ ಮುಂಗಂಡಿರುವುದಿಲ್ಲ : ಘಟನೆ- ಗಣನೆ ಅಸಾಂಗತ್ಯ ಸಾಮಾನ್ಯ ಮಂದಿಗೂ ತಿಳಿಯುವ ಈ ವ್ಯಾಘಾತವನ್ನು ನಿವಾರಿಸುವ ಸಲುವಾಗಿ ಸೂರ್ಯಸಿದ್ದಾಂತಿಗಳು ಗ್ರಹಣಗಣನೆಗಾಗುವಾಗ ಮಾತ್ರ ದೃಕ್ಸಿದ್ದಾಂತವನ್ನು ಆಶ್ರಯಿಸುತ್ತಾರೆ. ಏಕೆ ಈ ದ್ವಂದ್ವ ? ಈ ಅಂಧ ವ್ಯಾಮೋಹ? ಪಂಚಾಂಗದ ಈ ಮೂರನೆಯ ಬಗೆಯನ್ನು ಇದರ ಅಧಿಕೃತ ನಾಮ ಸಿದ್ಧಾಂತ, ವಾಕ್ಯ , ಆರ್ಯಭಟ್ಟ ಸಿದ್ಧಾಂತ, ದೃಗ್ಗಣಿತ ಸಂಯೋಜಿತ ಪಂಚಾಂಗ ” - ಸ್ಪಷ್ಟ ವಾಗಿ ಆತ್ಮವಂಚನೆ ಮತ್ತು ಜನದ್ರೋಹ ಎಂದು ತಿರಸ್ಕರಿಸುವುದೊಂದೇ ಸರಿ! ಯಾದ ಮಾರ್ಗ. ವರ್ತಮಾನ ನಿಸರ್ಗಬದ್ಧವಲ್ಲದ ಯಾವುದೇ ಶಾಸ್ತ್ರಗ್ರಂಥ, ಶ್ರದ್ದೆ , ಸಂತವಾಣಿ, ಪ್ರವಾದಿ ಸಂಹಿತೆ ಇತ್ಯಾದಿ ಸರ್ವಥಾ ಅನುಸರಣೀಯವಲ್ಲ . ಆದ್ದರಿಂದ ಆಧುನಿಕ ದೃಷ್ಟಿದ್ದಾಂತ ಎಂದರೆ : ವರ್ತಮಾನ ಗಗನವನ್ನು ಪ್ರತ್ಯಕ್ಷ

ಅನುಬಂಧ ೨

೫೫

ವೀಕ್ಷಿಸಿ ಅಲ್ಲಿಯ ನಿಯಮಗಳನ್ನು ಆಸವಿಸಿ ಗಣಿತ ಗಣನೆಗಳ ಮೂಲಕ ಅರ್ಥ ವಿಸುವ ಹಾಗೂ ಮುನ್ನುಡಿಯುವ ಖಗೋಳವಿಜ್ಞಾನ ವಿಭಾಗ,

ಅನುಬಂಧ ೨ ಹ್ಯಾಲೀ ಧೂಮಕೇತು

ಆಕಾಶ ಘಟನೆಗಳಿಗೂ ಸ್ಥಳೀಯ ವಿದ್ಯಮಾನಗಳಿಗೂ ನಿಕಟ ಸಂಪರ್ಕವಿರು ವುದು ಮೇಲುನೋಟಕ್ಕೇ ದೃಢಪಡುತ್ತದೆ : ಅಲ್ಲಿ ನೇಸರು ಇಲ್ಲಿ ಹಗಲು, ಅಲ್ಲಿ ಸೂರ್ಯನ ನೆಲೆ ಮೃಗಶಿರಾ- ಆದ್ರ್ರಾ ವಲಯ ಇಲ್ಲಿ ಮಳೆಗಾಲ, ಇತ್ಯಾದಿ. ಈ ನೈಸರ್ಗಿಕ ಘಟನೆಗಳಿಗೆ ಅಪವಾದಗಳಾಗಿ , ಯಾವ ಮುನ್ಸೂಚನೆಯೂ ಇಲ್ಲದೇ , ಪ್ರಕಟವಾಗುವ ಗಗನ ಪ್ರದರ್ಶನಗಳು ಉಲ್ಕಾಪಾತ, ಗ್ರಹಣ ಮತ್ತು ಧೂಮ ಕೇತು. ಈ ಪೈಕಿ ಉಲ್ಕಾಪಾತಗಳು ಯಾದೃಚ್ಛಿಕ ಘಟನೆಗಳು, ಗ್ರಹಣಗಳು ಖಚಿತ ಗಣಿತ ವಿಧಿನಿಯಮಗಳಿಗೆ ಅಳವಡುವ ವಿಶಿಷ್ಟ ವಿದ್ಯಮಾನಗಳು , ಮತ್ತು ಧೂಮ ಕೇತುಗಳು ಎರಡೂ ವರ್ಗಗಳಿಗೆ ಸೇರಿರುವ - ಗಣಿತ ಗಣನೆಗೆ ಸಿಕ್ಕದಿರುವ ಮತ್ತು ಸಿಕ್ಕುವ ವಿಚಿತ್ರ ದೃಶ್ಯಗಳು. * ಧೂಮಕೇತು ಹೇಗಿದೆ ? ಗೊಂಡೆ ಮಂಡೆ ಪೊರಕೆ ಬಾಲ (ನೋಡಿ ಚಿತ್ರ ೧೫ ಪುಟ ೫೭), ಸೂರ್ಯ- ಗೊಂಡ ರೇಖೆಯ ವಿಸ್ತರಣೆಯ ನೇರ ಬಾಲ ಚಾಚಿ ಕೊಂಡಿದೆ. ಬಾನಿನ ಯಾವುದೋ ಮೂಲೆಯಿಂದ ಎಂದೋ ದಿಢೀರನೆ ಪ್ರತ್ಯಕ್ಷ ವಾಗಿ ಸೂರ್ಯನ 'ಈಸುತ್ತ ಸಾಗಿ ಕಣ್ಮರೆಯಾಗಿ ಮುಂದೆಂದೋ ಸೂರ್ಯ ನಿಂದ ದೂರಕ್ಕೆ ತೆವಳುತ್ತ ಹೋಗಿ ಒಂದು ದಿನ ಕಾಣದಾಗುವ ಅನಂತಕಾಲದ ಅನೂಹ್ಯ ಯಾತ್ರಿಕ ಈ ಧೂಮಕೇತು. ಹೇಳದೆಯೆ ಬರುವ ಕಾಯವಾದ್ದರಿಂದ ' ಅತಿಥಿ.'ಗೋಪಾಲಕೃಷ್ಣ ಅಡಿಗರ ನುಡಿಗಳಲ್ಲಿ -

ಅತಿಥಿಗಳಹ ನೀವೆಲ ರು ಇಲ್ಲಿಗೆ ನೆಲಸಲು ಬಂದವರಲ್ಲ ; ಒಂದೆ ಗಳಿಗೆ ಆಮೋದಕೆ ಬರುವಿರಿ,

ಬಂದರಗಳಿಗೆಯೊಳೇ ಮೈಗರೆವಿರಿ | ಮಾನವನ ಅವೈಚಾರಿಕ ಮತಿ ಆಕಾಶದ ಈ ಅತಿ ವಿಚಿತ್ರ ವಿಕಾರದಲ್ಲಿ ಮನು ಕುಲಕ್ಕೆ ಹಾನಿ ಬರುವುದರ ಮುನ್ಸೂಚನೆ ಕಂಡಿತು. ವಾಲ್ಮೀಕಿ ರಾಮಾಯಣ ಅಯೋಧ್ಯಾಕಾಂಡ ಸರ್ಗ ೧ ಶ್ಲೋಕ ೪೩ನ್ನು ನೋಡಿ:

ಜಾತಕ ಮತ್ತು ಭವಿಷ್ಯ

ದಿವಂತರಿಕ್ಷೇ ಭೂಮೌ ಚ ಘೋರಮುತ್ಸಾತಜಂ ಭಯಮ್

ಸಂಚಚಕ್ಷೇ ಚ ಮೇಧಾವೀ ಶರೀರೇ ಚಾತ್ಮನೂ ಜರಾಮ್ - ಡಾ . ಸಿ. ಎನ್. ಶ್ರೀನಿವಾಸ ಅಯ್ಯಂಗಾರ್ಯರು ಕನ್ನಡ ವಾಲ್ಮೀಕಿರಾಮಾಯಣ ದಲ್ಲಿ ಇದರ ಸಾರಾಂಶ ಬರೆದಿದ್ದಾರೆ : “ ಬುದ್ದಿಶಾಲಿಯಾದ ದಶರಥ ದೇವಲೋಕ ದಲ್ಲಿ ( ಅಂದರೆ ನಕ್ಷತ್ರಗ್ರಹಾದಿಗಳು), ಅಂತರಿಕ್ಷದಲ್ಲಿ ಮತ್ತು ಭೂಮಿಯಲ್ಲಿ ಭಯಂಕರ ಉತ್ಪಾತ( ಅಪಶಕುನುಗಳಾಗುತ್ತಿದ್ದುದನ್ನು ಕಂಡು ಅವು ಸೂಚಿಸು ತಿದ್ದ ಅಪಾಯವನ್ನು ( ಅಂದರೆ ತನ್ನ ಅಂತ್ಯ ಸಮೀಪಿಸುತ್ತಿದ್ದುದನ್ನು ) ಅರಿತನು. ತನ್ನ ಶರೀರ ಮುಪ್ಪಿನಿಂದಕ್ಷೀಣಿಸುತ್ತಿದ್ದುದನ್ನೂ ಮನಗಂಡನು. ” ಪ್ರೋಮಭೂತಗಳಾದ ಧೂಮಕೇತುಗಳು ಖಂಡಿತವಾಗಿಯೂ ಮನುಷ್ಯರಿಗೆ ಅಲ್ಲಿಯೂ ರಾಜಮಹಾರಾಜರಿಗೆ ಹಾಗೂ ಗೌರವಾನ್ವಿತ ಕುಲೀನರಿಗೆ ಅಪಾಯಕಾರಿಗಳು. ಇವು ದೆವ್ವ ದೂತಗಳು, ಅಂತರಪಿಶಾಚಿಗಳು, ರಕ್ತಪಿಪಾಸು ಗಳು. ಏಕೆ ಗೊತ್ತೇ ? ಮಾನವ ಇವುಗಳಿಗೆ ಆ ಅಂತಸ್ತು ನೀಡಿ ವೈಭವೀಕರಿಸಿ ದ್ದಾನೆ ! ಅಂದ ಮೇಲೆ ಇವುಗಳಕೋಪಶಮನಾರ್ಥ ಪೂಜೆ ಪ್ರಾರ್ಥನೆ ಮುಂತಾದ ಸಾತ್ವಿಕ ವಿಧಾನಗಳಿಗಿಂತ ಹೆಚ್ಚಾಗಿ ಬಲಿ ನಾಶ ಮುಂತಾದ ತಾಮಸಿಕ ಕೃತ್ಯಗಳನ್ನು ಅನುಸರಿಸುವುದು ಅನಿವಾರ್ಯವಾಯಿತು. * ಉದಾಹರಣೆಗೆ ನೀರೋ ಚಕ್ರವರ್ತಿಯ ( ಕ್ರಿ . ಶ. ೩೭-೬೮) ಅತಿರೇಕ ವರ್ತನೆ. ರೋಮ್‌ನಗರ ಧಗಧಗಿಸುತ್ತಿದ್ದಾಗ, ಪಿಟೀಲು ನುಡಿಸುತ್ತ ಕೂರಾನಂದನ ನಾಗಿದ್ದವನೀತ. ಇವನ ರಾಜ್ಯಭಾರ ಕಾಲದಲ್ಲಿ ಒಮ್ಮೆ ದೇವರ ಕೋಪಧೂಮ ಕೇತು ರೂಪದಲ್ಲಿ ಪ್ರಕಟವಾಯಿತು. ಸಹಜವಾಗಿಯೇ ಫಲಜ್ಯೋತಿಷಿಗಳು ಇವೆ ನಿಗೆ ಆಪ್ಯಾಯಮಾನವಾಗುವ ಪರಿಹಾರ ಸೂಚಿಸಿದರು. ಇಲ್ಲವಾದರೆ ಅವರ ತಲೆ ಉಳಿದೀತೇ ? ಇದರ ಪ್ರಕಾರ ಚಕ್ರವರ್ತಿ ತನ್ನ ನಿಜ ಹಾಗೂ ಕಾಲ್ಪನಿಕ ಶತ್ರುಗಳ ಸಾಮೂಹಿಕ ಕಗ್ಗೋಲೆ ನಡೆಸಿದ. ಮುಂದೆ ಹಲಕಾಲ ಬದುಕಿ ಸಾಕಷ್ಟು ಉತ್ಪಾ ವೆಸಗಿ ಕೇವಲ ಮೂವತ್ತೆರಡರ ಹರೆಯದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ಯ ಹೀಗೆಧೂಮಕೇತು ತನ್ನ ಬಲಿಯನ್ನು ಕೊನೆಗಾದರೂ ಪಡದೇ ಪಡೆಯಿತು ! ಸ್ವತಃ ತನ್ನ ತಾಯಿಯನ್ನೂ ಅನೇಕ ಹೆಂಡಿರು ಮಕ್ಕಳನ್ನೂ ಕೊಲೆಗೈದಿದ್ದ ನೀರೊ ಧೂಮಕೇತುವಿನ ಮಾನುಷ ರೂಪವಾಗಿ ಸದಾಕಾಲ ಕುಪ್ರಸಿದ್ಧನಾಗಿದ್ದಾನೆ. ಇವನ ಕುಲಜರು ಇಂದೇನು ಕಡಿಮೆ ಇರುವರೇ ?

ಪವಿತ್ರ ರೋಮನ್ ಚಕ್ರಾಧಿಪತ್ಯದ ಪ್ರಭುವಾಗಿದ್ದ ಬಲಿಷ್ಠ ಶಾರ್ಲ್‌ಮೇನೆ (೭೪೨- ೮೧೪) ಕೂಡ ಒಂದು ದಿನ ಇತರ ಎಲ್ಲ ಮನುಷ್ಯರಂತೆ ಗತಿಸಿದ. ಆದರ

ಅನುಬಂಧ ೨

೫೭

ಈ ಮಹಾ( ದುರ್) ಘಟನೆಯನ್ನು ಪ್ರತ್ಯೇಕಿಸುವ ಯಾವ ಧೂಮಕೇತುವೂ ಅಂತರಿಕ್ಷದಲ್ಲಿ ಪ್ರತ್ಯಕ್ಷವಾಗಲಿಲ್ಲ . ದೇವರು ಮನೆಗೆಲಸ ಮಾಡುವುದರಲ್ಲಿ ಕುಂಟಿ ದನೇ ? ದಿವಾರಾತ್ರಿ ಎಚ್ಚರವಾಗಿರುತ್ತಿದ್ದ ಫಲಜ್ಯೋತಿಷಿಗಳೂ ಇತಿಹಾಸಕಾರರೂ ಮಂತ್ರಾಲೋಚನೆಗೈದು ಇತಿಹಾಸದ ಪುಟಗಳಲ್ಲಿ ೮೧೪ಕ್ಕೆ ಹೊಂದುವಂತೆ ಧೂಮಕೇತುವಿನ ದರ್ಶನವನ್ನು ದಾಖಲಿಸಿದರು ! ಗ್ರಹಗತಿಯಲ್ಲಿ ಲಯತಪ್ಪಿ ದರೇನಂತೆ, ಜಾತಕ ತಿದ್ದಿದರಾಯಿತು !

ಜಾತಕದಿ ಗ್ರಹಮೈತ್ರಿ ಬಲು ಮುಖ್ಯ , ವಾಸ್ತವದೊ ಲೇತಕೆ ವಿನಾಚಿಂತೆ ? ಶಾಸ್ತ್ರಸಮ್ಮತಿ ಪಡೆದು ಪಾತಕವನೆಸಗುವುದು ಅತಿಸುಲಭ - ಬರೆಷರಾ !

ಪಾತಾಳಕೊಗೆವ ಪಥವಿದು, ಸ್ವಾರ್ಥ ಅತ್ರಿಸೂನು ಎಲ್ಲಿ ತಾರ್ಕಿಕ ವಿವೇಚನೆ ಇಲ್ಲವೋ ಅಲ್ಲಿ ಕುರುಡು ನಂಬಿಕೆ ಹುಲುಸಾಗಿ ನಳನಳಿಸುತ್ತದೆ. ಎಂದೇ ಉಲ್ಕಾಪಾತ ಮತ್ತು ಧೂಮಕೇತುದರ್ಶನಗಳಂಥ ವಿರಳ ಘಟನೆಗಳಲ್ಲಿ ಮಾನವ, ದೇವರ ಮುನಿಸು ಕಂಡ, ತನ್ನ ದೇಶ, ತನ್ನ ಜನ, ತನ್ನ ನಾಯಕ ಇವರಿಗೆ ಅಪಾಯದ ಪೂರ್ವ ಶಕುನ ಗುರುತಿಸಿದ. ಹೀಗೆ ಬೆಳೆದು ಬಂದಿವೆ ಧೂಮಕೇತುವನ್ನು ಕುರಿತ ಜನಜನಿತ ನಂಬಿಕೆಗಳು ಮತ್ತು ಐತಿಹ್ಯಗಳು.

ಮಹಾಕವಿ ವಿಲಿಯಮ್ ಶೇಕ್‌ಸ್ಪಿಯರ್ ( ೧೫೬೪ - ೧೬೧೬ ) ಜೂಲಿಯಸ್ ಸೀಸರ್ ' ನಾಟಕದಲ್ಲಿ ಧೂಮಕೇತುವನ್ನು ದುರಂತದ ಪ್ರತಿಮೆಯಾಗಿ ಬಳಸಿ ಕೊಂಡಿದ್ದಾನೆ :

When beggars die , there are no comets seen ; The heavens themselves blaze forth the death of princes .

ಕಾಣಿಸವು ಧೂಮಕೇತುಗಳು ತಿರುಕರು ಸಾಯೆ

ಸಾಮ್ರಾಟರಂತ್ಯಮಂ ಬಾನೆ ತಾನುರಿದು ಬಿತ್ತರಿಸುವುದು ಇವೆಲ್ಲ ಮೂರ್ಖತೆ ಮೌಡ್ಯಗಳ ಗಬ್ಬು ನೀರಿನ ನಡುವೆಯೂ ವಿಜ್ಞಾನ ಚಿಂತನೆಯ ನಿರ್ಮಲ ಸಲಿಲ ಹರಿದೇ ಹರಿಯಿತು : ನೈಸರ್ಗಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ವರ್ತಿಸುವ ಪ್ಲೇಯನಿಷ್ಟ ನಿಯಮಗಳ ಅನ್ವೇಷಣೆ ಇದರ ವಸ್ತು . ಈ ಪರಂಪರೆಯಲ್ಲಿ ಪ್ರಜ್ವಲಿಸಿದ ಸಾರ್ವಕಾಲಿಕ ಮಹಾಪ್ರತಿಭೆ ಐಸಾಕ್ ನ್ಯೂಟನ್ ( ೧೬೪೨- ೧೭೨೬ ). ಈತ ಆವಿಷ್ಕರಿಸಿದ ವಿಶ್ವಗುರುತ್ವಾಕರ್ಷಣನಿಯಮ ಆಕಾಶ ಕಾಯಗಳ ಚಲನೆಯನ್ನು ಸಮರ್ಪಕವಾಗಿ ವಿವರಿಸುತ್ತದೆ ಇದನ್ನು ಪ್ರತಿಲೋಮ

೫೮

ಜಾತಕ ಮತ್ತು ಭವಿಷ್ಯ

ಪ್ರಧಾನಾಕ್ಷ

ಪುರರವಿ

* ಅಪರವಿ.

ಚಿತ್ರ ೧೩ : ಸೂರ್ಯನನ್ನು ಕುರಿತಂತೆ ಗ್ರಹವು ಸಮಕಾಲಾವಧಿಗಳಲ್ಲಿ ರೇಖಿಸುವ ಎರಡು ಸಲೆಗಳನ್ನು ಚಿತ್ರದಲ್ಲಿ ನೆರಳುಗೊಳಿಸಿದ- ಪುರರವಿಯನ್ನು ಒಳಗೊಂಡಿರುವುದು ಒಂದು, ಅಪರವಿಯ ಸನಿಹದಲ್ಲಿರುವುದು ಇನ್ನೊಂದು. ಈ ಸಲೆಗಳು ಸಮವಾಗಿವೆ- ಇದೇ ಕೆಪ್ಲರನ ಎರಡನೆಯ ನಿಯಮ ( “ಸಮಕಾಲಾವಧಿಗಳಲ್ಲಿ ಸಮಸಲೆಗಳು . ) ಸಹಜವಾಗಿ ಗ್ರಹದ ಕಕ್ಷಾವೇಗ ಪುರರವಿಯ ವಲಯದಲ್ಲಿ ಅಪರವಿಯ ವಲಯದಲ್ಲಿಗಿಂತ ಅಧಿಕ, ಪುರರವಿಯಲ್ಲಿ ಗರಿಷ್ಠ, ಅಪರವಿಯಲ್ಲಿ ಕನಿಷ್ಠ . ವರ್ಗನಿಯಮ ಎನ್ನುವುದುಂಟು. ಇದರ ಪ್ರಕಾರ ಸೌರವ್ಯೂಹದ ಸಮಸ್ತ ಗ್ರಹೋ ಪಗ್ರಹಗಳ ಚಲನೆಗಳನ್ನೂ ಗಣಿತೀಯವಾಗಿ ವಿವರಿಸುವುದು ಸಾಧ್ಯವಾಯಿತು. ಸಾರ್ವತ್ರಿಕವಾಗಿ ಹೇಳುವುದಾದರೆ ಪ್ರತಿಯೊಂದು ಕಾಯದ ಕಕ್ಷೆಯೂ , ಸೂರ್ಯ ನನ್ನು ಕುರಿತಂತೆ, ಒಂದೊಂದು ದೀರ್ಘವೃತ್ತ , ಸೂರ್ಯನ ನೆಲೆ ಈ ದೀರ್ಘ ವೃತ್ತದ ಒಂದು ನಾಭಿ ( ಚಿತ್ರ ೧೩ , ಒಳಚಿತ್ರ ), - ನ್ಯೂಟನ್ನನ ವೇಳೆಗಾಗಲೇ ಧೂಮಕೇತುಗಳ ಬಗ್ಗೆ ವಿಪುಲ ಮಾಹಿತಿ ಸಂಗ್ರಹ ವಾಗಿತ್ತು . ಅವು ಸೌರವ್ಯೂಹದ ಆಚೆಗಿರುವ ಅನೂಹ್ಯ ಲೋಕದಿಂದ ಬಂದು ಈ ವ್ಯೂಹದಮೂಲಕ ಸರಳ ರೇಖೆಗಳ ಮೇಲೆ ಚಲಿಸುವಾಗ ಮಾತ್ರ ತಮ್ಮ ಅಸ್ತಿತ್ವ ಪ್ರದರ್ಶಿಸಿ ಮುಂದೆ ಅಂತರ್ಧಾನವಾಗುವ ಅನಂತಯಾತ್ರಿಕರು ಎಂದು ವಿಜ್ಞಾನಿ ಗಳು ಭಾವಿಸಿದ್ದರು. - ನ್ಯೂಟನ್ ತನಗೆ ದೊರೆತ ಮಾಹಿತಿಗಳನ್ನು ಗಣಿತಾತ್ಮಕವಾಗಿ ವಿಶ್ಲೇಷಿಸಿದ. ಆಗ ಅವನ ಮುಂದೆ ಹಲವಾರು ಪ್ರಶ್ನೆಗಳು ಉದ್ಭವಿಸಿದುವು. ಕಾಯಕ್ಕೆ ದೀರ್ಘ

ಅನುಬಂಧ ೨

ವೃತ್ತಾತ್ಮಕ ಕಕ್ಷೆ ಒದಗುವುದು ಸೂರ್ಯಾಕರ್ಷಣೆಯ ಪರಿಣಾಮವೆಂದೇನೋ ಸಿದ್ಧವಾಗಿದೆ ; ಹಾಗಾದರೆ ಸೌರವ್ಯೂಹವನ್ನು ಪ್ರವೇಶಿಸಿದ ಧೂಮಕೇತುವಿನ ಕಕ್ಷೆ ಕೂಡ ದೀರ್ಘವೃತ್ತವೇ ಆಗಬೇಕಷ್ಟೆ . ಅಂದ ಮೇಲೆ ಒಮ್ಮೆ ಮೈದೋರಿದ ಧೂಮಕೇತು ಮುಂದೆ ಸತತವಾಗಿ ಸೂರ್ಯನನ್ನು ಪರಿಭ್ರಮಿಸುತ್ತ ಮತ್ತೆ ಮತ್ತೆ ದರ್ಶನ ನೀಡುತ್ತಿರಬೇಕಲ್ಲವೇ ?

ಈ ಸಂದೇಹಗಳ ನಿವಾರಣೆಗೆ ಅವನು ದತ್ತಾಂಶಗಳನ್ನು ಗುರುತ್ವಾಕರ್ಷಣ ನಿಯಮದ ಒರೆಗೆ ತೀಡಿ ಪರೀಕ್ಷಿಸಿದ. ಇದರ ಪ್ರಕಾರ ಧೂಮಕೇತುವಿನ ಕಕ್ಷೆಯೂ ಗ್ರಹಕಕ್ಷೆಯ ಹಾಗೆ ದೀರ್ಘವೃತ್ತವೇ . ಆದರೆ ಅದು ತೀರ ಉದ್ದುದ್ದ ಚಾಚಿ ಕೊಂಡಿದ್ದು ಹೆಚ್ಚು ಕಡಿಮೆ ಪರವಲಯದಂತೆ ಅತಿಲಂಬಿತವಾಗಿರುವುದರಿಂದ ಒಮ್ಮೆ ಗೋಚರಿಸಿದ ಧೂಮಕೇತು ಮತ್ತೆ ಪ್ರತ್ಯಕ್ಷವಾಗಲು ಸಾಕಷ್ಟು ದೀರ್ಘಾ ವಧಿ ಬೇಕಾದೀತೆಂದು ವ್ಯಕ್ತವಾಯಿತು. ಇದೇ ಸುಮಾರಿಗೆ, ೧೬೮೦, ಪ್ರಕಟವಾದ ಹಿರಿ ಧೂಮಕೇತುವಿನ ಚಲನೆಗೂ ಕಕ್ಷೆಗೂ ನ್ಯೂಟನ್ ಗುರುತ್ವಾಕರ್ಷಣ ನಿಯಮದ ಗಣಿತಗಣನೆ ಅನ್ವಯಿಸಿ ತಾನು ತತ್ತೂರ್ವ ತಳೆದಿದ್ದ ಸೈದ್ಧಾಂತಿಕ ತೀರ್ಮಾನ ಸಮರ್ಪಕವಾಗಿದೆಯೆಂದು ದೃಢಪಡಿಸಿಕೊಂಡ. ಹೀಗೆ ಆತ ಧೂಮ ಕೇತುವಿನ ಗತಿವೃತ್ತಾಂತವನ್ನು ಗಣಿತದ ಸುಭದ್ರ ತಳಹದಿಯ ಮೇಲೆ ನಿಲ್ಲಿಸಿದ. - ನ್ಯೂಟನ್ನನ ಸರ್ವಾಪೋಶಕ ಪ್ರವಾಹೋಪಮ ಪ್ರತಿಭಾವಿಸ್ತಾರದಲ್ಲಿ ಧೂಮ ಕೇತು ಪ್ರಕರಣ ಒಂದು ಕಿರಿಯ ಕವಲು ಕಾಲುವೆ ಮಾತ್ರ . ಇವನು ಬಿಟ್ಟಲ್ಲಿಂದ ಅದನ್ನು ಮುಂದಕ್ಕೆ ಒಯ್ದವ ಇಂಗ್ಲೆಂಡಿನ ಖಗೋಳವಿಜ್ಞಾನಿ ಎಡ್ಕಂಡ್ ಹ್ಯಾಲೀ ( ೧೬೫೬-೧೭೪೨). ನ್ಯೂಟನ್ನನ ಕೆಲವೇ ಆಪ್ತ ಮಿತ್ರರ ಪೈಕಿ ಇವನೊಬ್ಬ . ಇವನ ಕೋಡಿ ಬಿರಿವ ಉತ್ಸಾಹವನ್ನು ಬೆಂಬಲಿಸಲೋ ಎಂಬಂತೆ ಅದೇ ವೇಳೆ ಕರ್ತಾರನ | ಕಮ್ಮಟದಲ್ಲಿ ಹೊಸತೊಂದು ಅಂಕ ಅನಾವರಣಗೊಂಡಿತು : ೧೬೮೨ರಲ್ಲಿ

ಪ್ರತ್ಯಕ್ಷವಾದ ನೂತನ ಧೂಮಕೇತು. ಇದರ ಪೂರ್ವೋತ್ತರಗಳನ್ನು ಇವನು ನ್ಯೂಟನ್ ಚೌಕಟ್ಟಿನಲ್ಲಿ ನಿರ್ಧರಿಸಿ ಖಚಿತ ದಾಖಲೆ ತಯಾರಿಸಿದ ತರುವಾಯದ ವರ್ಷಗಳಲ್ಲಿ ಗೋಚರಿಸಿದ ಸಮಸ್ತ ಧೂಮಕೇತುಗಳ ಮಾಹಿತಿಗಳನ್ನೂ ಕಲೆಹಾಕಿ ೧೭೦೫ರ ಹೊತ್ತಿಗೆ ೨೪ ಧೂಮಕೇತುಗಳ ಜಾತಕ ಸಿದ್ದಪಡಿಸಿದ. ಇಷ್ಟೇ ಅಲ್ಲ . ಪ್ರಪಂಚದ ಹಲವೆಡೆಗಳಿಂದ ವರದಿಯಾಗಿದ್ದ ಧೂಮಕೇತುಗಳ ಗಣಿತ ಚರಿತ್ರೆ ಕೂಡ ಬರೆದ. ಹೀಗೆ ತಯಾರಿಸಿದ ವೈಜ್ಞಾನಿಕ ದಾಖಲೆ ಪಟ್ಟಿಯನ್ನು ಸೂಕ್ಷಾ ವಲೋಕಿಸಿದಾಗ ಅಲ್ಲೊಂದು ನೂತನ ವಿಸ್ಮಯ ಕಾದಿತ್ತು : ೧೫೩೧ರಲ್ಲಿಯೂ ೧೬೦೭ರಲ್ಲಿಯೂ ಪ್ರಕಟವಾಗಿದ್ದ ಧೂಮಕೇತುಕಕ್ಷೆಗಳು ೧೬೮೨ರ

೬೦

ಜಾತಕ ಮತ್ತು ಭವಿಷ್ಯ

ಧೂಮಕೇತುಕಕ್ಷೆಯೊಂದಿಗೆ ಹೆಚ್ಚು ಕಡಿಮೆ ತದ್ವತ್ತಾಗಿ ಎರಕಗೊಂಡಿದ್ದುವು. ಈ ಘಟನೆಗಳು ೭೫ ಅಥವಾ ೭೬ ವರ್ಷಗಳ ಅವಧಿಯಲ್ಲಿ ಪುನರಾವರ್ತಿಸುತ್ತವೆ ಎಂಬ ಸಂಗತಿಯನ್ನು ಕೂಡ ಆತ ಗಮನಿಸಿದ. ಎಂದೇ ೧೫೩೧, ೧೬೦೭ ಮತ್ತು ೧೬೮೨ರಲ್ಲಿ ಕಾಣಿಸಿಕೊಂಡಧೂಮಕೇತುಗಳು ಬೇರೆ ಬೇರೆ ಅಲ್ಲ , ಒಂದೇ ಧೂಮ ಕೇತುವಿನ ಪುನರವತಾರಗಳು ಎಂಬುದಾಗಿ ಗಣಿತಗಣನೆ ಒದಗಿಸುವ ಕೆಚ್ಚಿನಿಂದ ನಿರ್ಣಯಿಸಿದ. ಹೀಗೆ ನ್ಯೂಟನ್ನನ ಗಣಿತಾತ್ಮಕ ತೀರ್ಮಾನಕ್ಕೆ ನಿಸರ್ಗದಲ್ಲಿಯ ಭೂತಕಾಲದ ದಾಖಲೆಗಳು ಪ್ರತ್ಯಕ್ಷ ರುಜುವಾತು ಒದಗಿಸಿದುವು. ಭವಿಷ್ಯದಲ್ಲಿ ಕೂಡ ಅದು ನಿಜವಾದರೆ ಅಂದರೆ ಈ ಧೂಮಕೇತು ಇದೇ ಗಣಿತ ಸೂತ್ರಾನು ಸಾರ ಭವಿಷ್ಯದ ನಿರ್ದಿಷ್ಟ ದಿನದಂದು ಪೂರ್ವನಿರ್ಧರಿತ ಸ್ಥಳದಲ್ಲಿ ಗೋಚರ ವಾದರೆ, ಮತ್ತು ಗೋಚರವಾದರೆ ಮಾತ್ರ ಅದು ಸಾರ್ವಕಾಲಿಕ ಮತ್ತು ಸಾರ್ವ ದೈಶಿಕ ಗಣಿತಸತ್ಯ , ಆದ್ದರಿಂದ ಅದೊಂದು ಸಿದ್ಧಾಂತ ಎಂಬ ಅಂತಸ್ತು ಪಡೆಯು ತದೆ. ವಾಸ್ತವವಾಗಿ ಕಲ್ಪನಾವಿಲಾಸಕ್ಕೂ ವಿಜ್ಞಾನಸತ್ಯಕ್ಕೂ ಇರುವ ವ್ಯತ್ಯಾಸವೇ ಇದು : ಮೊದಲನೆಯದನ್ನು ಪ್ರಾಯೋಗಿಕವಾಗಿ ರುಜುವಾತಿಸುವಂತಿಲ್ಲ , ಎರಡನೆ ಯದನ್ನು ರುಜುವಾತಿಸಬಹುದು ; ಮೊದಲನೆಯದು ಕಾಲ್ಪನಿಕ ಚೌಕಟ್ಟಿನ ಒಳಗೆ ಸಂಗತ, ಎರಡನೆಯದು ಭೌತ ಚೌಕಟ್ಟಿನ ಒಳಗೆ ಸಂಗತ. ಎರಡರ ಮೂಲವೂ ಒಂದೇ ಸೃಜನಶೀಲ ಮತಿ. ಪ್ರಸಕ್ತ ಧೂಮಕೇತುವಿನ ಕಕ್ಷಾವಧಿ (ಸೂರ್ಯನ ಸುತ್ತ ಒಂದು ಸುತ್ತು ಮುಗಿ

149

2018

1950

ತ96ಣ

ಪ್ರೋಟೋ

1970

1980

1985

99ರ

ಯಯನ .

ಸ್ ನೆಪ್ಯೂನ್

ಚಿತ್ರ ೧೪. ಹ್ಯಾಲೀ ( ೧೯೮೬ ) ಪಥ

ಅನುಬಂಧ ೨

ಧೂಳು ಬಾಲ

ಚಿತ್ರ ೧೫ . ಧೂಮಕೇತು ಸಂರಚನೆ ಸಲು ತೆಗೆದುಕೊಳ್ಳುವ ಕಾಲ) ೭೫ ಅಥವಾ ೭೬ ವರ್ಷಗಳು. ಆದ್ದರಿಂದ ಭವಿಷ್ಯ ದಲ್ಲಿ ಇದು ೧೭೫೮ರ ಕೊನೆಗೆ ಇಲ್ಲವೇ ೧೭೫೯ರ ಮೊದಲಿಗೆ ಪೂರ್ವನಿರ್ಧರಿತ ನೆಲೆಯಲ್ಲಿ ಮೈದಳೆದು, ಪೂರ್ವನಿರ್ಧರಿತ ಕಕ್ಷೆಯನ್ನು ರೇಖಿಸಿ, ಪೂರ್ವ ನಿರ್ಧರಿತ ಎಡೆಯಲ್ಲಿ ಮೈಗರೆಯುವುದೆಂದು ಹ್ಯಾಲೀ ಕಣಿನುಡಿದ.

ಹೀಗೆ ಈ ಸಿದ್ಧಾಂತಕ್ಕೆ , ಮಿಗಿಲಾಗಿ ಹ್ಯಾಲೀಯ ವಿಜ್ಞಾನಪುರುಷತ್ವಕ್ಕೆ , ೧೭೫೮ ೫೯ರ ಗಡುವಿನಲ್ಲಿ ಅಗ್ನಿಪರೀಕ್ಷಾಮುಹೂರ್ತ ಸನ್ನಿಹಿತವಾಯಿತು. ಆ ವೇಳೆ ಯೂರೋಪಿನ ವಿವಿಧ ವೀಕ್ಷಣ ಕೇಂದ್ರಗಳಲ್ಲಿ ಆಸಕ್ತ ವಿಜ್ಞಾನಿಗಳು ಮತ್ತು ಉತ್ಸಾಹೀ ಹವ್ಯಾಸಿಗಳು ಧೂಮಕೇತುವಿನ ಸ್ವಾಗತಕ್ಕೆ ಹೊಂಚು ಹಾಕಿ ಕುಳಿತರು. - ಆಕಾಶದ ಮಹಾವಿಸ್ತಾರದಲ್ಲಿ ಅದನ್ನು ಎಲ್ಲಿ ಅರಸಬೇಕು ಎಂಬುದನ್ನು ಗಣಿತ ಗಣನೆ ನಿಗದಿಗೊಳಿಸಿದ್ದರಿಂದ ಇವರ ಕೆಲಸ ಕಾದು ಹೊಂಚುವಷ್ಟಕ್ಕೆ ಮಾತ್ರ ಸೀಮಿತವಾಯಿತು. ಇಲ್ಲದಿದ್ದರೆ ಈ ಪ್ರಯತ್ನ ಕಡಲಿನ ಬಿತ್ತರದಲ್ಲಿ ಶೀನಪ್ಪ ನಾಯಕರ ( ಪುರಂದರದಾಸರ ಪೂರ್ವಾಶ್ರಮದ ಹೆಸರು) ಸಾದ್ವಿಪತ್ನಿ ಸರಸ್ವತಿಯ ನತ್ತು ಹೆಕ್ಕುವ ಅಸಾಧ್ಯ ಸಾಹಸಕ್ಕೆ ಸಮಾನವಾಗಿರುತ್ತಿತ್ತು . ದಿನಾಂಕ ೧೨ ಮಾರ್ಚ್ ೧೭೫೯ . ಹಿಂದಿನ ಇರುಳಿನ ಮರುಕಳಿಕೆಯಾಗಿ

೬೨

ಜಾತಕ ಮತ್ತು ಭವಿಷ್ಯ

ಅಂದಿನ ಇರುಳು ಕೂಡ ತೊಡಗಿತು . ಅರಿಲುಗಳು ಕಣ್ಣು ಮಿಟಕಿಸಿದುವು. ಉಲ್ಕೆ ಗಳು ಬೆಂಕಿಗೆರೆ ಬೀರಿದುವು. ದಿವ್ಯ ಮೌನ. ಎಲ್ಲವೂ ಮಾಮೂಲಿನಂತೆಯೇ ಎಂದುಕೊಳ್ಳುತ್ತಿದ್ದಾಗ . . . ಅಗೊ ! ಅದು ಅಲ್ಲಿಯೇ ನಿರೀಕ್ಷಿಸಿದ್ದಲ್ಲಿಯೇ ನಿರ್ದಿಷ್ಟ ಮುಹೂರ್ತದಲ್ಲಿಯೇ ಪ್ರತ್ಯಕ್ಷವಾಯಿತು - ಪುನರಾಯಾನ್ ಮಹಾ ಕಪಿಃ !( Look, my lord, it comes ! ನೋಡು ನನ್ನರಸ ಅದು ಬರುತ್ತಿದೆ ! ಹ್ಯಾಮೈಟ್) ನ್ಯೂಟನ್ನನ ಮಹಾ ಸಿದ್ಧಾಂತಕ್ಕೂ ಹ್ಯಾಲೀಯ ಧಾಷ್ಟ್ರ್ರ ಭವಿಷ್ಯ ವಾಣಿಗೂ ಬಾನಪಟದಲ್ಲಿ ಕೆತ್ತಿದ ವಿಜಯಕೇತುವಾಗಿ ಆ ಧೂಮಕೇತು ವಿಜೃಂಭಿಸಿತು.

ದುರ್ದೈವವೆಂದರೆ ಈ ಸಂಭ್ರಮೋತ್ಸಾಹದಲ್ಲಿ ಧುರೀಣತ್ವ ವಹಿಸಿ ಸಾರ್ಥಕ್ಯ ಭಾವ ಪಡೆಯಬೇಕಾಗಿದ್ದ ಹ್ಯಾಲೀ ಗತಿಸಿ ಆ ವೇಳೆಗೆ ಹದಿನೇಳು ಸಂವತ್ಸರಗಳೇ ಸಂದುಹೋಗಿದ್ದುವು. ಆತನ ಗೌರವಾರ್ಥ ಈ ನಿಯತಕಾಲಿಕ ಆಕಾಶ ಅತಿಥಿಗೆ ಹ್ಯಾಲೀ ಧೂಮಕೇತುವೆಂದು ನಾಮಕರಣಗೈಯಲಾಗಿದೆ. - ೧೭೫೯ರ ಅನಂತರ ಹ್ಯಾಲೀ ಧೂಮಕೇತು, ನಿರೀಕ್ಷೆಗೆ ಅನುಗುಣವಾಗಿ, ೧೮೩೫ , ೧೯೧೦ ಮತ್ತು ೧೯೮೬ರಲ್ಲಿ ದರ್ಶನವಿತ್ತಿದೆ. ( ಚಿತ್ರ ೧೪ ಪುಟ ೫೬).

ಆದ್ದರಿಂದ ಧೂಮಕೇತುದರ್ಶನ, ಉಲ್ಕಾಪತನ, ಗ್ರಹಣ, ಗ್ರಹಮೌಡ್ಯ (ಭೂಮಿ-ಸೂರ್ಯ ರೇಖೆಯ ಸಮೀಪದಲ್ಲಿ ಗ್ರಹವಿರುವಾಗ ಸೌರತೇಜಸ್ಸಿನ ಕಾರಣವಾಗಿ ನಮಗೆ ಗ್ರಹ ಕಾಣಿಸದು ; ಈ ನೈಸರ್ಗಿಕ ವಿದ್ಯಮಾನವೇ ಗ್ರಹ ಮೌಡ್ಯ) ಮುಂತಾದ ಗಗನ ಘಟನೆಗಳು ನಮ್ಮನ್ನು ಅಧಿಕ ಜಿಜ್ಞಾಸುಗಳಾಗಿ ಉತ್ತಾರಿಸಬೇಕೇ ಹೊರತು ಫಲಜ್ಯೋತಿಷಿಗಳಿಗೆ ಗ್ರಾಸಗಳಾಗಿ ಉತ್ಪಾಟಿಸ ಬಾರದು.

ಅನುಬಂಧ ೩ ಗ್ರಹ- ವಾರ ಸಂಬಂಧ

ಇಂದು ಆದಿತ್ಯವಾರ -ಸೂರ್ಯನ ದಿನ, ಪ್ರಶಸ್ತ ದಿನ ; ನಾಡಿದ್ದು ಮಂಗಳ ವಾರ - ಅಂಗಾರಕನ ದಿನ, ಅಮಂಗಳದಿನ ; ಶನಿಯ ದಿನವಾದ ಶನಿವಾರ ಖಂಡಿತ ಕೆಟ್ಟದಿನ. ಜನಜನಿತವಾದ ಈ ನಂಬಿಕೆಗೆ ವೈಜ್ಞಾನಿಕ ಆಧಾರ ಉಂಟೇ ? ಅರ್ಥಾತ್ ಯಾವುದೇ ಆಕಾಶಕಾಯಕ್ಕೂ ಅದರ ಹೆಸರು ಹೊತ್ತಿರುವ ದಿನಕ್ಕೂ ಏನಾದರೂ ವೈಜ್ಞಾನಿಕ ಸಂಬಂಧ ಉಂಟೇ ?

ಅನುಬಂಧ ೩

೬೩

- ಗ್ರಹ- ವಾರ ಸಂಬಂಧವೊಂದು ಬಾದರಾಯಣ ಸಂಬಂಧ. ಯಾವುದೇ ಗ್ರಹದ ಹೆಸರಿರುವ ದಿವಸದ ಮೇಲೆ ಆ ಗ್ರಹದ ಪ್ರಭಾವವಾಗಲಿ, ವಿಲೋಮವಾಗಿ, ಆ ಗ್ರಹದ ಮೇಲೆ ಆ ದಿವಸದ ಪ್ರಭಾವವಾಗಲಿ ವೈಜ್ಞಾನಿಕವಾಗಿ ಏನೂ ಇಲ್ಲ . ಹಾಗಿ ದ್ದರೂ ಈ ಸಂಬಂಧದ ಹಿನ್ನೆಲೆಯಲ್ಲಿ ಖಚಿತ ವೈಜ್ಞಾನಿಕ ಚಿಂತನೆ ಉಂಟು. ಉಸಿರಾಡಿದಷ್ಟೇ ಸಲೀಸಾಗಿ “ಇಂದು ಶುಕ್ರವಾರ ” ಎನ್ನುತ್ತೇವೆ, ಶುಕ್ರವಾರದ ಹಿಂದಿನ ದಿವಸ ಗುರುವಾರ ಮತ್ತು ಮರುದಿವಸ ಶನಿವಾರ ಎಂಬ ಸಂಗತಿಗಳು ತಿಳಿದಿವೆ. ಈ ಸಂಪ್ರದಾಯ ಪ್ರಪಂಚಾದ್ಯಂತ ಹಲವು ಶತಮಾನಗಳಿಂದಲೂ ಪ್ರಚಾರದಲ್ಲಿದೆ. ಎಂದೇ ಒಬ್ಬ ಜಪಾನೀಯನೂ ಒಬ್ಬ ಭಾರತೀಯನೂ ಮಾಸ್ಕೋದಲ್ಲಿ ಸಂಧಿಸಿದಾಗಲೂ ಅವರಿಗೆ ಇಂದು ಯಾವ ದಿವಸ ? ” ಎಂಬ ವಿಚಾರದಲ್ಲಿ ಸಂದೇಹ ಬರದು. ಹಾಗೆ ಬಂದರೂ ಅದನ್ನು ಸ್ಥಳೀಯರೊಂದಿಗೆ ಮಾತಾಡಿ ಪರಿಹರಿಸಿಕೊಳ್ಳಬಹುದು. ದಿವಸಗಳ ಹೆಸರು ಮತ್ತು ಅವು ಒಂದರ ಹಿಂದೆ ಇನ್ನೊಂದು ಸಂದು ಹೋಗುವ ಅನುಕ್ರಮ ( ಅಂದರೆ ಆದಿತ್ಯವಾರದಿಂದ ಶನಿವಾರದವರೆಗಿನ ವಾರಚಕ್ರ ) ಭೌಗೋಲಿಕ ಮತ್ತು ಸಾಂಸ್ಕೃತಿಕ ಗಡಿಮೀರಿ ನಿಜಕ್ಕೂ ಅಂತಾರಾಷ್ಟ್ರೀಯವಾಗಿವೆ. - ಪರಿಸ್ಥಿತಿ ಇಷ್ಟು ಸ್ಪಷ್ಟ ಮತ್ತು ಖಚಿತ ಎಂದು ಭಾಸವಾದರೂ ಇದು ಪೂರ್ತಿ ಮಾನವಕೃತ, ನಿಸರ್ಗಪ್ರಣೀತ ಅಲ್ಲ ಎಂದರೆ ನಿಮಗೆ ಆಶ್ಚರ್ಯವಾದೀತು. ಮೊದಲು ನಿಸರ್ಗದಿಂದ ಮಾನವನ ವಿಕಾಸವಾಯಿತೆಂದೂ ಮುಂದೆ ಇವನು ತನ್ನ ಬದುಕಿನ ಅನಿವಾರ್ಯ ಆವಶ್ಯಕತೆಯಾಗಿ ದೇವರನ್ನು ಸೃಷ್ಟಿಸಿ ತನ್ನ ಈ ಸೃಷ್ಟಿಗೆ ತಾನೇ ಮಣಿದು ಹೆದರಲು ತೊಡಗಿದನೆಂದೂ ವಾದಿಸುವ ಪಂಥ ಉಂಟು. ಪ್ರಾಯಶಃ ಮಾನವ ಮನಸ್ಸಿನ ಸಂರಚನೆ ಈ ತೆರನಾದ ಊಹೆ, ಸೃಷ್ಟಿ , ಭಯ , ಭಕ್ತಿಗಳಿಗೆ ಅವಕಾಶ ಮಾಡಿಕೊಡುವುದೋ ಏನೋ . ವಾರಗಳ ಮತ್ತು ಗಳಿಗೆಗಳ ಶುಭಾಶುಭ ವಿಚಾರದಲ್ಲಿ ಇದು ಸ್ಪಷ್ಟವಾಗಿ ಪ್ರಕಟವಾಗುತ್ತದೆ. ಏಕೆಂದರೆ ಸಾಮಾನ್ಯರಂತಿರಲಿ, ವಿಜ್ಞಾನ ಓದಿ ಅದರ ಅನ್ವಯದಿಂದಲೇ ಜೀವನ ನಡೆಸು ತಿರುವ ' ಅಸಾಮಾನ್ಯರು' ಕೂಡ, ಮಂಗಳ ಮತ್ತು ಶನಿವಾರಗಳಂದು ಮಂಗಳ ಕಾರ್ಯಕ್ಕೆ ಹಿಂದೇಟು ಹೊಡೆಯುವುದು ಅಪರೂಪವಲ್ಲ . ಇನ್ನು ಭರಣಿ- ಕೃತ್ತಿಕೆ ಮತ್ತು ರಾಹುಕಾಲ ? ಸಾಕ್ಷಾತ್ ಸರ್ಪದಂಶನಾನುಭವವೇ ಇವರಿಗೆ !

ಅಮಾವಾಸ್ಯೆ , ಹುಣ್ಣಿಮೆ, ಗ್ರಹಣ, ಧೂಮಕೇತು ಆಗಮನ, ಶುಕ್ರ ಅಥವಾ ಗುರುಮೌಡ್ಯ ಮುಂತಾದ ಸನ್ನಿವೇಶಗಳನ್ನು ಕುರಿತ ಈ ತೆರನಾದ ' ಅಸ್ಪೃಶ್ಯ' ಭಾವನೆಯನ್ನು ಗಗನದೃಶ್ಯಗಳ ಮುನ್ನೆಲೆಯಲ್ಲಿ ವ್ಯಾಖ್ಯಾನಿಸಬಹುದು. ಇದು

ಜಾತಕ ಮತ್ತು ಭವಿಷ್ಯ

ಸಮರ್ಥನೆ ಅಲ್ಲ . ಅಮಾವಾಸ್ಯೆಯಂದು ಚಂದ್ರದರ್ಶನವಿಲ್ಲ . ಹುಣ್ಣಿಮೆಯಂದು ಚಂದ್ರನ ಪೂರ್ಣಬಿಂಬ ಥಳಥಳಿಸುತ್ತಿದ್ದು ನಕ್ಷತ್ರಗಳು ಕಳಾಹೀನವಾಗಿರುತ್ತವೆ. ಗ್ರಹಣವೆಂದರೆ ಸೂರ್ಯ ಅಥವಾ ಚಂದ್ರ ಛಾಯಾವೃತವಾಗುವ ವಿರಳದೃಶ್ಯ . ಬಾನ ಹಲಗೆಯಲ್ಲಿ ವಿಧಿ ಬರೆದಂತೆ ಕಾಣುವ ವಿಕರಾಳ ಚಿತ್ರ ಧೂಮಕೇತು. ಅದೇ ಕೆಲವು ತಿಂಗಳ ಕಾಲ ಬೆಳಕಿನ ಗಟ್ಟಿಗಳಂತೆ ಇರುಳ ಬಾನನ್ನು ಬೆಳಗಿದ ಶುಕ್ರ ಮತ್ತು ಗುರು ಕ್ರಮೇಣಸೂರ್ಯಪ್ರಕಾಶದ ಉಜ್ವಲತೆಯಲ್ಲಿ ಲೀನವಾಗಿ ಅಂತ ರ್ಧಾನವಾಗುವ ವಿದ್ಯಮಾನ ಗ್ರಹಮೌಡ್ಯ, ಖಗೋಳವೈಜ್ಞಾನಿಕ ದೂರಗಳಲ್ಲಿರುವ ( ಅಂದರೆ ಭೂಮಿಯಲ್ಲಿಯ ದೂರಗಳಿಗೆ ಹೋಲಿಸುವಾಗ ಅನಂತವೆಂದು ಭಾಸ ವಾಗುವ ದೂರಗಳಲ್ಲಿರುವ) ಮತ್ತು ಆ ಕಾರಣಕ್ಕಾಗಿ ಶತಮಾನಪರ್ಯಂತ ನಿಶ್ಚಲವಾಗಿರುವಂತೆ ಕಾಣುವ ಭರಣಿ ಕೃತ್ತಿಕೆ ನಕ್ಷತ್ರ ಚಿತ್ರದ ಮುನ್ನೆಲೆಯಲ್ಲಿ ಚಂದ್ರ ಬರುವ ಮಾಸಿಕ ಘಟನೆ ಭರಣಿ- ಕೃತ್ತಿಕೆ. - ಅಂದರೆ ಅಮಾವಾಸ್ಯೆ , ಹುಣ್ಣಿಮೆ , ಗ್ರಹಣ, ಸಂಕ್ರಮಣ, ಅಯನಾರಂಭ ಮುಂತಾದ ಪದಗಳು ಆಕಾಶದಲ್ಲಿ ಖಚಿತವಾಗಿ ಬೊಟ್ಟಿಟ್ಟು ತೋರಿಸಬಹುದಾದ ಘಟನೆಗಳನ್ನು ಸೂಚಿಸುತ್ತವೆ ಬಾನ ಗೆಲ್ಲಂಕ ಹಲಗೆಯಲ್ಲಿ (Scoreboard) ಕಾಲರಾಯ ಇವನ್ನು ಬರೆದು ತೋರಿಸುತ್ತಿರುವನೋ ಎಂಬಂತೆ. ಆದರೆ ದಿವಸದ ೨೪ ಗಂಟೆಗಳು, ವಾರದ ೭ ದಿವಸಗಳು, ವರ್ಷದ ೧೨ ತಿಂಗಳು, ಇಸವಿಸಂಖ್ಯೆ ಮುಂತಾದವನ್ನು ಎತ್ತಿ ಕಾಣಿಸುವ ಯಾವ ಘಟನೆಯೂ ಆಕಾಶದಲ್ಲಿ ಜರಗುವು ದಿಲ್ಲ . ಬಾನಿನಲ್ಲಿ ತಾರೀಕುಪಟ್ಟಿ ಇಲ್ಲ .

ಹಾಗಾದರೆ ಆಚರಣೆಯಲ್ಲಿರುವ ಗಂಟೆ, ದಿವಸ , ತಿಂಗಳು, ಇಸವಿ ಮುಂತಾ ದವುಗಳ ಅರ್ಥವೇನು ?

ಗಗನದೃಶ್ಯಗಳಿಂದ ಪ್ರಾಚೀನ ಮಾನವ ಮೊದಲು ಭಯವಿಸ್ಮಿತನಾದ. ಮುಂದೆ ಕುತೂಹಲ ತಳೆದ, ಅನ್ವೇಷಕ ಪ್ರವೃತ್ತಿಯಿಂದ ಅವನ್ನು ಅವಲೋಕಿಸಿದ. ಅವನಿಗೆ ಕಂಡನೋಟವಿದು : ಚಂದ್ರ ಅವನ ಗಡಿಯಾರ ; ಹನ್ನೆರಡು ಅಮಾವಾಸ್ಯೆ ಅಥವಾ ಹುಣ್ಣಿಮೆ ಸಂದಾಗ ಭೂಮಿಯಲ್ಲಿ ಋತುಗಳ ಒಂದು ಚಕ್ರ ಪೂರ್ತಿಗೊಂಡು ಮುಂದಿನದು ಆರಂಭವಾಗುತ್ತಿತ್ತು ; ಅದೇ ವೇಳೆ ಆಕಾಶದಲ್ಲಿಯ ಸ್ಥಿರ ನಕ್ಷತ್ರ ಚಿತ್ರಗಳು ಹಿಂದಿನ ವಿನ್ಯಾಸವನ್ನೇ ಪ್ರದರ್ಶಿಸುತ್ತಿದ್ದುವು ಹೀಗೆ ಸಂಖ್ಯೆ ೧೨ಕ್ಕೆ ಪ್ರಾಶಸ್ಯ ಒದಗಿತು. - ಎರಡು ಅನುಕ್ರಮ ಅಮಾವಾಸ್ಯೆಗಳ ನಡುವಿನ ಅವಧಿ ತಿಂಗಳು. ಇದರ ದೀರ್ಘತೆ ಸುಮಾರು ೩೦ ದಿವಸಗಳು . ಒಂದು ತಿಂಗಳಿಗೆ ಎರಡು ಪಕ್ಷಗಳು

ಅನುಬಂಧ ೩

ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಶುಕ್ಲಪಕ್ಷ , ಹುಣ್ಣಿಮೆಯಿಂದ ಅಮಾವಾಸ್ಯೆ ತನಕ ಕೃಷ್ಣ ಪಕ್ಷ . ಪಕ್ಷದ ಅವಧಿ ಸುಮಾರು ೧೪ ದಿವಸಗಳು.

ಪಕ್ಷ , ತಿಂಗಳು ಮತ್ತು ವರ್ಷ ಎಂಬ ಕಾಲಮಾನಕಗಳು ಈ ತೆರನಾಗಿ ರೂಢಿಗೆ ಬಂದುವು. ಇವು ವರ್ಷವನ್ನು ನಿಖರವಾಗಿ ಅಳೆಯುವುದಿಲ್ಲವೆಂಬ ಸಂಗತಿ ಬೇಗನೆ ಸ್ಪಷ್ಟವಾಯಿತು. ಏಕೆಂದರೆ ಚಾಂದ್ರವರ್ಷದ ಉದ್ದ ೩೫೪ ( = ೨೯ . ೫ x೧೨) ದಿವಸ ಗಳು , ಋತುಚಕ್ರದ್ದು ೩೬೫ ದಿವಸಗಳು . ಚಂದ್ರನನ್ನು ಅವಲಂಬಿಸಿ ವರ್ಷಗಣನೆ ಮಾಡಿದಾಗ ಕೆಲವೇ ವರ್ಷಗಳಲ್ಲಿ ಋತುಗಳಿಗೂ ಮಾಸಗಳಿಗೂ ನಡುವೆ ಹೊಂದಾಣಿಕೆ ತಪ್ಪಿಹೋಗಿ ಜನಜೀವನದಲ್ಲಿ ಗೊಂದಲ ತಲೆಹಾಕಿತು. ಈ ಕೊರ ಯನ್ನು ಅಧಿಕಮಾಸ ಕ್ಷಯಮಾಸ ಮುಂತಾಗಿ ತೇಪೆಹಾಕಿ ಸರಿಪಡಿಸಲಾಯಿತಾ ದರೂ ತಿಂಗಳು ಮತ್ತು ಪಕ್ಷ ಪದಗಳು ಮೂಲ ಅರ್ಥಗಳಲ್ಲಿಯೇ ಉಳಿದು ಕೊಂಡು ಬಳಕೆ ಆಗುತ್ತಿವೆ.

ಸೂರ್ಯೋದಯದಿಂದ ಮುಂದಿನ ಸೂರ್ಯೋದಯದ ತನಕ ಸಲ್ಲುವ ಅವಧಿಯೇ ದಿವಸ, ನಾಗರಿಕತೆ ಮುನ್ನಡೆದಂತೆ ಧಾರ್ಮಿಕಾಚರಣೆ , ಕೃಷಿಕಾರ್ಯ, ವಾಣಿಜ್ಯ ವ್ಯವಹಾರ ಮುಂತಾದ ಹಲವು ಹನ್ನೊಂದು ಚಟುವಟಿಕೆಗಳಿಗೆ ಅನು ಕೂಲವಾಗುವಂತೆ ದಿವಸಗಳ ನಿರ್ದಿಷ್ಟ ಗುಂಪನ್ನು ಪರಿಗಣಿಸುವುದು ಅಗತ್ಯ ವಾಯಿತು. ಉದಾಹರಣೆಗೆ ಪ್ರಾಚೀನ ಈಜಿಪ್ಟಿನಲ್ಲಿ ೧೦ ದಿವಸಗಳ ' ವಾರ ' ಬಳಕೆ ಯಲ್ಲಿತ್ತು . ವೈದಿಕರು ಅಮಾವಾಸ್ಯೆ ಪೌರ್ಣಮಿ ಮತ್ತು ಪಕ್ಷಪ್ರಥಮ ದಿನಗಳಂದು ವಿಶ್ರಾಂತಿ ಪಡೆಯುತ್ತಿದ್ದರು. ಹೀಗೆ ಕೆಲಸದ ದಿವಸಗಳು, ರಜಾದಿನಗಳು, ಪುನಃ ಕೆಲಸದ ದಿವಸಗಳು - ಈ ಚಕ್ರ ರೂಢಿಗೆ ಬಂದಿತು.

ಕ್ರಿಸ್ತಪೂರ್ವ ೮ನೆಯ ಶತಮಾನದಲ್ಲಿ ಬ್ಯಾಬಿಲೋನಿಯಾದಲ್ಲಿದ್ದ ಕಾಲೀ ಯನ್ ಜ್ಯೋತಿಶ್ಯಾಸ್ತ್ರಜ್ಞರು ೭ ದಿವಸಗಳ ವಾರಗಳನ್ನೂ ೨೪ ಗಂಟೆಗಳ ದಿವಸ ವನ್ನೂ ಪ್ರವರ್ತಿಸಿದ ಮೊದಲಿಗರು. ಪಕ್ಷಾರ್ಧದ ಅವಧಿ ೭( = ೧೪ + ೨) ದಿವಸಗಳು ಆಗಿದ್ದುದರ ಜೊತೆಗೆ ಆಕಾಶದಲ್ಲಿ ೭ ಚರಕಾಯಗಳು ಗೋಚರವಾದದ್ದು ಯೋಗಾಯೋಗ, ಸ್ಥಿರನಕ್ಷತ್ರಚಿತ್ರಗಳ ಮುನ್ನೆಲೆಯಲ್ಲಿ ಬುಧ, ಶುಕ್ರ , ಮಂಗಳ, ಗುರು, ಶನಿ ಎಂಬ ೫ ಗ್ರಹಗಳೂ ಸೂರ್ಯ , ಚಂದ್ರ ಎಂಬ ೨ ಗಗನದೀಪಗಳೂ ಭೂಮಿಯನ್ನು ಪರಿಭ್ರಮಿಸುತ್ತಿರುವ ದೃಶ್ಯ ಅವರಿಗೆ ಕಂಡಿತು. ಈ ಏಳು ಕಾಯ ಗಳ ಅಧಿಪತಿಗಳು ದೇವರುಗಳೆಂದೂ ಇವರು ಮಾನವನ ಭೂತ ವರ್ತಮಾನ ಭವಿಷ್ಯತ್ತುಗಳನ್ನು ನಿರ್ಧರಿಸಬಲ್ಲ ಸರ್ವಶಕ್ತರೆಂದೂ ಕಾಯನರು ನಂಬಿ ದ್ದರು. ಅಂದ ಮೇಲೆ ಈ ದೇವರುಗಳನ್ನು ಪೂಜಿಸುವುದು ಮಾನವನ ಕರ್ತವ್ಯ .

흐흐

ಜಾತಕ ಮತ್ತು ಭವಿಷ್ಯ

ಹೀಗೆ ಅವರು ೭ ದಿವಸಗಳ ವಾರವನ್ನು ತೊಡಗಿ ಒಂದೊಂದು ದಿವಸಕ್ಕೆ ಒಂದೊಂದು ಕಾಯದ ಹೆಸರಿಟ್ಟರು ಆದಿತ್ಯವಾರದ ಅಧಿಪತಿ ಸೂರ್ಯ, ಸೋಮವಾರದ ಅಧಿಪತಿ ಚಂದ್ರ ಇತ್ಯಾದಿ. ಆದ್ದರಿಂದ ವಾರದಲ್ಲಿರುವ ದಿವಸಗಳ ಸಂಖ್ಯೆಯಾಗಲಿ ಹೆಸರುಗಳಾಗಲಿ ಪೂರ್ತಿ ಮಾನವಕಲ್ಪಿತ, ಖಗೋಳದಲ್ಲಿ ಅವುಗಳಿಗೆ ಯಾವ ಆಧಾರವೂ ಇಲ್ಲ . ನಾನು

ಹೆಸರುಗಳ ಸರಣಿಯಲ್ಲಿ ನಿರ್ದಿಷ್ಟವಾದ ಒಂದುಕ್ರಮ ಉಂಟು : ಆದಿತ್ಯವಾರ ದಿಂದ ಶನಿವಾರದ ತನಕ. ಉದಾಹರಣೆಗೆ ಗುರುವಾರದ ಮರುದಿನ ಶುಕ್ರವಾರವೇ ಆಗತಕ್ಕದ್ದು, ಬೇರೆ ಯಾವ ವಾರವೂ ಅಲ್ಲ . ಇದೇ ಕ್ರಮ ಏಕೆ ? ಇದು ಏಕೈಕವೇ ? ಗಣಿತ ಹೇಳುತ್ತದೆ ಅಲ್ಲ ಎಂದು. ವಾಸ್ತವವಾಗಿ ಏಳು ವಾರಗಳನ್ನು ೭೨೦ ಬೇರೆ ಬೇರೆ ಸರಣಿಗಳಲ್ಲಿ ಅಳವಡಿಸಬಹುದು. ಆ ಪೈಕಿ ಈಗ ಚಾಲ್ತಿಯಲ್ಲಿರುವ ಅಳ ವಡಿಕೆ ಅಥವಾ ಕ್ರಮ ಒಂದು ಮಾತ್ರ . ಇದನ್ನೇ ಕಾಯನರು ಆಯ್ತುದೇಕೆ ? - ಈ ಪ್ರಶ್ನೆಗೆ ಉತ್ತರ ಪಡೆಯಲು ಖುದ್ದು ಆಕಾಶವನ್ನೇ ಕೆಲವು ದಶಕಗಳ ತನಕ ವೀಕ್ಷಿಸುವುದು ಅಪೇಕ್ಷಣೀಯ. ಅಂದಿನ ಕಾಲೀಯನರಿಗೆ ಯಾವ ದೃಶ್ಯ ಕಂಡಿತೋ , ಇಂದಿನ ನಮಗೂ ಅದೇ ಕಾಣುತ್ತದೆ : ನಕ್ಷತ್ರಚಿತ್ರಗಳ ಪರದೆಯ ಮೇಲೆ ಏಳು ಕಾಯಗಳು ಭೂಮಿಯನ್ನು ಪಶ್ಚಿಮ -ಪೂರ್ವದಿಶೆಯಲ್ಲಿ ಪರಿಭ್ರಮಿ ಸುತ್ತಿವೆ. ಪರಿಭ್ರಮಣಾವಧಿಗಳನ್ನು ಎಣಿಸಿ ಅವರೋಹೀ ಕ್ರಮದಲ್ಲಿ ಅಳವಡಿಸಿದರೆ ಮುಂದಿನಂತಿರುತ್ತದೆ. (ನೋಡಿ ಪುಟ ೪೨ ) : ಇಾ ೨೯ . ೫ ವರ್ಷಗಳು .

ಶನಿವಾರ ೧೧. ೮೬ ವರ್ಷಗಳು .. .... . ಗುರು

೧.೮೮ ವರ್ಷಗಳು , ವಿವ ಮಂಗಳ ಸವ ೧n ವರ್ಷದವ ಸೂರ್ಯ ರಸದ ೦.೬೨ ವರ್ಷ ದ . . . ಶುಕ್ರ

ಯಾ ೦ . ೨೪ ವರ್ಷಕಲಾ . . .. ಬುಧ ಅದರ ೦ . ೦೭ ವರ್ಷ . . ಚಂದ್ರ ಮಾದ ೧ ವರ್ಷ = ೩೬. ೫ . ೨೪೨೨ ದಿವಸಗಳು ಆ ಒಂದು ವರ್ಷದಲ್ಲಿ ೨೪ ಪಕ್ಷಗಳಿವೆ. ಈ ೨೪ ಎಂಬ ಸಂಖ್ಯೆಯಿಂದ ಸ್ಫೂರ್ತಿ ಪಡೆದ ಅವರು ಅನುಕ್ರಮ ಸೂರ್ಯೋದಯಗಳ ನಡುವಿನ ಅವಧಿಯಾದ ದಿವಸ ವನ್ನು , ಗಣನೆಯ ಸೌಕರ್ಯಕ್ಕಾಗಿ, ೨೪ ಸಮಭಾಗಗಳಾಗಿ ವಿಭಾಗಿಸಿದರು. ಇವೇ ೨೪ ಗಂಟೆಗಳು. ಈ ವಿಭಾಗೀಕರಣವೂ ಮಾನವಕಲ್ಪಿತ. ಇದಕ್ಕೆ ಆಕಾಶದಲ್ಲಿ

ಅನುಬಂಧ ೩

೬೭

ಯಾವ ಮಹತ್ತ್ವವೂ ಇಲ್ಲ . - ದಿವಸದ ಒಂದೊಂದು ಗಂಟೆಗೆ ಶನಿಯಿಂದ ಚಂದ್ರನವರೆಗಿನ ಏಳು ದೇವರು ಗಳನ್ನು ಅದೇ ಕ್ರಮದಲ್ಲಿ ಅಧಿಪತಿಗಳೆಂದು ನೇಮಿಸಲಾಯಿತು.ಸೂರ್ಯೋದಯ ವಾಗುವಾಗಿನ ಗಂಟೆಯ ಅಧಿಪತಿಯ ಹೆಸರನ್ನೇ ಆ ದಿವಸಕ್ಕೂ ಕೊಡಲಾಯಿತು. ಉದಾಹರಣೆಗೆ ಇಂದು ಸೂರ್ಯೋದಯವಾಗುವಾಗಿನ ಗಂಟೆಯ ಅಧಿಪತಿ ಸೂರ್ಯನೇ ಆಗಿರಲಿ, ಆದ್ದರಿಂದ ಇಂದು ಸೂರ್ಯವಾರ ಅಥವಾ ಆದಿತ್ಯವಾರ. ಇಂದಿನ ಗಂಟೆಗಳ ಅಧಿಪತಿಗಳು ಹೀಗಿರುತ್ತಾರೆ : ಒಂದನೆಯದು ಸೂರ್ಯ, ಎರಡನೆಯದು ಶುಕ್ರ , ಮೂರನೆಯದು ಬುಧ, ನಾಲ್ಕನೆಯದು ಚಂದ್ರ , ಐದನೆ - ಯದು ಶನಿ, ಆರನೆಯದು ಗುರು, ಏಳನೆಯದು ಮಂಗಳ, ಎಂಟನೆಯದು ಅಂತೆಯೇ ಹದಿನೈದನೆಯದು ಮತ್ತು ಇಪ್ಪತ್ತೆರಡನೆಯದು ಪುನಃ ಸೂರ್ಯ. ಇಪ್ಪತ್ತಮೂರನೆಯದು ಶುಕ್ರ ಮತ್ತು ಇಪ್ಪತ್ತನಾಲ್ಕನೆಯದು ಬುಧ. ಆದ್ದರಿಂದ ಇಪ್ಪತ್ತೈದನೆಯದು ಚಂದ್ರ, ಇಂದಿನ ಇಪ್ಪತೈದನೆಯ ಗಂಟೆ ನಾಳಿನ ಒಂದನೆಯ

4

ಬುಧ

- ಶುಕ್ರ

ಚಂದ್ರ

ಕುಜ

ಚಿತ್ರ ೧೬

ಗುರು

೬೮

ಜಾತಕ ಮತ್ತು ಭವಿಷ್ಯ

ಗಂಟೆ. ಹೀಗೆ ನಾಳಿನ ಒಂದನೆಯ ಗಂಟೆಯ ಅಧಿಪತಿ ಚಂದ್ರನಾದ್ದರಿಂದ ನಾಳೆ ಚಂದ್ರವಾರ ಅಥವಾ ಸೋಮವಾರ, ಹೀಗೆ ಆದಿತ್ಯವಾರದ ಮರುದಿನ ಸೋಮ ವಾರ . ಇದೇ ರೀತಿ ಮುಂದುವರಿದರೆ ೭ ದಿವಸಗಳ ಒಂದು ಚಕ್ರವನ್ನು ಅಥವಾ ವಾರವನ್ನು ಪೂರ್ತಿಗೊಳಿಸಿ ಪುನಃ ಆದಿತ್ಯವಾರಕ್ಕೆ ಮರಳುತ್ತೇವೆ. - ಈ ಅನುಕ್ರಮವನ್ನು ನೆನಪಿನಲ್ಲಿಡಲು ಒಂದು ಸರಳ ಚಿತ್ರಸೂತ್ರವಿದೆ. ವೃತ್ತ ಪರಿಧಿಯ ಮೇಲೆ ಏಳು ಕಾಯಗಳ ಹೆಸರುಗಳನ್ನು ಕಾಲ್ಮೀಯನರು ಕಂಡ ಅವರೋಹೀ ಕ್ರಮದಲ್ಲಿ ( ಅಪ್ರದಕ್ಷಿಣ ದಿಶೆಯಲ್ಲಿ) ಬರೆಯಬೇಕು. ( ಚಿತ್ರ ೧೬ ಪುಟ ೬೭ ), ಬಳಿಕ ಯಾವುದೇ ಕಾಯದಿಂದ ತೊಡಗಿ , ಅದರಿಂದ ಮುಂದಿನ ಎರಡು ಕಾಯಗಳನ್ನು ಅಪ್ರದಕ್ಷಿಣ ದಿಶೆಯಲ್ಲಿ ಜಿಗಿಹಾಯ್ದು ಮೂರನೆಯದನ್ನು ತಲಪಬೇಕು. ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದಾಗ ನಮಗೆ ಆದಿತ್ಯವಾರದಿಂದ ಶನಿವಾರದವರೆಗಿನ ಸರಣಿ ದೊರೆತಿರುತ್ತದೆ.

ವಾಸ್ತವವಾಗಿ ದಿವಸದ ಹೆಸರಿಗೂ ವ್ಯಕ್ತಿಯ ಶುಭಾಶುಭಕ್ಕೂ ನಡುವೆ ಯಾವ ಸಂಬಂಧವೂ ಇಲ್ಲ . ದಿವಸದ ಗಳಿಗೆಗೂ ಉದ್ದಿಷ್ಟಕಾರ್ಯದ ಜಯಾಪಜಯಕ್ಕೂ ನಡುವೆ ಯಾವ ಸಂಬಂಧವೂ ಇಲ್ಲ . ಇಸವಿ ಸಂಖ್ಯೆಗೂ ( ಅಥವಾ ಸಂವತ್ಸರ ನಾಮಕ್ಕೂ ) ಸಂವತ್ಸರ ಫಲಕ್ಕೂ ನಡುವೆ ಯಾವ ಸಂಬಂಧವೂ ಇಲ್ಲ . ರಾಹು ಕಾಲ, ಭರಣಿ-ಕೃತ್ತಿಕೆ, ಶೂನ್ಯಮಾಸ, ಗ್ರಹಣ ಮುಹೂರ್ತ ಮುಂತಾದ ಘಟನೆಗಳ ಸುತ್ತ ಹೆಣೆದುಕೊಂಡಿರುವ ಅಳುಕು ಅಂಜಿಕೆಗಳು ಮತ್ತು ಭಕ್ತಿ ಭಾವನೆಗಳು ಪೂರ್ತಿ ಮಾನವ ಕಲ್ಪನೆಗಳು. ಇವನ್ನು ನಂಬದಿರುವುದೇ ವಿವೇಕ, ವ್ಯಕ್ತಿಯ ಹಿತಾ ಹಿತಗಳನ್ನು ಪ್ರಭಾವಿಸುವ ಅಥವಾ ನಿಯಂತ್ರಿಸುವ ಅತಿಮಾನವ ಶಕ್ತಿ ಖಂಡಿತ

ಇಲ್ಲ .

ಈಗ್ಗೆ ಸುಮಾರು ೨, ೮೦೦ ವರ್ಷಗಳ ಹಿಂದೆ ಕಾಲ್ಮೀಯನರು ಪ್ರವರ್ತಿಸಿದ ನಿಷ್ಕೃಷ್ಟ ವೀಕ್ಷಣೆ, ವೈಜ್ಞಾನಿಕ ವಿಶ್ಲೇಷಣೆ, ನಿಗಮಿಸಿದ ತತ್ಯ ಮತ್ತು ವಿಧಿಸಿದ ಸೂತ್ರ ನಮ್ಮನ್ನು ಬೆರಗುಗೊಳಿಸುವಂತಿದೆ. ಇವುಗಳಿಗೆ ತೀರ ವೈದೃಶ್ಯವಾಗಿ ನಮ್ಮಲ್ಲಿ ಬಹುಮಂದಿ ವಿಜ್ಞಾನ- ಸುಶಿಕ್ಷಿತರು ಖಾಸಗಿ ಬದುಕಿನಲ್ಲಿಯೂ (ಉದಾ ಹರಣೆಗೆ ಧಾರ್ಮಿಕಾಚರಣೆಗಳು, ಸಾರ್ವಜನಿಕ ರಂಗದಲ್ಲಿಯೂ (ಉದಾಹರಣೆಗೆ ರಾಹುಕಾಲ ನಿವಾರಣೆ) ವರ್ತಿಸುವ ಪರಿಯನ್ನು ಗಮನಿಸುವಾಗ “ನಗೆಯು ಬರುತಿದೆ, ಎನಗೆ ! ”

ಅನುಬಂಧ ೪ ಕುಂಭಮೇಳ ಡಂಭದಾಳ

ದಿನಾಂಕ ೩- ೨- ೧೯೫೪ರಂದು ಪ್ರಯಾಗದ ಕುಂಭಮೇಳದಲ್ಲಿ , ಅಂತೆಯೇ , ೧೯ - ೨- ೧೯೯೨ರಂದು ಕುಂಭಕೋಣಮ್‌ನ ಮಹಾಮಾಘ ಮೇಳದಲ್ಲಿ ಸಂಭವಿ - ಸಿದ ಜನರ ನೂಕು ನುಗ್ಗಲಿನಲ್ಲಿ ಅಸಂಖ್ಯ ಯಾತ್ರಿಗಳು ದುರ್ಮರಣಕ್ಕೀಡಾದರು. - ಯಾವುದೇ ' ಸುಮುಹೂರ್ತ,' ' ಪುಣ್ಯಕಾಲ,' 'ಗ್ರಹಮೇಳ' ಅಥವಾ ' ಪವಿತ್ರಸ್ಥಳ ನೈಸರ್ಗಿಕ ಘಟನೆಗಳನ್ನು ನಿವಾರಿಸಲಾರವು ಎನ್ನುವುದಕ್ಕೆ ಇವು ನಿದರ್ಶನಗಳು. ಅಷ್ಟೊಂದು ಜನ ಒಂದೆಡೆ ಒಮ್ಮೆಗೇ ಜಮಾಯಿಸದಂತೆ ಜನರಿಗೆ ತಿಳಿವಳಿಕೆ ನೀಡುವುದೊಂದೇ ಭವಿಷ್ಯದಲ್ಲಿ ಇಂಥ ಮಾನವಕೃತ ದುರಂತಗಳನ್ನು ತಪ್ಪಿಸಲು ಇರುವ ಹಾದಿ.

ಹಾಗಾದರೆ ಹನ್ನೆರಡು ವರ್ಷಗಳಿಗೊಮ್ಮೆ ಘಟಿಸುವ ಪ್ರಯಾಗದ ಕುಂಭ ಮೇಳದ ಅಂತೆಯೇ , ಕುಂಭಕೋಣಮ್‌ನ ಮಹಾಮಾಘಮೇಳದ ವೈಶಿಷ್ಟ್ಯ ವೇನು? |

ನಮಗೆ ಭಾಸವಾಗುವ ಪ್ರಕಾರ ಆಕಾಶವೊಂದು ನೀಲಿಬಣ್ಣದ ನುಣುಪು ಮೈಯ ಮಹಾಗೋಳ, ಇದರ ಕೇಂದ್ರದಲ್ಲಿ ಸ್ಥಿರವಾಗಿದೆ ನಮ್ಮ ಭೂಮಿ. ಬಾನಿನ ಒಳಮೈಗೆಸ್ಥಿರನಕ್ಷತ್ರ ಚಿತ್ರಗಳು ಲಗತ್ತಾಗಿವೆ. ಇವುಗಳ ಮೇಲೆ ಏಳು ಕಾಯಗಳು | ಸದಾ ನಮ್ಮ ಸುತ್ತ ಸರಿಯುತ್ತಿವೆ : ಸೂರ್ಯ, ಚಂದ್ರ , ಕುಜ, ಬುಧ, ಗುರು, ಶುಕ್ರ ಮತ್ತು ಶನಿ.

ಗಗನವಿದ್ಯಮಾನಗಳಲ್ಲಿಯೂ ಭೂಪರಿಸರದಲ್ಲಿಯ ಬದಲಾವಣೆಗಳಲ್ಲಿಯೂ ಮಾನವ ಕ್ರಮೇಣ ಹಲವು ನಿಯಮಗಳನ್ನು ಗುರುತಿಸಿದ : * ಮೇಲೆ ಹೆಸರಿಸಿದ ಏಳು ಚರಕಾಯಗಳೂ ಆಕಾಶದಲ್ಲಿಯ ಇಕ್ಕಟ್ಟಾದ ಪಟ್ಟಿ

ಯೊಳಗೆ ಮಾತ್ರ ಚಲಿಸುವುದಾಗಿದೆ. ಇದೇ ರಾಶಿಚಕ್ರ ( ಚಿತ್ರ ೯ ಪುಟ ೨೬). ಎರಡು ಅನುಕ್ರಮ ಅಮಾವಾಸ್ಯೆಗಳ ನಡುವಿನ ಅವಧಿ ಒಂದು ತಿಂಗಳು, ಸುಮಾರು ೨೯ . ೫ ದಿವಸಗಳು. ಸುಮಾರು ೧೨ ತಿಂಗಳು ಸಲ್ಲುವಾಗ ಭೂ ಪರಿಸರದಲ್ಲಿ ಋತುಚಕ್ರದ ಒಂದು ಉರುಳಾಟ ಮುಗಿದಿರುತ್ತದೆ. ಇದೇ ಅವಧಿಯಲ್ಲಿ ರಾಶಿಚಕ್ರ ಮತ್ತು ಇದರ ಹೊರಗಿನ ನಕ್ಷತ್ರಚಿತ್ರಗಳು ಕೂಡ

ಒಂದು ಪರಿಭ್ರಮಣೆ ಮುಗಿಸಿರುತ್ತವೆ. ಈ ಅವಧಿಯೇ ವರ್ಷ. * ವರ್ಷದಲ್ಲಿ ೧೨ ತಿಂಗಳುಗಳಿರುವುದರಿಂದ ಸಂಖ್ಯೆ ೧೨ಕ್ಕೆ ಪ್ರಾಮುಖ್ಯ ಒದ

೭೦

ಜಾತಕ ಮತ್ತು ಭವಿಷ್ಯ

ಗಿತು. ಎಂದೇ ರಾಶಿಚಕ್ರವನ್ನು ೧೨ ಸಮಭಾಗಗಳಾಗಿ ವಿಭಾಗಿಸಿ ಒಂದೊಂದು ಭಾಗಕ್ಕೆ ಒಂದೊಂದು ಹೆಸರು ಕೊಡಲಾಗಿದೆ. ಇವುಮೇಷದಿಂದ ಮೀನದವರೆ ಗಿನ ದ್ವಾದಶ ರಾಶಿಗಳು . .. ಸೂರ್ಯನ ಹೊರತು ಮಿಕ್ಕ ಆರು ಚರಕಾಯಗಳನ್ನೂ ರಾತ್ರಿ ವೇಳೆ ಅನುಕೂಲ ಸಂದರ್ಭಗಳಲ್ಲಿ ರಾಶಿ ಚಕ್ರದ ವಿವಿಧ ನೆಲೆಗಳಲ್ಲಿ ಗುರುತಿಸಬಹುದು. ಇವುಗಳ ಪೈಕಿ ಚಂದ್ರ - ನಮಗೆ ಚೆನ್ನಾಗಿ ಅರ್ಥವಾಗುವಂತೆ ಮಾನವನ ವಿಶೇಷ ಲಕ್ಷಕ್ಕೆ (ಪ್ರೀತಿಗೆ ಕೂಡ) ಪಾತ್ರವಾಯಿತು. ಇದು ಒಂದು ಪರಿಭ್ರಮಣೆಯನ್ನು ಸುಮಾರು ೨೭ ದಿವಸಗಳಲ್ಲಿ ಮುಗಿಸುತ್ತದೆ. ಈ ಕಾರಣದಿಂದ ರಾಶಿಚಕ್ರದ ನೇರ ೨೭ ನೆಲೆಗಳನ್ನು ಗುರುತಿಸಿ ಆಯಾ ಸ್ಥಾನದಲ್ಲಿ ಕಂಡ (ಕಾಣದಿದ್ದರೆ ಊಹಿಸಿದ !) ನಕ್ಷತ್ರದ ಹೆಸರನ್ನು ಅದಕ್ಕೆ ನಿಗದಿಸಲಾಗಿದೆ. ಅಶ್ವಿನಿಯಿಂದ ರೇವತಿವರೆಗಿನ ೨೭ ನಕ್ಷತ್ರಗಳು ಹೀಗೆ ಪ್ರಾಮುಖ್ಯ ಗಳಿಸಿದುವು. ಇವು ನಿತ್ಯ ನಕ್ಷತ್ರಗಳು ಚಂದ್ರನ ಒಂದೊಂದು ದಿನದ ನೆಲೆ ಈ ಒಂದೊಂದು ನಕ್ಷತ್ರ ( ಚಿತ್ರ ೨, ಪುಟ ೧೨ ). * ೨೭ ನಿತ್ಯ ನಕ್ಷತ್ರಗಳು ೧೨ ರಾಶಿಗಳ ನೇರ ಹರಡಿರುವುದರಿಂದ, ೨೭ ಮಣಿ

ಗಳನ್ನು ಡಾಬಿನ ೧೨ ಸಮ ಭಾಗಗಳ ನೇರ ಕೂರಿಸಿದಂತೆ, ಯಾವುದೇ ರಾಶಿಯ ವ್ಯಾಪ್ತಿ ೨೭+ ೧೨ ಅಂದರೆ ೨. ೨೫ ನಕ್ಷತ್ರ ಪ್ರದೇಶ ಎಂಬುದು ಸ್ಪಷ್ಟ. ಎಂದೇ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ಪ್ರಥಮ ಪಾದ ಮೇಷ ರಾಶಿಯನ್ನೂ ಕೃತ್ತಿಕಾದ ಉಳಿದ ಮೂರು ಪಾದಗಳು, ರೋಹಿಣಿ ಮತ್ತು ಮೃಗಶಿರಾದ ಮೊದಲ ಎರಡು ಪಾದಗಳು ವೃಷಭ ರಾಶಿಯನ್ನೂ ಇತ್ಯಾದಿ ನಿರ್ಧರಿಸುತ್ತವೆ. ಈ ಸೂಕ್ಷ್ಮಗಳನ್ನು ಗಣಿತದ ಮೂಲಕ ಕರಾರುವಾಕ್ಕಾಗಿ ಅರಿಯುವುದು ಸಾಧ್ಯವಿದೆ. * ನಿತ್ಯನಕ್ಷತ್ರಗಳ ಪೈಕಿ ಎದ್ದು ಕಾಣುವವುರೋಹಿಣಿ, ಆದ್ರ್ರಾ, ಮಘಾ, ಚಿತ್ತಾ ,

ಸ್ವಾತೀ , ಜೈಷ್ಕಾ ಮತ್ತು ಶ್ರವಣ . ಈ ಪೈಕಿ ಮಘಾ ಸಿಂಹರಾಶಿಯಲ್ಲಿದೆ. ಬರಿ ಗಣ್ಣಿನಿಂದ ಈ ನಕ್ಷತ್ರವನ್ನೂ ಸಿಂಹರಾಶಿಯನ್ನೂ ಗುರುತಿಸಬಹುದು. ಸಿಂಹ ರಾಶಿಯ ( ವ್ಯಾಪಕವಾಗಿ ಯಾವುದೇ ರಾಶಿಯ ) ಆಕಾರವಾಗಲೀ ಅದರಲ್ಲಿಯ ನಕ್ಷತ್ರಗಳ ಸಾಪೇಕ್ಷ ಸ್ಥಾನಗಳಾಗಲೀ ಸುದೀರ್ಘ ಕಾಲ ಬದಲಾಗುವುದಿಲ್ಲ . ನಮ್ಮನ್ನು ಸಿಂಹರಾಶಿಗೆ ಸೇರಿಸುವ ರೇಖೆಯನ್ನು ವಿರುದ್ಧ ದಿಕ್ಕಿನಲ್ಲಿ ವಿಸ್ತರಿಸಿ ದರೆ ಕುಂಭ ರಾಶಿಯನ್ನು ತಲಪುತ್ತೇವೆ. ಅಂದರೆ ಸಿಂಹ - ನಾವು- ಕುಂಭ ಒಂದು ಸರಳ ರೇಖೆ. ಆದರೆ ಕುಂಭರಾಶಿಯನ್ನು ಗುರುತಿಸಲು ನೆರವಾಗುವ ಉಜ್ವಲ ನಕ್ಷತ್ರಗಳು ಆ ವಲಯದಲ್ಲಿಲ್ಲ .

ಅನುಬಂಧ ೪

* ಸಪ್ತ ಚರಕಾಯಗಳ ಪರಿಭ್ರಮಣಾವಧಿಗಳನ್ನು ನಮ್ಮನ್ನು ಕುರಿತಂತೆ ರಾಶಿ

ಚಕ್ರದಲ್ಲಿ ಒಂದು ಸುತ್ತು ಮುಗಿಸಲು ಬೇಕಾಗುವ ಕಾಲ - ವಾಸ್ತವ ವೀಕ್ಷಣೆ ಯಿಂದ ಗಣಿಸಿದರು : ಸೂರ್ಯನದು ೧ ವರ್ಷ ; ಶುಕ್ರ , ಬುಧ, ಹಾಗೂ ಚಂದ್ರರವು ಇದಕ್ಕಿಂತ ಕಡಿಮೆ ; ಕುಜ, ಗುರು, ಶನಿಗಳವು ಜಾಸ್ತಿ . ಗುರುವಿನದು ಸುಮಾರು ೧೨ ವರ್ಷಗಳು. ಪುನಃ ಸಂಖ್ಯೆ ೧೨ ವಿಜೃಂಭಿಸುತ್ತಿದೆ ! ಹಗಲಿನೊಡೆಯ ಸೂರ್ಯ ಏಕಚಕ್ರಾಧಿಪತಿ ರವಿಯಾಕಾಶಕೆ ಭೂಷಣಂ. ಚಂದ್ರ ನಮ್ಮ ನಿಕಟ ಗೆಳೆಯ , ಉಡುಪತಿ, ರಜನಿಗಾ ಚಂದ್ರಂ ಮಹಾ ಭೂಷಣಂ ! ಉಳಿದ ಐದು ? ಬುಧ : ಜಗುಳುವ ಈ ಬಿಳಿ ಚುಕ್ಕಿ ಗೋಚರ ವಾಗುವುದೇ ವಿರಳ. ಶನಿ : ಮಂದ ಗತಿಯ ಪೇಲವ ಬಣ್ಣದ ಬಿಳಿ ಗುರುತು, ನೀರಸ, ಕುಜ : ಕಂದುಬಣ್ಣದ ಅನಾಕರ್ಷಕ ಚುಕ್ಕಿ , ಶುಕ್ರ , ಗುರು : ಬೆಳಕಿನ ಗುಂಡುಗಳು , ಅವಳಿಗಳಂತೆ ಸಮ ಪ್ರಕಾಶದವು. ಆದರೆ ತನ್ನ ನಿಧಾನ ಆದರೂ ಖಚಿತ ಗತಿಯಿಂದ ಮತ್ತು ವಿಸ್ಕತ ಪಥದಿಂದ ಗುರು ಮಾನವನ ಪರಮ ಗೌರವಕ್ಕೆ ಪಾತ್ರವಾಯಿತು. ಗ್ರೀಕ್ ಪುರಾಣಗಳ ಪ್ರಕಾರ ಗುರುವೇ ( Jupiter ) ನಕ್ಷತ್ರ ಲೋಕಾಧಿಪತಿ ! ಹೀಗೆ ಗುರು ಗ್ರಹ ಮತ್ತು ಸಂಖ್ಯೆ ೧೨ ಯುಗ್ರ ಪ್ರಾಚೀನ ಮಾನವನ ದೃಷ್ಟಿಯಲ್ಲಿ ಪೂಜಾರ್ಹತೆ ಗಳಿಸಿತು. ಸೂರ್ಯ, ಚಂದ್ರ ಮತ್ತು ಗುರು ಈ ಕಾಯಗಳ ಪರಿಭ್ರಮಣೆಗಳನ್ನು ಪರಿಶೀಲಿಸಿದರೆ ತಿಳಿಯುವ ಸಂಗತಿಗಳಿವು : ಬಂಗಾರದ ೧. ಸೂರ್ಯ ೧ ವರ್ಷದಲ್ಲಿ ಒಂದು ಪರಿಭ್ರಮಣೆ ಮುಗಿಸುತ್ತದೆ. ಆದ್ದರಿಂದ ಒಂದೊಂದು ರಾಶಿಯಲ್ಲಿ ಒಂದೊಂದು ತಿಂಗಳು ನೆಲಸಿರುತ್ತದೆ. ೨. ಚಂದ್ರ ೧ ತಿಂಗಳಿನಲ್ಲಿ ಒಂದು ಪರಿಭ್ರಮಣೆ ಮುಗಿಸುತ್ತದೆ. ಆದ್ದರಿಂದ ತಿಂಗಳಿಗೊಮ್ಮೆ ಪ್ರತಿಯೊಂದು ರಾಶಿಯನ್ನೂ ಸಂದರ್ಶಿಸುತ್ತದೆ. ೩ . ಗುರು ೧೨ ವರ್ಷಗಳಲ್ಲಿ ಒಂದು ಪರಿಭ್ರಮಣೆ ಮುಗಿಸುತ್ತದೆ. ಆದ್ದರಿಂದ ಒಂದೊಂದು ರಾಶಿಯಲ್ಲಿ ಒಂದೊಂದು ವರ್ಷ ನೆಲಸಿರುತ್ತದೆ. ೪. ಸೂರ್ಯ- ನಾವು- ಚಂದ್ರ ಸ್ಕೂಲವಾಗಿ ಸರಳ ರೇಖೆಯಲ್ಲಿರುವ ಘಟನೆ ಹುಣ್ಣಿಮೆ. ಸೂರ್ಯ ಯಾವುದೇ ರಾಶಿ ಪ್ರವೇಶಿಸುವ ಘಟನೆ ( ಆಯಾ) ಸಂಕ್ರಮಣ. ೧೪- ೮- ೧೯೯೧ರಿಂದ ದಿನಾಂಕ ೧೦ -೯ - ೧೯೯೨ರ ತನಕ ಗುರುವಿನ ವಾಸ್ತವ್ಯ ಸಿಂಹ ರಾಶಿ , ಅಂದರೆ ಮಘಾನಕ್ಷತ್ರದ ವಲಯ . ಈ ಅವಧಿಯಲ್ಲಿ ಸಲ್ಲುವ ಸುಮಾರು ೧೨ ಹುಣ್ಣಿಮೆಗಳ ಪೈಕಿ ದಿನಾಂಕ ೧೮ - ೨- ೧೯೯೨ರದು ಮಾತ್ರ

೭೨

ಜಾತಕ ಮತ್ತು ಭವಿಷ್ಯ

ಸಿಂಹ ರಾಶಿಯಲ್ಲಿ ಅದೂ ಮಘಾ ನಕ್ಷತ್ರದಲ್ಲಿ ಸಂಭವಿಸಿತು. ಸುಮಾರು ೧೨ ವರ್ಷಗಳಿಗೊಮ್ಮೆ ನಡೆಯುವ ಈ ಖಗೋಳೀಯ ವಿದ್ಯಮಾನದಲ್ಲಿ ವಿಶೇಷ ವಾದದ್ದೇನೂ ಇಲ್ಲ . ಪಾವಿತ್ರ್ಯವಂತೂ ಇಲ್ಲವೇ ಇಲ್ಲ ! ಏಕೆಂದರೆ ಗುರು ಯಾವುದೇ ಇತರ ರಾಶಿಯಲ್ಲಿರುವಾಗಲೂ ಇದೇ ರೀತಿ ಹುಣ್ಣಿಮೆ ಸಂಭವಿಸು ಇದೆ. ಸಿಂಹರಾಶಿಯಲ್ಲಿ ಇರುವಾಗಿನದಕ್ಕೆ ಮಾತ್ರ ಮಹತ್ವ ಬಂದಿರುವುದು ಈ ರಾಶಿಯ ಆಕಾರ ಎದ್ದು ಕಾಣುವುದರಿಂದ ಮಾತ್ರ . ಉದಾಹರಣೆಗೆ ವೃಶ್ಚಿಕ ರಾಶಿ ಇನ್ನಷ್ಟು ಚೆನ್ನಾಗಿ ಎದ್ದು ಕಾಣುತ್ತದೆ. ಅದರಲ್ಲಿಯ ಜೇಷ್ಠಾ ನಕ್ಷತ್ರವೂ ಹಾಗೆ. ಆದರೆ ಗುರು ವೃಶ್ಚಿಕ ರಾಶಿಯಲ್ಲಿರುವಾಗ ಘಟಿಸುವ ಹುಣ್ಣಿಮೆಗೆ ಮಾನವ ಯಾವುದೇ ' ಪಾವಿತ್ರ ' ಹೇರಿರುವಂತೆ ಕಾಣುವುದಿಲ್ಲ . ಪ್ರಾಚೀನ ಮಾನವ ತನ್ನ ಕಲ್ಪನೆಯ ಮಿತಿಯಲ್ಲಿ ನೈಸರ್ಗಿಕ ವಿದ್ಯಮಾನ ಗಳೆಲ್ಲವೂ ದೈವಲೀಲೆಗಳೆಂದು ಬಗೆದ. ಇವುಗಳ ಪೈಕಿ ತುಸು ಎದ್ದು ಕಂಡಂಥವು ಗಳಲ್ಲಿ ದೈವಿಕ ಸಂದೇಶಗಳನ್ನೇ ಗುರುತಿಸಿ ಚಕಿತನಾದ. ಸಹಜವಾಗಿ ಇವುಗಳ ಸುತ್ತ ಊಹಾಪೋಹಗಳೂ ಕತೆ ಕಲ್ಪನೆಗಳೂ ಭಯ ಭ್ರಾಂತಿಗಳೂ ಮಡುಗಟ್ಟಿ ಮಾನವ ಮತಿಯನ್ನು ಅವಿಜ್ಞಾನ ಅವಿದ್ಯೆಯತ್ತ ತಳ್ಳಿದುವು. ಸಾಧು ಸಂತರು, ಪ್ರವಾದಿ ಪುರು. ಷೋತ್ತಮರು, ಧಾರ್ಮಿಕ ನಾಯಕರು, ಜನಮುಖಂಡರು, ಫಲಜ್ಯೋತಿಷಿಗಳು, ಭವಿಷ್ಯವಾಚಕರು ಮೊದಲಾದವರು ಸಾಕಷ್ಟು ಕುವಾದ ವಿವಾದ ಕುತರ್ಕ ಊಹೆ ತೀರ್ಮಾನ ಘೋಷಣೆಗಳಿಂದ ತಮ್ಮ ಬೇಳೆ ಬೇಯಿಸಿಕೊಂಡರು. ನಿಸರ್ಗದ ಸಹಜ ಅಥವಾ ಅಸಹಜ' ವಿದ್ಯಮಾನವನ್ನು ವೀಕ್ಷಿಸಿ ಅರ್ಥವಿಸಿ ವ್ಯಾಖ್ಯಾನಿಸುವ ಪ್ರಯೋಗಶೀಲರ ವಿಚಾರವಾಣಿ ಈ ಗದ್ದಲದಲ್ಲಿ ಮುಳುಗಿ ಹೋಯಿತು.

ಯಾವುದೇ ಧಾರ್ಮಿಕ ಆಚರಣೆ ಯಾವುದೇ ಜನಾಂಗ ಜಾತಿಮತ ಕೋಮಿ ನದು ಎಲ್ಲಿಯೇ ಎಂದೇ ನಡೆಯಲಿ ಅದರ ಮೂಲದಲ್ಲಿ ನಿಸರ್ಗದ ಒಂದು ವಿದ್ಯಮಾನ ಇದ್ದೇ ಇರುವುದು. ಅದೇನೆಂಬುದನ್ನು ತಾಳ್ಮೆಯಿಂದಶೋಧಿಸಿ ಅದರ ಸುತ್ತ ಹತ್ತಿರುವ ಬಂದಿಳಿಕೆಗಳನ್ನು ನಿವಾರಿಸಿ ತಿರುಳನ್ನು ಆಸ್ವಾದಿಸಿದಾಗ ಮಾತ್ರ ನಿಜ ಸಂಗತಿ ತಿಳಿದೀತು. ಮಾನವಕಲ್ಯಾಣವೇ ಆ ಆಚರಣೆಯ ಗುರಿ . ಆದರೆ ಈಗ ಆಗುತ್ತಿರುವುದೇನು ? ಮಾನವ ದುರಂತ.

ಇವೆಲ್ಲ ವಿಚಾರಗಳನ್ನು ಜನರಿಗೆ ತಿಳಿಯಾಗಿ ಮನವರಿಕೆ ಮಾಡಿದ ಹೊರತು ಕುಂಭಮೇಳದ ದುರಂತವಾಗಲೀ ( ಗುರು ಕುಂಭರಾಶಿವಾಸಿಯಾಗಿರುವಾಗ ಸಂಭವಿಸುವ ಕುಂಭ ಸಂಕ್ರಮಣವೇ ಕುಂಭಮೇಳ) ಮಹಾಮಾಘದ ಜನನಾಶ ವಾಗಲೀ ( ಗುರು ಮಘಾ ನಕ್ಷತ್ರ ವಲಯದಲ್ಲಿರವಾಗ ಸಂಭವಿಸುವ

ಅನುಬಂಧ ೫

೭೩

ಹುಣ್ಣಿಮೆಯೇ ಮಹಾಮಾಘಮೇಳ, ಆಗ ಸೂರ್ಯಕುಂಭರಾಶಿಯಲ್ಲಿರುವುದು ) ಅಥವಾ ಪ್ರಪಂಚದ ಬೇರೆಡೆಗಳಲ್ಲಿ ಆಗ ಈಗ ಘಟಿಸುವ ಧಾರ್ಮಿಕ/ ಸಾಂಸ್ಕೃತಿಕ ದುರ್ಘಟನೆಗಳಾಗಲೀ ನಿಲ್ಲಲಾರವು.

ಜಗದ ಕಲ್ಯಾಣದೊಳಗಾ ಕಲ್ಯಾಣವನು ಜಗದ ಬೀದಿಗಳೊಳು ನಿಜಾತ್ಮ ಯಾತ್ರೆಯನು ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು ಬಗೆಯಲರಿತವನೆ ಸುಖಿ ಮಂಕುತಿಮ್ಮ

ವಾಸ್ತವದ ನೈಜತೆಗೆ ಕುರುಡಾದ ಮೂರ್ಖರಿಗೆ ಉತ್ತರಕುಮಾರ ಗೋತ್ರದ ನುಡಿಕನಸಿಗರಿಗೆ ಸತ್ಯವನ್ನೆದುರಿಸುವ ಕೆಚ್ಚಿರದ ಹೇಡಿಗಳಿ ಗುತ್ತಮ ಶ್ರೀರಕ್ಷೆ ಜಾತಕವೂ ಅಸೂನು ಬುದ್ಧನೆಂಬವನೇನು ಸಾಮಾನ್ಯ ಪುರುಷನೇ ? ಬುದ್ಧಿ ಸಂಸ್ಕಾರಕ್ಕೆ ಹೃದಯ ಸಂವೇದನೆಯು ಬದ್ದಗೊಂಡಾಗ ಮೈವಡೆದ ಆದರ್ಶ ಪರಿ ಶುದ್ಧಾತ್ಮ ಪರಿಪಕ್ವಜೀವಿ ಕಾಣ್ ಅಸೂನು

ಅನುಬಂಧ ೫ ನಮ್ಮ ಎರಡು ಪ್ರಮುಖ ಹಬ್ಬಗಳು

ನಿಸರ್ಗ ಅಥವಾ ಪರಿಸರ, ಅಥವಾ ವಿಶ್ವ ಇತ್ಯಾದಿ ನಾಮಗಳು ಹಲವು ಪ್ರಯೋಗದಲ್ಲಿಯ ಸಂದರ್ಭ ಅನುಸರಿಸಿ ಇವುಗಳಿಗೆ ವಿವಿಧ ಅರ್ಥ ಛಾಯೆಗಳು ಬರುತ್ತವೆ. ನಿಸರ್ಗದ/ ಪರಿಸರದ/ ವಿಶ್ವದ ನಿರ್ಮಿತಿಯೇ ಮಾನವ ಎನ್ನುವಲ್ಲಿ ಈ ಮೂರು ಪದಗಳು ಸೂಚಿಸುವುದು ಒಂದನ್ನೇ : ನಿಸರ್ಗ - ಮಾನವ ಸಂಬಂಧ ತಾಯಿ - ಮಗುವಿನದಕ್ಕೆ ಸಮಾನವಾದದ್ದು . ಅಂದರೆ ನಿಸರ್ಗರಹಿತ ಮಾನವ ಇಲ್ಲ , ಮಾನವರಹಿತ ನಿಸರ್ಗ ಖಂಡಿತ ಇರುವುದು !

ಮಾನವನಿಗೆ ದೇಹವಿದೆ - ಇದು ಮೂರ್ತ ವಸ್ತು , ಇದರ ಅಳತೆ ತೂಕ ಗಾತ್ರ ಮುಂತಾದ ಭೌತಪರಿಮಾಣಗಳನ್ನು ತಿಳಿಯಬಹುದು ಎಂದರ್ಥ ; ಜೊತೆಗೆ, ಮನವೂ ಇದೆ - ಇದು ಅಮೂರ್ತ ಅನುಭವ, ಅಳತೆ ತೂಕ ಗಾತ್ರ ಮುಂತಾದ

೭೬

ಜಾತಕ ಮತ್ತು ಭವಿಷ್ಯ

ಸಲ್ಲುವಾಗ ಆಕಾಶದಲ್ಲಿಯ ನಕ್ಷತ್ರಪುಂಜಗಳೂ ಸ್ಥಳೀಯ ಋತುವಿದ್ಯಮಾನ ಗಳೂ ಪುನರಾವರ್ತಿಸುತ್ತವೆ ಎಂಬ ತಥ್ಯವನ್ನು ಅವರು ಗುರುತಿಸಿದರು. ಹೀಗೆ ೧ ಚಾಂದ್ರವರ್ಷಕ್ಕೆ ೧೨ ಚಾಂದ್ರಮಾಸಗಳು ಅಥವಾ ೩೫೪ ದಿವಸಗಳು ನಿಗದಿ ಯಾದುವು. ಸಂಖ್ಯೆ ೧೨ಕ್ಕೆ ಪ್ರಾಮುಖ್ಯ ಒದಗಿದ್ದು ಈ ಕಾರಣದಿಂದ. - ಅತಿ ಶೀಘ್ರದಲ್ಲೇ ಋತುಚಕ್ರದ ಆವರ್ತನಾವಧಿಗೂ ಚಾಂದ್ರವರ್ಷಕ್ಕೂ ನಡುವೆ ತೀವ್ರ ವ್ಯತ್ಯಯ ಹಣುಕಿತು. ಋತುಚಕ್ರ ಸೂರ್ಯಾವಲಂಬಿಯಾಗಿ ಉರು ಳುತ್ತದೆ. ಇದರಲ್ಲಿ ಸುಮಾರು ೩೬೫ ದಿವಸಗಳಿವೆ. ಹಾಗಾದರೆ ಚಾಂದ್ರವರ್ಷ ವಾರ್ಷಿಕವಾಗಿ ಕಳೆದುಕೊಳ್ಳುವ ೧೧ ದಿವಸಗಳನ್ನು ಹೊಂದಿಸುವುದು ಹೇಗೆ ? ಅಧಿಕ ಮಾಸದ ಏರ್ಪಾಡು ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿತು. ನಿಜ. ಆದರೆ ತತ್ಸಂಬಂಧವಾದ ಗಣಿತಗೋಜಲುಗಳು ಅನಿವಾರ್ಯವಲ್ಲದ ಹೊರೆ ಯಾಗಿ ಉಳಿದುಕೊಂಡುವು. ನಾವು ವಾಸ್ತವತೆಗೆ ಒಪ್ಪುವ ಚೌಕಟ್ಟನ್ನು ರಚಿಸಬೇಕೇ ಹೊರತು ಪೂರ್ವಸಿದ್ಧ ಚೌಕಟ್ಟಿಗೆ ವಾಸ್ತವತೆಯನ್ನು ಹೊಂದಿಸುವ ಅಸಹಜ ಕ್ರಮಕ್ಕೆ ಮಣಿಯುವುದಲ್ಲ . ಅಂದರೆ, ಚಾಂದ್ರಮಾನವನ್ನು ಪೂರ್ಣವಾಗಿ ವರ್ಜಿಸಿ ಸೌರಮಾನವನ್ನು ಬಳಕೆಗೆ ತರುವುದೊಂದೇ ಇಲ್ಲಿ ಸಲ್ಲುವ ನಿಯಮ . - ಇತ್ಯ ಸೌರಮಾನವಾದರೂ ಶತಮಾನಗಳ ದೀರ್ಘಾವಧಿಗಳಲ್ಲಿ ಹಲವಾರು ಅಸಾಂಗತ್ಯಗಳಿಗೆ ಎಡೆಮಾಡಿಕೊಟ್ಟಿತು. ಪುನಃ ಚೌಕಟ್ಟು - ವಾಸ್ತವತೆ ಅಪಲಯ !

ಹಾಗಾದರೆ ? ಮತ್ತೆ ಗಗನಾವಲೋಕನ, ಹಾಗೂ ಅಲ್ಲಿ ಸಲ್ಲುವ ನಿಯಮಗಳ ಅನ್ವೇ

AM ಷಣೆ.

ಅಲ್ಲಿಂದ ಇಲ್ಲಿಗೆ

ಮುಂದಿನ ವಿವರಣೆಯನ್ನು ಆಕಾಶ ವೀಕ್ಷಣೆಯಿಂದ ನೀವು ಗಳಿಸಿರುವ ಅನು ಭವದ ಜೊತೆ ತಳುಕು ಹಾಕಬೇಕು : ಬಾನು

ಮೊದಲು, ಬರಹ ಬಳಿಕ. ಚಿತ್ರ ೧೭, E ಭೂಮಿ, S ಮತ್ತು M ನಮಗೆ ಭಾಸ ಸೂರ್ಯ ನೂ ( S ) ಚಂದ್ರನೂ ( M ) ವಾಗುವಂತೆ ಸೂರ್ಯಚಂದ್ರರು ನಮ್ಮ ಸುತ್ತ ನಮ್ಮ ( E ) ಸುತ್ತ ಸ್ಕೂಲವಾಗಿ ಒಂದೇ ಕಕ್ಷಿಸುವ ಪರಿ . ವಾಸ್ತವದಲ್ಲಿ ಪಶ್ಚಿಮ -ಪೂರ್ವ ವರ್ತುಲೀಯ ಕಕ್ಷೆಯಲ್ಲಿ ನಿತ್ಯಸಂಚಾರಿಗಳಾ ದಿಶ. ಚಿತ್ರದಲ್ಲಿ ಅಪ್ರದಕ್ಷಿಣ.

ಗಿವೆ ( ಚಿತ್ರ ೧೭), ಚಲನದಿಶ ಬಾನಿನಲ್ಲಿ

ಅನುಬಂಧ ೫

ಪಶ್ಚಿಮ - ಪೂರ್ವ, ಚಿತ್ರದಲ್ಲಿ ಅಪ್ರದಕ್ಷಿಣ. ಸೌರಕಕ್ಷೆಗೆ ಕ್ರಾಂತಿವೃತ್ತವೆಂದು ಹೆಸರು. ಚಾಂದ್ರಕಕ್ಷೆ ಇದಕ್ಕೆ ತುಸು ಮಾಲಿಕೊಂಡಿದೆ. - ಇಡೀ ಖಗೋಳ ನಮ್ಮ (E) ಸುತ್ತ ಪೂರ್ವ- ಪಶ್ಚಿಮ ( ಅಂದರೆ ಪ್ರದಕ್ಷಿಣ) ದಿಶೆ

ಯಲ್ಲಿ ಆವರ್ತಿಸುತ್ತಿದೆ. ಆವರ್ತನಾವಧಿ ೧ - ದಿವಸ. ಎಂದೇ ಸಕಲ ಆಕಾಶ ಕಾಯಗಳೂ , ಒಂದು ಅಪವಾದದ ವಿನಾ, ಅದೇ ದಿಶ ಯಲ್ಲಿ ದೈನಂದಿನ ಚಲನೆಯನ್ನು ಪ್ರದರ್ಶಿ ಚಿತ್ರ ೧೮. ಯಾವುದೇ ಆಕಾಶಕಾಯದ ದೈನಂದಿನ ಸುವುದಾಗಿದೆ. ಖಗೋಳದ ಈ ದೈನಂದಿನಾ ಪಥ, ವಾಸ್ತವದಲ್ಲಿ ಪೂರ್ವ- ಪಶ್ಚಿಮ ದಿಶ; ಚಿತ್ರ ವರ್ತನೆಯಲಿ ಬಾಗಿಯಾಗದ ಆಕಾಶಕಾಯ ದಲ್ಲಿ ಪ್ರದಕ್ಷಿಣ. xನಲ್ಲಿ ಉದಯ , Dಯಲ್ಲಿ

ಯಾಮೊತ್ತರವನ್ನು ( meridian) ಪೂರ್ವ ಎಂದರೆ ಧ್ರುವನಕ್ಷತ್ರ ( P ), ಖಗೋಳದ ಗೋಳಾರ್ಧದಿಂದ ಪಶ್ಚಿಮ ಗೋಳಾರ್ಧಕ್ಕೆ ಅಡ್ಡ ಆವರ್ತನಾಕ್ಷ EP ( ಚಿತ್ರ ೧೮), ವೃತ್ತ AB ಹಾಯುತ್ತದೆ, yಯಲ್ಲಿ ಅಸ್ತ , AxByಲಿ ವೃತ್ತ ವೀಕ್ಷಕನ ( E) ಕ್ಷಿತಿಜ, ವೃತ್ತ CD ( ಪ್ರದಕ್ಷಿಣ ವೀಕ್ಷಕನ (E) ಹಾರಿಜ, Z ಖಮಧ್ಯ , P ಧ್ರುವ ದಿಶೆ) ಯಾವುದೇ ಕಾಯದ ದೈನಂದಿನ ಪಥ, ನಕ್ಷತ್ರದ ನೆಲೆ - EP ಅಕ್ಷರಕ್ಕೆ ನಮ್ಮ (E) ಮೂಲಕ ಲಂಬವಾಗಿ ರಚಿಸಿದ ಸಮತಲವು ಖಗೋಳ ವನ್ನು ಸಮದ್ವಿಭಾಗಿಸುವ ಕಾಲ್ಪನಿಕ ವೃತ್ತಕ್ಕೆ ( ಚಿತ್ರ ೧೯ ) ವಿಷುವದ್ವ ಎಂದು ಹೆಸರು | (QFRHQ), ಮಾರ್ಚ್ ೨೦ / ೨೧ ಮತ್ತು ಸೆಪ್ಟೆಂಬರ್ ೨೨ / ೨೩ರಂದು ಸೂರ್ಯನ ದೈನಂದಿನ ಪಥ ಇದು. ವಿಷುವದ್ವತ್ಯವೂ ಕ್ರಾಂತಿವೃತ್ತವೂ (IFGHI) ಪರಸ್ಪರ ಮಾಲಿ ಕೊಂಡಿವೆ. ನಮಗೆ ಎದುರುಬದಿರಾಗಿರುವ F ಮತ್ತು H ಎಂಬ ಎರಡು ಬಿಂದುಗಳಲ್ಲಿ

ಚಿತ್ರ ೧೯ ಇವು ಪರಸ್ಪರ ಛೇದಿಸುತ್ತವೆ.

ಸೂರ್ಯ ಚಂದ್ರರ ನಿರಂತರ ಹಿಡಿವಾಟದಲ್ಲಿ ಚಂದ್ರ ಪ್ರತಿ ( ಸುಮಾರು) ೨೯ .೫ ದಿವಸಗಳಿಗೊಮ್ಮೆ ಸೂರ್ಯನ ಬೆನ್ನು ಹಿಡಿದು ( ಅಮಾವಾಸ್ಯೆ ಮುಂದೋ ಡುವುದು. ಇದೇ ವೇಳೆ ಸೂರ್ಯನೂ ಚಲಿಸುತ್ತಿರುವುದರಿಂದ ಪ್ರತಿಸಲವೂ

೭೮

ಜಾತಕ ಮತ್ತು ಭವಿಷ್ಯ

ಸೀತೆ 9 ಮೀಟಿ

ವೃಷಭ

శుంభ

మిథున

దూర

ಚಿಕೆ

ధను

ಸಿ

ಕೆನ್ನಾ | ತುಲಾ

ಚಿತ್ರ ೨೦. E ಭೂಮಿ (ವೀಕ್ಷಕ), ಕುರಿತಂತೆ ರಾಶಿಚಕ್ರದ ವಿನ್ಯಾಸ : ಗಗನದಲ್ಲಿ ಪಶ್ಚಿಮ - ಪೂರ್ವ, ಚಿತ್ರದಲ್ಲಿ ಅಪ್ರದಕ್ಷಿಣ. ಒಂದೊಂದು ರಾಶಿಯ ವ್ಯಾಪ್ತಿ ೩೦° ಚಂದ್ರ ಒಂದು ಪರಿಭ್ರಮಣೆಗಿಂತ ತುಸು ಹೆಚ್ಚು ದೂರ ಕ್ರಮಿಸಿ ಸೂರ್ಯನನ್ನು ತಲಪಬೇಕಾಗುತ್ತದೆ. ಈ ಅವಧಿಯೇ ಹಿಂದೆ ಹೇಳಿದ ಚಾಂದ್ರಮಾಸ, ಇತ್ತ ಸ್ಥಿರ ನಕ್ಷತ್ರಗಳನ್ನು ಕುರಿತಂತೆ ಚಂದ್ರನ ಪರಿಭ್ರಮಣಾವಧಿ ಸುಮಾರು ೨೭.೩ ದಿವಸ ' ಗಳು. ಇದಕ್ಕೆ ( ಚಂದ್ರನ) ನಾಕ್ಷತ್ರಿಕ ಮಾಸವೆಂದು ಹೆಸರು. * ಸೂರ್ಯ, ಚಂದ್ರ ಮತ್ತು ೫ ಗ್ರಹಗಳ ಕಕ್ಷೆಗಳು ಖಗೋಳದ ಒಂದು ಇಕ್ಕಟ್ಟು ಪಟ್ಟಿಗೆಸೀಮಿತವಾಗಿವೆ. ಇದು ರಾಶಿಚಕ್ರ . ಇದರ ಸಮಭಾಜಕವೇ ಕ್ರಾಂತಿವೃತ್ತ . ರಾಶಿಚಕ್ರವನ್ನು ಗಣನೆಯ ಸೌಕರ್ಯಾರ್ಥ ೧೨ ಸಮಭಾಗಗಳಾಗಿ ವಿಭಾಗಿಸಿ ಮೇಷದಿಂದ ಮೀನದ ವರೆಗಿನ ಅಷ್ಟು ಹೆಸರುಗಳನ್ನು ನಿಗದಿಸಲಾಗಿದೆ. ಇವು ಸೂರ್ಯನ ಮಾಸಿಕ ಗೃಹಗಳು, - ಚಂದ್ರನ ನಾಕ್ಷತ್ರಿಕ ಮಾಸದ ಅವಧಿಯಿಂದ ( ಸುಮಾರು ೨೭.೩ ದಿವಸಗಳು) ಸ್ಫೂರ್ತಿ ಪಡೆದು ರಾಶಿಚಕ್ರದ ನೇರ ಅಶ್ವಿನಿಯಿಂದ ರೇವತಿವರೆಗಿನ ೨೭ ನಕ್ಷತ್ರ ಗಳನ್ನು ಗುರುತಿಸಿದೆ - ಇವು ಚಂದ್ರನ ನಿತ್ಯ ನಕ್ಷತ್ರಗಳು. ಮೇಷರಾಶಿಯು ಅಶ್ವಿನೀ ನಕ್ಷತ್ರದಿಂದ ತೊಡಗುತ್ತದೆ ( ಚಿತ್ರ ೨೦). ಪ್ರತಿಯೊಂದು ರಾಶಿಯ ಕೋನ

ಅನುಬಂಧ ೫ |

-

೭೯

ವ್ಯಾಪ್ತಿಯೂ ೩೦ ಡಿಗ್ರಿಗಳು. ಹೀಗೆ ೧೨ ರಾಶಿಗಳು ೩೬೦ ಡಿಗ್ರಿಗಳನ್ನು ಅಂದರೆ ಪೂರ್ಣ ರಾಶಿಚಕ್ರವನ್ನು ನಿರ್ಧರಿಸುತ್ತವೆ. ಇವೆಲ್ಲವೂ ಮಾನವಕೃತ ಏರ್ಪಾಡು ಗಳು ; ವಾಸ್ತವ ವಿಶ್ವದಲ್ಲಿ ರಾಶಿಗಳಿಗೆ ಭೌತ ಅಸ್ತಿತ್ವವಿಲ್ಲ.

ಸೂರ್ಯ ಯಾವುದೇ ರಾಶಿಯನ್ನು ( ಅಂದರೆ ಗೃಹವನ್ನು ಪ್ರವೇಶಿಸುವ ಮುಹೂರ್ತವೇ ಆ ಸಂಕ್ರಮಣ. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ಸೂರ್ಯ ಬಂದಾಗ ಮೇಷ ಸಂಕ್ರಮಣ ಸಂಭವಿಸುತ್ತದೆ. ಉಳಿದ ೧೧ ಸಂಕ್ರಮಣಗಳನ್ನು ಕುರಿತಂತೆ ಹೀಗೆ ನಕ್ಷತ್ರ - ಸಂಕ್ರಮಣ ಹೊಂದಾಣಿಕೆ ಮಾಡಲಾಗುವುದಿಲ್ಲ . ಏಕೆಂ ದರೆ ೨೭ ನಿತ್ಯ ನಕ್ಷತ್ರಗಳು ಸಮ ಅಂತರಗಳಲ್ಲಿ ವಿತರಣೆಗೊಂಡಿಲ್ಲ .

ವಿಷುವ ಮತ್ತು ಅಯನ ಬಿಂದುಗಳು

ಚಿತ್ರ ೧೯ನ್ನು ಗಮನಿಸಬೇಕು. ವಿಷುವದ್ - ಕ್ರಾಂತಿವೃತ್ಯ ಸಂಧಿಸುವ F ಮತ್ತು H ಬಿಂದುಗಳಿಗೆ ವಿಷವ ಬಿಂದುಗಳೆಂದೂ ಸೂರ್ಯನ ಚಲನದಿಶೆ ವಿಪ ರ್ಯಯಗೊಳ್ಳುವ G ಮತ್ತು 1 ಬಿಂದುಗಳಿಗೆ ಅಯನ ಬಿಂದುಗಳೆಂದೂ ಹೆಸರು. F ವಸಂತ ವಿಷುವ, H ಶರದ್ವಿಷವ ; ಮಕರಾಯಣ, G ಕರ್ಕಾಯನ.

ವರ್ತಮಾನ ಕಾಲದ ಆಕಾಶದಲ್ಲಿ ನಾವು ಕಾಣುವ ಅಥವಾ ತಿಳಿಯುವ ಕೆಲವು ಮಾಹಿತಿಗಳನ್ನು ಮುಂದಿನ ಯಾದಿಯಲ್ಲಿ ಕೊಟ್ಟಿದೆ :

- ದಿನಾಂಕ

ಮಾರ್ಚ್ ೨೦/ ೨೧ ಜೂನ್ ೨೦/ ೨೧ ಸೆಪ್ಟೆಂಬರ್ ೨೨/ ೨೩ ಡಿಸೆಂಬರ್ ೨೧/ ೨೨

ಸೂರ್ಯನ ಸ್ಥಾನ

ವಿವರಣೆ ವಸಂತವಿಷುವ F ಹಗಲು ಇರುಳು, ಸಮ ಅವಧಿಯವು ಕರ್ಕಾಯನ G ಗರಿಷ್ಠ ಹಗಲು, ಕನಿಷ್ಠ ಇರುಳು ಶರದ್ವಿಷುವ H ಹಗಲು ಇರುಳು, ಸಮ ಅವಧಿಯವು ಮಕರಾಯಣ | ಕನಿಷ್ಠ ಹಗಲು, ಗರಿಷ್ಠ ಇರುಳು

ಸೂರ್ಯ ನಿಂದ Gಯ ವರೆಗೆ ಉತ್ತರಾಭಿಮುಖವಾಗಿಯೂ Gಯಿಂದ ವರೆಗೆ ದಕ್ಷಿಣಾಭಿಮುಖವಾಗಿಯೂ ಚಲಿಸುತ್ತಿರುವುದು. ಆದ್ದರಿಂದ ಉತ್ತರಾ ಯಣವು ಮಕರಾಯಣದಂದೂ ದಕ್ಷಿಣಾಯನವು ಕರ್ಕಾಯನದಂದೂ ಆರಂಭ ವಾಗುತ್ತವೆ. ಅರ್ಥಾತ್ , ಉತ್ತರಾಯಣಾರಂಭ ಡಿಸೆಂಬರ್ ೨೧/ ೨೨, ಮಕರ ಸಂಕ್ರಮಣ ಅಲ್ಲ ; ದಕ್ಷಿಣಾಯನಾರಂಭ ಜೂನ್೨೦ / ೨೧, ಕರ್ಕಟಕ ಸಂಕ್ರಮಣ

ಅಲ್ಲ .

ಜಾತಕ ಮತ್ತು ಭವಿಷ್ಯ

ಸಂಕ್ರಮಣ ದಿನಾಂಕಗಳು - ಸಂಕ್ರಮಣ ದಿನಾಂಕಗಳು ಸೂರ್ಯ- ನಕ್ಷತ್ರ ರಾಶಿ ಸಂಬಂಧದಿಂದ ನಿರ್ಧರಿತ ವಾಗುವುದರಿಂದ ಶತಮಾನ ಪರ್ಯಂತ ಇವು ಬದಲಾಗುವುದಿಲ್ಲ . ಅವು ಸ್ಕೂಲ ವಾಗಿ ಹೀಗಿವೆ :

ಸಂಕ್ರಮಣ

ದಿನಾಂಕ

ಸಂಕ್ರಮಣ

ತುಲಾ

ಮೇಷ ವೃಷಭ ಮಿಥುನ ಕರ್ಕಟಕ ಸಿಂಹ

ಏಪ್ರಿಲ್ ೧೪ ಮೇ ೧೫ ಜೂನ್ ೧೫ ಜುಲೈ ೧೬ ಆಗಸ್ಟ್ ೧೭ ಸೆಪ್ಟೆಂಬರ್‌ ೧೭

ಧನು ಮಕರ ಕುಂಭ ಮೀನ

ದಿನಾಂಕ ಅಕ್ಟೋಬರ್ ೧೭ ನವಂಬರ್ ೧೬ ಡಿಸೆಂಬರ್ ೧೬ ಜನವರಿ ೧೪ ಫೆಬ್ರುವರಿ ೧೩ ಮಾರ್ಚ್ ೧೪

ಕನ್ಯಾ

- ಕೆಲವು ಶತಮಾನಗಳ ಹಿಂದೆ F ಬಿಂದು ಅಶ್ವಿನೀ ನಕ್ಷತ್ರದಲ್ಲಿತ್ತು . ಆಗ ವಸಂತವಿಷುವ-ಮೇಷಸಂಕ್ರಮಣ ಅಭಿನ್ನವಾಗಿದ್ದುವು. ಅಂದು ಹಗಲು ಮತ್ತು ಇರುಳು ಸಮ ಅವಧಿಯವಾಗಿದ್ದುದರಿಂದ, ಮತ್ತು ತದನಂತರದ ದಿನಗಳಲ್ಲಿ ಹಗಲಿನ ಅವಧಿ ಇರುಳಿನದಕ್ಕಿಂತ ಹೆಚ್ಚಾಗುತ್ತಿದ್ದುದರಿಂದ ಆ ದಿವಸವನ್ನು ಯುಗಾದಿ ಎಂದು ಅಂದಿನ ಖಗೋಳವಿಜ್ಞಾನಿಗಳು ಸಕಾರಣವಾಗಿಯೇ ಹೆಸರಿಸಿ ದರು. ಹೀಗೆ ಅಂದು ಸೂರ್ಯ- ಅಶ್ವಿನೀ ಐಕ್ಯ ಅಥವಾ ಮೇಷ ಸಂಕ್ರಮಣವು ಯುಗಾದಿ ಎಂಬ ಅಂತಸ್ಸು ಪಡೆಯಿತು.ರೂಪಕ ಭಾಷೆಯಲ್ಲಿ :ಸೂರ್ಯರಾಜನು ಮೇಷಸಿಂಹಾಸನವನ್ನು ಆರೋಹಿಸಿದ ಮುಹೂರ್ತವೇ ಯುಗಾದಿ. ಇದೇ ಪ್ರಕಾರ ಈತ ಕರ್ಕಟಕವನ್ನು ಏರಿದಾಗ ದಕ್ಷಿಣಾಯನಾರಂಭ, ತುಲಾವನ್ನು ಏರಿದಾಗ ಶರದ್ವಿಷುವ ಮತ್ತು ಮಕರವನ್ನು ಏರಿದಾಗ ಉತ್ತರಾಯಣಾರಂಭ ಎಂದು ನಿಗದಿ ಆದುವು. ಇದು ಸರಿ ಅಂದಿಗೆ.

ಗತಿಶೀಲತೆಯೇ ಜಗತ್ತಿನ ಧರ್ಮ. ಭೌತವಿಶ್ವದಲ್ಲಿ ಯಾವುದೂ ಸ್ಥಿರವಲ್ಲ , ಶಾಶ್ವತವಲ್ಲ . ಕ್ರಾಂತಿವೃತ್ತ - ವಿಷುವದ್ಯ ಛೇದನ ಬಿಂದುಗಳು ( ಅಂದರೆ ವಿಷುವ ಬಿಂದುಗಳು ) ಕ್ರಾಂತಿವೃತ್ತದ ನೇರ ಪೂರ್ವ- ಪಶ್ಚಿಮ ( ಪ್ರದಕ್ಷಿಣ) ದಿಶೆಯಲ್ಲಿ ಸರಿಯುತ್ತಿವೆ. ಹೀಗಾಗಿ ಯುಜುರ್ವೇದದ ಕಾಲದಲ್ಲಿ (ಕ್ರಿಪೂ ಸು ೧೦೦೦) ಕೃತ್ತಿಕಾ ನಕ್ಷತ್ರದಲ್ಲಿದ್ದ ವಸಂತ ವಿಷುವವು ದಾರ್ಶನಿಕ- ಖಗೋಳವಿಜ್ಞಾನಿ ವರಾಹಮಿಹಿರನ (ಕ್ರಿಶ ೫- ೬ನೆಯ ಶತಮಾನ) ಕಾಲದಲ್ಲಿ ಅಶ್ವಿನೀ ನಕ್ಷತ್ರಕ್ಕೆ ಹಿನ್ನರಿದಿತ್ತು . ಈ

ಅನುಬಂಧ ೫

ಸೂಕ್ಷ್ಮ ಖಗೋಳೀಯ ವಿದ್ಯಮಾನವನ್ನು ಗಮನಿಸಿದ ಈತ ವಸಂತ ವಿಷುವ ಅಶ್ವಿನೀನಕ್ಷತ್ರಸಂಗಮ ( ಅಂದರೆ ಮೇಷ ಸಂಕ್ರಮಣ) ದಿನವೇ ಯುಗಾದಿ ಎಂದು ತನ್ನ ಸೂರ್ಯಸಿದ್ಧಾಂತದಲ್ಲಿ ವಿವರಿಸಿದ. ಇದರ ಅರ್ಥ : ವೇದಕಾಲದಲ್ಲಿ ಸೂರ್ಯನ ಸಿಂಹಾಸನ ವೃಷಭ (ಕೃತ್ತಿಕಾ ನಕ್ಷತ್ರ ಇದರಲ್ಲಿದೆ), ವರಾಹಮಿಹಿರನ ಕಾಲದಲ್ಲಿ ಮೇಷ! ಹಾಗಾದರೆ ಇಂದು ( ೨೦೦೦ ಅಥವಾ ೨೧ನೆಯ ಶತಮಾನ) ಸೂರ್ಯನ ಸಿಂಹಾಸನ ಎಲ್ಲಿದೆ ? ಅದು ರೇವತಿ -ಉತ್ತರಾಭಾದ್ರಾ ನಡುವೆ ಮೀನ - ರಾಶಿಯಲ್ಲಿದೆ. ದಿನಾಂಕ ೨೦ -೩ - ೨೦೦ಂದಂದು ಋಜುಯುಗಾದಿ ಸಂಭವಿಸಿತು !

ಧರ್ಮ, ಸಂಸ್ಕೃತಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಮಕರ ಸಂಕ್ರಮಣ ವನ್ನು ಉತ್ತರಾಯಣ ಪುಣ್ಯಕಾಲವೆಂದೂ ಮೇಷ ಸಂಕ್ರಮಣವನ್ನು ಯುಗಾದಿ ಸುಮುಹೂರ್ತವೆಂದೂ ಆಚರಿಸುವವರಿಗೆ ಒಂದು ಆಪ್ತ ವಾಕ್ಕು : “ಸೂರ್ಯರಾಜ ಮಕರ ಸಿಂಹಾಸನಕ್ಕಿಂತ ಮೊದಲೇ ಉತ್ತರಾಯಣವನ್ನು ತೊಡಗುತ್ತಾನೆ, ಅಂತೆಯೇ ಮೇಷ ಸಿಂಹಾಸನಕ್ಕಿಂತ ಮೊದಲೇ ಯುಗಾದಿಯನ್ನು ಘೋಷಿಸು ತಾನೆ. ರಾಜರಹಿತ ಮಕರ ಮತ್ತು ಮೇಷ ಸಿಂಹಾಸನಗಳಿಗೆ ನೀವುಸಲ್ಲಿಸುತ್ತಿರುವ ಪೂಜೆ ಬೌದ್ಧಿಕ ಚಿಂತನರಾಹಿತ್ಯದ ಸಂಕೇತ. ಈ ಆಧುನಿಕ ವಿಜ್ಞಾನಯುಗದಲ್ಲಿ ಇದು ಅಕ್ಷಮ್ಯ . ” - ನಮ್ಮ ಧಾರ್ಮಿಕ ಮುಖಂಡರು, ಖಗೋಳವಿಜ್ಞಾನಿಗಳು , ರಾಜಕೀಯ ಪ್ರಭು ಗಳು ಮತ್ತು ವಿಚಾರವಂತರು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಜನ ರಿಗೆ ಯುಕ್ತ ನಿರ್ದೇಶನ ನೀಡಬೇಕು, ಮತ್ತು ಅದನ್ನು ಅನುಷ್ಠಾನಿಸಬೇಕು. “ವಿಜ್ಞಾನರಹಿತ ಧರ್ಮ ಕುರುಡು” ಎಂದರು ಐನ್‌ಸ್ಟೈನ್, ಈ ವಾಕ್ಯದ ಉತ್ತ ರಾರ್ಧ : ಧರ್ಮರಹಿತ ವಿಜ್ಞಾನ ಕುಂಟು. ” ಇಂಥ ಅಂಧ ಧರ್ಮ ಅಥವಾ ಪಂಗು ವಿಜ್ಞಾನ ನಮಗೆ ಬೇಡ, ಬದಲು, ಧರ್ಮನಿರ್ದೆಶಿತ ವಿಜ್ಞಾನವೂ ವಿಜ್ಞಾನ ನಿಯಂತ್ರಿತ ಧರ್ಮವೂ ಸಮಶ್ರುತಿಲಯದಲ್ಲಿರುವ ಸುಸ್ಥಿತಿ ಬೇಕು.

ವಿಜ್ಞಾನಮೂಲವನು ಕಾಣ್ ತತ್ತ್ವಶಾಸ್ತ್ರದಲಿ ತತ್ತ್ವಶಾಸ್ತ್ರದ ಸೆಲೆಯನರಸು ವಿಜ್ಞಾನದಲಿ ಸೃಷ್ಟಿ ವೈಚಿತ್ರ್ಯವೀ ದ್ವಂದ್ವ , ಪರಿಕಿಪೊಡೆ ಅಂ ತರ್ಬೋಧೆಗಿದು ಗೋಚರಿಪುದು ತಿಳಿ ಅಸೂನು

೮೨

ಜಾತಕ ಮತ್ತು ಭವಿಷ್ಯ

ವಿಚಾರವೆಂಬೋ ಸಸಿಯನು ನೆಟ್ಟು ಆಚಾರವೆಂಬೋ ಬೇಲಿಯ ಕಟ್ಟಿ ಪ್ರಚಾರವೆಂಬೋ ಗೊಬ್ಬರ ಕೊಟ್ಟು ಕಾದೆನು ನಾನು ಫಲಕಾಗಿ ಬೇಲಿಯು ಬೆಳೆಯಿತು ಸಸಿಯನು ನುಂಗಿತು “ ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ” ಎನ್ನುತ ಗರ್ಜಿಸಿತು.

ಸ್ಫೂರ್ತಿ : ಸಂತ ಭದ್ರಗಿರಿ ಅಚ್ಯುತದಾಸರು ನೀಡಿದ ವಿವರಣೆ

ಅನುಬಂಧ ೬ ರಾಷ್ಟ್ರೀಯ ಪಂಚಾಂಗ

ಸ್ವತಂತ್ರ ಭಾರತದ ಸರ್ಕಾರವು ೧೯೫೨ರಲ್ಲಿ “ ಪಂಚಾಂಗ ಪರಿಷ್ಕರಣ ಸಮಿತಿ” ಯನ್ನು ರೂಪಿಸಿತು : “ ಈಗ ದೇಶದಲ್ಲಿ ಬಳಕೆಯಲ್ಲಿರುವ ಎಲ್ಲ ಪಂಚಾಂಗ ಗಳನ್ನೂ ಪರೀಕ್ಷಿಸಿ, ವಿಷಯವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಸಮಗ್ರ ಭಾರತ ದೇಶಕ್ಕೆ ಒಂದು ನಿಷ್ಕೃಷ್ಟ ಮತ್ತು ವೈಜ್ಞಾನಿಕ ಪಂಚಾಂಗದ ಬಗ್ಗೆ ಸಲಹೆಗಳನ್ನು ಒಪ್ಪಿಸಬೇಕು. ” - ನಿರಂತರ ವ್ಯತ್ಯಯಶೀಲವಾಗಿರುವ ಆಕಾಶದ (ಸೂರ್ಯ , ಚಂದ್ರ , ಗ್ರಹ, ನಕ್ಷತ್ರಗಳ ಆವಾಸ) ವೈಜ್ಞಾನಿಕ ಪ್ರತಿಬಿಂಬವಾಗಿ ರಾಷ್ಟ್ರಾದ್ಯಂತ ಒಂದೇ ಪಂಚಾಂಗವಿರುವುದು ಅಪೇಕ್ಷಣೀಯ ಎಂಬುದು ಇಂಗಿತ. ಆದರೆ ರೂಢಿಯಲ್ಲಿ ಪಂಚಾಂಗವು ಜನರಿಗೆ ಪ್ರಸ್ತುತವಾಗುವುದು ಮುಖ್ಯವಾಗಿ ಅದು ಅವರ ಧಾರ್ಮಿಕ ನಂಬಿಕೆ ನಡವಳಿಕೆಗಳಿಗೆ ಕೈಗನ್ನಡಿ ಆಗಿರುವುದರಿಂದ, ಎಂದೇ ಪರಂಪರೆ ( ಪ್ರಾಚೀನ ಕಾಲದಿಂದ ಹರಿದು ಬಂದದ್ದು ), ಸಂಪ್ರದಾಯ ( ವರ್ತಮಾನ ದಿನ ಗಳಲ್ಲಿಯ ಆಚರಣೆ), ಹಬ್ಬ ಹರಿದಿನಗಳೆಲ್ಲವೂ ಪಂಚಾಂಗದ ಅವಿಭಾಜ್ಯ ಅಂಗ ಗಳು. ಹೀಗಾಗಿ ಪರಿಷ್ಕರಣ ಸಮಿತಿಯು ಒಂದು ವಾಸ್ತವ ಸಮಸ್ಯೆಯನ್ನು ಎದುರಿಸ ಬೇಕಾಯಿತು : ಆಕಾಶ- ಆಚರಣೆ, ವಿಜ್ಞಾನ- ಧರ್ಮ ಅಥವಾ ವರ್ತಮಾನವಾಸ್ತವತೆ ಪ್ರಾಚೀನಭರವಸೆ ಈ ದ್ವಂದ್ವಗಳ ನಡುವೆ ಸಾಂಗತ್ಯ ಏರ್ಪಡಿಸುವುದು ಸಾಧ್ಯವೇ ?

ಅನುಬಂಧ ೭

ಸಾಧ್ಯ . ಪರಿಹಾರವಾಗಿ ಪರಿಷ್ಕರಣ ಸಮಿತಿಯು ರಾಷ್ಟ್ರೀಯ ಪಂಚಾಂಗ ' ವನ್ನು ದೇಶೀಯ ಭಾಷೆಗಳಲ್ಲಿ ಪ್ರಕಟಿಸಬೇಕೆಂಬ ಸಲಹೆಯನ್ನು ಸರ್ಕಾರಕ್ಕೆ ಒಪ್ಪಿ ಸಿತು : ಇದನ್ನು ವೈಜ್ಞಾನಿಕ- ಧಾರ್ಮಿಕ ವಿಧಿನಿಯಮಾನುಸಾರ ರಚಿಸಬೇಕು, ಅಂದರೆ ಇದು ವರ್ತಮಾನ ಗಗನದ ವೈಜ್ಞಾನಿಕ ಪ್ರತಿಬಿಂಬವಾಗಿರುವುದರ ಜೊತೆಗೆ ಪರಂಪರಾಗತ ವಿವಿಧ ಧಾರ್ಮಿಕ ಆಚರಣೆಗಳ ಬಗೆಗೂ ಯುಕ್ತ ಮಾಹಿತಿ ನೀಡ ಬೇಕು. ೧೯೫೭- ೫೮ರಿಂದ ತೊಡಗಿ “ ರಾಷ್ಟ್ರೀಯ ಪಂಚಾಂಗ” ಪ್ರತಿ ವರ್ಷವೂ ಪ್ರಕಟವಾಗುತ್ತಿದೆ ಕನ್ನಡದಲ್ಲಿಯೂ ಲಭ್ಯವಿದೆ.

ಈ ಉಪಯುಕ್ತ ಕೃತಿಯನ್ನು ಎಲ್ಲರೂ ಓದಿ ಅಧಿಕ ಪ್ರಜ್ಞಾವಂತರಾಗಬೇಕು, ಬಾನನ್ನು ನೋಡಿ ಅಲ್ಲಿಯ ವಿದ್ಯಮಾನಕ್ಕೂ ಇಲ್ಲಿಯ ಹಬ್ಬಕ್ಕೂ ನಡುವೆ ಇರುವ ಅನ್ನೋನ್ಯತೆಯನ್ನು ಅರಿಯಬೇಕು, ಮತ್ತು ತದನುಸಾರ ತಮ್ಮ ಧಾರ್ಮಿಕ ಆಚರಣೆಗಳನ್ನು ಅನುಷ್ಠಾನಿಸಬೇಕು. ಎರಡು ಸ್ಪಷ್ಟ ನಿದರ್ಶನಗಳು : ಯುಗಾದಿ ಯನ್ನು ವಸಂತ ವಿಷುವದಂದೂ ( ಮಾರ್ಚ್ ೨೦ / ೨೧), ಉತ್ತರಾಯಣಾರಂಭ ವನ್ನು ಮಕರಾಯಣದಂದೂ ( ಡಿಸೆಂಬರ್ ೨೧/ ೨೨ ) ಆಚರಿಸಬೇಕು. ಇಲ್ಲವಾದರೆ ಬಾನು ಮತ್ತು ಭಾನು ನಮ್ಮ ಬೆಪ್ಪುತನ ಕಂಡು ಪುರಂದರದಾಸರ ಜೊತೆ ದನಿ ಗೂಡಿಸದಿರವು :

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಜಗದೊಳಿರುವ ಜಾಣರೆಲ್ಲ ಹಗರಣ ಮಾಡುವುದನೆ ಕಂಡು ಹೀನ ಗುಣವ ಮನದೊಳಿಟ್ಟು ತಾನು ವಿಷದ ಪುಂಜನಾಗಿ , ಮೌನಿ ಪುರಂದರವಿಠಲನ್ನ ಧ್ಯಾನ ಮಾಡುವವನ ಕಂಡು

ಅನುಬಂಧ ೭ ಇರುಳು ಹಗಲುಗಳು ಸಮವಾಗುವುದು ಎಂದೆಂದು ?

ಶಿಷ್ಟ ಖಗೋಳವಿಜ್ಞಾನದ ಪ್ರಕಾರ ಹಗಲಿನ ಮತ್ತು ಇರುಳಿನ ಅವಧಿಗಳು ಒಂದೇ ಆಗುವ ದಿನಾಂಕಗಳು ಮಾರ್ಚ್ ೨೧ ಹಾಗೂ ಸೆಪ್ಟೆಂಬರ್ ೨೩ , ಇವರೆಡು ದಿನಾಂಕಗಳಂದು ರಾತ್ರಿ ಹಗಲುಗಳೆರಡೂ ಹನ್ನೆರಡು ಹನ್ನೆರಡು ತಾಸುಗಳಷ್ಟು

- ೮೪

ಜಾತಕ ಮತ್ತು ಭವಿಷ್ಯ

ಅವಧಿಯವಾಗಿರುತ್ತವೆ. ಅಲ್ಲದೆಭೂಮಿಯ ಮೇಲಣ ವೀಕ್ಷಕ ತಾಣಗಳ ಅಕ್ಷಾಂಶ ವನ್ನಾಗಲಿ ರೇಖಾಂಶವನ್ನಾಗಲಿ ಅವಲಂಬಿಸುವ ಸಂಗತಿ ಇದಲ್ಲ . ಭೂಮೇಲ್ಮೀಯ ಎಲ್ಲೆಡೆಗಳಲ್ಲೂ ಮಾರ್ಚ್ ೨೧ ಮತ್ತು ಸೆಪ್ಟೆಂಬರ್ ೨೩ರಂದು ಇರುಳು ಹಗಲು ಗಳು ಸಮಸಮವಾಗಿರುತ್ತವೆ.

ಆದರೆ ಸೂರ್ಯೊದಯ ಸೂರ್ಯಾಸ್ತಮಯಗಳ ನಿಖರ ವೇಳಾಪಟ್ಟಿಯನ್ನೇ ಹಲವಾರು ಪತ್ರಿಕೆಗಳು ಹಾಗೂ ಪಂಚಾಂಗಗಳು ಪ್ರಕಟಿಸುತ್ತವೆ. ಈ ವೇಳಾಪಟ್ಟಿ ಯಂತೆ ಬೆಂಗಳೂರಿನಲ್ಲಿ ಮಾರ್ಚ್ ೨೧ರಂದು ಸೂರ್ಯೋದಯ ಘಟಿಸುವುದು ಭಾರತೀಯ ಕಾಲಮಾನ ೬ ಗಂಟೆ ೨೩ ನಿಮಿಷಕ್ಕೆ ,ಸೂರ್ಯಾಸ್ತಮಯ ಸಂಭವಿಸು ವುದು ೬ ಗಂಟೆ ೩೦ ನಿಮಿಷಕ್ಕೆ ; ಸೆಪ್ಟೆಂಬರ್ ೨೩ರಂದು ಸೂರ್ಯೋದಯ ವೇಳೆ ೬ ಗಂಟೆ ೮ ನಿಮಿಷ, ಸೂರ್ಯಾಸ್ತಮಯ ಕಾಲ ೬ ಗಂಟೆ ೧೫ ನಿಮಿಷ. ಅಂದ ಮೇಲೆ ಮಾರ್ಚ್ ೨೧ ಹಾಗೂ ಸಪ್ಟೆಂಬರ್ ೨೩ರಂದು ಬೆಂಗಳೂರಿನಲ್ಲಿ ಹಗಲಿನ ಅವಧಿ ೧೨ ತಾಸು ಮತ್ತು ಮೇಲೆ ೭ ನಿಮಿಷ, ಇರುಳಿನ ಅವಧಿ ಕೇವಲ ೧೧ ತಾಸು ೫೩ ನಿಮಿಷ ಎಂದಾಯಿತು ; ರಾತ್ರಿಗಿಂತ ಹಗಲು ೧೪ ನಿಮಿಷಗಳಷ್ಟು ಅಧಿಕ ! ವೇಳಾಪಟ್ಟಿಯ ಮಾಹಿತಿಯ ಮೇರೆಗೆ ಬೆಂಗಳೂರಿನಲ್ಲಿ ರಾತ್ರಿ ಹಗಲುಗಳು ನಿಜಕ್ಕೂ ಸಮೀಕೃತವಾಗುವ ದಿವಸಗಳು ಮಾರ್ಚಿ ೧೧ (ಸೂರ್ಯೋದಯಾಸ್ತ್ರ ಕಾಲಗಳೆರಡೂ ೬ ಗಂಟೆ ೨೯ ನಿಮಿಷ), ಹಾಗೂ ಅಕ್ಟೋಬರ್ ೩ (ಸೂರ್ಯೊ ದಯಾಸ್ತ ಸಮಯಗಳು ೬ ಗಂಟೆ ೮ ನಿಮಿಷ), ಬೆಂಗಳೂರೇತರ ಸ್ಥಳಗಳಲ್ಲಿ ಕೂಡ ಪರಿಸ್ಥಿತಿ ಇದೇ ಪ್ರಕಾರ ಇರುತ್ತದೆ.

ಖಗೋಳವಿಜ್ಞಾನ ಸರಿಯೋ , ಪತ್ರಿಕೆಗಳ ವೇಳಾಕೋಷ್ಟಕ ಸರಿಯೋ ? ಇಂಥ ಗೊಂದಲದಿಂದ ನಿಮ್ಮ ತಲೆ ಕೆಡುವುದು ಸಹಜ. ಆದರೆ ಅದೃಷ್ಟವಶಾತ್‌ ಸದರಿ ಸಂದರ್ಭದಲ್ಲಿ ಪತ್ರಿಕೆಗಳೂ ದೋಷಮುಕ್ತ , ಖಗೋಳವಿಜ್ಞಾನವೂ ದೋಷಮುಕ್ತ . ಪತ್ರಿಕಾಗೋಷ್ಟಕಗಳಲ್ಲಿ ಕಂಡುಬರುವ ಮಾಹಿತಿಗಳು ಸೂರ್ಯಬಿಂಬದ ನೇಮೀಯ ಉದಯಾಸ್ತಗಳನ್ನು ಕುರಿತಾದವು. ನೇಮಿ ಅಂದರೆ ಅಂಚು ಎಂದರ್ಥ. ದೂರ ದಿಗಂತದಲ್ಲಿ ಸೂರ್ಯಬಿಂಬದ ಮೇಲಂಚು ಮಾತ್ರ ಹೊಳೆವ ಒಂದು ಪುಟ್ಟ ಗೀರಿನಂತೆ ಕಾಣಿಸಿಕೊಳ್ಳುವ ಕ್ಷಣವೇ ಸೂರ್ಯೋದಯದ ಸಮಯ ಎಂಬುದು ಪತ್ರಿಕೆ-ಪಂಚಾಂಗಗಳ ಲೆಕ್ಕಾಚಾರ. ಇದೇ ಲೆಕ್ಕಾಚಾರದಂತೆ ಸೂರ್ಯಾಸ್ತವಾಗುವುದು ಒಂದು ಅಂಚಿನ ತುಣುಕೂ ಗೋಚರಿಸದೆ ಸೂರ್ಯ ಬಿಂಬ ಸಂಪೂರ್ಣ ಕಣ್ಮರೆಯಾದಗಲಷ್ಟೇ . ಇದಕ್ಕೆ ಭಿನ್ನವಾಗಿ ಶಿಷ್ಟ ಖಗೋಳ ವಿಜ್ಞಾನದ ಸೂರ್ಯೋದಯ ಸೂರ್ಯಾಸ್ತಗಳಾದರೋ ಸೂರ್ಯಬಿಂಬದ

ಅನುಬಂಧ ೭

ಕೇಂದ್ರವನ್ನು ಕುರಿತಾದವು ! ಹೀಗಾಗಿ “ಶಿಷ್ಟ ಖಗೋಳವಿಜ್ಞಾನದ ಗಣನೆಗೂ ವಾಸ್ತವಕೋಷ್ಟಕಗಳ ಗಣನೆಗೂ ಒಂದಷ್ಟು ವ್ಯತ್ಯಾಸ ತಲೆದೋರುವುದು ಸ್ವಾಭಾ ವಿಕ, ಭೂಮಿಯ ವಾಯುಮಂಡಲದಲ್ಲಿ ಸಂಭವಿಸುವ ಬೆಳಕಿನ ವಕ್ರೀಭವನದಿಂದ ಈ ವ್ಯತ್ಯಾಸ ಇನ್ನೂ ಅಷ್ಟು ಅಧಿಕಗೊಳ್ಳುತ್ತದೆ. ಏಕೆಂದರೆ ಆಕಾಶಕಾಯಗಳಿಂದ ಹೊರಹೊಮ್ಮಿ ಬರುವ ರಶ್ಮಿಗಳ ವಕ್ರೀಭವನದ ಪರಿಣಾಮವಾಗಿ ಆ ಕಾಯಗಳು - “ಶಿಷ್ಟತಃ'' ಅಸ್ತಮಿಸಿದ ಬಳಿಕವೂ ತುಸು ಸಮಯ ಗೋಚರಿಸುತ್ತಿರುತ್ತವೆ. ಒಟ್ಟಿ

ನಲ್ಲಿ ಪತ್ರಿಕಾಗೋಷ್ಟಕಗಳು ವಸ್ತುನಿಷ್ಠ , ಶಿಷ್ಟ ' ಗಣನೆಗಳು ಸಿದ್ದಾಂತನಿಷ್ಠ ! - ಹೀಗೆಂದ ಮಾತ್ರಕ್ಕೆ ' ಶಿಷ್ಟ ” ಗಣನೆಗಳು ಗರುಡ ಪುರಾಣದಂತೆ ಕೇವಲ ಕಾಲ್ಪನಿಕ ಎಂದು ಬಗೆಯಲಾಗದು. ವಸ್ತುನಿಷ್ಠ ಲೆಕ್ಕಾಚಾರಗಳು ವ್ಯಾವಹಾರಿಕವಾಗಿ ಸಿದ್ದಿಸು ವುದಾದರೂ ಪ್ರಥಮತಃನಿರ್ವಹಿಸಲಾಗುವ ' ಶಿಷ್ಟ ” ಗಣನೆಗಳನ್ನು ಆ ತರುವಾಯ ಯುಕ್ತ ರೀತಿಯಲ್ಲಿ ಹಂತಹಂತವಾಗಿ ಸಂಸ್ಕರಿಸುವುದರಿಂದಲೇ .

ಮೇಲಿನ ವಿವರಣೆಗಳಿಂದ ಎರಡು ಅಂಶಗಳು ಸ್ಪಷ್ಟವಾಗಿರಬೇಕು : ಎಲ್ಲ ಸಂದರ್ಭಗಳಲ್ಲಿಯೂ ಶಿಷ್ಟ ಹಗಲಿಗಿಂತ ವಾಸ್ತವ ಹಗಲು ದೀರ್ಘತರ, ಶಿಷ್ಟ ಇರುಳಿಗಿಂತ ವಾಸ್ತವ ಇರುಳು ಪ್ರಸ್ವತರ, ಗಣಿತದ ಪರಿಭಾಷೆಯಲ್ಲಿ

- [ ವಾಸ್ತವ ಹಗಲು] > [ಶಿಷ್ಟ ಹಗಲು]

[ಶಿಷ್ಟ ಇರುಳು ] > [ ವಾಸ್ತವ ಇರುಳು ] ಅಂದ ಮೇಲೆ, ವಾಸ್ತವ ಹಗಲಿರುಳುಗಳು ಸಮವಾಗಬೇಕಿದ್ದರೆ [ ಶಿಷ್ಟ ಇರುಳು] > [ ವಾಸ್ತವ ಇರುಳು] = ( ವಾಸ್ತವ ಹಗಲು] > [ ಶಿಷ್ಟ ಹಗಲು

ಅಂದರೆ, ಶಿಷ್ಟ ಹಗಲಿಗಿಂತ ಶಿಷ್ಟ ಇರುಳು ತುಸು ದೀರ್ಘತರವಾಗಿರುವುದು ಅಗತ್ಯ . ಉತ್ತರಗೋಳಾರ್ಧದಲ್ಲಿ ಈ ನಿಬಂಧನೆ ಪರಿಪಾಲಿತವಾಗುವುದು ಮಾರ್ಚ್ ೨೧ಕ್ಕೆ ಕೆಲದಿನಗಳ ಹಿಂದೆ ಹಾಗೂ ಸೆಪ್ಟೆಂಬರ್ ೨೩ಕ್ಕಿಂತ ಕೆಲ ದಿನಗಳ ತರುವಾಯ . ಬೆಂಗಳೂರಿನಲ್ಲಿ ವಾಸ್ತವ ಹಗಲಿರುಳುಗಳು ಪರಸ್ಪರ ಸಮವಾಗುವ ದಿನಾಂಕಗಳು ಮಾರ್ಚ್ ೧ ಮತ್ತು ಅಕ್ಟೋಬರ್ ೩ ಆಗಿರಲು ಇದೇ ಕಾರಣ. ದಕ್ಷಿಣಗೋಳಾರ್ಧದಲ್ಲಿ ಈ ಪರಿಸ್ಥಿತಿ ವಿಪರ್ಯಯಿಸುತ್ತದೆ !

ಎಸ್ . ಆರ್ . ಮಾಧುರಾವ್

ಅನುಬಂಧ ೮ .

ಪಾರಿಭಾಷಿಕ ಪದಕೋಶ ಅನಿಯತಕಾಲಿಕ aperiodic

ಕರ್ಕಾಯನ Summer solstice ಅನ್ವೇಷಣೆ exploration

ಕಣಿನುಡಿ foretell ಅಪರವಿ : ಗ್ರಹಕಕ್ಷೆಯಲ್ಲಿ ಸೂರ್ಯನಿಂದ ಕನ್ಯಾ Virgo

ಅತಿದೂರದ ಬಿಂದು aphelion . ಕ್ರಾಂತಿ declination ಅಪ್ರದಕ್ಷಿಣ anticlockwise

ಕ್ರಾಂತಿವೃತ್ತ ecliptic ಅಮಾವಾಸ್ಯೆ new moon .

ಕಾರ್ಯ - ಕಾರಣ effect- cause ಅಮೂರ್ತ abstract

ಕಾಲ time ಅಯನಾಂಶ : ವಿಷುವದ್ರಿಂದುಗಳ ಕ್ಷಿತಿಜ : ದಿಗಂತ, ಹಾರಿಜ horizon

ಹಿನ್ನರಿತದ ( ವಕ್ರಚಲನೆ/ ಪ್ರತಿಗಮನ) ಕುಂಭ Aquarius ಅಳತೆ precession

ಕೃತ್ತಿಕಾ Pleiades . ಅವಧಿ period

ಕೇತು : ಚಂದ್ರ ಈ ಬಿಂದುವಿನಲ್ಲಿ ಕ್ರಾಂತಿ ಅವೈಚಾರಿಕ: ತಾರ್ಕಿಕವಾಗಿ ಅಸಂಗತವಾದ ಈ ವೃತ್ತವನ್ನು ಉತ್ತರದಿಂದ ದಕ್ಷಿಣಕ್ಕೆ irrational

ಅಡ್ಡ ಹಾಯುತ್ತದೆ ; ಭೌತ ಅಸ್ತಿತ್ವ ಅಶ್ವಿನೀ Hamal

ವಿಲ್ಲ descending node ಆಂದೋಲನ Oscillation

ಖಗೋಳ: ಭೌತ ಅಸ್ತಿತ್ವವಿಲ್ಲ celestial ಆಕಾಶಕಾಯ celestial body

sphere ಆದ್ರ್ರಾ Betelgeuse

ಖಗೋಳವಿಜ್ಞಾನ astronomy Geea , design

ಖಗೋಳವಿಜ್ಞಾನಿ astronomer ಆವರ್ತನೆ : ತನ್ನ ಸುತ್ತ ಬುಗರಿಯಂತೆ ಖಗೋಳವೈಜ್ಞಾನಿಕ ದೂರಗಳು : ಊಹಾ

ಗಿರಗಿರನೆ ತಿರುಗುವುದು (ಹೋಲಿಸಿ : ತೀತ ಎಂಬುದು ಇಂಗಿತ astrono ಪರಿಭ್ರಮಣೆ) rotation

mical distances ಆವಿಷ್ಕಾರ discovery

ಖಮಧ್ಯ : ನೆತ್ತಿಬಿಂದು zenith . ಉತ್ಕೃಷ್ಟತೆ excellence

ಗಣಕ Computer ಉತ್ತರದಾಯಿತ್ವ accountability ಗ್ರಹ planet ಉತ್ತರಾಭಾದ್ರಾ Algenib and ಗ್ರಹಕುಂಡಲಿ : ಜಾತಕ horoscope Alpheratz

ಗ್ರಹಣ eclipse ಉಪಜ್ಞೆ invention .

ಗ್ರಹಮೌಢ planet becoming erescudé meteoric fall

invisible in the glare of the ಉಲ್ಕಾಪಿಂಡ meteorite

sun eve , meteor

ಗುರುತ್ವಾಕರ್ಷಣಬಲ gravitational ಋತು Season

force ಕಂತು Set

ಗೆಲ್ಲಂಕ Score ಕರ್ಕಟಕ Cancer

ಚತ್ತು ceiling

ಅನುಬಂಧ ೮

೮೭

ಚಾಂದ್ರಮಾಸ lunar month .

ಪ್ರತಿಲೋಮ ವರ್ಗನಿಯಮ inverse ಚಿತ್ಸಾ Spica

square law ಚಿಹ್ನೆ Sign

ಪ್ರತೀಕ Symbol ಜಾತಕ : ಗ್ರಹ ಕುಂಡಲಿ horoscope ಪ್ರದಕ್ಷಿಣ clockwise ಜ್ಞಾನಿಷ್ಪ : ವ್ಯಕ್ತಿನಿಷ್ಠ subjective ಪರಂಪರೆ : ಮೌಲ್ಯಗಳ ಮೊತ್ತ ಸಂಸ್ಕೃತಿ; ಜೇಯನಿಷ್ಟ : ವಸ್ತುನಿಷ್ಠ objective - ಸಂಸ್ಕೃತಿಯ ಪ್ರವಾಹ ಪರಂಪರೆ; ಪರಂ ಜೇಷ್ಮಾ Antares

ಪರೆಯ ವರ್ತಮಾನ ಮುಖ ಜ್ಯೋತಿಷ್ಯಶಾಸ್ತ್ರ : ಖಗೋಳವಿಜ್ಞಾನ ಸಂಪ್ರದಾಯ tradition astronomy

ಪರಿಕಲ್ಪನೆ concept ತಂತ್ರವಿದ್ಯೆ technology

ಪರಿಭ್ರಮಣೆ revolution : ಇನ್ನೊಂದು ತಂತ್ರಾಂಶ : ಹೂರಣ Software

ಕಾಯದ ಸುತ್ತ ತಿರುಗುವುದು des Libra

(ಹೋಲಿಸಿ : ಆವರ್ತನೆ) ದಿಗಂತ : ಹಾರಿಜ, ಕ್ಷಿತಿಜ horizon | ಪ್ರರೂಪ pattern ದೀರ್ಘತೆ length

ಪಾತ ಬಿಂದುಗಳು nodes ದೀರ್ಘ ವೃತ್ತ ellipse

ಪಾದ : ನಾಲ್ಕನೆಯ ಒಂದು ಭಾಗ Q20 Sagittarius

quadrant ಧ್ರುವನಕ್ಷತ್ರ pole star

ಪಾರದರ್ಶಕತೆ/ ಪಾರಕತೆ transparency ಧೂಮಕೇತು Comet

ಪುರರವಿ : ಗ್ರಹಕಕ್ಷೆಯಲ್ಲಿ ಸೂರ್ಯನಿಗೆ ನಕ್ಷತ್ರ star

ಅತಿ ಸಮೀಪದ ಬಿಂದು perihelion ನಕ್ಷತ್ರಪುಂಜ constellation

ಫಲಜ್ಯೋತಿಷ್ಯ : ವ್ಯಕ್ತಿಯ ಭವಿಷ್ಯವನ್ನು ನವಗ್ರಹಗಳು ಫಲಜ್ಯೋತಿಷ್ಯದಲ್ಲಿ : ಆತನ ಜನನಕ್ಷಣದಲ್ಲಿ ಪ್ರಕಟವಾಗುವ ಸೂರ್ಯ, ಚಂದ್ರ , ಕುಜ, ಬುಧ, ಗುರು, ಆಕಾಶಕಾಯಗಳ ವಿನ್ಯಾಸ ( ಇದರ ಶುಕ್ರ , ಶನಿ, ರಾಹು, ಕೇತು; ಖಗೋಳ ಸಂಕ್ಷಿಪ್ತ ರೂಪವೇ ಜಾತಕ) ಕಣಿ ವಿಜ್ಞಾನದಲ್ಲಿ : (ಸೂರ್ಯನಿಂದ ನುಡಿಯುವುದೆಂದು ನಂಬುವ ಹಸಿ ಆರೋಹೀ ದೂರಾನುಸಾರ) ಬುಧ, ಹುಸಿ ಕುರುಡು ನಂಬಿಕೆ astrology ಶುಕ್ರ , ಭೂಮಿ, ಕುಜ, ಗುರು , ಶನಿ, ಫಲಜ್ಯೋತಿಷಿ astrologer ಯುರೇನಸ್ , ನೆಪೂನ್, ಪ್ರೊಟೋ ಬಲ force (ಕೊನೆಯ ಮೂರು ಬರಿಗಣ್ಣಿಗೆ ಬುದ್ದಿ ಮೌಡ್ಯ : ಮೂಢ ನಂಬಿಕೆ, ಅಂಧ ಅಗೋಚರ)

- ಶ್ರದ್ದೆ superstition ನಾಕ್ಷಿಕಮಾಸ sidereal month ಭವಿಷ್ಯ future ನಾಭಿ focus

ಭವಿಷ್ಯವಾಚನ future reading ನಿಮಿಷ minute

ಭೂಕೇಂದ್ರವಾದ geocentric ನೇಮಿ : ಅಂಚು rim

hypothesis ನೈತಿಕತೆ ethics

ಮಕರ Capricorn ಪಂಚಾಂಗ almanac

ಮಕರಾಯಣ Winter solstice ಪಕ್ಷ fortnight

ಮಗ್ನತೆ involvement ಪ್ರತಿಗಮನ : ವಕ್ರಚಲನೆ precession ಮಘಾ Regulus

eses

ಜಾತಕ ಮತ್ತು ಭವಿಷ್ಯ

ಮನೋವಿಜ್ಞಾನ psychology

ವಿಪರ್ಯ ಯ reverse ಮಾರ್ಗಚಲನೆ direct motion

ವಿಲೋಮ Converse ಮಾನಕ Scale

ವಿಶ್ವ universe ಮಿಥುನ Gemini

ವಿಷುವ equinox ಮೀನ Pisces

ವಿಷುವದ್ರಿಂದುಗಳು equinoctial ಮುಳುಗು Sink

points ಮೂರ್ತ Concrete

ವಿಷುವತ್ತ celestial equator ಮೇಷ Aries

ವೃಶ್ಚಿಕ Scorpius ಯಂತ್ರಾಂಶ : ತೋರಣ hardware ವೈಚಾರಿಕ : ತಾರ್ಕಿಕವಾಗಿ ಸಂಗತವಾದ ಯಾಷ್ಟೋತ್ತರ : ನೆತ್ತಿಗೆರೆ meridian rational ಯುಗಾದಿ new year day

ಶರದ್ವಿಷುವ autumnal equinox ರಾಶಿ ( ನಕ್ಷತ್ರ ) Zodiacal constella ಶ್ರವಣ Altair tion

ಶಿಷ್ಟ standard ರಾಶಿ ( ದ್ರವ್ಯ ) mass

ಸಂಕ್ರಮಣ : ಸಂಕ್ರಾಂತಿ tranist ರಾಶಿಚಕ್ರ Zodiac

ಸಂಕೇತ code ರಾಹು : ಚಂದ್ರ ಈ ಬಿಂದುವಿನಲ್ಲಿ ಕ್ರಾಂತಿ ಸಂಖ್ಯಾಕಲನವಿಜ್ಞಾನ statistics

ವೃತ್ತವನ್ನು ದಕ್ಷಿಣದಿಂದ ಉತ್ತರಕ್ಕೆ ಸಂಜ್ಞೆ sign ಅಡ್ಡಹಾಯುತ್ತದೆ ; ಭೌತ ಅಸ್ತಿತ್ವವಿಲ್ಲ ಸಂಪ್ರದಾಯ : ನೋಡಿ - ಪರಂಪರೆ ascending node

conventon , ritual ರೇವತಿ Epsilon Pisces

ಸಂಯಂತ್ರ mechanism 37,2303 retrograde motion ಸಂಶೋಧನೆ research . ವಕ್ರೀಭವನ refraction

ಸಂಸ್ಕೃತಿ : ನೋಡಿ - ಪರಂಪರ culture ವಸಂತ ವಿಷುವ vernal equinox ಸ್ತಬ್ದ stationary ವ್ಯಾಘಾತ contradiction .

ಸಮಭಾಜಕ ವೃತ್ತ terrestrial equa ವಾಸ್ತವತೆ reality

tor ವ್ಯಾಸೀಯವಿರುದ್ದ diametrically ಸಲ area : ವಿಸ್ತೀರ್ಣ , ಕ್ಷೇತ್ರಫಲ opposite

ಸ್ವಾತೀ Arcturus ವಿಜ್ಞಾನ : ಮಾನವಮತಿ ನಿಸರ್ಗದ ಜೊತೆ ಸಾಪೇಕ್ಷ ಸ್ಥಾನ relative position

ವೀಕ್ಷಣೆ- ಪ್ರಯೋಗ- ಅಂತರ್ಬೋಧೆ- ಸಿಂಹ Leo | ತಪಾಸಣೆ ಮೂಲಕ ಕಾರ್ಯ- ಕಾರಣ ಸಿದ್ದಾಂತ theory ತಲದಲ್ಲಿ ಮುನ್ನಾಗುವಾಗ ಲಭಿಸುವ ಸೌರವ್ಯೂಹsolar System ಜ್ಞಾನ ವಿಶೇಷ - ನಿಸರ್ಗದ ರಚನೆ ಸೂರ್ಯಕೇಂದ್ರವಾದ heliocenric ಮತ್ತು ವರ್ತನೆ ಕುರಿತ ಒಳನೋಟ hypothesis science

ಹಾರಿಜ : ದಿಗಂತ, ಕ್ಷಿತಿಜ horizon ವಿದ್ಯಮಾನ phenomenon .

ಅತ್ರಿ ಬುಕ್ ಸೆಂಟರ್ ಲಭ್ಯ ಪ್ರಕಟಣೆಗಳು ೩೧ ಮೇ ೨೦೦೦

ರೂ

.

08

೩೧೦

೧ . ಅಕ್ಷಮಾಲಾ ( ಮಕ್ಕಳ ಕಥೆಗಳು) ಲೇ : ಜಿ. ಎ. ರುಕ್ಕಿಣಿಮಾಲಾ ೨. ಅಸ್ಪೃಶ್ಯರು (ಕಾದಂಬರಿ) ಲೇ : ವೈದೇಹಿ ೩ . ನೃತ್ಯಲೋಕ ಲೇ : ಕೆ. ಮುರಲೀಧರ ರಾವ್ ೪ . ಪುಸ್ತಕ ಮಾರಾಟಹೋರಾಟ, ಲೇ : ಜಿ. ಎನ್ . ಅಶೋಕವರ್ಧನ . . .

ಲೇಖಕ : ಜಿ. ಟಿ. ನಾರಾಯಣರಾವ್ ೫, ಆಲ್ಬರ್ಟ್ ಐನ್‌ಸ್ಟೈನ್ (ಮೂರನೆಯ ಆವೃತ್ತಿ ) ಮುದ್ರಣವಾಗುತ್ತಿದೆ ೬ . ಆಲ್ಬರ್ಟ್ ಐನ್‌ಸ್ಟೈನ್ : ಮಾನವೀಯ ಮುಖ ೭ . ಉಲ್ಲೇಖನೀಯ ಐನ್‌ಸ್ಟೈನ್ ೮. ಋಷಿವಾಕ್ಯ ವಿಜ್ಞಾನ ಕಲೆ ( ತತ್ವಶಾಸ್ತ್ರ - ವಿಜ್ಞಾನಜಿಜ್ಞಾಸೆ) ೯ , ಎನ್‌ಸಿಸಿ ಬನಗಳು ( ಅನುಭವ ಕಥನ ) ೧೦. ಕೃಷ್ಣ ವಿವರಗಳು ( Black Holes) ೧೧ . ಕೊಡಗಿನ ಸುಮಗಳು ( ಜಾನಪದಮೂರಿಯ ಕಥೆಗಳು ) ೧೨. ಗಣಿತ ಗಗನ ಗಮನ ( ವಿಜ್ಞಾನ ಲೇಖನ ಸಮುಚ್ಚಯ ) ೧೩ . ಜಾತಕ ಮತ್ತು ಭವಿಷ್ಯ ( ನಾಳೆಯನ್ನು ಇಂದೇ ಅರಿಯಬಹುದೇ ? . ... ೧೪ . ಧೂಮಕೇತು ( ಅದೃಶ್ಯಲೋಕದ ಅನಾದಿಕಾಲದ ಅಪೂರ್ವ ಅತಿಥಿ) . . . ೧೫ . ನಕ್ಷತ್ರ ವೀಕ್ಷಣೆ ( ಬಾನಿಗೆ ಹಿಡಿದ ಕನ್ನಡಿ) . ೧೬ . ಬಾನಬಯಲಾಟ-ಗ್ರಹಣ ೧೭. ರಾಮಾನುಜನ್ ಬಾಳಿದರಿಲ್ಲಿ ೧೮. ವಿಶ್ವದ ಕಥೆ ೧೯ , ವೈಜ್ಞಾನಿಕ ಮನೋಧರ್ಮ (Scientific Temper ) ೨೦. ಶ್ರುತಗಾನ ( ಕಲೆ, ಕಲಾವಿದರ ಬಗೆಗಿನ ಲೇಖನ ಸಮುಚ್ಚಯ ). ೨೧. ಸಪ್ತಸಾಗರದಾಚೆಯಲ್ಲೋ . . . ( ಚಂದ್ರಶೇಖರ್ ದರ್ಶನ, ಸಂವಾದ) ೨೨. ಸವಾಲನ್ನು ಎದುರಿಸುವ ಛಲ ( ವ್ಯಕ್ತಿತ್ವ ವಿಕಾಸ) ೨೩ . ಸುಬ್ರಹ್ಮಣ್ಯನ್ ಚಂದ್ರಶೇಖರ್‌ ( ಜೀವನ ವೃತ್ತಾಂತ ) ೨೪. ಸೂರ್ಯನ ಸಾಮ್ರಾಜ್ಯ ೨೫. ಸೂಪರ್ನೋವಾ ( ನಾಕ್ಷತ್ರಿಕಾಸ್ಪೋಟನೆ) IN ENGLISH

2 . Crossing the Dateline (Meeting with Chandra ) 32 . Scientific Temper ges. With the Great Minds (Ramanujan , Raman ,

Chandrasekhar, Muralidhara Rao and Suresh ) . . .

೨೦ !

೫೫೦

೩೦:

೨೪

GOR THE

NISO

STRE FO

M

ERVICE

OFAGE

ಅತ್ರಿ ಬುಕ್ ಸೆಂಟರ್ ೪ ಶರಾವತಿ ಕಟ್ಟಡ ಬಲ್ಮಠ ಮಂಗಳೂರು ೫೭೫೦೦೧ ದೂರವಾಣಿ ೦೮೨೪ ೪೨೫೧೬೧ , ೪೯೨೩೯೭

ರೂಪಾಯಿ ಹದಿನೈದು

# ಲಭ್ಯ ಪ್ರಕಟಣೆಗಳು ೩೧ ಮೇ ೨೦೦೦

* : ಜಿ ಪ್. ಅಶೋಕವರ್ಧನ

ಜಿ ಟಿ ನಾರಾಯಣರಾವ್ ದನೆಯುವ ಮುದ್ರಣವಾಗುತ್ತಿದ

TM

יויויויויויויוינידין

24ColorCardCameraTrat.com

to emo

Saemific Temper )

סקס , 3oraco atta . . .

{}}

ויויויויויויויויויויו

ಒಕ್ (ಜೀವನ ವೃತ್ತಾಂತ

0

1

3

2

4

5

6

9

)

8

10

Meeting with Chandra) ...

Ramanujan, Raman , uralidhara Rao and Suresh )...

" ס : ' יע . 3

ಶರಾವತಿ ಕನ್ನಡಬಲ್ಲ ಠ ಮಂಗಳೂರುMLAOon word COMO PONOLA, YFIRF :

TERNET